Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

Spread the love

WhatsApp Group Join Now
Telegram Group Join Now

ಕರ್ನಾಟಕ ಬ್ಯಾಂಕಿನಲ್ಲಿ ₹50,000 ರಿಂದ ₹25 ಲಕ್ಷವರೆಗೆ ಪರ್ಸನಲ್ ಲೋನ್ (Karnataka Bank Personal Loan) ಸೌಲಭ್ಯವಿದ್ದು; ಈ ಲೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…

ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಆಪತ್ತಿನಲ್ಲಿ ‘ಕೈ’ ಹಿಡಿಯುವ ಆಪದ್ಭಾಂಧವನಂತೆ. ವೈದ್ಯಕೀಯ ತುರ್ತು ಖರ್ಚು, ಮಕ್ಕಳ ಶಿಕ್ಷಣ, ಮನೆ ದುರಸ್ತಿ, ಮದುವೆ ಅಥವಾ ಕುಟುಂಬ ಪ್ರಯಾಣ ಯಾವ ಕಾರಣಕ್ಕಾದರೂ ಪರ್ಸನಲ್ ಲೋನ್ (Personal Loan) ಸರಳವಾಗಿ ಕೈಗೆಟುಕುತ್ತದೆ.

ಹೆಚ್ಚಿನ ಕಾಗದ ಪತ್ರಗಳ ಜಂಜಾಟವಿಲ್ಲದೆ ತ್ವರಿತ ಮಂಜೂರಾತಿ ಸಿಗುವುದೇ ಪರ್ಸನಲ್ ಲೋನ್’ನ ವಿಶೇಷತೆ. ಸರ್ಕಾರಿ ಮತ್ತು ಖಾಸಗಿ ವಲಯದ ಬಹುತೇಕ ಎಲ್ಲಾ ಬ್ಯಾಂಕುಗಳೂ ಪರ್ಸನಲ್ ಲೋನ್ ನೀಡುತ್ತವೆ.

ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಮಂಜೂರಾತಿ ಬಹಳ ಸುಲಭ. ಇಲ್ಲಿ ಕರ್ನಾಟಕ ಬ್ಯಾಂಕಿನ ಪರ್ಸನಲ್ ಲೋನ್ ಕುರಿತ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: NWKRTC Officer Recruitment 2025- ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಹುದ್ದೆಗಳ ನೇಮಕಾತಿ | 33 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾಲದ ಮೊತ್ತ ಮತ್ತು ಬಡ್ಡಿದರ

ಕರ್ನಾಟಕ ಬ್ಯಾಂಕಿನಲ್ಲಿ ₹50,000 ರಿಂದ ₹25 ಲಕ್ಷವರೆಗೆ ಪರ್ಸನಲ್ ಲೋನ್ ಸೌಲಭ್ಯವಿದೆ. ಆದಾಯದ ಆಧಾರದ ಮೇಲೆ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಬಡ್ಡಿದರವು ಸಾಮಾನ್ಯವಾಗಿ ಶೇ.11.30 ರಿಂದ ಶೇ.17ರ ವರೆಗೆ ಇರುವುದರಿಂದ ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ ಇದು ಕಡಿಮೆ.

ಮರುಪಾವತಿ ಅವಧಿಯನ್ನು 12 ರಿಂದ 60 ತಿಂಗಳ ವರೆಗೆ ಆರಿಸಿಕೊಳ್ಳುವ ಅವಕಾಶ ಇರುವುದರಿಂದ ಗ್ರಾಹಕರು ತಮ್ಮ ಆದಾಯದ ಸಾಮರ್ಥ್ಯಕ್ಕೆ ತಕ್ಕಂತೆ EMI ನಿಗದಿಪಡಿಸಿಕೊಳ್ಳಬಹುದು.

ಈ ಸಾಲದ ಪ್ರಮುಖ ಆಕರ್ಷಣೆ ಎಂದರೆ ಮಂಜೂರಾತಿ ವೇಗ. ಸಾಮಾನ್ಯವಾಗಿ 24 ರಿಂದ 48 ಗಂಟೆಗಳೊಳಗೆ ಹಣ ಖಾತೆಗೆ ಜಮಾ ಆಗುತ್ತದೆ. ವೈಯಕ್ತಿಕ ಸಾಲವಾದ್ದರಿಂದ ಯಾವುದೇ ಗ್ಯಾರಂಟಿ ಪಡೆಯುವ ಅಗತ್ಯವಿಲ್ಲ. ನಿಮ್ಮ ಸಂಬಳದ ಪ್ರಮಾಣ ಮತ್ತು ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಮಂಜೂರಾತಿ ಇನ್ನೂ ಬೇಗವಾಗುತ್ತದೆ.

