Karnataka Post Office GDS Recruitment 2026 – ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1023 ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ವಿವರ

Spread the love

WhatsApp Group Join Now
Telegram Group Join Now

Karnataka Post Office GDS Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಪೋಸ್ಟ್ ಮ್ಯಾನ್ / ಜಿಡಿಎಸ್ ಹುದ್ದೆಗಳು. ಜಿಲ್ಲಾವಾರು ಹುದ್ದೆಗಳ ವಿವರ, ವೇತನ, ಅರ್ಜಿ ವಿಧಾನ ಹಾಗೂ ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ…

ಸರ್ಕಾರಿ ಉದ್ಯೋಗದ (Govt job)ಕನಸು ಕಾಣುತ್ತಿರುವ ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಅಂಚೆ ಇಲಾಖೆಯ (India Post) ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿಯ ಮೂಲಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,023 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೀವಿರುವ ಜಿಲ್ಲೆಯಲ್ಲಿಯೇ ಉದ್ಯೋಗ, ಕಡಿಮೆ ವಿದ್ಯಾರ್ಹತೆ, ಸರಳ ಆಯ್ಕೆ ಪ್ರಕ್ರಿಯೆ ಇರುವುದರಿಂದ ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿದೆ.

ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

Karnataka Postal Recruitment 2026 ಮುಖ್ಯ ಮಾಹಿತಿ

  • ಸಂಸ್ಥೆಯ ಹೆಸರು: ಕರ್ನಾಟಕ ಅಂಚೆ ವೃತ್ತ
  • ಹುದ್ದೆಗಳ ಸಂಖ್ಯೆ: 1023
  • ಉದ್ಯೋಗ ಸ್ಥಳ: ಕರ್ನಾಟಕ
  • ಹುದ್ದೆಯ ಹೆಸರು: ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ / ಡಾಕ್ ಸೇವಕ್ (ABPM / GDS)
  • ಸಂಬಳ: ತಿಂಗಳಿಗೆ ರೂ.10,000 ರಿಂದ ರೂ.29,380/- ವರೆಗೆ

ಇದನ್ನೂ ಓದಿ: Aether Rizta Electric Scooter- ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮುಗಿಬಿದ್ದ ಜನ | ಭರ್ಜರಿ ಸೇಲ್ಸ್ | ಏನಿದರ ವಿಶೇಷತೆ?

District-wise Vacancies – ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ

ಈ ಬಾರಿ ನೇಮಕಾತಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದೆ. ಪ್ರಮುಖ ಜಿಲ್ಲೆಗಳ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ:

  • ಬಾಗಲಕೋಟೆ – 15
  • ಬಳ್ಳಾರಿ – 24
  • ಬೆಂಗಳೂರು ಜಿಪಿಒ – 02
  • ಬೆಳಗಾವಿ – 26
  • ಬೆಂಗಳೂರು ಪೂರ್ವ – 28
  • ಬೆಂಗಳೂರು ದಕ್ಷಿಣ – 45
  • ಬೆಂಗಳೂರು ಪಶ್ಚಿಮ – 14
  • ಬೀದರ್ – 22
  • ಚನ್ನಪಟ್ಟಣ – 27
  • ಚಿಕ್ಕಮಗಳೂರು – 48
  • ಚಿಕ್ಕೋಡಿ – 09
  • ಚಿತ್ರದುರ್ಗ – 24
  • ದಾವಣಗೆರೆ – 16
  • ಧಾರವಾಡ – 19
  • ಗದಗ – 14
  • ಗೋಕಾಕ್ – 10
  • ಹಾಸನ – 51
  • ಹಾವೇರಿ – 17
  • ಕಲಬುರಗಿ – 38
  • ಕಾರವಾರ – 31
  • ಕೊಡಗು – 41
  • ಕೋಲಾರ – 45
  • ಕೊಪ್ಪಳ – 14
  • ಮಂಡ್ಯ – 43
  • ಮಂಗಳೂರು – 22
  • ಮೈಸೂರು – 17
  • ನಂಜನಗೂಡು – 27
  • ಪುತ್ತೂರು – 64
  • ರಾಯಚೂರು – 34
  • ಬೆಂಗಳೂರು ವಿಂಗಡಣಾ ಪ್ರದೇಶ – 07
  • ಆರ್‌ಎಂಎಸ್ ಎಚ್‌ಬಿ – 01
  • ಆರ್‌ಎಂಎಸ್ ಕ್ಯೂ – 02
  • ಶಿವಮೊಗ್ಗ – 57
  • ಸಿರ್ಸಿ – 27
  • ತುಮಕೂರು – 62
  • ಉಡುಪಿ – 38
  • ವಿಜಯಪುರ – 27
  • ಯಾದಗಿರಿ – 15

