Federal Bank Scholarship 2025-26- ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನಕ್ಕೆ ಅರ್ಜಿ | ಲ್ಯಾಪ್‌ಟಾಪ್ ಜೊತೆಗೆ ಕಾಲೇಜು ಶುಲ್ಕ ಪಾವತಿಗೆ ಹಣಕಾಸು ನೆರವು

Spread the love

WhatsApp Group Join Now
Telegram Group Join Now

ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ಸ್ಕಾಲರ್‌ಶಿಪ್ 2025-26ಕ್ಕೆ (Federal Bank Hormis Memorial Foundation Scholarship 2025-26) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ವಿವರ ಇಲ್ಲಿದೆ…

ಖಾಸಗಿ ಅಥವಾ ವೃತ್ತಿಪರ ಶಿಕ್ಷಣ ಪಡೆಯುವ ಕನಸು ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಅಡೆತಡೆಗಳಿಂದಾಗಿ ಕೈ ತಪ್ಪುವ ಸಂದರ್ಭಗಳು ಇರುತ್ತವೆ. ಇಂತಹ ವಿದ್ಯಾರ್ಥಿಗಳಿಗೆ ದೊಡ್ಡ ಆಸರೆಯಾಗುವಂತದ್ದು ಫೆಡರಲ್ ಬ್ಯಾಂಕ್ ಹಾರ್ಮಿಸ್ ಮೆಮೋರಿಯಲ್ ಫೌಂಡೇಶನ್ ಸ್ಕಾಲರ್‌ಶಿಪ್.

ಕಾಲೇಜು ಶುಲ್ಕದ ಜೊತೆಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಖರೀದಿಗೂ ನೆರವು ನೀಡುವ ಈ ವಿದ್ಯಾರ್ಥಿವೇತನ, ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ಮಹತ್ವದ ಬೆಂಬಲವಾಗಿದೆ.

ಇದನ್ನೂ ಓದಿ: Gruhalakshmi Yojana 181 Helpline- ನಿಮಗಿನ್ನೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಆತಂಕ ಬೇಡ; ಇನ್ಮುಂದೆ ಫೋನ್‌ನಲ್ಲೇ ಪರಿಹಾರ

What is the Federal Bank Scholarship? – ಏನಿದು ಫೆಡರಲ್ ಬ್ಯಾಂಕ್ ಸ್ಕಾಲರ್‌ಶಿಪ್?

ಈ ವಿದ್ಯಾರ್ಥಿವೇತನವು ಫೆಡರಲ್ ಬ್ಯಾಂಕ್‌ನ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮದ ಭಾಗವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ವಿಶೇಷವಾಗಿ ವೃತ್ತಿಪರ ಮತ್ತು ಉದ್ಯೋಗಮುಖಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗುತ್ತದೆ.

ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡು ರಾಜ್ಯಗಳ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದು. ಕಾಲೇಜು ಶುಲ್ಕದ ಭಾರದಿಂದ ಆತಂಕಪಡುವ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ಒಳ್ಳೆಯ ಅವಕಾಶವಾಗಿದೆ.

ಇದನ್ನೂ ಓದಿ: Banking New Rules 2026- ಜನವರಿ 1ರಿಂದ ಬ್ಯಾಂಕುಗಳಿಗೆ ಹೊಸ ನಿಯಮಗಳು ಜಾರಿ | ಸಾಲಗಾರರಿಗೆ ಭಾರೀ ಲಾಭ, ವಂಚನೆಗೆ ಬ್ರೇಕ್!

Who is Eligible for the Scholarship? – ಯಾರಿಗೆ ಈ ವಿದ್ಯಾರ್ಥಿವೇತನ ಸಿಗುತ್ತದೆ?

ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಎಂಬಿಬಿಎಸ್ (MBBS), ಬಿಇ / ಬಿ.ಟೆಕ್, ಬಿ.ಎಸ್ಸಿ ನರ್ಸಿಂಗ್, ಎಂಬಿಎ (MBA), ಕೃಷಿಯಲ್ಲಿ ಬಿ.ಎಸ್ಸಿ ಹಾಗೂ ಸಹಕಾರ ಮತ್ತು ಬ್ಯಾಂಕಿಂಗ್‌ನಲ್ಲಿ ಬಿ.ಎಸ್ಸಿ (ಆನರ್ಸ್) ಕೋರ್ಸು/ ವಿಭಾಗಗಳಲ್ಲಿ ಓದುತ್ತಿರಬೇಕು.
  • ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ತಮಿಳುನಾಡು ರಾಜ್ಯಗಳ ಪೈಕಿ ಯಾವುದಾದರೂ ಒಂದರ ನಿವಾಸಿಯಾಗಿರಬೇಕು.
  • 2025-26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ / ಸರ್ಕಾರಿ ಅನುದಾನಿತ / ಸರ್ಕಾರಿ ಮಾನ್ಯತೆ ಪಡೆದ ಸ್ವ-ಹಣಕಾಸು ಅಥವಾ ಸ್ವಾಯತ್ತ ಕಾಲೇಜುಗಳಲ್ಲಿ ಪ್ರವೇಶ ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ 3,00,000 ರೂ. ಗಿಂತ ಕಡಿಮೆ ಇರಬೇಕು

ಇದನ್ನೂ ಓದಿ: KHB Site Allotment- ಸರ್ಕಾರದಿಂದ ಅರ್ಧ ಬೆಲೆಗೆ ಕೆಎಚ್‌ಬಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ

Special Relaxations – ವಿಶೇಷ ಸಡಿಲಿಕೆಗಳು

  • ಹುತಾತ್ಮ ಸಶಸ್ತ್ರ ಪಡೆಗಳ ಸಿಬ್ಬಂದಿಯ ಅವಲಂಬಿತ ಮಕ್ಕಳಿಗೆ ಆದಾಯದ ಮಿತಿಗಳು ಅನ್ವಯಿಸುವುದಿಲ್ಲ.
  • ಮೇಲ್ಕಂಡ ಕೋರ್ಸ್’ಗಳಲ್ಲಿ ಪ್ರವೇಶ ಪಡೆದಿರುವ ವಾಕ್, ದೃಷ್ಟಿ ಅಥವಾ ಶ್ರವಣ ದೋಷ ಹೊಂದಿರುವ ವಿದ್ಯಾರ್ಥಿಗಳು ಕೂಡ ಅರ್ಹರಾಗಿರುತ್ತಾರೆ.
  • ಪದವಿ ಕೋರ್ಸ್’ಗಳಿಗೆ 12ನೇ ತರಗತಿ ಅರ್ಹತಾ ಪರೀಕ್ಷೆ, ಎಂಬಿಎಗೆ ಪದವಿ ಪರೀಕ್ಷೆ ಅರ್ಹತೆ ಆಗಿರುತ್ತದೆ.
Federal Bank Scholarship 2025-26
Federal Bank Scholarship 2025-26

Scholarship Amount – ಸ್ಕಾಲರ್‌ಶಿಪ್ ಮೊತ್ತ ಎಷ್ಟು?

ಈ ವಿದ್ಯಾರ್ಥಿವೇತನದ ವಿಶೇಷತೆ ಎಂದರೆ, ಇದು ಕೇವಲ ಒಂದು ನಿಗದಿತ ಮೊತ್ತವಲ್ಲ; ಬದಲಾಗಿ ವಿದ್ಯಾರ್ಥಿಯ ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನಂತೆ ನೆರವು ನೀಡಲಾಗುತ್ತದೆ.

