Karnataka ZP TP Election- ಮೂರು ತಿಂಗಳೊಳಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ | ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ಜಿ.ಪಂ ಹಾಗೂ ತಾ.ಪಂ ಚುನಾವಣೆ (Karnataka ZP TP Election) ಘೋಷಣೆ ಕುರಿತು ರಾಜ್ಯ ಸರ್ಕಾರದ ಪರವಾಗಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಮಹತ್ವದ ಮಾಹಿತಿ ನೀಡಿದ್ದು; ಈ ಕುರಿತ ನಿಖರ ಮಾಹಿತಿ ಇಲ್ಲಿದೆ… ಕಳೆದ ಮೂರೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್ (ಜಿ.ಪಂ) ಮತ್ತು ತಾಲ್ಲೂಕು ಪಂಚಾಯತ್ (ತಾ.ಪಂ) ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ ಹೊರಬಿದ್ದಿದ್ದು, ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. … Read more

Low Interest Home Loan- ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ಪಡೆಯುವ ಸರಳ ವಿಧಾನ | ಪ್ರಮುಖ ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಕಡಿಮೆ ಬಡ್ಡಿ ದರದಲ್ಲಿ (Low Interest) ಗೃಹ ಸಾಲ ಸಿಗಬೇಕೆಂದರೆ ಅನುಸರಿಸಬೇಕಾದ ಕ್ರಮಗಳೇನು? ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಕೆಲವು ಬ್ಯಾಂಕುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಸಾಲವಿಲ್ಲದೇ ಮನೆ ಕಟ್ಟುವುದು ಇಂದು ಕಷ್ಟಸಾಧ್ಯ. ಮನೆ ಕಟ್ಟಲು ಜೀವಮಾನ ಪೂರ್ತಿ ಹಣ ಕೂಡಿಟ್ಟರೂ ಕೊಂಚವಾದರೂ ಸಾಲ ಮಾಡುವ ಪ್ರಮೇಯ ಬರುತ್ತದೆ. ಇದಕ್ಕೆಂದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಲವು ವಸತಿ ಯೋಜನೆಗಳನ್ನು ಜಾರಿಗೊಳಿಸಿ, ಸಾಲ ಮತ್ತು ಸಬ್ಸಿಡಿ (Loan and subsidy) ಸೌಲಭ್ಯವನ್ನು ಕಲ್ಪಿಸುತ್ತಿವೆ. ಸರ್ಕಾರದ ಸಾಲ … Read more

PUC Board Exam 2- ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭ | ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆಗಳು ಇಲ್ಲಿವೆ…

ಏಪ್ರಿಲ್ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆ 2 ನಡೆಯುವ ಹಿನ್ನಲೆಯಲ್ಲಿ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಮಾರ್ಗಸೂಚಿ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ನಾಳೆಯಿಂದ (ಏಪ್ರಿಲ್ 24) ದ್ವಿತೀಯ ಪಿಯುಸಿ ಪರೀಕ್ಷೆ-2 (PUC Exam-2) ಆರಂಭವಾಗಲಿದೆ. ಮೇ 8ರ ವರೆಗೆ ನಡೆಯಲಿರುವ ಈ ಪರೀಕ್ಷೆಯನ್ನು ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಬರೆಯಲಿದ್ದಾರೆ. ಈಗಾಗಲೇ ಪರೀಕ್ಷೆ-1 (PUC Exam-1) ಯಶಸ್ವಿಯಾಗಿ ಮುಕ್ತಾಯವಾಗಿ ಫಲಿತಾಂಶ ಕೂಡ ಪ್ರಕಟವಾಗಿದೆ. ಈ ಫಲಿತಾಂಶದಲ್ಲಿ ಅನುತ್ತೀರ್ಣ ಅಥವಾ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ … Read more

Karnataka Arogya Sanjeevini- ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿಗೆ ಮಹತ್ವದ ಸೂಚನೆ | ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಸರ್ಕಾರಿ ಆರೋಗ್ಯ ಸಂಜೀವಿನಿ ಯೋಜನೆಗೆ (Karnataka Arogya Sanjeevini) ಅಧಿಕೃತ ಚಾಲನೆ ನೀಡಿ, ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಯೋಜನೆಯ ನೋಂದಣಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕಳೆದ ಏಪ್ರಿಲ್ 21ರಂದು ಮುಖ್ಯಮಂತ್ರಿ ಸಿದ್ದರಾಮಯಯ ಅವರು ಸರ್ಕಾರಿ ನೌಕರರ ಬಹುದಿನದ ಬೇಡಕೆಯಾಗಿದ್ದ ‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಗೆ (Karnataka Arogya Sanjeevini Scheme -KASS) ಅಧಿಕೃತ ಚಾಲನೆ ನೀಡಿದ್ದಾರೆ. ನಗದು ರಹಿತ ಚಿಕಿತ್ಸೆ ಪಡೆಯುವ ಅವಕಾಶವನ್ನು ನೌಕರರಿಗೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಎಲ್ಲ … Read more

