A-Khata Distribution- ನಗರ ಪ್ರದೇಶದ ಎಲ್ಲಾ ಅನಧಿಕೃತ ಮನೆ, ಸೈಟುಗಳಿಗೆ ಎ-ಖಾತಾ ವಿತರಣೆಗೆ ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

ನಗರ ಪ್ರದೇಶದ ಅನಧಿಕೃತ ಮನೆ-ಸೈಟುಗಳಿಗೆ ‘ಎ-ಖಾತಾ’ ವಿತರಣೆಗೆ (A-Khata Distribution) ಸರ್ಕಾರ ಮುಂದಾಗಿದೆ. ಸರ್ಕಾರದ ಹೊಸ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಸರ್ಕಾರವು ರಾಜ್ಯದ ನಗರ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಪರಿಹಾರವಿಲ್ಲದೆ ಉಳಿದಿದ್ದ ಬಿ-ಖಾತಾ ಆಸ್ತಿಗಳ ಕಾನೂನು ಸ್ಥಿತಿಗೆ ಶಾಶ್ವತ ಪರಿಹಾರ ನೀಡುವ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈಗಾಗಲೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಾಗಿರುವ ವ್ಯವಸ್ಥೆಯನ್ನು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆ … Read more

Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಬೀಸುವ ಮುನ್ಸೂಚನೆ ಇದ್ದು; ಹವಾಮಾನ ಇಲಾಖೆ ಎಚ್ಚರಿಕೆ (Karnataka Cold Wave Warning) ನೀಡಿದೆ. ರಾಜ್ಯದ ಎಲ್ಲೆಲ್ಲಿ ಚಳಿ ಪ್ರಭಾವ ಹೇಗಿದೆೆ? ಎಂಬ ಮಾಹಿತಿ ಇಲ್ಲಿದೆ… ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವೆಡೆ ಮತ್ತೆ ಥರಗುಟ್ಟಿಸುವ ಚಳಿ ಅನುಭವವಾಗುತ್ತಿದೆ. ಶೀತಗಾಳಿ, ಮೋಡ ಕವಿದ ವಾತಾವರಣ ಮತ್ತು ತಾಪಮಾನದಲ್ಲಿ ಆಗಿರುವ ಗಣನೀಯ ಇಳಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಕೆಲ ದಿನಗಳಿಂದ ಚಳಿ ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಟ್ಟ ಜನರಿಗೆ ಈಗ ಮತ್ತೆ ಸ್ವೆಟರ್, … Read more

1.5 Lakh Kotak Kanya Scholarship- 1.5 ಲಕ್ಷ ರೂ. ಕೋಟಕ್ ಕನ್ಯಾ ವಿದ್ಯಾರ್ಥಿವೇತನ | ಈಗಲೇ ಅರ್ಜಿ ಹಾಕಿ…

ಪಿಯುಸಿ ನಂತರದ ವೃತ್ತಿಪರ ಕೋರ್ಸುಗಳ ವ್ಯಾಸಂಗಕ್ಕೆ ಕೋಟಕ್ ಕನ್ಯಾ ವಿದ್ಯಾರ್ಥಿವೇತನ (1.5 Lakh Kotak Kanya Scholarship) ಯೋಜನೆಯಡಿ 1.5 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಇಂದಿನ ದಿನಗಳಲ್ಲಿ ಶಿಕ್ಷಣವೆಂದರೆ ಕನಸು ಮಾತ್ರವಲ್ಲ, ಭವಿಷ್ಯ ನಿರ್ಮಾಣದ ಪ್ರಮುಖ ಸಾಧನ. ಆದರೆ ಆರ್ಥಿಕ ಅಡಚಣೆಗಳ ಕಾರಣದಿಂದ ಅನೇಕ ಪ್ರತಿಭಾನ್ವಿತ ಹೆಣ್ಣು ಮಕ್ಕಳು ತಮ್ಮ ಉನ್ನತ ಶಿಕ್ಷಣದ ಕನಸನ್ನು ಅರ್ಧದಲ್ಲೇ ನಿಲ್ಲಿಸಬೇಕಾಗುತ್ತದೆ. ಇಂತಹ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಕೋಟಕ್ ಮಹೀಂದ್ರಾ … Read more

