ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ (Aether Rizta Electric Scooter) ಭರ್ಜರಿ ಸೇಲ್ ಆಗುತ್ತಿದೆ. ಇದಕ್ಕೆ ಕಾರಣವೇನು? ಏನಿದರ ವಿಶೇಷತೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Scooter) ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ನಡುವೆಯೇ, ಎಥರ್ ಎನರ್ಜಿ (Ather Energy) ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ‘ಎಥರ್ ರಿಜ್ಟಾ’ (Ather Rizta Electric Scooter) ಮೂಲಕ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಭಾರೀ ಯಶಸ್ಸು ಕಂಡಿದೆ.
ಮಾರುಕಟ್ಟೆಗೆ ಬಂದ ಕಡಿಮೆ ಅವಧಿಯಲ್ಲೇ ಈ ಸ್ಕೂಟರ್ ಭರ್ಜರಿ ಸೇಲ್ಸ್ (Ather Rizta Sales) ದಾಖಲಿಸಿದ್ದು, ನಗರ ಬಳಕೆದಾರರಿಂದ ಹಿಡಿದು ಕುಟುಂಬ ವರ್ಗದವರ ವರೆಗೆ ಎಲ್ಲರ ಗಮನ ಸೆಳೆಯುತ್ತಿದೆ.
Record-Breaking Sales – ದಾಖಲೆಯ ಮಾರಾಟ
ಕಳೆದ ಡಿಸೆಂಬರ್-2025 ತಿಂಗಳೊಂದರಲ್ಲಿಯೇ ಬರೋಬ್ಬರಿ 14,282 ಯುನಿಟ್‌ಗಳಷ್ಟು ‘ಎಥರ್ ರಿಜ್ಟಾ’ ಸ್ಕೂಟರ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಈ ಅಂಕಿ-ಅಂಶಗಳನ್ನು ಲೆಕ್ಕ ಹಾಕಿದರೆ, ವರ್ಷದಿಂದ ವರ್ಷಕ್ಕೆ ಶೇಕಡಾ 44.97% ಮಾರಾಟ ವೃದ್ಧಿ ಕಂಡುಬಂದಿದೆ. ಇದು ಎಥರ್ ಕಂಪನಿಗೆ ಮಾತ್ರವಲ್ಲ, ಭಾರತೀಯ ಇ-ವಾಹನ ಮಾರುಕಟ್ಟೆಗೆ ಮಹತ್ವದ ಮೈಲಿಗಲ್ಲಾಗಿದೆ.
Why Are People Choosing the Rizta? – ಜನರು ರಿಜ್ಟಾವನ್ನು ಇಷ್ಟಪಡಲು ಕಾರಣವೇನು?
‘ಎಥರ್ ರಿಜ್ಟಾ’ ಜನಪ್ರಿಯವಾಗಲು ಹಲವು ಕಾರಣಗಳಿವೆ. ಇದು ಮುಖ್ಯವಾಗಿ ದೈನಂದಿನ ಬಳಕೆಗಾಗಿ ವಿನ್ಯಾಸಗೊಳಿಸಿದ ಫ್ಯಾಮಿಲಿ ಇ-ಸ್ಕೂಟರ್ ಆಗಿದೆ.
‘ಎಥರ್ ರಿಜ್ಟಾ’ಗೆ ಕಡಿಮೆ ನಿರ್ವಹಣಾ ವೆಚ್ಚವಾಗಲಿದ್ದು; ಪುರುಷರು ಮತ್ತು ಮಹಿಳೆಯರು ಇಬ್ಬರೂ ಸುಲಭವಾಗಿ ಬಳಸುವಂತ ವಿನ್ಯಾಸ ಹೊಂದಿದೆ.
