ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2025ರ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authorit -KEA) 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test -CET) ದಿನಾಂಕಗಳನ್ನು ಅಧಿಕೃತವಾಗಿ ಘೋಷಿಸಿದೆ. ಈ ಪರೀಕ್ಷೆಗಳು ದೇಶದ ವಿವಿಧ ತಾಂತ್ರಿಕ, ಕೃಷಿ, ಆರೋಗ್ಯ ಹಾಗೂ ವಿಜ್ಞಾನ ಸಂಬ೦ಧಿತ ಪದವಿ ಕೋರ್ಸ್’ಗಳಿಗೆ ಪ್ರವೇಶ ಪಡೆಯಲು ಅತ್ಯಂತ ಪ್ರಮುಖವಾಗಿವೆ. ಈ ಬಾರಿ ಏಪ್ರಿಲ್ 15ರಿಂದ 17ರ ವರೆಗೆ ಸಿಇಟಿ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ದಿನಾಂಕಗಳ ವಿವರ
ಏಪ್ರಿಲ್ 15, 2025ರಂದು ಕನ್ನಡ ಭಾಷಾ (KCET Kannada) ಪರೀಕ್ಷೆ ನಡೆಯಲಿದೆ. ಮೊದಲಿಗೆ ಈ ಪರೀಕ್ಷೆಯನ್ನು ಏಪ್ರಿಲ್ 18ರಂದು ನಿಗದಿಪಡಿಸಲಾಗಿತ್ತು. ಆದರೆ ಆ ದಿನ ಗುಡ್ ಫ್ರೈಡೇ ಇರುವ ಕಾರಣದಿಂದ ಪರೀಕ್ಷೆಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಈ ಪರೀಕ್ಷೆ ಬೆಂಗಳೂರ, ವಿಜಯಪುರ, ಮಂಗಳೂರು, ಬೆಳಗಾವಿ ಇತ್ಯಾದಿ ಕೆಲವೊಂದು ಆಯ್ದ ಕೇಂದ್ರಗಳಲ್ಲಿ ಮಾತ್ರ ನಡೆಯಲಿದೆ.
ಏಪ್ರಿಲ್ 16, 2025ರ ಬೆಳಿಗ್ಗೆ 10:30 ರಿಂದ ಭೌತಶಾಸ್ತ್ರ (KCET Physics), ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ (KCET Chemistry) ಪರೀಕ್ಷೆಗಳು ನಡೆಯಲಿದೆ. ಏಪ್ರಿಲ್ 17, 2025ರ ಬೆಳಿಗ್ಗೆ 10:30 ರಿಂದ ಗಣಿತ (KCET Mathematics) ಅದೇ ದಿನ ಮಧ್ಯಾಹ್ನ 2:30 ರಿಂದ ಜೀವಶಾಸ್ತ್ರ (KCET Biology) ಪರೀಕ್ಷೆ ನಡೆಯಲಿದೆ.
8th Pay Commission Delay- ಸರಕಾರಿ ನೌಕರರ ಸಂಬಳ ಏರಿಕೆಗೆ ತಾತ್ಕಾಲಿಕ ತಡೆ | 8ನೇ ವೇತನ ಆಯೋಗ ಜಾರಿಗೆ ವಿಳಂಬ

ಕನ್ನಡ ಭಾಷಾ ಪರೀಕ್ಷಾ ನಿಯಮಗಳು
ಕನ್ನಡ ಭಾಷಾ ಪರೀಕ್ಷೆ ಎಲ್ಲ ವಿದ್ಯಾರ್ಥಿಗಳಿಗೆ ಅನಿವಾರ್ಯವಲ್ಲ. 10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದವರು ಹಾಗೂ ಕೆಇಎ (KEA) ನಡೆಸಿದ ಹಿಂದಿನ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಈ ಪರೀಕ್ಷೆಯಲ್ಲಿ ಭಾಗವಹಿಸುವ ಅವಶ್ಯಕತೆ ಇರುವುದಿಲ್ಲ.
