ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಂಗಾಮ ಶುರುವಾಗಿದೆ. ಆದರೆ, ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ಓಲಾ (Ola), ಅಥರ್ (Ether), ಟಿವಿಎಸ್ (TVS), ಬಜಾಜ್ (Bajaj) ಮುಂತಾದ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದು ಲಕ್ಷ ರೂ.ಗೂ ಹೆಚ್ಚು ಬೆಲೆ ಇರುವುದರಿಂದ ವಿದ್ಯುತ್ ಚಾಲಿತ ಸ್ಕೂಟರ್ ಖರೀದಿಗೆ ಮೀನಮೇಷ ಏಣಿಸುವಂತಾಗಿದೆ.
ಆದರೆ, ಇದೀಗ ಅತೀ ಕಡಿಮೆ ಬೆಲೆ, ಹೆಚ್ಚು ಫೀಚರ್ಸ್ ಹೊಂದಿರುವ ವಿಶೇಷ ವಿದ್ಯುತ್ ಚಾಲಿತ ಸ್ಕೂಟರ್‌ವೊಂದು ಗಮನ ಸೆಳೆಯುತ್ತಿದೆ. ಝೆಲಿಯೋ ಲಿಟಲ್ ಗ್ರೇಸಿ (Zelio Little Grace) ಹೆಸರಿನ ಈ ಹೊಸ ಸ್ಕೂಟರ್ ಕಡಿಮೆ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹೇಳಿ ಮಾಡಿಸಿದಂತಿದೆ.
ನಾನ್ ಆರ್‌ಟಿಒ ಎಲೆಕ್ಟ್ರಿಕ್ ಸ್ಕೂಟರ್
ಝೆಲಿಯೋ (Zelio) ಹೆಸರಿನ ಸ್ಟಾರ್ಟ್ಅಪ್ ಎಲೆಕ್ಟ್ರಿಕ್ ವಾಹನ ಕಂಪನಿ ನೂತನ ತಂತ್ರಜ್ಞಾನವನ್ನು ಬಳಸಿ ಕಡಿಮೆ ಬಜೆಟ್ ಮಿತಿಯೊಳಗಿನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಿಸುತ್ತಿದೆ. ಇದರಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತಹ ಹಲವಾರು ಸವಲತ್ತುಗಳಿವೆ.
ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿಶೇಷವೆಂದರೆ ಇದು ನಾನ್ ಆರ್‌ಟಿಒ ಸ್ಕೂಟರ್. ಅಂದರೆ ಇದಕ್ಕೆ ವಿಶೇಷ ನಂಬರ್ ಪ್ಲೇಟ್ ಮತ್ತು ಚಾಲನಾ ಪರವಾನಗಿ ಅಗತ್ಯವಿಲ್ಲ. ಕಡಿಮೆ ಚಾಲನಾ ವೆಚ್ಚ ಹಾಗೂ ಹಾರ್ಡ್ವೇರ್‌ನಲ್ಲಿ ಅಗತ್ಯವಿರುವ ಎಲ್ಲಾ ಫೀಚರ್ಸ್ ಹೊಂದಿದೆ ಕಂಪನಿಯ ಮೂಲಗಳು ಹೇಳುತ್ತಿವೆ.

ತಾಂತ್ರಿಕ ವೈಶಿಷ್ಟ್ಯಗಳು
150 ಕೆ.ಜಿ ತೂಕ ಹೊರಬಲ್ಲ ಝೆಲಿಯೋ ಲಿಟಲ್ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 25 ಕಿಲೋ ಮೀಟರ್ ಓಡುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಸಂಪೂರ್ಣ ಜಾರ್ಜ್ ಆಗಲು 7ರಿಂದ 9 ಗಂಟೆ ಸಮಯ ಬೇಕು. ಪ್ರತಿ ಪೂರ್ಣ ಚಾರ್ಜ್’ಗೆ 1.5 ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ.
ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿರುವ ಝೆಲಿಯೋ ಲಿಟಲ್ ಗ್ರೇಸಿ ಸ್ಕೂಟರ್ ಪ್ರತಿಯೊಂದು ಮಾದರಿಯಯು 80 ಕೆಜಿ 48/60 V BLDC ಮೋಟಾರ್ ಅನ್ನು ಹೊಂದಿದೆ. ಇನ್ನು ಮೈಲೇಜ್ ಬಗ್ಗೆ ನೋಡುವುದಾದರೆ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಕೆಳಗಿನಂತೆ ಮೈಲೇಜ್ ನಿಗದಿಯಾಗುತ್ತದೆ:
- 48V / 32Ah ಲೆಡ್ ಆಸಿಡ್ (ರೇಂಜ್ – 55-60 ಕಿಮೀ)
- 60V / 32Ah ಲೆಡ್ ಆಸಿಡ್ (ರೇಂಜ್ – 70 ಕಿಮೀ)
- 60V / 30Ah ಲಿಥಿಯಂ ಅಯಾನ್ (ರೇಂಜ್ – 75-80 ಕಿಮೀ)
ಎಡ್ವಾನ್ಸ್ ಫೀಚರ್ಸ್
ಮೊದಲೇ ಹೇಳಿದಂತೆ ಝೆಲಿಯೋ ಲಿಟಲ್ ಗ್ರೇಸಿ ಸ್ಕೂಟರ್ ಈ ಕೆಳಗಿನ ವಿಶೇಷ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ:
- ಡಿಜಿಟಲ್ ಸ್ಪೀಡೋಮೀಟರ್
- ಯುಎಸ್‌ಬಿ ಚಾರ್ಜಿಂಗ್ ಪೋರ್ಟ್
- ಕೀಲೆಸ್ ಸ್ಟಾರ್ಟ್ ಸಿಸ್ಟಮ್
- ಆಂಟಿ-ಥೆಫ್ಟ್ ಅಲಾರ್ಮ್
- ಸೆಂಟ್ರಲ್ ಲಾಕಿಂಗ್ ಸಿಸ್ಟಮ್
- ಪಾರ್ಕಿಂಗ್ ಮೋಡ್
- ರಿವರ್ಸ್ ಗೇರ್
- ಆಟೋ ರಿಪೇರಿ ಸ್ವಿಚ್
- ಮುಂಭಾಗ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆನ್ಷನ್
- ಡ್ರಮ್ ಬ್ರೇಕ್ ವ್ಯವಸ್ಥೆ
ಬೆಲೆ ವಿವರ
ಬ್ಯಾಟರಿ ಮಾದರಿ ಮೇಲೆ ಬೇರೆ ಬೇರೆ ಬೆಲೆ ನಿಗದಿ ಮಾಡಲಾಗಿದ್ದು; ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಝೆಲಿಯೋ ಲಿಟಲ್ ಗ್ರೇಸಿ ಸ್ಕೂಟರ್ ದರ ಈ ಕೆಳಗಿನಂತಿದೆ:
- 48V / 32Ah ಲೆಡ್ ಆಸಿಡ್- ₹49,500
- 60V / 32Ah ಲೆಡ್ ಆಸಿಡ್- ₹52,000
- 60V / 30Ah ಲಿಥಿಯಂ ಅಯಾನ್- ₹58,000
ಒಟ್ಟಾರೆ ಝೆಲಿಯೋ ಲಿಟಲ್ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬಳಕೆ, ಕಡಿಮೆ ವೆಚ್ಚ ಮತ್ತು ಸಹಜ ದೈನಂದಿನ ಪ್ರಯಾಣ ಮಾಡುವ ಬಳಕೆದಾರರಿಗೆ ಸೂಕ್ತ ಆಯ್ಕೆಯಾಗಿದೆ. ವಿದ್ಯಾರ್ಥಿಗಳು, ವೃದ್ಧರು ಅಥವಾ ಲೈಸೆನ್ಸ್ ಇಲ್ಲದವರು ಇದನ್ನು ಖರೀದಿ ಮಾಡುವುದರಿಂದ ಉಪಯೋಗ ಪಡೆಯಬಹುದು.
Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?