February 2026 Bank Holidays – ಫೆಬ್ರವರಿ 2026ರಲ್ಲಿ ಒಟ್ಟು 9 ದಿನ ಬ್ಯಾಂಕ್ ಬಂದ್! ರಜಾ ಪಟ್ಟಿ ತಿಳಿದುಕೊಂಡು ಈಗಲೇ ಕೆಲಸ ಪ್ಲಾನ್ ಮಾಡಿ

Spread the love

WhatsApp Group Join Now
Telegram Group Join Now

ಫೆಬ್ರವರಿ 2026ರ ಸಂಪೂರ್ಣ ಬ್ಯಾಂಕ್ ರಜಾ ಪಟ್ಟಿ (February 2026 Bank Holidays), ಯಾವ ದಿನ ಯಾವ ರಾಜ್ಯದಲ್ಲಿ ಬ್ಯಾಂಕ್ ಬಂದ್ ಮತ್ತು ಗ್ರಾಹಕರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ವಿವರ ಇಲ್ಲಿದೆ…

ಹೊಸ ತಿಂಗಳು ಆರಂಭವಾಗಲು ಇನ್ನೂ ಕೆಲವೇ ದಿನಗಳು ಉಳಿದಿವೆ. ಫೆಬ್ರವರಿ 2026ಕ್ಕೆ ಕಾಲಿಡುವ ಮೊದಲು ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳಿದ್ದರೆ, ಬ್ಯಾಂಕ್ ರಜಾ ದಿನಗಳ (Bank Holidays) ಮಾಹಿತಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಏಕೆಂದರೆ, ಪ್ರತಿ ತಿಂಗಳಂತೆ ಈ ತಿಂಗಳಲ್ಲಿಯೂ ಹಲವು ದಿನಗಳು ಬ್ಯಾಂಕುಗಳು ಸಂಪೂರ್ಣವಾಗಿ ಮುಚ್ಚಿರಲಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿರುವ ಅಧಿಕೃತ ರಜಾ ಕ್ಯಾಲೆಂಡರ್ (RBI Holiday Calendar) ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಒಟ್ಟು 9 ದಿನ ಬ್ಯಾಂಕ್‌ಗಳಿಗೆ ರಜೆ ಇದೆ. ಈ ರಜೆಗಳು ನಿಯಮಿತ ಸಾಪ್ತಾಹಿಕ ರಜೆಗಳು ಹಾಗೂ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯವಾಗುವ ಹಬ್ಬ ಮತ್ತು ರಾಜ್ಯೋತ್ಸವದ ರಜೆಗಳನ್ನು ಒಳಗೊಂಡಿವೆ.

ಈ ಲೇಖನದಲ್ಲಿ ಫೆಬ್ರವರಿ 2026ರ ಸಂಪೂರ್ಣ ಬ್ಯಾಂಕ್ ರಜಾ ಪಟ್ಟಿ (February 2026 Bank Holidays List), ಯಾವ ದಿನ ಯಾವ ರಾಜ್ಯದಲ್ಲಿ ಬ್ಯಾಂಕ್ ಬಂದ್ ಮತ್ತು ಗ್ರಾಹಕರು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ವಿವರವಾಗಿ ತಿಳಿಯೋಣ.

ಇದನ್ನೂ ಓದಿ: BGM Foundation Scholarship- ಈ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ | ಹೀಗೆ ಅರ್ಜಿ ಸಲ್ಲಿಸಿ…

RBI Bank Holiday Rules – RBI ರಜಾ ನಿಯಮಗಳು ಏನು ಹೇಳುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ ಪ್ರತಿ ಭಾನುವಾರ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಇಡೀ ದೇಶಾದ್ಯಂತ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳು ಮುಚ್ಚಿರುತ್ತವೆ. ಇವು ರಾಷ್ಟ್ರವ್ಯಾಪಿ ಅನ್ವಯವಾಗುವ ರಜೆಗಳು.