Amrutha Swabhimani Kurigahi Subsidy- ಕುರಿ-ಮೇಕೆ ಸಾಕಾಣಿಕೆಗೆ 43,750 ರೂ. ಸರ್ಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಕುರಿ-ಮೇಕೆ ಸಾಕಾಣಿಕೆಗೆ ರಾಜ್ಯ ಸರ್ಕಾರ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ (Amrutha Swabhimani Kurigahi Subsidy) ಜಾರಿಗೊಳಿಸಿದ್ದು; ಈ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆಯುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕುರಿ ಸಾಕಾಣಿಕೆ ಕಳೆದ ಕೆಲವು ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಲಾಭದಾಯಕ ವೃತ್ತಿಯಾಗಿ ರೂಪಾಂತರಗೊಂಡಿದೆ. ಎಲ್ಲಾ ಸಮುದಾಯದ ಜನರೂ ಈಗ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದು; ಇಂದು ಇದು ಯುವಕರಿಗೆ ಉದ್ಯೋಗದ ಅವಕಾಶವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ (Amruta Swabhimani Kurigahi … Read more

Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

2026-27ನೇ ಶೈಕ್ಷಣಿಕ ಸಾಲಿನ ಉಚಿತ ವಸತಿ ಶಾಲೆಗಳ 6ನೇ ತರಗತಿಗೆ ಪ್ರವೇಶ (Morarji Desai Residential School Admission 2026-27) ಪ್ರಕ್ರಿಯೆ ಇಂದಿನಿಂದ  ಆರಂಭವಾಗಿದ್ದು; ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶಿಕ್ಷಣವೇ ಬಡತನದ ಬಾಗಿಲು ಮುಚ್ಚುವ ಶಕ್ತಿಯುತ ಆಯುಧ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಉಚಿತ ವಸತಿ ಶಾಲೆಗಳನ್ನು ಆರಂಭಿಸಿದೆ. ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಿವಿಧ ವಸತಿ … Read more

Karnataka Prize Money Scholarship- ಎಸ್ಸೆಸ್ಸೆಲ್ಸಿಯಿಂದ ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ₹50,000 ಪ್ರೈಜ್ ಮನಿ ಸ್ಕಾಲರ್‌ಶಿಪ್ | ಅರ್ಜಿ ಆಹ್ವಾನ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ 50,000 ರೂ. ವರೆಗೆ ಪ್ರೋತ್ಸಾಹ ಧನ (Karnataka Prize Money Scholarship) ನೀಡಲಾಗುತ್ತಿದ್ದು; ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಓದಿನಲ್ಲಿ ಅಪಾರ ಪ್ರತಿಭೆ ಇದ್ದರೂ, ಆರ್ಥಿಕ ಅಡಚಣೆಗಳಿಂದಾಗಿ ತಮ್ಮ ಕನಸುಗಳನ್ನು ಅರ್ಧದಲ್ಲೇ ನಿಲ್ಲಿಸಬೇಕಾದ ಅನೇಕ ವಿದ್ಯಾರ್ಥಿಗಳು ನಮ್ಮ ಸಮಾಜದಲ್ಲಿದ್ದಾರೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾರಿಯಲ್ಲಿ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ (Prize Money) ನೀಡುವ … Read more

Whatsapp Banking Services- ಈಗ ವಾಟ್ಸಾಪ್‌ನಲ್ಲೇ ಬ್ಯಾಂಕಿಂಗ್ ಸೇವೆ ಪಡೆಯಿರಿ | ವಿವಿಧ ಬ್ಯಾಂಕುಗಳ ವಾಟ್ಸಾಪ್ ನಂಬರ್ ಇಲ್ಲಿವೆ…

