LPG Gas Cylinder ₹300 Subsidy- ನಿಮಗೆ ಗ್ಯಾಸ್ ಸಿಲಿಂಡರ್ ₹300 ಸಬ್ಸಿಡಿ ಬಂತಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

Spread the love

WhatsApp Group Join Now
Telegram Group Join Now

ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಪ್ರತಿ ಗ್ಯಾಸ್ ಸಿಲಿಂಡರ್‌ಗೆ ₹300 ಸಬ್ಸಿಡಿ (LPG Gas Cylinder ₹300 Subsidy) ನೀಡುತ್ತಿದೆ. ಈ ಸಬ್ಸಿಡಿ ಹಣದ ಜಮಾ ವಿವರ ತಿಳಿಯುವುದು ಹೇಗೆ? ಇತರ ನಿಯಮಗಳೇನು? ಎಂಬ ಮಾಹಿತಿ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ (LPG Gas Cylinder Price) ಸಾಮಾನ್ಯ ಜನರಿಗೆ ದೊಡ್ಡ ಹೊರೆಯಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ನೀಡುತ್ತಿದೆ.

ಆದರೆ ಹಲವರು ‘ಸಬ್ಸಿಡಿ ಹಣ ನನ್ನ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆಯಾ?’ ‘ಚೆಕ್ ಮಾಡಲು ಗ್ಯಾಸ್ ಏಜೆನ್ಸಿಗೆ ಹೋಗಬೇಕಾ?’ ಎಂದು ಪ್ರಶ್ನೆ ಕೇಳುತ್ತಾರೆ. ಇಲ್ಲ, ನೀವು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಸಬ್ಸಿಡಿ ಸ್ಟೇಟಸ್ ಚೆಕ್ ಮಾಡಬಹುದು. ಈ ಲೇಖನದಲ್ಲಿ ಅದಕ್ಕೆ ಸಂಬAಧಿಸಿದ ಸಂಪೂರ್ಣ ಮಾಹಿತಿ ನಿಮಗೆ ಸಿಗಲಿದೆ.

ಇದನ್ನೂ ಓದಿ: ಇನ್ಮುಂದೆ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ? | ನೌಕರರ ಮುಷ್ಕರಕ್ಕೆ ಬಲ ಸಿಗುವುದೇ? ಸಂಪೂರ್ಣ ಮಾಹಿತಿ ಇಲ್ಲಿದೆ…

PM Ujjwala Yojana Explained – ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡ ಕುಟುಂಬಗಳಿಗೆ ಉಚಿತ ಅಥವಾ ಕಡಿಮೆ ವೆಚ್ಚದಲ್ಲಿ ಗ್ಯಾಸ್ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ.

ಈ ಯೋಜನೆಯಡಿ 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗೆ ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ನೀಡಲಾಗುತ್ತದೆ. ನೇರ ನಗದು ವರ್ಗಾವಣೆ (DBT LPG Subsidy) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?

LPG Gas Cylinder ₹300 Subsidy
LPG Gas Cylinder ₹300 Subsidy

Eligibility for ₹300 LPG Subsidy – ₹300 ಗ್ಯಾಸ್ ಸಬ್ಸಿಡಿ ಯಾರಿಗೆ ಸಿಗುತ್ತದೆ?

ಗಮನಾರ್ಹವೆಂದರೆ, ಈ ಸಬ್ಸಿಡಿ ಎಲ್ಲರಿಗೂ ಸಿಗುವುದಿಲ್ಲ. ಕೆಳಗಿನ ಅರ್ಹತೆಗಳನ್ನು ಹೊಂದಿದವರಿಗೆ ಮಾತ್ರ ಈ ಸಹಾಯಧನ ನೆರವು ಸಿಗುತ್ತದೆ:

  • ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರಬೇಕು
  • ಬಿಪಿಎಲ್ (BPL) ರೇಷನ್ ಕಾರ್ಡ್ ಹೊಂದಿರುವ ಕುಟುಂಬವಾಗಿರಬೇಕು
  • ವರ್ಷಕ್ಕೆ ಗರಿಷ್ಠ 12 ಸಿಲಿಂಡರ್‌ಗಳವರೆಗೆ ಸಬ್ಸಿಡಿ ಲಭ್ಯ
  • ಬಿಪಿಎಲ್ ಕಾರ್ಡ್’ನಲ್ಲಿರುವ ಸದಸ್ಯರ ಹೆಸರಲ್ಲಿ ಈಗಾಗಲೇ ಬೇರೆ ಗ್ಯಾಸ್ ಸಂಪರ್ಕ ಇರಬಾರದು

ಇದನ್ನೂ ಓದಿ: KKRTC Driver Recruitment 2026- SSLC ಪಾಸಾದವರಿಗೆ ಸರ್ಕಾರಿ ಉದ್ಯೋಗ | KKRTC 78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Check LPG Subsidy Status – ಗ್ಯಾಸ್ ಸಬ್ಸಿಡಿ ಜಮಾ ವಿವರ ತಿಳಿಯುವುದು ಹೇಗೆ?