SSLC Result 2025- ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊಸ ಅಪ್ಡೇಟ್ | 10th ಪಾಸಾಗಲು ಶೇ.35ರಷ್ಟು ಅಂಕ ಕಡ್ಡಾಯ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ (SSLC Result 2025) ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದೀಗ ನಿರ್ಣಾಯಕ ಘಳಿಗೆ ಸಮೀಪಿಸುತ್ತಿದ್ದು; ರಿಸೆಲ್ಟ್ ಕುರಿತ ಹೊಸ ಅಪ್ಡೇಟ್ (Exam Result Update) ಇಲ್ಲಿದೆ… 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ರಾಜ್ಯದ 8.96 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಇದೀಗ ಶಿಕ್ಷಣ ಸಚಿವರು ಮತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಫಲಿತಾಂಶ ಕುರಿತು ಹೊಸ ಮಾಹಿತಿ ನೀಡಿದ್ದಾರೆ. ಈ ವರ್ಷ ಗ್ರೇಸ್ … Read more

Akshaya Tritiya 2025- ಅಕ್ಷಯ ತೃತೀಯ 2025: ಚಿನ್ನಾಭರಣ ಖರೀದಿಗೆ 12,000 ರೂ. ವರೆಗೂ ಭರ್ಜರಿ ಆಫರ್

ಏಪ್ರಿಲ್ 30ರ ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಭೀಮ ಜುವೆಲರ್ ಹಾಗೂ ಜೋಯಾಲುಕ್ಕಾಸ್ ಆಭರಣ ಮಳಿಗೆಗಳು ವಿಶೇಷ ರಿಯಾಯಿತಿ ಹಾಗೂ ಭರ್ಜರಿ ಆಫರ್’ಗಳನ್ನು ಘೋಷಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ… ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿರುವ ಅಕ್ಷಯ ತೃತೀಯ ಹಬ್ಬವು ಈ ಬಾರಿ ಏಪ್ರಿಲ್ 30ರಂದು ನಡೆಯಲಿದೆ. ಸಮೃದ್ಧಿ, ಸಂತೋಷದ ಸಂಕೇತವಾದ ಈ ದಿನದಲ್ಲಿ ಚಿನ್ನಾಭರಣ ಖರೀದಿಯನ್ನು ಶುಭದಾಯಕವೆಂದು ನಂಬಲಾಗುತ್ತದೆ. ಈ ಹಿನ್ನೆಲೆದಲ್ಲಿ ದೇಶದ ಪ್ರಮುಖ ಆಭರಣ ಮಳಿಗೆಗಳು ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು … Read more

Ration Card eKYC- ರೇಷನ್ ಕಾರ್ಡ್ ಹೊಂದಿರುವರರಿಗೆ ಸರ್ಕಾರದ ಪ್ರಮುಖ ಎಚ್ಚರಿಕೆ | ಸಂಪೂರ್ಣ ಮಾಹಿತಿ ಇಲ್ಲಿದೆ…

ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಮಹತ್ವದ ಸೂಚನೆ ನೀಡಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು; ಪ್ರತೀ ತಿಂಗಳೂ ಸಾವಿರಾರು ರೇಷನ್ ಕಾರ್ಡುಗಳು ರದ್ದಾಗುತ್ತಿವೆ. ಹೀಗೆ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಆಹಾರ ಇಲಾಖೆ ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತಿದೆ. ಇ-ಕೆವೈಸಿ ಕಡ್ಡಾಯ ಸರಕಾರದ ‘ಮಿತಿ’ಯನ್ನು ಮೀರಿ ವಾರ್ಷಿಕ ಆದಾಯ ಹೊಂದಿದವರು, ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ಉದ್ಯೋಗಿಗಳು, ನಕಲಿ ದಾಖಲೆ ನೀಡಿ … Read more

Karnataka Govt Order- ಸರ್ಕಾರಿ ನೌಕರರಿಗೆ ಮಹತ್ವದ ಆದೇಶ | ನಿವೃತ್ತಿ ಅಂಚಿನಲ್ಲಿರುವ ಈ ನೌಕರರ ವಿರುದ್ಧ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆ…