ಇದನ್ನೂ ಓದಿ: How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಅರ್ಹತಾ ಮಾನದಂಡಗಳು

ಸಾಲ ಪಡೆಯಲು ಕನಿಷ್ಠ 21 ವರ್ಷದಿಂದ 60 ವರ್ಷ ವಯಸ್ಸಿನೊಳಗಿರುವುದು ಅವಶ್ಯಕ. ಕನಿಷ್ಠ ಆರು ತಿಂಗಳು ಒಂದೇ ಉದ್ಯೋಗದಲ್ಲಿ ಕೆಲಸ ಮಾಡುತ್ತಿರಬೇಕು. ಮಾಸಿಕ ಸಂಬಳ ₹15,000 ಕ್ಕಿಂತ ಮೇಲ್ಪಟ್ಟಿದ್ದರೆ ಸಾಲ ಮಂಜೂರಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಕ್ರೆಡಿಟ್ ಸ್ಕೋರ್ 700 ಕ್ಕಿಂತ ಮೇಲಿದ್ದರೆ ಬಡ್ಡಿದರ ಕಡಿಮೆಯಾಗುತ್ತದೆ.

ಕರ್ನಾಟಕ ಬ್ಯಾಂಕ್‌ನಲ್ಲಿ ಖಾತೆ ಇರುವುದು ಅನಿವಾರ್ಯವಲ್ಲ; ಆದರೂ ಖಾತೆದಾರರಿಗೆ ಸ್ವಲ್ಪ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಸರ್ಕಾರಿ ನೌಕರರಿಗೆ 3 ತಿಂಗಳ ಸಂಬಳದ ದಾಖಲೆ ಇದ್ದರೂ ಸಾಲಕ್ಕೆ ಅರ್ಹತೆ ಸಿಗುತ್ತದೆ ಮತ್ತು ಗರಿಷ್ಠ ₹20 ಲಕ್ಷವರೆಗೂ ಸಾಲ ಸಿಗುತ್ತದೆ.

ಕರ್ನಾಟಕ ಬ್ಯಾಂಕಿನಲ್ಲಿ ₹50,000 ರಿಂದ ₹25 ಲಕ್ಷವರೆಗೆ ಪರ್ಸನಲ್ ಲೋನ್ ಸೌಲಭ್ಯವಿದ್ದು; ಈ ಲೋನ್ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ...
Karnataka Bank Personal Loan
ಬೇಕಾಗುವ ಅಗತ್ಯ ದಾಖಲೆಗಳು

ಮೊದಲೇ ಹೇಳಿದಂತೆ ಕರ್ನಾಟಕ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆಯಲು ಹೆಚ್ಚಿನ ಕಾಗದ ಪತ್ರಗಳ ಜಂಜಾಟವಿಲ್ಲವಾದರೂ, ದಾಖಲೆಗಳ ಸರಿಯಾದ ಸಲ್ಲಿಕೆ ಸಾಲ ಮಂಜೂರಾತಿಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ಹಾಗಾಗಿ ಈ ಕೆಳಗಿನ ದಾಖಲೆಗಳು ಬೇಕಾಗುತ್ತದೆ:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಇತ್ತೀಚಿನ ಮೂರು ತಿಂಗಳ ಸಂಬಳ ಸ್ಲಿಪ್
  • ಆರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
  • ಉದ್ಯೋಗ ಗುರುತಿನ ಚೀಟಿ ಅಥವಾ ಅಪಾಯಿಂಟ್‌ಮೆAಟ್ ಲೆಟರ್
  • ಪಾಸ್‌ಪೋರ್ಟ್ ಸೈಜ್ ಫೋಟೋ
  • Form-16 ಅಥವಾ ಆದಾಯ ತೆರಿಗೆ ರಿಟರ್ನ್ ಪ್ರತಿ (ಅಗತ್ಯವಿದ್ದಲ್ಲಿ)

ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ

ಅರ್ಜಿ ಪ್ರಕ್ರಿಯೆ ಹೇಗೆ?

ಆನ್‌ಲೈನ್ ವಿಧದಲ್ಲಿ ಕರ್ನಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪರ್ಸನಲ್ ಲೋನ್ ವಿಭಾಗಕ್ಕೆ ಪ್ರವೇಶಿಸಿ ಫಾರ್ಮ್ ಭರ್ತಿ ಮಾಡಿ, ಬೇಡಿಕೆ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಬ್ಯಾಂಕ್ ಪ್ರತಿನಿಧಿಗಳು ಕೆಲವೇ ಗಂಟೆಗಳಲ್ಲಿ ಸಂಪರ್ಕಿಸುತ್ತಾರೆ. ವೀಡಿಯೋ KYC ಪೂರ್ಣಗೊಂಡ ಬಳಿಕ 24 ರಿಂದ 48 ಗಂಟೆಗಳೊಳಗೆ ಸಾಲ ನೇರವಾಗಿ ನಿಮ್ಮ ಖಾತೆಗೆ ಜಮೆಯಾಗುತ್ತದೆ.

