2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳ (Welfare Schemes) ಅಡಿಯಲ್ಲಿ ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸಹಾಯಧನ, ವಾಹನ, ಯಂತ್ರೋಪಕರಣಗಳ ವಿತರಣೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಾಗೂ ವಿಶೇಷ ಚೇತನರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ 2024-25ನೇ ಸಾಲಿನ ಕಲ್ಯಾಣ ಯೋಜನೆಗಳಡಿಯಲ್ಲಿ ಉಚಿತ ಎಲೆಕ್ಟ್ರಿಕ್ ಸ್ಕೂಟರ್, ಹೊಲಿಗೆ ಯಂತ್ರ, ಲ್ಯಾಪ್‌ಟಾಪ್ ಸೇರಿದಂತೆ ಹಲವು ಆರ್ಥಿಕ ಪ್ರೋತ್ಸಾಹ ಪ್ಯಾಕೇಜುಗಳಿಗೆ ಅರ್ಜಿ ಆಹ್ವಾನಿಸಿದೆ.
SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…
ಯಾವೆಲ್ಲ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
1. ಉಚಿತ ಹೊಲಿಗೆ ಯಂತ್ರ: ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲಾಗುತ್ತದೆ. ಮಹಿಳಾ ಸ್ವಾವಲಂಬನೆ ಉತ್ತೇಜಿಸಲು ಈ ಯೋಜನೆಯು ಮಹತ್ವಪೂರ್ಣವಾಗಿದೆ.
2. ಎಲೆಕ್ಟ್ರಿಕ್ ಸ್ಕೂಟರ್: ಪೌರ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿಗಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ನಗರ ಪ್ರದೇಶದಲ್ಲಿ ದಿನನಿತ್ಯದ ಪ್ರಯಾಣ ಸುಲಭಗೊಳಿಸಲು ಎಲೆಕ್ಟ್ರಿಕ್ ಸ್ಕೂಟರ್ ವಿತರಿಸಲಾಗುತ್ತಿದೆ. ಗಾರ್ಮೆಂಟ್ ಉದ್ಯೋಗಿಗಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ.
3. ಎಲೆಕ್ಟ್ರಿಕ್ ತ್ರಿಚಕ್ರ ವಾಹನ: ಅಂಗವಿಕಲರಿಗೆ (ವಿಶೇಷ ಚೇತನರು) ಸಹಾಯವಾಗುವ ಉದ್ದೇಶದಿಂದ ಹೆಚ್ಚುವರಿ ಚಕ್ರ ಅಳವಡಿಸಲಾದ ತ್ರಿಚಕ್ರ ವಾಹನ, ವೀಲ್ ಚೇರ್‌ಗಳ ವಿತರಣೆ ಮಾಡಲಾಗುತ್ತಿದೆ.
4. ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್: ಅರ್ಹ ಬೀದಿಬದಿ ವ್ಯಾಪಾರಸ್ಥರಿಗೆ ಶುದ್ಧ, ಸುರಕ್ಷಿತ ಆಹಾರ ಮಾರಾಟಕ್ಕೆ ಉಪಯುಕ್ತವಾಗುವಂತೆ ಎಲೆಕ್ಟ್ರಿಕ್ ವೆಂಡಿAಗ್ ಮೆಷಿನ್ ವಿತರಣೆ ಮಾಡಲಾಗುತ್ತಿದೆ.
5. ಲ್ಯಾಪ್‌ಟಾಪ್ ವಿತರಣಾ ಯೋಜನೆ: ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪದವಿ ಪಡೆದ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ವಿತರಣೆ ಮಾಡಲಾಗುತ್ತಿದೆ.