ರಾಜ್ಯ ಸರ್ಕಾರವು ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆ, ಭ್ರಷ್ಟಾಚಾರ ಅಥವಾ ಶಿಸ್ತುಗೇಡಿತನದ ಘಟನೆಗಳಿಗೆ ಸಂಬಂಧಿಸಿದಂತೆ, ಅಂತಹ ನೌಕರರು ನಿವೃತ್ತಿ ಹೊಂದುವ ಮುನ್ನವೇ ಕ್ರಮಗಳನ್ನು ಆರಂಭಿಸಬೇಕು ಸರ್ಕಾರ ಎಂದು ಸೂಚಿಸಲಾಗಿದೆ. ವಿಳಂಬ, ನಿರ್ಲಕ್ಷ್ಯ ಅಥವಾ ರಾಜಕೀಯ ಪ್ರಭಾವದಿಂದ ಕ್ರಮ ಕೈಗೊಂಡಿಲ್ಲವೆಂದರೆ, ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಸಕಾಲದಲ್ಲಿ ಶಿಸ್ತು ಕ್ರಮಕ್ಕೆ ಸೂಚನೆ ಸರ್ಕಾರದಿಂದ ಎಲ್ಲ … Read more

Karnataka Weekly Rain Forecast- ಕರ್ನಾಟಕದ ಈ ಜಿಲ್ಲೆಗಳಲ್ಲಿ ಈ ವಾರ ಪೂರ್ತಿ ಮಳೆ | ಜಿಲ್ಲಾವಾರು ಮಳೆ ಮುನ್ಸೂಚನೆ ಇಲ್ಲಿದೆ…

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಈ ವಾರ ಪೂರ್ತಿ ಉತ್ತಮ ಮಳೆಯಾಗಲಿದೆ. ಏಪ್ರಿಲ್ 27ರ ವರೆಗೂ ಹಲವು ಜಿಲ್ಲೆಗಳಿಗೆ ಮಳೆಯಾಗಲಿದ್ದು ಈ ಕುರಿತ ವಿವರ ಇಲ್ಲಿದೆ… ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ, ಕರ್ನಾಟಕದ ಹಲವೆಡೆ ಒಂದು ವಾರ ಕಾಲ ಮಳೆ ಸುರಿಯಲಿದೆ. ರಣ ಬಿಸಿಲು, ಒಣಹವೆಯಿಂದ ತತ್ತರಿಸಿದ್ದ ರಾಜ್ಯದ ಜನತೆ ಇದೀಗ ಬಿರುಗಾಳಿ, ಗುಡುಗು-ಮಿಂಚು, ಆಲಿಕಲ್ಲು ಸಹಿತ ಮಳೆ ಎದುರಿಸಬೇಕಾಗಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತವು ದಕ್ಷಿಣ ಭಾರತದ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದ್ದು, ತತ್ಪರಿಣಾಮವಾಗಿ … Read more

PMFME Subsidy Scheme- ಮಹಿಳೆಯರು, ರೈತರಿಗೆ ₹15 ಲಕ್ಷ ಸಹಾಯಧನ | ಸಣ್ಣ ಉದ್ಯಮ ಸ್ಥಾಪನೆಗೆ ಆರ್ಥಿಕ ನೆರವು | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಆಹಾರ ಘಟಕ, ಕೃಷಿ ಉತ್ಪನ್ನ ಘಟಕಗಳಂತಹ ಉದ್ಯಮ (Self-employment) ಸ್ಥಾಪನೆಗೆ ಸರ್ಕಾರ ಬರೋಬ್ಬರಿ 15 ಲಕ್ಷ ರೂ. ಸಹಾಯಧನ ನೀಡುತ್ತದೆ. ರಾಜ್ಯದಲ್ಲಿ ಈಗಾಗಲೇ ಈ ಯೋಜನೆಯಡಿ ಸಾವಿರಾರು ಮಹಿಳೆಯರು, ರೈತರು ಉದ್ಯಮ ಸ್ಥಾಪಿಸಿ ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸ್ವಯಂ ಉದ್ಯಮ ಸ್ಥಾಪನೆಯ ಕನಸು ಕಾಣುತ್ತಿರುವ ರೈತರು ಮತ್ತು ಮಹಿಳೆಯರಿಗಾಗಿ ಕೇಂದ್ರ ಸರ್ಕಾರದಿಂದ ಉತ್ತಮ ಅವಕಾಶವಿದೆ. ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ … Read more

error: Content is protected !!