ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ 20,000 ಹುದ್ದೆಗಳ ನೇಮಕ | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅವಕಾಶ Karnataka State Police Constable Recruitment 2024

Spread the love

Karnataka State Police Constable Recruitment 2024 : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ (Karnataka State Police Department) ಖಾಲಿ ಇರುವ ಕಾನ್ಸ್ ಟೇಬಲ್  ಹುದ್ದೆಗಳ ನೇಮಕಾತಿಗೆ ಗೃಹ ಇಲಾಖೆ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ (District Superintendent of Police) ಅನುಮತಿ ನೀಡಿದ್ದು; ಶೀಘ್ರದಲ್ಲಿಯೇ ರಾಜ್ಯಾದ್ಯಂತ 20,000 ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ನಡೆಯಲಿದೆ.

WhatsApp Group Join Now
Telegram Group Join Now

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr. G. Parameshwar) ಅವರು ಪಿಎಸ್‌ಐ ಹಗರಣದ ತನಿಖೆ ಚಾಲ್ತಿಯಲ್ಲಿದ್ದು; 545 ಪಿಎಸ್‌ಐ ನೇಮಕಕ್ಕೆ ಮರುಪರೀಕ್ಷೆ ನಡೆಸಿ ಅರ್ಹರ ಪಟ್ಟಿ ಸಿದ್ದಪಡಿಸಲಾಗಿದೆ. 371-ಜೆ ಇತ್ಯಾದಿ ನಿಯಮಗಳ ತೊಡಕಗಳನ್ನು ಪರಿಶೀಲಿಸಿ ಶೀಘ್ರ ನೇಮಕ ಆದೇಶ ಹೊರಡಿಸುವುದಾಗಿ ಗೃಹ ಸಚಿವರು ತಿಳಿದ್ದಾರೆ.

ಇದನ್ನೂ ಓದಿ: 7ನೇ ವೇತನ ಆಯೋಗ: ಸರ್ಕಾರಿ ನೌಕರರಿಗೆ ಸಿಗುವ ಸಾಲ ಮತ್ತು ಮುಂಗಡ ಸೌಲಭ್ಯಗಳು 7th Pay Commission Advances for Govt Employees

20,0000 ಪೊಲೀಸ್ ಕಾನ್ಸ್ ಟೇಬಲ್  ನೇಮಕ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಖಾಲಿಯಿರುವ ಅಂದಾಜು 20,000 ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಅನುಮತಿ ನೀಡಲಾಗಿದೆ. ಹಿಂದಿನ ಬಿಜೆಪಿ ಆಡಳಿತದ ನಾಲ್ಕು ವರ್ಷಗಳಲ್ಲಿ ಈ ಹುದ್ದೆಗಳು ಭರ್ತಿಯಾಗಿಲ್ಲ. ಅಧಿಸೂಚನೆ ಹೊರಡಿಸುತ್ತಿದ್ದಂತೆ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಕಳೆದ ಜುಲೈ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿ ಕುರಿತು ಚರ್ಚೆಗಳು ನಡೆದಿತ್ತು. ಆಗ ಗೃಹ ಸಚಿವರು ಸದಸ್ಯರೊಬ್ಬರ ಪ್ರಶ್ನೆಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ, ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ ಹಾಗೂ ಅಧಿಸೂಚನೆ ಹೊರಡಿಸಬೇಕಾಗಿರುವ ಹುದ್ದೆಗಳ ವಿವರವನ್ನು ಲಿಖಿತ ರೂಪದಲ್ಲಿ ನೀಡಿದ್ದರು.

ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules

ಗೃಹ ಸಚಿವರ ಮಾಹಿತಿಯಂತೆ ಈಗಾಗಲೇ ಆರ್ಥಿಕ ಇಲಾಖೆ ನೇಮಕಾತಿಗಾಗಿ ಅನುಮೋದನೆ ನೀಡಿರುವ ಕರ್ನಾಟಕ ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳ ವಿವರ ಈ ಕೆಳಕಂಡ೦ತಿದೆ:

Karnataka State Police Constable Recruitment 2024
ಶೀಘ್ರದಲ್ಲಿಯೇ ನೇಮಕ ಪ್ರಕ್ರಿಯೆ ಆರಂಭ