6. ಇತರೆ ಸಬ್ಸಿಡಿ ಯೋಜನೆಗಳು:
- ಫ್ಲಾಟ್ ಖರೀದಿಗೆ ಸಹಾಯಧನ (ಅಮೃತ ಮಹೋತ್ಸವ ಯೋಜನೆ)
- ಕ್ರೀಡಾಪಟುಗಳಿಗೆ, ಸಂಗೀತ ವಾದಕರಿಗೆ ಉಪಕರಣ ಖರೀದಿಗೆ ಸಹಾಯಧನ
- ಔಷಧಿ ಅಂಗಡಿ ಆರಂಭಿಸಲು ಸಹಾಯ
- ಆಟೋ/ಕಾರು ಖರೀದಿಗೆ ಸಹಾಯಧನ
- ಶಾಲಾ ಶುಲ್ಕ ಮರುಪಾವತಿ, ಉನ್ನತ/ವಿದೇಶ ವ್ಯಾಸಂಗಕ್ಕೆ ಸಹಾಯಧನ
- ಸ್ವಯಂ ಉದ್ಯೋಗ ಪ್ರಾರಂಭಿಸಲು ಪ್ರೋತ್ಸಾಹ ಧನ

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಪ್ರತಿ
- ವಾಸ ದೃಢೀಕರಣ ದಾಖಲೆ (ಉದಾ: ವಿದ್ಯುತ್ ಬಿಲ್/ರೇಶನ್ ಕಾರ್ಡ್ ವಿಳಾಸ)
- ವಯಸ್ಸು ದೃಢೀಕರಿಸುವ ದಾಖಲೆ (SSLC ಮಾರ್ಕ್ಸ್ ಕಾರ್ಡ್, ಜನನ ಪ್ರಮಾಣ ಪತ್ರ ಮುಂತಾದವು)
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ಮೇಲ್ಕಾಣಿಸಿದ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು, ನಾವು ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ ವಿಭಾಗ) ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಸ್ವ-ದೃಢೀಕರಿಸಿದ ಪ್ರತಿಗಳೊಂದಿಗೆ ಸಲ್ಲಿಸಬೇಕು.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪ್ರಮುಖವಾಗಿ ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರಬೇಕು ಮತ್ತು ಅರ್ಜಿದಾರರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು. ಈ ಹಿಂದೆ ಇದೇ ಯೋಜನೆಯಿಂದ ಸಹಾಯಧನ ಪಡೆದುಕೊಂಡಿದ್ದರೆ ಅಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಬಿಬಿಎಂಪಿ ವ್ಯಾಪ್ತಿಯ ಪೌರ ಕಾರ್ಮಿಕರು, ಪರಿಶಿಷ್ಟ ಜಾತಿ/ಪಂಗಡಗಳು, ಆರ್ಥಿಕವಾಗಿ ಹಿಂದುಳಿದವರು, ಅಲ್ಪಸಂಖ್ಯಾತರು, ವಿಶೇಷ ಚೇತನರು, ತೃತೀಯ ಲಿಂಗಿಗಳು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೀಡಿರುವ ಕೊನೆಯ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಅರ್ಹರು ಶೀಘ್ರದಲ್ಲೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಸಾರ್ವಜನಿಕರು ಕಲ್ಯಾಣ ಕಾರ್ಯಕ್ರಮದ ಫಲಾನುಭವಿಗಳಾಗಬೇಕೆಂಬ ಉದ್ದೇಶದಿಂದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 2 ಮೇ 2025
ಈ ಯೋಜನೆಗಳು ಆರ್ಥಿಕವಾಗಿ ಹಿಂದುಳಿದವರ ಬದುಕಿನಲ್ಲಿ ಬದಲಾವಣೆಯನ್ನು ತರಬಹುದು. ನಿಮಗೆ ಅಥವಾ ನಿಮಗೆ ಪರಿಚಯವಿರುವ ಯಾರಾದರೂ ಈ ಸೌಲಭ್ಯಗಳಿಗೆ ಅರ್ಹರಾಗಿದ್ದರೆ, ಇಂತಹ ಈ ಮಹತ್ವದ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಿ.
ಅರ್ಜಿ ನಮೂನೆ: Download