KCET Hall Ticket ಡೌನ್‌ಲೋಡ್ ಮಾಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಚ್. ಪ್ರಸನ್ನ ಅವರು ನೀಡಿದ ಮಾಹಿತಿಯ ಪ್ರಕಾರ, ಈ ವರ್ಷ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅರ್ಜಿಗಳ ಸಲ್ಲಿಕೆ ಪ್ರಕ್ರಿಯೆ ಜನವರಿ 23, 2025ರಿಂದಲೇ ಪ್ರಾರಂಭವಾಗಿದೆ.
ಅಭ್ಯರ್ಥಿಗಳು, ಕೆಇಎ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ‘ಯುಜಿಸಿಇಟಿ-2025 ಪ್ರವೇಶಪತ್ರ’ (KCET Hall Ticket) ಎನ್ನುವ ಲಿಂಕ್ ಮೇಲೆ ಕ್ಲಿಕ್ ಮಾಡಿ (ಲೇಖನದ ಕೊನೆಯಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಲಿಂಕ್ ನೀಡಲಾಗಿದೆ ಗಮನಿಸಿ) ತಮ್ಮ ಲಾಗಿನ್ ಐಡಿ ಸಂಖ್ಯೆ, ಹೆಸರು ದಾಖಲಿಸುವುದರ ಮೂಲಕ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಓಟಿಪಿ ಮತ್ತು ಮುಖಚಹರೆ ಆಧಾರಿತ ಲಾಗಿನ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಈ ಸಲದ ಪ್ರವೇಶಪತ್ರದಲ್ಲಿ ಪ್ರಮುಖವಾಗಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಾದರಿ ಒಎಂಆರ್ ಶೀಟ್ ಹಾಗೂ ಎರಡು ಪುಟಗಳ ಮಾರ್ಗಸೂಚಿ ಪಟ್ಟಿ ನೀಡಲಾಗಿದ್ದು, ಇದನ್ನು ಡೌನ್‌ಲೊಡ್ ಮಾಡಿಕೊಂಡು ಓದಿಕೊಳ್ಳಬಹುದು. ಮಾದರಿ ಓಎಂಆರ್ ಶೀಟ್ ಅನ್ನು ವಿದ್ಯಾರ್ಥಿಗಳು ಅಭ್ಯಾಸಕ್ಕೂ ಬಳಸಿಕೊಳ್ಳಬಹುದು.
9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…
ಸಿಇಟಿ ಪರೀಕ್ಷೆ ಕುರಿತ ಮಹತ್ವ ಮಾಹಿತಿ
ಸಿಇಟಿ ಪರೀಕ್ಷೆ ರಾಜ್ಯದ ಅನೇಕ ಪ್ರಖ್ಯಾತ ಇಂಜಿನಿಯರಿ೦ಗ್, ಕೃಷಿ, ವೈದ್ಯಕೀಯ (ಅಯುಷ್), ಫಾರ್ಮಸಿ, ತಂತ್ರಜ್ಞಾನ ಕ್ಷೇತ್ರಗಳಿಗೆ ಪ್ರವೇಶ ಪಡೆಯಲು ಮೆಟ್ಟಿಲಾಗಿದೆ.
ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಆಯಾ ಕೋರ್ಸ್ಗಳಿಗೆ ಪ್ರವೇಶ ದೊರೆಯುತ್ತದೆ. ನಂತರ ಒನ್-ಟೈಮ್ ದಾಖಲೆ ಪರಿಶೀಲನೆ (Document Verification), ಆಯ್ಕೆಗಳ ದಾಖಲಾತಿ (Option Entry) ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ನಡೆಯುತ್ತವೆ.
ಈ ಬಾರಿ ಸಿಇಟಿ ಪರೀಕ್ಷೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಸ್ಪರ್ಧೆಯ ಮಟ್ಟವೂ ಹಾಗೆಯೇ ಹೆಚ್ಚಿರಬಹುದು. ಆದ್ದರಿಂದ ಉತ್ತಮ ತಯಾರಿ, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸ ಈ ಪರೀಕ್ಷೆಯ ಯಶಸ್ಸಿಗೆ ಪ್ರಮುಖವಾದ ಅಂಶಗಳಾಗಿವೆ. ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು. ನಿಮ್ಮ ಗುರಿ ಸಾಧಿಸಲು ಈ ಸಿಇಟಿ ಯಶಸ್ಸಿನ ಮೆಟ್ಟಿಲಾಗಲಿ…