WhatsApp Group Join Now
Telegram Group Join Now

ಇನ್ನು ಆಫ್‌ಲೈನ್’ನಲ್ಲಿ ನೇರವಾಗಿ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಲೋನ್ ಡೆಸ್ಕ್’ನಲ್ಲಿ ನೀಡಲಾಗುವ ಮಾರ್ಗದರ್ಶನದ ನೆರವಿನಿಂದ ಅರ್ಜಿ ಫಾರ್ಮ್ ತುಂಬಿ ದಾಖಲೆಗಳನ್ನು ಸಲ್ಲಿಸಿದರೆ ಸಾಲ ಮಂಜೂರಾತಿ ಪ್ರಕ್ರಿಯೆ ಆರಂಭವಾಗುತ್ತದೆ. ದಾಖಲೆಗಳು ಸರಿಯಾಗಿದ್ದರೆ ಮಂಜೂರಾತಿ ಪ್ರಕ್ರಿಯೆ ಆನ್‌ಲೈನ್ ಮಟ್ಟಕ್ಕೇ ಸಮಾನ ವೇಗದಲ್ಲಿ ಮುಂದುವರಿಯುತ್ತದೆ.

EMI ಅಂದಾಜಿನ ವಿವರ

ಕರ್ನಾಟಕ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದ ಮೇಲೆ ಮರುಪಾವತಿ ಅವಧಿಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. ಅವಧಿ ಆಧಾರದಲ್ಲಿ EMI ನಿಗದಿಯಾಗುತ್ತದೆ. ಕೆಲವು ಉದಾಹರಣೆಯನ್ನು ಇಲ್ಲಿ ನೋಡಿ:

  • ನೀವು ₹2 ಲಕ್ಷ ಸಾಲವನ್ನು 48 ತಿಂಗಳ ಅವಧಿಗೆ ಶೇ.12ರ ಬಡ್ಡಿಯಲ್ಲಿ ತೆಗೆದುಕೊಂಡರೆ EMI ಸುಮಾರು ₹5,300 ಆಗುತ್ತದೆ.
  • ₹5 ಲಕ್ಷ ಸಾಲವನ್ನು 60 ತಿಂಗಳಿಗೆ ಶೇ.11.5ರ ಬಡ್ಡಿಯಲ್ಲಿ ಆಯ್ಕೆ ಮಾಡಿದರೆ EMI ಸುಮಾರು ₹11,000 ಬರುತ್ತದೆ.
  • ₹10 ಲಕ್ಷ ಸಾಲವನ್ನು 60 ತಿಂಗಳ ಅವಧಿಗೆ ಶೇ.11.30ರ ಬಡ್ಡಿಯಲ್ಲಿ ತೆಗೆದುಕೊಂಡರೆ ಪ್ರತಿ ತಿಂಗಳು ₹21,800 ರಷ್ಟು EMI ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

ಗಮನಿಸಬೇಕಾದ ಅಂಶಗಳು
  • ಸಾಲ ತೆಗೆದುಕೊಳ್ಳುವ ಮೊದಲು EMI ನಿಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಆಗದಂತೆ ಗಮನಿಸಿ.
  • ಕ್ರೆಡಿಟ್ ಸ್ಕೋರ್ 750 ಕ್ಕಿಂತ ಮೇಲಾಗಿದ್ದರೆ ಹೆಚ್ಚುವರಿ ಲಾಭಗಳು ಸಿಗಬಹುದು.
  • ಅತ್ಯಂತ ಅಗತ್ಯವಿದ್ದಾಗ ಮಾತ್ರ ಸಾಲವನ್ನು ಬಳಸುವುದು ಒಳಿತು.
  • EMI ಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಇನ್ನಷ್ಟು ಉತ್ತಮವಾಗುತ್ತದೆ.

ಒಟ್ಟಾರೆ ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ವಿಶ್ವಾಸಾರ್ಹ, ಸುಲಭ ಮತ್ತು ಕಡಿಮೆ ಬಡ್ಡಿಯ ಸಾಲವನ್ನು ಹುಡುಕುತ್ತಿರುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಅಗತ್ಯಕ್ಕೆ ತಕ್ಕ ಸಾಲ ಮೊತ್ತ, ಸುಗಮ ಮರುಪಾವತಿ ಅವಧಿ, ವೇಗದ ಮಂಜೂರಾತಿ ಮತ್ತು ಸರಳ ಅರ್ಜಿ ಪ್ರಕ್ರಿಯೆ ಈ ಬ್ಯಾಂಕಿನ ವಿಶೇಷವಾಗಿದೆ.

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
error: Content is protected !!