ಆರಾಮದಾಯಕ ಸೀಟಿಂಗ್ ಪೋಸಿಷನ್, ಹೆಚ್ಚು ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು; ಈ ಎಲ್ಲ ಅಂಶಗಳು ಗ್ರಾಹಕರನ್ನು ನಾ ಮುಂದು ತಾ ಮುಂದು ಎನ್ನುವಂತೆ ಈ ಸ್ಕೂಟರ್ ಖರೀದಿಸಲು ಪ್ರೇರೇಪಿಸಿವೆ.
Ather Rizta: Price & Variants – ಎಥರ್ ರಿಜ್ಟಾ ಬೆಲೆ ಮತ್ತು ರೂಪಾಂತರಗಳು
‘ಎಥರ್ ರಿಜ್ಟಾ’ ಕೈಗೆಟುಕುವ ಬೆಲೆಯಲ್ಲಿಯೇ ಲಭ್ಯವಿರುವುದು ಇದರ ದೊಡ್ಡ ಪ್ಲಸ್ ಪಾಯಿಂಟ್.
‘ರಿಜ್ಟಾ S’ ಹಾಗೂ ‘ರಿಜ್ಟಾ Z’ ಎರಡು ಬಗೆಯ ರೂಪಾಂತರಗಳನ್ನು ಹೊಂದಿರುವ ಈ ಸ್ಕೂಟರ್ ಎಕ್ಸ್-ಶೋರೂಂ ಬೆಲೆ ₹1.05 ಲಕ್ಷದಿಂದ ₹1.30 ಲಕ್ಷವರೆಗೆ ಇದೆ.
ಈ ಬೆಲೆ ಶ್ರೇಣಿಯಲ್ಲಿ ದೊರೆಯುವ ವೈಶಿಷ್ಟ್ಯಗಳನ್ನು ನೋಡಿದರೆ, ಇದು ಎಲ್ಲಾ ವರ್ಗದ ಗ್ರಾಹಕರಿಗೂ ಸೂಕ್ತ ಆಯ್ಕೆಯಾಗಿದೆ.
Attractive Design & Color Options – ಆಕರ್ಷಕ ವಿನ್ಯಾಸ ಮತ್ತು ಬಣ್ಣಗಳ ಆಯ್ಕೆ
‘ಎಥರ್ ರಿಜ್ಟಾ’ ವಿನ್ಯಾಸದ ವಿಷಯದಲ್ಲಿ ವಿಭಿನ್ನವಾಗಿದೆ. ಇದು ಬಾಕ್ಸಿ ಆಕಾರದ ಸ್ಟೈಲಿಷ್ ಲುಕ್ ಹೊಂದಿದ್ದು, ಬಾರ್-ಟೈಪ್ LED ಹೆಡ್‌ಲ್ಯಾಂಪ್, LED ಟರ್ನ್ ಸಿಗ್ನಲ್‌ಗಳು ಹಾಗೂ LED ಟೈಲ್ ಲೈಟ್ ಹೊಂದಿರುವ ಇದು ಎಲ್ಲರ ಗಮನ ಸೆಳೆಯುತ್ತದೆ.
Available Color Choices – ಲಭ್ಯವಿರುವ ಬಣ್ಣಗಳು
- ಡೆಕ್ಕನ್ ಗ್ರೇ
- ಸಿಯಾಚಿನ್ ವೈಟ್
- ಪ್ಯಾಂಗಾಂಗ್ ಬ್ಲೂ
- ಟೆರಾಕೋಟಾ ರೆಡ್
ಈ ಬಣ್ಣ ಆಯ್ಕೆಗಳು ಯುವಕರಿಗೂ ಕುಟುಂಬ ಬಳಕೆದಾರರಿಗೂ ಸಮಾನವಾಗಿ ಮೆಚ್ಚುಗೆಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?
Size, Weight & Comfort – ಗಾತ್ರ, ತೂಕ ಮತ್ತು ಕಂಫರ್ಟ್
‘ಎಥರ್ ರಿಜ್ಟಾ’ ಒಂದು ದೊಡ್ಡ ಗಾತ್ರದ ಇ-ಸ್ಕೂಟರ್ ಆಗಿದ್ದು, ಕುಟುಂಬದ ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ.