ಗ್ಯಾಸ್ ಸಬ್ಸಿಡಿ ವಿವರ ತಿಳಿಯಲು ಎರಡು ಸುಲಭ ವಿಧಾನಗಳಿವೆ:

ವಿಧಾನ 1: ಬ್ಯಾಂಕ್ ಪಾಸ್‌ಬುಕ್ ಮೂಲಕ- ನಿಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರಿಂಟ್ ತೆಗೆದು ನೋಡಿದರೆ, ಸಬ್ಸಿಡಿ ಹಣ ಜಮಾ ಆಗಿರುವ ಮಾಹಿತಿ ಕಾಣಿಸುತ್ತದೆ.

ವಿಧಾನ 2: ಆನ್‌ಲೈನ್‌ನಲ್ಲಿ ಮೊಬೈಲ್ ಮೂಲಕ- ಇದು ಅತ್ಯಂತ ಸುಲಭ; ಮೊಬೈಲ್‌ನಲ್ಲೇ ₹300 ಗ್ಯಾಸ್ ಸಬ್ಸಿಡಿ ಚೆಕ್ ಮಾಡಬಹುದಾಗಿದೆ. ಮೊಬೈಲ್‌ನಲ್ಲಿಯೇ ಸಬ್ಸಿಡಿ ಜಮಾ ವಿವರ ಚೆಕ್ ಮಾಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ:

ಹಂತ 1: ಮೊದಲು ಅಧಿಕೃತ ವೆಬ್‌ಸೈಟ್ mylpg.in ಗೆ ಭೇಟಿ ನೀಡಿ.

LPG Gas Cylinder ₹300 Subsidy
LPG Gas Cylinder ₹300 Subsidy

ಇದನ್ನೂ ಓದಿ: Sukanya Samriddhi Yojana- ಹೆಣ್ಣುಮಕ್ಕಳ ಭವಿಷ್ಯ ಭದ್ರವಾಗಿಸುವ ಸುಕನ್ಯಾ ಸಮೃದ್ಧಿ ಯೋಜನೆ | ಮಗಳ ಮದುವೆಗೆ 69 ಲಕ್ಷ ಹಣ

WhatsApp Group Join Now
Telegram Group Join Now

ಹಂತ 2: ಅಲ್ಲಿ ನಿಮಗೆ Indane, HP Gas, Bharat Gas ಮೂರು ಗ್ಯಾಸ್ ಕಂಪನಿಗಳ ಲೋಗೋಗಳು ಕಾಣಿಸುತ್ತವೆ. ನಿಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿ.

ಹಂತ 3: ಈಗ ‘Give Your Feedback’ ಅಥವಾ ‘Subsidy Status’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ 17 ಅಂಕಿಯ LPG ID ನಮೂದಿಸಿ.

ಹಂತ 5: ಈಗ ನಿಮ್ಮ ಗ್ಯಾಸ್ ಬುಕ್ಕಿಂಗ್ ವಿವರಗಳು, ಸಿಲಿಂಡರ್ ಪಡೆದ ದಿನಾಂಕ ಮತ್ತು ಯಾವ ದಿನ ಎಷ್ಟು ಸಬ್ಸಿಡಿ ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಇದನ್ನೂ ಓದಿ: IAF Agniveer Recruitment 2026- ಪಿಯುಸಿ ಪಾಸಾದ ಯುವಕ ಯುವತಿಯರಿಗೆ ವಾಯುಸೇನೆಯಲ್ಲಿ ಅಗ್ನಿವೀರರ ಹುದ್ದೆಗಳು | ಹೀಗೆ ಅರ್ಜಿ ಹಾಕಿ…

Current LPG Cylinder Prices – ಸದ್ಯಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿದೆ?

ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಪ್ರತಿ ತಿಂಗಳು ಬದಲಾಗುತ್ತಿರುತ್ತವೆ. ಸದ್ಯಕ್ಕೆ 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಸುಮಾರು ₹800 ರಿಂದ ₹850 (ಸ್ಥಳೀಯ ತೆರಿಗೆಯ ಮೇಲೆ ಅವಲಂಬಿತ) ವರೆಗೆ ಬೆಲೆ ಇದೆ.

ಇನ್ನು 19 ಕೆಜಿ ವಾಣಿಜ್ಯ ಸಿಲಿಂಡರ್ ಸುಮಾರು ₹1700 ರಿಂದ ₹1900 ವರೆಗೆ ಬೆಲೆ ಇದೆ. ಇದು ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇರುವ ಪ್ರಸ್ತುತ ಬೆಲೆ.

ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ

Steps to Ensure LPG Subsidy Credit – ಸಬ್ಸಿಡಿ ಬರಲು ಯಾವ ಕ್ರಮ ಅನುಸರಿಸಬೇಕು?

ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಯಾಗಿದ್ದರೂ ಕೂಡ ನಿಮಗೆ ಸಬ್ಸಿಡಿ ಸಿಗುತ್ತಿಲ್ಲ ಎಂದಾದರೆ, ಈ ಕೆಳಗಿನ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕಾಗುತ್ತದೆ:

  • ಗ್ಯಾಸ್ ಏಜೆನ್ಸಿಯಲ್ಲಿ ಆಧಾರ್ ಅಥವಾ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಬೇಕು.
  • ನಿಮ್ಮ ಆಧಾರ್ ಕಾರ್ಡ್ ಗ್ಯಾಸ್ ಕನೆಕ್ಷನ್‌ಗೆ ಲಿಂಕ್ ಆಗಿರಬೇಕು.
  • ಆಧಾರ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಆಗ ಮಾತ್ರ DBT ಮೂಲಕ ಹಣ ಜಮೆಯಾಗುತ್ತದೆ.

ಇದನ್ನೂ ಓದಿ: LIC Smart Pension Plan 2026- ಪತಿ-ಪತ್ನಿಗೆ ಜೀವನಪೂರ್ತಿ ಪಿಂಚಣಿ | ಎಲ್‌ಐಸಿ ಹೊಸ ಯೋಜನೆ

What to Do if LPG Subsidy Is Stopped – ಸಬ್ಸಿಡಿ ಸ್ಥಗಿತವಾದರೆ ಏನು ಮಾಡಬೇಕು?

ಸಿಲಿಂಡರ್ ಪಡೆದರೂ ಹಣ ಜಮೆಯಾಗದಿದ್ದರೆ ನಿಮ್ಮ ಗ್ಯಾಸ್ ಏಜೆನ್ಸಿ ಭೇಟಿ ನೀಡಿ, ನಿಮ್ಮ KYC ಸ್ಟೇಟಸ್ ಪರಿಶೀಲಿಸಿ.

ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಮ್ಯಾಪಿಂಗ್ ಸರಿಯಾಗಿದೆಯೇ, ಖಾತೆ ಸಕ್ರಿಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಟೋಲ್ ಫ್ರೀ ಸಹಾಯವಾಣಿ 1800-233-3555ಗೆ ಕೂಡ ಕರೆ ಮಾಡಿ ದೂರು ನೀಡಬಹುದು. mylpg ಪೋರ್ಟಲ್‌ನ ‘Grievance’ ವಿಭಾಗದಲ್ಲಿ ದೂರು ದಾಖಲಿಸಬಹುದು.

ಒಟ್ಟಾರೆ ಗ್ಯಾಸ್ ಸಬ್ಸಿಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ನೆರವಾಗಿದ್ದು, ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ₹300 ಸಹಾಯಧನವೂ ಸಾಕಷ್ಟು ಉಪಯೋಗವಾಗುತ್ತದೆ. ನೀವು ಇನ್ನೂ ಇ-ಕೆವೈಸಿ ಅಥವಾ ಲಿಂಕಿಂಗ್ ಮಾಡಿಸಿಲ್ಲದಿದ್ದರೆ ತಕ್ಷಣ ಪೂರ್ಣಗೊಳಿಸಿ ಸಬ್ಸಿಡಿ ಸೌಲಭ್ಯವನ್ನು ಪಡೆದುಕೊಳ್ಳಿ.

Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ


Spread the love
error: Content is protected !!