ಬಹುತೇಕ ಬ್ಯಾಂಕುಗಳು ವಾಟ್ಸಾಪ್ ಸೇವೆ ಆರಂಭಿಸಿವೆ. ಮನೆಯಲ್ಲಿಯೇ ಕೂತು ಬ್ಯಾಂಕಿಂಗ್ ವಹಿವಾಟು ನಡೆಸಬಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ವಾಟ್ಸಾಪ್ ನಂಬರುಗಳು ಇಲ್ಲಿವೆ… ಇಂದಿನ ದಿನಗಳಲ್ಲಿ ಬ್ಯಾಂಕಿಂಗ್ ಎಂದರೆ ಬ್ಯಾಂಕ್ ಶಾಖೆಗೆ ಹೋಗಿ ಸಾಲಿನಲ್ಲಿ ನಿಲ್ಲುವ ತುರ್ತು ಕ್ರಮೇಣ ಕಡಿಮೆಯಾಗುತ್ತಿದೆ. ಡಿಜಿಟಲ್ ಕ್ರಾಂತಿಯ ಪರಿಣಾಮವಾಗಿ ಮೊಬೈಲ್ ಫೋನ್ ಇದ್ದರೆ ಸಾಕು; ಮನೆಯಲ್ಲೇ ಕುಳಿತು ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್‌ಗಳ ಜೊತೆಗೆ ಈಗ ವಾಟ್ಸಾಪ್ ಬ್ಯಾಂಕಿಂಗ್ ಕೂಡ ಗ್ರಾಹಕರಿಗೆ ದೊಡ್ಡ ಅನುಕೂಲವಾಗಿ … Read more

Weekly Horoscope- ವಾರ ಭವಿಷ್ಯ: ಈ ವಾರ ಯಾರಿಗೆ ಲಕ್? ಯಾರಿಗೆ ಎಚ್ಚರಿಕೆ?

ಈ ವಾರದ ಗ್ರಹಗತಿಗಳು ಎಲ್ಲ ರಾಶಿಗಳ ಮೇಲೂ ವಿಭಿನ್ನ ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಕೆಲವರಿಗೆ ಆದಾಯದ ಲಾಭ, ಕೆಲವರಿಗೆ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ನಿಮ್ಮ ರಾಶಿಗೆ ಈ ವಾರ (Weekly Horoscope) ಹೇಗಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ… Aries Horoscope – ಮೇಷ ರಾಶಿ ಈ ವಾರ ನಿರ್ಧಾರಗಳ ವಿಚಾರದಲ್ಲಿ ದ್ವಂದ್ವ ಹೆಚ್ಚಾಗಿರುತ್ತದೆ. ಆದಾಯ ಕಡಿಮೆಯಾಗಿ ಖರ್ಚು ಹೆಚ್ಚುವ ಸಾಧ್ಯತೆ ಇದೆ. ಆದರೆ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಹಣದ ಮೂಲ ಗೋಚರಿಸುವುದು ಧೈರ್ಯ ನೀಡುತ್ತದೆ. ವಿದ್ಯಾರ್ಥಿಗಳು … Read more

KCET 2026 Exam Timetable- 2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿ | ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ…

2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು ಸಂಪೂರ್ಣ ವೇಳಾಪಟ್ಟಿ (KCET 2026 Exam Timetable) ಪ್ರಕಟವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…  ವೃತ್ತಿಪರ ಕೋರ್ಸುಗಳಲ್ಲಿ ಪ್ರವೇಶ ಪಡೆಯುವ ಕನಸು ಕಂಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ವು (Karnataka Examinations Authority- KEA) 2026ನೇ ಸಾಲಿನ ‘ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (Karnataka Common Entrance Test –KCET)’ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. … Read more

error: Content is protected !!