- ಉದ್ದ: 1,850 ಮಿಮೀ
- ಅಗಲ: 750 ಮಿಮೀ
- ಎತ್ತರ: 1,140 ಮಿಮೀ
- ಗ್ರೌಂಡ್ ಕ್ಲಿಯರೆನ್ಸ್: 150 ಮಿಮೀ
- ವೀಲ್‌ಬೇಸ್: 1,285 ಮಿಮೀ
- ತೂಕ: 125 ಕೆಜಿ
ಈ ಗಾತ್ರದ ಕಾರಣದಿಂದ ರಸ್ತೆ ಮೇಲಿನ ಸ್ಥಿರತೆ ಮತ್ತು ಸವಾರಿಗೆ ಆರಾಮದಾಯಕವಾಗಿದೆ.
Battery, Range & Performance – ಬ್ಯಾಟರಿ, ರೇಂಜ್ ಮತ್ತು ಪರ್ಫಾರ್ಮೆನ್ಸ್
ಪರ್ಫಾರ್ಮೆನ್ಸ್ ವಿಷಯದಲ್ಲಿ ‘ಎಥರ್ ರಿಜ್ಟಾ’ ಯಾವುದೇ ರಾಜಿ ಮಾಡಿಕೊಂಡಿಲ್ಲ. 2.9 kWh ಹಾಗೂ 3.7 kಞWh ಬ್ಯಾಟರಿಗಳನ್ನು ಹೊಂದಿರುವ ಈ ಸ್ಕೂಟರ್ ಪೂರ್ಣ ಚಾರ್ಜ್ನಲ್ಲಿ 123 ರಿಂದ 160 ಕಿಮೀ ವರೆಗೆ ರೇಂಜ್ ಹೊಂದಿದೆ.
ಟಾಪ್ ಸ್ಪೀಡ್ ಗಂಟೆಗೆ 80 ಕಿಮೀ; 0-40 ಕಿಮೀ ವೇಗ ಪಡೆಯಲು ಕೇವಲ 4.7 ಸೆಕೆಂಡುಗಳು ಸಾಕು. ಸ್ಮಾರ್ಟ್, ಇಕೋ ಹಾಗೂ ಜಿಪ್ ರೈಡಿಂಗ್ ಮೋಡ್‌ಗಳನ್ನು ಹೊಂದಿದ್ದು; ನಗರ ಸಂಚಾರಕ್ಕೆ ತಕ್ಕಂತೆ ಬೇಕಾದಷ್ಟು ಶಕ್ತಿ ಮತ್ತು ದಕ್ಷತೆ ಇದರಲ್ಲಿ ಲಭ್ಯವಿದೆ.
Charging Options & Storage Space – ಚಾರ್ಜಿಂಗ್ ಮತ್ತು ಸ್ಟೋರೇಜ್
ಮನೆಯ ಪೋರ್ಟಬಲ್ ಚಾರ್ಜರ್ ಮೂಲಕ ಸುಮಾರು 8 ಗಂಟೆ 30 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗಲಿದೆ. 34 ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಹೊಂದಿದ್ದು; ಹೆಲ್ಮೆಟ್ ಮತ್ತು ದಿನಬಳಕೆಯ ಸಾಮಗ್ರಿಗಳಿಗೆ ಸಾಕಷ್ಟು ಜಾಗ ಸಿಗುತ್ತದೆ. ಇದರಿಂದ ಇದು ನಿಜಕ್ಕೂ ಒಂದು ಫ್ಯಾಮಿಲಿ ಫ್ರೆಂಡ್ಲಿ ಇ-ಸ್ಕೂಟರ್ ಎನ್ನಬಹುದು.
ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ
Safety Features & Suspension – ಸುರಕ್ಷತೆ ಮತ್ತು ಸಸ್ಪೆನ್ಷನ್
ಸುರಕ್ಷತೆಯಲ್ಲಿಯೂ ಕೂಡ ‘ಎಥರ್ ರಿಜ್ಟಾ’ ಸ್ಕೂಟರ್ ಮುಂಚೂಣಿಯಲ್ಲಿದೆ.
- ಮುಂಭಾಗ: ಟೆಲಿಸ್ಕೋಪಿಕ್ ಫೋರ್ಕ್
- ಹಿಂಭಾಗ ಮೊನೋಶಾಕ್ ಸಸ್ಪೆನ್ಷನ್
- ಡಿಸ್ಕ್ / ಡ್ರಮ್ ಬ್ರೇಕ್‌ಗಳ ಆಯ್ಕೆ
- 12-ಇಂಚಿನ ಅಲಾಯ್ ವೀಲ್‌ಗಳು
- ಟ್ಯೂಬ್‌ಲೆಸ್ ಟೈರ್‌ಗಳು
ಇವೆಲ್ಲವೂ ಪ್ರಯಾಣಿಕರಿಗೆ ಉತ್ತಮ ನಿಯಂತ್ರಣ ಮತ್ತು ರಕ್ಷಣೆಯನ್ನು ಒದಗಿಸುತ್ತವೆ.
ಇದನ್ನೂ ಓದಿ: Hero Splendor Bike- ಕೇವಲ 1,000 ರೂ. ಇಐಎಂ ನಲ್ಲಿ ಮನೆಗೆ ತನ್ನಿ ಹೀರೋ ಸ್ಪೆೆಂಡರ್ ಮೈಲೇಜ್ ಬೈಕ್
Competitors in the Market – ಮಾರುಕಟ್ಟೆಯಲ್ಲಿನ ಪ್ರತಿಸ್ಪರ್ಧಿಗಳು
ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಓಲಾ S1 X, ಬಜಾಜ್ ಚೇತಕ್, ಹೀರೋ ವಿಡಾ VX2, ಆಂಪಿಯರ್ ನೆಕ್ಸಸ್, ಟಿವಿಎಸ್ ಐಕ್ಯೂಬ್, ರಿವರ್ ಇಂಡಿ ಇತ್ಯಾದಿ ಬಲಿಷ್ಠ ಎದುರಾಳಿಗಳಿದ್ದರೂ ‘ಎಥರ್ ರಿಜ್ಟಾ’ ವಿನ್ಯಾಸ, ಪರ್ಫಾರ್ಮೆನ್ಸ್ ಮತ್ತು ವಿಶ್ವಾಸಾರ್ಹ ಬ್ರಾಂಡ್ ಇಮೇಜ್ ಕಾರಣದಿಂದ ತನ್ನದೇ ಆದ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.
ಎಥರ್ ರಿಜ್ಟಾ ಕೇವಲ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅಲ್ಲ, ಇದು ನಗರ ಜೀವನಕ್ಕೆ ಸೂಕ್ತವಾದ ವಾಹನವಾಗಿದೆ. ಉತ್ತಮ ರೇಂಜ್, ಆರಾಮ, ಸುರಕ್ಷತೆ ಮತ್ತು ಕೈಗೆಟುಕುವ ಬೆಲೆಗಳ ಕಾರಣದಿಂದ ಗ್ರಾಹಕರನ್ನು ಸೆಳೆಯುತ್ತಿದೆ. ನೀವು ಕುಟುಂಬ ಬಳಕೆಗೆ ಅಥವಾ ದಿನನಿತ್ಯದ ಪ್ರಯಾಣಕ್ಕೆ ಒಳ್ಳೆಯ ಇ-ಸ್ಕೂಟರ್ ಹುಡುಕುತ್ತಿದ್ದರೆ, ಎಥರ್ ರಿಜ್ಟಾ ಉತ್ತಮ ಆಯ್ಕೆ!
Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.