ಹೊಸ ರೇಷನ್ ಕಾರ್ಡಿಗೆ (New Ration Card) ಅರ್ಜಿ ಸಲ್ಲಿಸಲು ಕಾಯುತ್ತಿರುವವರಿಗೆ ಆಹಾರ ಇಲಾಖೆ ಗುಡ್ ನ್ಯೂಸ್ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಹಲವಾರು ಕುಟುಂಬಗಳು ಇನ್ನೂ ರೇಷನ್ ಕಾರ್ಡ್ ಇಲ್ಲದೆ ಇರುವುದರಿಂದ ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂತಹವರಿಗೆ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಶುಭವಾರ್ತೆ ನೀಡಿದ್ದು, 2025ರ ಮೇ 1 ರಿಂದ 5ರ ವರೆಗೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ರೇಷನ್ ಕಾರ್ಡಿನ ಮಹತ್ವ
ರೇಷನ್ ಕಾರ್ಡ್ ಕೇವಲ ಧಾನ್ಯ ಪಡೆಯುವ ಕಾರ್ಡ್ ಮಾತ್ರವಲ್ಲ, ಅದು ಭಾರತೀಯ ನಾಗರಿಕರಿಗೆ ಮುಖ್ಯ ಗುರುತಿನ ದಾಖಲೆಯೂ ಹೌದು. ಈ ಮೂಲಕ ಸರ್ಕಾರವು ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಆಧಾರದ ಮೇಲೆ ಸೌಲಭ್ಯಗಳನ್ನು ತಲುಪಿಸುತ್ತದೆ.
ಪ್ರಮುಖವಾಗಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ತಿಂಗಳು ಉಚಿತ ಪಡಿತರ ಧಾನ್ಯಗಳು ಸಿಗುತ್ತವೆ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಮಾಸಿಕ 2,000 ರೂ. ಪ್ರೋತ್ಸಾಹಧನ ಸಿಗುತ್ತದೆ. ಉಚಿತ ವ್ಯದ್ಯಕೀಯ ಸೇವೆಗಳು ಸಹ ಸಿಗುತ್ತವೆ.
ರೇಷನ್ ಕಾರ್ಡ್ ಹೊಂದಿದ್ದರೆ ಮಾತ್ರವೇ ಶಾಲಾ ವಿದ್ಯಾರ್ಥಿಗಳಿಗೆ ಬಟ್ಟೆ, ಪಠ್ಯ ಪುಸ್ತಕ, ವಿದ್ಯಾರ್ಥಿವೇತನ, ಬಡ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ, ವಸತಿ ಯೋಜನೆಗಳ ನೇರ ಪ್ರಯೋಜನ ಸಿಗಲಿದೆ.
ಅರ್ಜಿ ಸಲ್ಲಿಕೆ ಅವಧಿ ಮತ್ತು ಸಮಯ
- ಅರ್ಜಿ ಸಲ್ಲಿಕೆ ದಿನಾಂಕ: 01-05-2025 ರಿಂದ 05-05-2025ರ ವರೆಗೆ
- ಸಮಯ: ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆ ವರೆಗೆ
- ಸ್ಥಳ: ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಅಥವಾ ಸಿಎಸ್‌ಸಿ (CSC) ಕೇಂದ್ರಗಳಲ್ಲಿ
ಯಾರು ಅರ್ಜಿ ಸಲ್ಲಿಸಬಹುದು?
ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಬಯಸುವವರಿಗೆ ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಿದೆ:
- ಹೊಸದಾಗಿ ಮದುವೆಯಾಗಿರುವ ದಂಪತಿಗಳು ಹೊಸ ಕುಟುಂಬದ ರೂಪದಲ್ಲಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಹಾಕಬಹುದು.
- ವಾರ್ಷಿಕ ಕುಟುಂಬದ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯಲ್ಲಿದ್ದರೆ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು.
- ಬಿಪಿಎಲ್ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ ಕಾರ್ಡ್ ಬೇಕಾದರೆ ಎಪಿಎಲ್ ಕಾರ್ಡಿಗಾಗಿ ಅರ್ಜಿ ಹಾಕಬಹುದು.