ಈ ರೀತಿ ನಿಮ್ಮ ಸ್ವಂತ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ಈ ನೇಮಕಾತಿಯ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಇದನ್ನೂ ಓದಿ: February 2026 Bank Holidays – ಫೆಬ್ರವರಿ 2026ರಲ್ಲಿ ಒಟ್ಟು 9 ದಿನ ಬ್ಯಾಂಕ್ ಬಂದ್! ರಜಾ ಪಟ್ಟಿ ತಿಳಿದುಕೊಂಡು ಈಗಲೇ ಕೆಲಸ ಪ್ಲಾನ್ ಮಾಡಿ

Salary Details – ವೇತನ ವಿವರಗಳು

ಹುದ್ದೆಯ ಪ್ರಕಾರ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ರೂ.12,000 ದಿಂದ ರೂ.29,380/-
  • ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ / ಡಾಕ್ ಸೇವಕ್ (ABPM / GDS): ರೂ.10,000 ದಿಂದ ರೂ.24,470/-

ಇದನ್ನೂ ಓದಿ: BGM Foundation Scholarship- ಈ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ | ಹೀಗೆ ಅರ್ಜಿ ಸಲ್ಲಿಸಿ…

Eligibility Criteria – ಅರ್ಹತಾ ಮಾನದಂಡಗಳು

ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯ ಜ್ಞಾನ ಅಗತ್ಯವಾಗಿರುತ್ತದೆ.

ವಯೋಮಿತಿ: ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 40 ವರ್ಷ ನಿಗದಿಪಡಿಸಲಾಗಿದೆ. ವರ್ಗವಾರು ವಯೋಮಿತಿ ಸಡಿಲಿಕೆ ಹೀಗಿದೆ:

  • ಒಬಿಸಿ: 3 ವರ್ಷ
  • ಎಸ್‌ಸಿ / ಎಸ್‌ಟಿ: 5 ವರ್ಷ
  • ಪಿಡಬ್ಲ್ಯೂಡಿ (ಸಾಮಾನ್ಯ): 10 ವರ್ಷ
  • ಪಿಡಬ್ಲ್ಯೂಡಿ (ಒಬಿಸಿ): 13 ವರ್ಷ
  • ಪಿಡಬ್ಲ್ಯೂಡಿ (ಎಸ್‌ಸಿ / ಎಸ್‌ಟಿ): 15 ವರ್ಷ

ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?

Application Fee – ಅರ್ಜಿ ಶುಲ್ಕದ ವಿವರ

ಮಹಿಳಾ / ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಟ್ರಾನ್ಸ್ವಿಮೆನ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳಿಗೆ ರೂ.100/- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

Selection Process – ಆಯ್ಕೆ ಪ್ರಕ್ರಿಯೆ ಹೇಗೆ?

