Karnataka SSLC Result 2026: ಕರ್ನಾಟಕ SSLC ಪರೀಕ್ಷೆ-1 ಫಲಿತಾಂಶ 2026 ಪ್ರಕಟವಾಗಲಿದ್ದು; ನಿಮ್ಮ ಮೊಬೈಲ್ನಲ್ಲೇ ರಿಸಲ್ಟ್ ವೀಕ್ಷಿಸಲು ಹಾಗೂ ಡಿಜಿಲಾಕರ್ ಅಂಕಪಟ್ಟಿ ಡೌನ್ಲೋಡ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ಇಂದು (ಗುರುವಾರ) ಮಧ್ಯಾಹ್ನ ಸರಿಯಾಗಿ 12 ಗಂಟೆಗೆ ಬಹುನಿರೀಕ್ಷಿತ ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು (SSLC Exam-1 Results) ಅಧಿಕೃತವಾಗಿ ಪ್ರಕಟಿಸಲಿದೆ.
ಇದನ್ನೂ ಓದಿ: Affordable Electric Scooters: ಅರ್ಧ ಬೆಲೆಗೆ ಸಿಗ್ತಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು | ಬಂಪರ್ ಆಫರ್
ಮೊಬೈಲ್ನಲ್ಲಿಯೇ ಫಲಿತಾಂಶ ನೋಡಿ…
ರಿಸಲ್ಟ್ ಬರುವ ದಿನ ಸರ್ವರ್ ಬ್ಯುಸಿ ಆಗುವುದು, ವೆಬ್ಸೈಟ್ ಓಪನ್ ಆಗದೆ ವಿದ್ಯಾರ್ಥಿಗಳು ಪರದಾಡುವುದು ಸಾಮಾನ್ಯ. ಆದರೆ, ಈ ಬಾರಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಟೆನ್ಷನ್ ಆಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.
ಫಲಿತಾಂಶವನ್ನು ಅತ್ಯಂತ ಸುಲಭವಾಗಿ, ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್ ಮೂಲಕವೇ ಚೆಕ್ ಮಾಡಿಕೊಳ್ಳಲು ಹಲವು ಹೊಸ ಮಾರ್ಗಗಳನ್ನು ಪರಿಚಯಿಸಿದೆ.
ರಿಸಲ್ಟ್ ಬಂತಾ ಎಂದು ಸೈಬರ್ ಸೆಂಟರ್ಗಳ ಮುಂದೆ ಕ್ಯೂ ನಿಲ್ಲುವ ಬದಲು, ಮನೆಯಲ್ಲೇ ಕುಳಿತು ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಫಲಿತಾಂಶವನ್ನು ವೀಕ್ಷಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
ಫಲಿತಾಂಶ ಚೆಕ್ ಮಾಡಲು ಇರುವ ಡೈರೆಕ್ಟ್ ಲಿಂಕ್ಗಳು (How to Check SSLC Results Online)
ಮಂಡಳಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಧಿಕೃತ ಜಾಲತಾಣದ ಜೊತೆಗೆ ಆ್ಯಪ್ ಸೌಲಭ್ಯವನ್ನೂ ನೀಡಿದೆ:
ಅಧಿಕೃತ ವೆಬ್ಸೈಟ್ (Official Website)
ಇಂದು ಮಧ್ಯಾಹ್ನ 12 ಗಂಟೆಯ ನಂತರ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ karresults.nic.in ವೆಬ್ಸೈಟ್ಗೆ ಭೇಟಿ ನೀಡಿ.
ಅಲ್ಲಿ ಕೇಳಲಾಗುವ ನಿಮ್ಮ ರಿಜಿಸ್ಟರ್ ನಂಬರ್ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿದರೆ ಸಾಕು, ನಿಮ್ಮ ಅಂಕಗಳು ಸ್ಕ್ರೀನ್ ಮೇಲೆ ಮೂಡುತ್ತವೆ.

ಕರ್ನಾಟಕ ಒನ್ ಆ್ಯಪ್ (Karnataka One Mobile App)
ಇAಟರ್ನೆಟ್ ಬ್ರೌಸರ್ನಲ್ಲಿ ಹುಡುಕುವ ಬದಲು, ಆಂಡ್ರಾಯ್ಡ್ ಬಳಕೆದಾರರು ‘ಕರ್ನಾಟಕ ಒನ್’ (Karnataka One) ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಅದರ ಮೂಲಕವೂ ಯಾವುದೇ ಅಡೆತಡೆಯಿಲ್ಲದೆ ವೇಗವಾಗಿ ಫಲಿತಾಂಶವನ್ನು ಪಡೆಯಬಹುದು.