  • ಕಾಲೇಜು ಬೋಧನಾ ಶುಲ್ಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳ 100% ಮರುಪಾವತಿ
  • ಲ್ಯಾಪ್‌ಟಾಪ್ / ಪಿಸಿ ಖರೀದಿಗೆ ಒಂದು ಬಾರಿ ₹40,000 ವರೆಗೆ ಮರುಪಾವತಿ
  • ಟ್ಯಾಬ್ಲೆಟ್‌ಗೆ ಒಂದು ಬಾರಿ ₹30,000 ವರೆಗೆ ಮರುಪಾವತಿ
  • ಒಟ್ಟಾರೆ ವಾರ್ಷಿಕ ಗರಿಷ್ಠ ಅರ್ಹತೆ ₹1,00,000

ಇದನ್ನೂ ಓದಿ: Karnataka Govt SSP Scholarship 2025-26- ಕರ್ನಾಟಕ ಸರ್ಕಾರದಿಂದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು

Required Documents – ಅರ್ಜಿಗೆ ಬೇಕಾದ ದಾಖಲೆಗಳು

  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಕಾಲೇಜಿನ ಪ್ರವೇಶ ಪತ್ರ / ಜ್ಞಾಪನ ಪತ್ರ
  • ಕೋರ್ಸ್ ಶುಲ್ಕ ರಚನೆ
  • ಸರ್ಕಾರಿ ಆದಾಯ ಪ್ರಮಾಣಪತ್ರ
  • ವಾಸಸ್ಥಳ / ನೆಟಿವಿಟಿ ಪ್ರಮಾಣಪತ್ರ
  • ಅರ್ಹತಾ ಪರೀಕ್ಷೆಯ ಅಂಕಪಟ್ಟಿಗಳು
  • ವಿದ್ಯಾರ್ಥಿ ಮತ್ತು ಪೋಷಕರ ಗುರುತಿನ ಚೀಟಿ ಹಾಗೂ ವಿಳಾಸ ಪುರಾವೆ
  • ಅಂಗವಿಕಲ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ
  • CGPA/ಗ್ರೇಡ್ ಅನ್ನು ಶೇಕಡಾವಾರಿಗೆ ಪರಿವರ್ತಿಸುವ ವಿಶ್ವವಿದ್ಯಾಲಯದ ಸೂಚನೆಗಳು (ಅಗತ್ಯವಿದ್ದಲ್ಲಿ)
  • ಹುತಾತ್ಮ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮಕ್ಕಳಿಗೆ ಸಂಬಂಧಿಸಿದ ಪುರಾವೆಗಳು

ಇದನ್ನೂ ಓದಿ: TaTa Capital Pankh Scholarship 2025- ಪಿಯುಸಿ ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು | ಟಾಟಾ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ

Application Process – ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಕೆಳಗೆ ನೀಡಲಾದ ಅರ್ಜಿ ಲಿಂಕ್ Apply Now  ಬಟನ್ ಮೇಲೆ ಕ್ಲಿಕ್ ಮಾಡಿ .
ಹಂತ 2:Register’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ನೋಂದಣಿ ವಿವರಗಳನ್ನು ಭರ್ತಿ ಮಾಡಿ. (ಗಮನಿಸಿ: ಈಗಾಗಲೇ ನೋಂದಾಯಿಸಿದ್ದರೆ, ಜಿ-ಮೇಲ್/ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಬಳಸಿ ಲಾಗಿನ್ ಮಾಡಿ).
ಹಂತ 3: Apply Now ಬಟನ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
ಹಂತ 4: ನಿಮ್ಮ ಮೊಬೈಲ್ ಸಂಖ್ಯೆ, ಕ್ಯಾಪ್ಚಾವನ್ನು ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಯಶಸ್ವಿ ಪರಿಶೀಲನೆಯ ನಂತರ, ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ, ಪುಟದ ಕೆಳಭಾಗದಲ್ಲಿರುವ ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು Submit ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 6: ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

  • ಅರ್ಜಿ ಕೊನೆಯ ದಿನಾಂಕ: ಡಿಸೆಂಬರ್ 31, 2025
  • Apply Link – ಅರ್ಜಿ ಲಿಂಕ್: Apply Now 

Spread the love
error: Content is protected !!