WhatsApp Group Join Now
Telegram Group Join Now

ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇಲ್ಲ ಎಂಬುದೇ ಪ್ರಮುಖ ಆಕರ್ಷಣೆಯಾಗಿದೆ. 10ನೇ ತರಗತಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ನಂತರ ದಾಖಲೆ ಪರಿಶೀಲನೆ, ಅಗತ್ಯವಿದ್ದಲ್ಲಿ ಸಂದರ್ಶನದ ಮೂಲಕ ನೇಮಕ ಮಾಡಲಾಗುತ್ತದೆ.

ಇದನ್ನೂ ಓದಿ: KKRTC Driver Recruitment 2026- SSLC ಪಾಸಾದವರಿಗೆ ಸರ್ಕಾರಿ ಉದ್ಯೋಗ | KKRTC 78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply – ಅರ್ಜಿ ಸಲ್ಲಿಸುವ ವಿಧಾನ

ಮೊದಲು ಕೆಳಗೆ ನೀಡಿರುವ ಕರ್ನಾಟಕ ಅಂಚೆ ವೃತ್ತ ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ, ನೀವು ಈ ಹುದ್ದೆಗೆ ಅರ್ಹರಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

Karnataka Post Office GDS Recruitment 2026
Karnataka Post Office GDS Recruitment 2026

ಅಸ್ಥಿತ್ವದಲ್ಲಿರುವ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಶೈಕ್ಷಣಿಕ ಪ್ರಮಾಣಪತ್ರ, ಐಡಿ ಪ್ರೂಫ್, ಫೋಟೋ ಇತ್ಯಾದಿ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ತಯಾರಿಟ್ಟುಕೊಳ್ಳಿ.

ಈ ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಆನ್‌ಲೈನ್ ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಿ. ನಿಮ್ಮ ವರ್ಗಕ್ಕೆ ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿಸಿ. ಕೊನೆಯದಾಗಿ Submit ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ

Important Dates – ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ ದಿನಾಂಕ: 31-01-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-02-2026
  • ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 16-02-2026
  • ತಿದ್ದುಪಡಿ ವಿಂಡೋ: 18 ರಿಂದ 19 ಫೆಬ್ರವರಿ 2026

ಕೇವಲ ಎಸ್ಸೆಸ್ಸೆಲ್ಸಿ ಅರ್ಹತೆಯೊಂದಿಗೆ, ಪರೀಕ್ಷೆ ಇಲ್ಲದೆ, ತಮ್ಮದೇ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ನೀಡುವ ಈ ಕರ್ನಾಟಕ ಅಂಚೆ ವೃತ್ತ ಉಆS ನೇಮಕಾತಿ 2026 ನಿಜಕ್ಕೂ ಒಳ್ಳೆಯ ಸರ್ಕಾರಿ ಉದ್ಯೋಗ ಅವಕಾಶವಾಗಿದೆ.

ಇದನ್ನೂ ಓದಿ: Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

ನೀವು ಸರ್ಕಾರಿ ವೃತ್ತಿಜೀವನ ಆರಂಭಿಸಲು ಯೋಚಿಸುತ್ತಿದ್ದರೆ, ಈ ಅವಕಾಶವನ್ನು ಕೈಬಿಡದೇ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಇಂತಹ ಸರ್ಕಾರಿ ಉದ್ಯೋಗ ಮಾಹಿತಿಗಾಗಿ ನಮ್ಮ mahitimane.com ಅನ್ನು ನಿರಂತರವಾಗಿ ಓದುತ್ತಿರಿ.

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ: Download
  • ಆನ್‌ಲೈನ್‌ನಲ್ಲಿ ಅರ್ಜಿ ಲಿಂಕ್: Apply Now
  • ಅಧಿಕೃತ ವೆಬ್‌ಸೈಟ್: indiapost.gov.in

MESCOM Apprenticeship Recruitment 2026- ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿ 2026: ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರು, ಡಿಪ್ಲೊಮಾ ಉತ್ತೀರ್ಣರಿಗೆ ಅವಕಾಶ


Spread the love
error: Content is protected !!