ರಾಜ್ಯ ಸರ್ಕಾರ ಕುರಿ-ಮೇಕೆ ಸಾಕಾಣಿಕೆಗೆ 50,000 ರೂ. ಸಹಾಯಧನ (Sheep Farming Subsidy Scheme) ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಿಂದ 2025-26ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪೈಕಿ ‘ಕುರಿ ಸಾಕಾಣಿಕೆ ಯೋಜನೆ’ ಅಡಿಯಲ್ಲಿ 50,000 ರೂ. ಆರ್ಥಿಕ ನೆರವು ನೀಡಲಾಗುತ್ತಿದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ
2025-26ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳ ಪೈಕಿ ‘ಸ್ವಯಂ ಉದ್ಯೋಗ ನೇರಸಾಲ ಯೋಜನೆ’ಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಕಿರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ವಿವಿಧ ನಿಗಮಗಳಿಂದ ಸಹಾಯಧನ ಮತ್ತು ನೇರ ಸಾಲ ಮಂಜೂರು ಮಾಡಲಾಗುತ್ತದೆ.
ಅದೇ ರೀತಿ ‘ಕುರಿ ಸಾಕಾಣಿಕೆ ಯೋಜನೆ’ಯನ್ನು ಸಹ ಜಾರಿಗೊಳಿಸಲಾಗಿದ್ದು; ಅರ್ಹ ಫಲಾನುಭವಿಗಳಿಗೆ ಕುರಿ ಸಾಕಾಣಿಕೆಗೆ 50,000 ರೂ ಸಹಾಯಧನ ಒದಗಿಸಲಾಗುತ್ತದೆ. ಈ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲಾತಿಗಳೇನು? ಸಾಲ ಮತ್ತು ಸಬ್ಸಿಡಿಗಳೆಷ್ಟು? ಇತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಎಷ್ಟು ಸಹಾಯಧನ ಸಿಗುತ್ತದೆ?
ಕುರಿ ಅಥವಾ ಮೇಕೆ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ಧೇಶವಾಗಿದೆ. ಇದಕ್ಕಾಗಿ ವಿವಿಧ ನಿಗಮಗಳ ಅಡಿಯಲ್ಲಿ ಸಾಲ ಹಾಗೂ ಸಹಾಯಧನವನ್ನು ನೀಡಲಾಗುತ್ತದೆ.
ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ ವೆಚ್ಚ ₹1,00 ಲಕ್ಷವಾಗಿದ್ದು; ಇದರಲ್ಲಿ 50,000 ರೂ. ಸಂಪೂರ್ಣ ಉಚಿತವಾಗಿ ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ. ಇನ್ನುಳಿದ 50,000 ರೂ. ಅನ್ನು ಬ್ಯಾಂಕ್ ಮೂಲಕ ನಿಗಮವೇ ವಾರ್ಷಿಕ ಕೇವಲ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ಒದಗಿಸುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಒಟ್ಟು ಆರು ನಿಗಮಗಳ ಮೂಲಕ ಈ ಅರ್ಜಿ ಆಹ್ವಾನಿಸಲಾಗಿದ್ದು; ಈ ಕೆಳಕಂಡ ಸಮುದಾಯಗಳ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ:
- ಎಸ್‌ಸಿ/ಎಸ್‌ಟಿ
- ಲಂಬಾಣಿ
- ಆದಿಜಾಂಬವ
- ಭೋವಿ
- ಅಲೆಮಾರಿ ಮತ್ತು ಅರೆ ಅಲೆಮಾರಿ
- ಸಫಾಯಿ ಕರ್ಮಚಾರಿ
- ಪರಿಶಿಷ್ಟ ಪಂಗಡದ ಅಲೆಮಾರಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಅರ್ಜಿದಾರ ಆಧಾರ್ ಕಾರ್ಡ್ ಪ್ರತಿ
- ಪೋಟೋ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಶನ್ ಕಾರ್ಡ ಪ್ರತಿ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯ ಪ್ರಯೋಜನ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸ್ವತಃ ತಾವೇ ಸರ್ಕಾರದ ಸೇವಾ ಸಿಂಧು ಫೋರ್ಟ್’ಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಖುದ್ದು ಅರ್ಜಿ ಸಲ್ಲಿಸಲು ಗೊತ್ತಾಗದಿದ್ದರೆ ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-09-2025
- ಹೆಚ್ಚಿನ ಮಾಹಿತಿಗೆ ಸಹಾಯವಾಣಿ: 9482300400
- ಅರ್ಜಿ ಲಿಂಕ್: sevasindhu.karnataka.gov.in