ಸರ್ಕಾರಿ ನೌಕರರು, ನಿಗಮ ಸಂಸ್ಥೆಗಳ ಉದ್ಯೋಗಿಗಳು, 7.5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವೈದ್ಯರು, ವಕೀಲರು, ಲೆಕ್ಕಪರಿಶೋಧಕರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ!

Karnataka Rain Forecast- ಮೇ 6ರ ವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ | ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು:
- ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಕಡ್ಡಾಯ
- ಗುರುತಿನ ದೃಢೀಕರಣಕ್ಕೆ ಮತದಾರರ ಗುರುತಿನ ಚೀಟಿ / ಚಾಲನಾ ಪರವಾನಗಿ / ಪಾನ್ ಕಾರ್ಡ್
- ಬಿಪಿಎಲ್ ಕಾರ್ಡು ಪಡೆಯಲು ತಹಶೀಲ್ದಾರ್ ಮೂಲಕ ಪಡೆದ ಆದಾಯ ಪ್ರಮಾಣಪತ್ರ ಕಡ್ಡಾಯ
- ವಿಳಾಸ ಪುರಾವೆಗೆ ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್
- ಕುಟುಂಬದ ಮುಖ್ಯಸ್ಥರ ಪಾಸ್ಪೋರ್ಟ್ ಗಾತ್ರದ ಫೋಟೋ
- ಒಟಿಪಿ ದೃಢೀಕರಣದ ಸಲುವಾಗಿ ಸಕ್ರೀಯ ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು, ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಸಿಬ್ಬಂದಿಯ ಸಹಾಯದಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಬಳಿಕ, ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಇರಿಸಿಕೊಳ್ಳಿ. ನಿಮ್ಮ ಮೊಬೈಲ್‌ಗೆ ಒಟಿಪಿ ಮುಖೇನ ದೃಢೀಕರಣವಾಗುವ ಮೂಲಕ ಅರ್ಜಿ ಸ್ವೀಕಾರವಾಗುತ್ತದೆ.
PM Surya Ghar Free Solar Power- ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ…
ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ
ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ, ಕೆಳಗಿನ ಹಂತಗಳ ಮೂಲಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಕೂಡ ಮೊಬೈಲ್‌ನಲ್ಲಿಯೇ ನೋಡಬಹುದು:
- ಅದಕ್ಕಾಗಿ ಮೊದಲಿಗೆ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.karnataka.gov.inಗೆ ಭೇಟಿ ನೀಡಿ. ಅಲ್ಲಿ ‘ಇ-ಸ್ಥಿತಿ / e-Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ನಂತರ ‘ಹೊಸ / ಹಾಲಿ ಪಡಿತರ ಚೀಟಿಯ ಸ್ಥಿತಿ’ ಆಯ್ಕೆ ಮಾಡಿ. ನಿಮ್ಮ ಜಿಲ್ಲೆಯ ವಿಭಾಗ (ಬೆಂಗಳೂರ, ಮೈಸೂರು, ಕಲಬುರಗಿ) ಆಯ್ಕೆ ಮಾಡಿ.
- ‘ಅರ್ಜಿಯ ಹಿಂಬರಹ ಸಂಖ್ಯೆ’ ನಮೂದಿಸಿ. ‘ಸಬ್‌ಮಿಟ್’ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿ ಸ್ಥಿತಿಯನ್ನು ನೋಡಬಹುದು.
ರೇಷನ್ ಕಾರ್ಡ್ ಕೇವಲ ಪಡಿತರ ಧಾನ್ಯ ನೀಡುವ ಸಾಧನವಲ್ಲ, ಅದು ಸರ್ಕಾರದ ಹಲವು ನೆರವು ಯೋಜನೆಗಳಿಗೆ ಪ್ರವೇಶದ ದ್ವಾರವಾಗಿದೆ. ಅರ್ಹರಾಗಿರುವ ಎಲ್ಲಾ ಫಲಾನುಭವಿಗಳು ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ತಕ್ಷಣವೇ ಅರ್ಜಿ ಸಲ್ಲಿಸಿ…
ಹೊಸ ಅರ್ಜಿ ಸಲ್ಲಿಕೆ ಲಿಂಕ್: Check Link
ಅರ್ಜಿ ಸ್ಥಿತಿ ನೋಡುವ ಲಿಂಕ್: Check Link

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.