ವಾಟ್ಸಾಪ್ಗೆ ಬರಲಿದೆ ರಿಸಲ್ಟ್! (Results via SMS/WhatsApp Alert)
ಇದು ಈ ಬಾರಿಯ ಅತ್ಯುತ್ತಮ ಸೇವೆ ಎನ್ನಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ಅಥವಾ ವೇಗದ ಇಂಟರ್ನೆಟ್ ಇರುವುದಿಲ್ಲ. ಈ ಸಮಸ್ಯೆಯನ್ನು ಅರಿತಿರುವ ಇಲಾಖೆ, ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ನೀಡಿದ್ದ ಮೊಬೈಲ್ ನಂಬರ್ಗೆ ನೇರವಾಗಿ ಮಂಡಳಿಯಿAದಲೇ ಎಸ್ಎಂಎಸ್ (SMS) ಹಾಗೂ ವಾಟ್ಸಾಪ್ (WhatsApp) ಮೂಲಕ ಫಲಿತಾಂಶದ ಅಂಕಗಳನ್ನು ಕಳುಹಿಸಿಕೊಡಲಿದೆ.
ಹೀಗಾಗಿ, ಇಂಟರ್ನೆಟ್ ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ತಾವು ಪಡೆದ ಅಂಕಗಳ ಮಾಹಿತಿ ತಕ್ಷಣವೇ ಸಿಗಲಿದೆ.
ಡಿಜಿಲಾಕರ್ನಲ್ಲಿ ಒರಿಜಿನಲ್ ಅಂಕಪಟ್ಟಿ! (Marks Card on DigiLocker)
ಸಾಮಾನ್ಯವಾಗಿ ರಿಸಲ್ಟ್ ಬಂದ ಕೆಲವು ವಾರಗಳ ನಂತರ ಶಾಲೆಗಳಿಗೆ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಬರುತ್ತದೆ. ಆದರೆ, ಈ ಬಾರಿ ಶಿಕ್ಷಣ ಇಲಾಖೆ ಡಿಜಿಟಲ್ ಇಂಡಿಯಾಗೆ ತಕ್ಕಂತೆ ದೊಡ್ಡ ಹೆಜ್ಜೆಯಿಟ್ಟಿದೆ.
ಪ್ರಥಮ ಬಾರಿಗೆ, ಫಲಿತಾಂಶ ಪ್ರಕಟವಾದ ತಕ್ಷಣ ಅಂದರೆ, ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಯನ್ನು (Digital Marks Card) ಡಿಜಿಲಾಕರ್ನಲ್ಲಿ ಲಭ್ಯವಾಗುವಂತೆ ಮಾಡಿದೆ.
ವಿದ್ಯಾರ್ಥಿಗಳು ಭಾರತ ಸರ್ಕಾರದ ಅಧಿಕೃತ digilocker.gov.in ಪೋರ್ಟಲ್ಗೆ ಭೇಟಿ ನೀಡಿ ಅಥವಾ ಆ್ಯಪ್ ಮೂಲಕ ತಮ್ಮ ಅಧಿಕೃತ ಅಂಕಪಟ್ಟಿಯನ್ನು ಸುರಕ್ಷಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ನೀವು ಮುಂದಿನ ಯಾವುದೇ ಪ್ರವೇಶಾತಿಗೂ ಅಧಿಕೃತವಾಗಿ ಬಳಸಬಹುದಾಗಿದೆ.
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ಶಾಲೆಗಳಲ್ಲಿಯೂ ರಿಸಲ್ಟ್ ಲಭ್ಯ (Results Available in Schools)
ಯಾವುದೇ ಡಿಜಿಟಲ್ ಸೌಲಭ್ಯವಿಲ್ಲದ ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯ ನಂತರ ನೇರವಾಗಿ ತಮ್ಮ ಶಾಲೆಗಳಿಗೆ ಭೇಟಿ ನೀಡಬಹುದು. ಶಾಲಾ ಮುಖ್ಯಸ್ಥರಿಗೆ ಮಂಡಳಿಯಿAದಲೇ ಫಲಿತಾಂಶದ ಸಂಪೂರ್ಣ ಪಟ್ಟಿ ರವಾನೆಯಾಗಲಿದ್ದು, ಶಾಲೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ.
ಪರೀಕ್ಷೆ ಎದುರಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್! ಅಂಕಗಳು ನಿಮ್ಮ ಜೀವನದ ಅಂತಿಮ ನಿರ್ಧಾರಕವಲ್ಲ. ಫಲಿತಾಂಶ ಏನೇ ಬಂದರೂ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ, ಮುಂದಿನ ಉಜ್ವಲ ಭವಿಷ್ಯದ ಕಡೆಗೆ ದೃಷ್ಟಿ ಹಾಯಿಸಿ. ಪೋಷಕರೂ ಸಹ ಮಕ್ಕಳ ಬೆಂಬಲಕ್ಕೆ ನಿಲ್ಲುವುದು ಈ ಸಮಯದಲ್ಲಿ ಅತ್ಯಂತ ಅಗತ್ಯವಾಗಿದೆ.
ರಿಸಲ್ಟ್ ಲಿಂಕ್: karresults.nic.in
Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.