ಇದಕ್ಕೆ ಹೆಚ್ಚುವರಿಯಾಗಿ ಕೆಲವು ಹಬ್ಬಗಳು, ರಾಜ್ಯೋತ್ಸವಗಳು ಹಾಗೂ ಸ್ಥಳೀಯ ಆಚರಣೆಗಳ ಸಂದರ್ಭದಲ್ಲಿ ಆಯ್ದ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್ ರಜೆ ಇರುತ್ತದೆ. ಇವುಗಳನ್ನು ರಾಷ್ಟ್ರೀಯ ರಜೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.

ಇದನ್ನೂ ಓದಿ: Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

February 2026 Bank Holidays – ಫೆಬ್ರವರಿ 2026 ಬ್ಯಾಂಕ್ ರಜಾ ದಿನಗಳು

ಫೆಬ್ರವರಿ 2026ರಲ್ಲಿ ಕೆಳಗಿನ ದಿನಗಳಲ್ಲಿ ಇಡೀ ದೇಶದಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ:

  • ಫೆಬ್ರವರಿ 1 (ಭಾನುವಾರ)
  • ಫೆಬ್ರವರಿ 8 (ಭಾನುವಾರ)
  • ಫೆಬ್ರವರಿ 14 (ಎರಡನೇ ಶನಿವಾರ)
  • ಫೆಬ್ರವರಿ 15 (ಭಾನುವಾರ)
  • ಫೆಬ್ರವರಿ 22 (ಭಾನುವಾರ)
  • ಫೆಬ್ರವರಿ 28 (ನಾಲ್ಕನೇ ಶನಿವಾರ)

ಈ ಆರು ದಿನಗಳಲ್ಲಿ ಯಾವುದೇ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಈ ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ರಜಾ ಇರುತ್ತದೆ.

ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?

State-Wise Bank Closures – ಕೆಲ ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್ ಬಂದ್ ಇರುವ ದಿನಗಳು

ನಿಯಮಿತ ರಜೆಗಳ ಜೊತೆಗೆ, ಫೆಬ್ರವರಿ ತಿಂಗಳಲ್ಲಿ ಕೆಲವು ವಿಶೇಷ ದಿನಗಳಲ್ಲಿ ಆಯ್ದ ರಾಜ್ಯಗಳಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಿರುತ್ತವೆ:

  • ಫೆಬ್ರವರಿ 18: ಸಿಕ್ಕಿಂ ರಾಜ್ಯದಲ್ಲಿ ಲೋಸರ್ (Losar) ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ರಜೆ
  • ಫೆಬ್ರವರಿ 19: ಮಹಾರಾಷ್ಟ್ರ ರಾಜ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಬ್ಯಾಂಕ್ ಬಂದ್
  • ಫೆಬ್ರವರಿ 20: ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬ್ಯಾಂಕ್ ರಜೆ

ಈ ದಿನಗಳಲ್ಲಿ ಇತರ ರಾಜ್ಯಗಳಲ್ಲಿ ಬ್ಯಾಂಕುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ.

February 2026 Bank Holidays
February 2026 Bank Holidays

ಇದನ್ನೂ ಓದಿ: Sukanya Samriddhi Yojana- ಹೆಣ್ಣುಮಕ್ಕಳ ಭವಿಷ್ಯ ಭದ್ರವಾಗಿಸುವ ಸುಕನ್ಯಾ ಸಮೃದ್ಧಿ ಯೋಜನೆ | ಮಗಳ ಮದುವೆಗೆ 69 ಲಕ್ಷ ಹಣ

Plan Bank Work Early – ಬ್ಯಾಂಕ್ ಕೆಲಸಗಳಿದ್ದರೆ ಮುಂಚಿತವಾಗಿ ಯೋಜನೆ ಮಾಡಿಕೊಳ್ಳಿ

WhatsApp Group Join Now
Telegram Group Join Now

ಫೆಬ್ರವರಿ ತಿಂಗಳಲ್ಲಿ ಬ್ಯಾಂಕ್‌ಗೆ ನೇರವಾಗಿ ಹೋಗಿ ಮಾಡಬೇಕಾದ ಕೆಲಸಗಳಿದ್ದರೆ, ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಯೋಜನೆ ಮಾಡಿಕೊಳ್ಳುವುದು ಬಹಳ ಮುಖ್ಯ.

