KCET Result 2025- ಕೆಸಿಇಟಿ-2025 ಫಲಿತಾಂಶ ಮೇ 24ರಂದು ಪ್ರಕಟ | ಮೊಬೈಲ್‌ನಲ್ಲೇ ರಿಸಲ್ಟ್ ನೋಡಿ…

Spread the love

ಬಹುದಿನಗಳಿಂದ ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶವನ್ನು (KCET Result 2025) ಮೇ 24ರಂದು ಪ್ರಕಟಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ…

WhatsApp Group Join Now
Telegram Group Join Now

ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025ರ ಫಲಿತಾಂಶವನ್ನು ನಾಳೆ ಮೇ 24ರಂದು ಪ್ರಕಟಿಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದ್ದು, ಫಲಿತಾಂಶವನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನದೊಳಗೆ ಲಭ್ಯವಾಗುವಂತೆ ಮಾಡಲಿದೆ.

KCET ಪರೀಕ್ಷೆಯ ಹಿನ್ನಲೆ

ಏಅಇಖಿ ಕರ್ನಾಟಕ ರಾಜ್ಯದ ಎಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್, ಕೃಷಿ, ಹಾರ್ಟಿಕಲ್ಚರ್, ಸೆರಿಕಲ್ಚರ್, ವೆಟರಿನರಿ ಮತ್ತು ಇತರ ವೃತ್ತಿಪರ ಪದವಿ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ಪ್ರಮುಖ ಪರೀಕ್ಷೆಯಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು KCET ಅಂಕಗಳನ್ನು ಆಧಾರವಾಗಿಸಲಾಗುತ್ತದೆ.

2025ನೇ ಸಾಲಿನಲ್ಲಿ ಕಳೆದ ಏಪ್ರಿಲ್ 15ರಂದು ಹೊರನಾಡು ಹಾಗೂ ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗಿತ್ತು. ಆನಂತರ ಏಪ್ರಿಲ್ 16ರಂದು ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಮತ್ತು ಏಪ್ರಿಲ್ 17ರಂದು ಗಣಿತ ಹಾಗೂ ಜೀವಶಾಸ್ತ್ರ ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆಗಳನ್ನು ರಾಜ್ಯದಾದ್ಯಂತ 775 ಕೇಂದ್ರಗಳಲ್ಲಿ ನಿಗದಿಪಡಿಸಲಾಗಿತ್ತು. ಈ ಪರೀಕ್ಷೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇನ್ನು, 2ನೇ ಪಿಯುಸಿ, CBSE, ICSE ವಿದ್ಯಾರ್ಥಿಗಳ ಫಲಿತಾಂಶಗಳ ಅಂಕಗಳನ್ನು ಸಹಪಠ್ಯ ಅಂಕಗಳಾಗಿ ಪರಿಗಣಿಸಿ ಸಮೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.

ಬಹುದಿನಗಳಿಂದ ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ KEA ಸಿಇಟಿ ಫಲಿತಾಂಶವನ್ನು ಮೇ 24ರಂದು ಪ್ರಕಟಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ...
KCET Result 2025 Online Check Process

Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ಫಲಿತಾಂಶ ಪ್ರಕಟಣೆ ಕೆಇಎ ಸ್ಪಷ್ಟನೆ

KEA ಪ್ರಾರಂಭದಲ್ಲಿ ಫಲಿತಾಂಶವನ್ನು ಮೇ 23ರಂದು ಪ್ರಕಟಿಸಲು ಯೋಜಿಸಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳು (ಅಂಕಗಳ ಸಮೀಕರಣದ ತಾತ್ಕಾಲಿಕ ಅಡಚಣೆ) ಸಂಭವಿಸಿದ ಕಾರಣದಿಂದಾಗಿ ಅದು ಒಂದು ದಿನ ಮುಂದೂಡಲ್ಪಟ್ಟಿದ್ದು, ಮೇ 24ರಂದು ಮಧ್ಯಾಹ್ನದೊಳಗೆ ಫಲಿತಾಂಶ ಪ್ರಕಟವಾಗಲಿದೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶವನ್ನು ಪರಿಶೀಲಿಸುವ ವಿಧಾನ

KCET ಫಲಿತಾಂಶವನ್ನು ಮೊಬೈಲ್ ಅಥವಾ ಕಂಪ್ಯೂಟರ್‌ನಿAದ ಈ ಕೆಳಗಿನ ಕ್ರಮದಿಂದ ಸರಳವಾಗಿ ಪರಿಶೀಲಿಸಬಹುದು:

  • ಮೊದಲಿಗೆ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ಗೆ ಭೇಟಿ ನೀಡಿ.
  • “UGCET 2025 RESULT” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ Application Number ಮತ್ತು Date of Birth ನಮೂದಿಸಿ.
  • Submit ಕ್ಲಿಕ್ ಮಾಡಿದ ಮೇಲೆ, ನಿಮ್ಮ ವೈಯಕ್ತಿಕ ಫಲಿತಾಂಶ ತಕ್ಷಣವೇ ಪ್ರದರ್ಶಿತವಾಗುತ್ತದೆ.
  • ಫಲಿತಾಂಶವನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

Home Loan Low Interest Banks- ಕಡಿಮೆ ಬಡ್ಡಿಗೆ ಸಾಲ | ಯಾವ ಬ್ಯಾಂಕ್ ಉತ್ತಮ? | ಟಾಪ್ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಫಲಿತಾಂಶದ ನಂತರದ ಹಂತಗಳು

KCET ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಯಾರಾಗಬೇಕಾದ ಅನೇಕ ಹಂತಗಳು ಇವೆ. ಇವುಗಳಲ್ಲಿ ಪ್ರಮುಖವಾದವುಗಳು:

1. ಅಂಕಗಳ ಪರಿಶೀಲನೆ ಮತ್ತು ತಿದ್ದುಪಡಿ ಅರ್ಜಿ: ಅಪೂರ್ಣ ಅಥವಾ ತಪ್ಪಾಗಿ ನಮೂದಿಸಿದ ಅಂಕಗಳಿಗೆ ತಕ್ಷಣವೇ ತಿದ್ದುಪಡಿ ಅರ್ಜಿ ಹಾಕಬಹುದಾಗಿದೆ.

2. ಆಯ್ಕೆ ಪ್ರಕ್ರಿಯೆ (Option Entry): ಕೆಇಎ ವತಿಯಿಂದ web Option Entry ಪ್ರಕ್ರಿಯೆ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಇಚ್ಛಿತ ಕೋರ್ಸ್ಗಳು ಮತ್ತು ಕಾಲೇಜುಗಳನ್ನು ಆದ್ಯತೆಯಂತೆ ಆಯ್ಕೆ ಮಾಡಬೇಕು.

3. ಡಾಕ್ಯುಮೆಂಟ್ ಪರಿಶೀಲನೆ (Document Verification): ವೈಯಕ್ತಿಕ ಹಾಜರಾತಿ ಅಥವಾ ಆನ್‌ಲೈನ್ ವ್ಯವಸ್ಥೆಯ ಮೂಲಕ ಅಂಕಪಟ್ಟಿ, ಪ್ರಮಾಣಪತ್ರ, ಆದಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ ಮುಂತಾದ ದಾಖಲೆಗಳ ಪರಿಶೀಲನೆ ನಡೆಯುತ್ತದೆ.

4. ಕೌನ್ಸೆಲಿಂಗ್ ಮತ್ತು ಸೀಟ್ ಅಲಾಟ್‌ಮೆಂಟ್: ಒಂದು ಅಥವಾ ಹಂತವಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆ ಮಾಡಿರುವ ಕೋರ್ಸ್ ಮತ್ತು ಕಾಲೇಜುಗಳಿಗೆ ಸೀಟ್ ಹಂಚಿಕೆಯಾಗುತ್ತದೆ.

Daughter Property Rights- ತಂದೆಯ ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ | ಎಲ್ಲ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಮಾಹಿತಿ

ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳು

ಕೆಸಿಇಟಿ ಫಲಿತಾಂಶವನ್ನು ಅನಧಿಕೃತ ವೆಬ್‌ಸೈಟ್‌ಗಳಿಂದ ಮಾತರ ಪರಿಶೀಲಿಸಿ. ದೋಖಾದಾರ ಅಪ್ಲಿಕೇಶನ್‌ಗಳಿಂದ ದೂರವಿರಿ. ನಿಮ್ಮಅಂಕಗಳು ಹೆಚ್ಚು ಕಡಿಮೆಯಾಗಿರಬಹುದು. ಆದರೆ ಅದು ಅಂತಿಮ ಸಾಧನೆಯ ಮಾನದಂಡವಲ್ಲ.

ಏಅಇಖಿ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಹಂತವಾಗಿದ್ದು, ಇದು ಉನ್ನತ ಶಿಕ್ಷಣದತ್ತ ಮೊದಲ ಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಧೈರ್ಯದಿಂದ, ಯೋಗ್ಯ ಮಾಹಿತಿಯ ಆಧಾರದ ಮೇಲೆ ತೀರ್ಮಾನಗಳನ್ನು ಕೈಗೊಳ್ಳಬೇಕು.

ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು! ನಿಮ್ಮ ಸಾಧನೆಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಭವಿಷ್ಯದ ಪ್ರಯಾಣಕ್ಕೆ ಶುಭವಾಗಲಿ!

Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!