ಪೊಲೀಸ್ ಇಲಾಖೆಯಲ್ಲಿ 20,000ಕ್ಕೂ ಅಧಿಕ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿ ಇದ್ದು ಈಗಾಗಲೇ ಈಗ 2023-24ನೇ ಸಾಲಿಗೆ ಕೆಎಸ್‌ಆರ್‌ಪಿ, ಎಸ್‌ಆರ್‌ಪಿಸಿ 1,500 ಹುದ್ದೆಗಳನ್ನು (ಪುರುಷರು-ಮಹಿಳೆಯರು) ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಸಂಬ೦ಧ ಕಲ್ಯಾಣ ಕರ್ನಾಟಕೇತರ ಹಾಗೂ ಕಲ್ಯಾಣ ಕರ್ನಾಟಕ ಹುದ್ದೆಗಳಿಗೆ ಮೀಸಲಿರಿಸಲಾಗಿರುವ ಹುದ್ದೆಗಳ ಕುರಿತು ಮಾಹಿತಿಯನ್ನು ಪ್ರಕಟಿಸಲಾಗಿದೆ.

ಇದೀಗ ಬಿಜೆಪಿ ವಧಿಯ ಹಿಂದಿನ 4 ವರ್ಷದಲ್ಲಿ ಭರ್ತಿಯಾಗದೇ ಉಳಿದ ಒಟ್ಟಾರೆ 20,000 ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿ ಕುರಿತು ಗೃಹ ಸಚಿವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಹುದ್ದೆಗಳ ನೇಮಕಾತಿಗೆ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಅನುಮತಿ ನೀಡಲಾಗಿದ್ದು ಶೀಘ್ರದಲ್ಲಿಯೇ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಈ ಜಿಲ್ಲೆಗಳ 1,229 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ Anganwadi 1229 Vacancies District wise list

ಕಾನ್ಸ್ ಟೇಬಲ್ ಹುದ್ದೆಗಳಿಗೆ ವಿದ್ಯಾರ್ಹತೆ ಏನು?

ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ಮೀಸಲಾತಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿಯನ್ನು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ ನಿಗದಿಪಡಿಸಲಾಗಿದೆ.

Karnataka State Police Constable Recruitment 2024

ಇದನ್ನೂ ಓದಿ: ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ 4,115 ಕಾನ್’ಸ್ಟೇಬಲ್ ಹಾಗೂ ಪಿಎಸ್‌ಐ ಹುದ್ದೆಗಳು : ನೇಮಕಾತಿ ಯಾವಾಗ? ಅರ್ಹತೆಗಳೇನು? Karnataka Police Constable & PSI Recruitment 2024

ಕಾನ್ಸ್ ಟೇಬಲ್ ವೇತನ ಹಾಗೂ ಆಯ್ಕೆ ವಿಧಾನ

ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 23,500ರಿಂದ 47,650 ರೂಪಾಯಿ ವರೆಗೆ ಮಾಸಿಕ ವೇತನ ಇರುತ್ತದೆ. ಇದರ ಜೊತೆಗೆ ಸರ್ಕಾರಿ ನೌಕರರಿಗೆ ಲಭ್ಯವಿರುವ ಎಲ್ಲ ರೀತಿ ಭತ್ಯೆ, ಪಿಂಚಣಿ ಸೌಲಭ್ಯಗಳು ಅನ್ವಯವಾಗುತ್ತವೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ, ವೈದ್ಯಕೀಯ ಪರೀಕ್ಷೆಗಳನ್ನು ಹಂತ ಹಂತವಾಗಿ ನಡೆಸಿ ನೇಮಕ ಮಾಡಲಾಗುತ್ತದೆ. ಕಾನ್ಸ್ಟೇಬಲ್ ಹುದ್ದೆಗಳ ಆಕಾಂಕ್ಷೆಯುಳ್ಳ ಅಭ್ಯರ್ಥಿಗಳು ಈ ಕುರಿತು ಈಗಿಂದಲೇ ತಯಾರಿ ನಡೆಸುವುದು ಸೂಕ್ತ.

ಇದನ್ನೂ ಓದಿ: 2,55,920 ರಾಜ್ಯ ಸರ್ಕಾರಿ ಹುದ್ದೆಗಳು ಖಾಲಿ | ನೌಕರರ ಒತ್ತಡ ನಿವಾರಣೆ ಯಾವಾಗ? ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ… Karnataka Govt Vacancy List


Spread the love
WhatsApp Group Join Now
Telegram Group Join Now

1 thought on “ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ 20,000 ಹುದ್ದೆಗಳ ನೇಮಕ | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅವಕಾಶ Karnataka State Police Constable Recruitment 2024”

Leave a Comment

error: Content is protected !!