ವಿಶೇಷವಾಗಿ ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ (DD), ನಗದು ಜಮೆ / ವಿತ್‌ಡ್ರಾ, ದಾಖಲೆ ಸಂಬಂಧಿತ ಕೆಲಸಗಳು, ಖಾತೆ ತೆರೆಯುವುದು ಅಥವಾ ತಿದ್ದುಪಡಿ ಈ ಎಲ್ಲ ಕಾರ್ಯಗಳಿಗೆ ಶಾಖೆಗೆ ಹೋಗಬೇಕಾಗಿರುವುದರಿಂದ, ರಜೆ ದಿನಗಳನ್ನು ತಪ್ಪಿಸಿ ಬ್ಯಾಂಕ್‌ಗೆ ಭೇಟಿ ನೀಡುವುದು ಉತ್ತಮ.

ಇದನ್ನೂ ಓದಿ: Govt Employee Pension Withholding- ಇಂಥ ಸರ್ಕಾರಿ ನೌಕರರ ಪಿಂಚಣಿ ಮುಟ್ಟುಗೋಲು: ಹೊಸ ಕಠಿಣ ನಿಯಮ ಜಾರಿ

24/7 Digital Banking Services – ಡಿಜಿಟಲ್ ಸೇವೆಗಳು ಸದಾ ಲಭ್ಯ

ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು 24×7 ಲಭ್ಯವಿರುತ್ತವೆ ಎಂಬುದು ಗ್ರಾಹಕರಿಗೆ ಸ್ವಲ್ಪ ನೆಮ್ಮದಿ ನೀಡುವ ಸಂಗತಿ. ನೀವು ಈ ಕೆಳಗಿನ ಸೇವೆಗಳನ್ನು ಬಳಸಬಹುದು:

  • ATM ಮೂಲಕ ಹಣ ವಿತ್‌ಡ್ರಾ
  • UPI ಮೂಲಕ ಹಣ ವರ್ಗಾವಣೆ
  • NEFT / RTGS / IMPS
  • ನೆಟ್ ಬ್ಯಾಂಕಿಂಗ್
  • ಮೊಬೈಲ್ ಬ್ಯಾಂಕಿಂಗ್ ಆಪ್
  • ಬಿಲ್ ಪಾವತಿ, ರೀಚಾರ್ಜ್, ಬ್ಯಾಲೆನ್ಸ್ ಚೆಕ್

ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್

ಒಟ್ಟಾರೆ ಹೇಳುವುದಾದರೆ ಫೆಬ್ರವರಿ 2026ರಲ್ಲಿ ಒಟ್ಟು 9 ದಿನ ಬ್ಯಾಂಕ್ ರಜೆ ಇರುವುದರಿಂದ, ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ನಿರ್ಲಕ್ಷ್ಯ ಮಾಡದೇ ರಜಾ ಪಟ್ಟಿಯನ್ನು ಗಮನಿಸಿ ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಕೆಲಸ.

ಖಃI ಪ್ರಕಟಿಸಿರುವ ಅಧಿಕೃತ ರಜಾ ಕ್ಯಾಲೆಂಡರ್ ಅನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸಿಕೊಳ್ಳಿ. ಸ್ವಲ್ಪ ಮುಂಚಿತ ಯೋಜನೆ ಮಾಡಿದರೆ ಯಾವುದೇ ತೊಂದರೆ ಇಲ್ಲದೆ ನಿಮ್ಮ ಬ್ಯಾಂಕ್ ಕೆಲಸಗಳು ಸುಗಮವಾಗಿ ಮುಗಿಯುತ್ತವೆ.

ಇನ್ಮುಂದೆ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ? | ನೌಕರರ ಮುಷ್ಕರಕ್ಕೆ ಬಲ ಸಿಗುವುದೇ? ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!