Social Welfare SC Schemes Subsidy- ಜಮೀನು, ವಾಹನ, ಹಸು, ಕುರಿ ಖರೀದಿಗೆ ಭರ್ಜರಿ ಸಬ್ಸಿಡಿ | ಅಂಬೇಡ್ಕರ್, ಭೋವಿ, ತಾಂಡಾ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

Social Welfare SC Schemes Subsidy: ಸಮಾಜ ಕಲ್ಯಾಣ ಇಲಾಖೆಯ 2026-27ನೇ ಸಾಲಿನ ಗಂಗಾ ಕಲ್ಯಾಣ, ಭೂ ಒಡೆತನ, ಸ್ವಯಂ ಉದ್ಯೋಗ, ಹೈನುಗಾರಿಕೆ ಹಾಗೂ ವಾಹನ ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ…

ಸಮಾಜ ಕಲ್ಯಾಣ ಇಲಾಖೆಯು (Social Welfare Department) 2026-27ನೇ ಸಾಲಿಗೆ ಪರಿಶಿಷ್ಟ ಜಾತಿ (Sಅ) ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳಡಿ ಅರ್ಜಿಗಳನ್ನು ಆಹ್ವಾನಿಸಿದೆ.

ಡಾ.ಬಿ.ಆರ್.ಅಂಬೇಡ್ಕರ್, ಕರ್ನಾಟಕ ಅದಿಜಾಂಬವ, ಭೋವಿ, ತಾಂಡಾ, ಸಫಾಯಿ ಕರ್ಮಚಾರಿ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳ ಮೂಲಕ ಈ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: PM Kisan 24th Installment Release Date: ರೈತರ ಖಾತೆಗೆ ಬರಲಿದೆ ಪಿಎಂ ಕಿಸಾನ್ ಹಣ: ಅಕ್ಟೋಬರ್ 30ಕ್ಕೆ ₹2,000 ಜಮೆ!

ಭೂ ಒಡೆತನ ಯೋಜನೆ (Land Ownership Scheme)

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಸಿ ನೀಡಲು ಈ ಯೋಜನೆ ಜಾರಿಯಲ್ಲಿದೆ. ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಘಟಕ ವೆಚ್ಚ 25 ಲಕ್ಷ ರೂ. ನಿಗದಿಪಡಿಸಲಾಗಿದೆ.

ಉಳಿದ ಜಿಲ್ಲೆಗಳಿಗೆ 20 ಲಕ್ಷ ರೂ. ನಿಗದಿ ಮಾಡಲಾಗಿದೆ. ಇದರಲ್ಲಿ ಶೇ. 50ರಷ್ಟು ಸಹಾಯಧನ (Subsidy) ಸಿಗಲಿದ್ದು, ಉಳಿದ ಮೊತ್ತಕ್ಕೆ ಶೇ. 4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.

ಇದನ್ನೂ ಓದಿ: Govt Employees DA Hike: ತುಟ್ಟಿಭತ್ಯೆ (DA) ಹೆಚ್ಚಳ: ಸರ್ಕಾರಿ ನೌಕರರ ಸಂಬಳ ಮತ್ತು ಪಿಂಚಣಿಯಲ್ಲಿ ಭರ್ಜರಿ ಏರಿಕೆ

ಗಂಗಾ ಕಲ್ಯಾಣ ಯೋಜನೆ (Ganga Kalyana Scheme)

1.20 ಎಕರೆಯಿಂದ 5 ಎಕರೆವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೊಳವೆಬಾವಿ (Borewell) ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ಬೆಂಗಳೂರು ನಗರ, ಗ್ರಾಮಾಂತರ, ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ 4.75 ಲಕ್ಷ ರೂ. ಹಾಗೂ ಉಳಿದ ಜಿಲ್ಲೆಗಳಿಗೆ 3.75 ಲಕ್ಷ ರೂ. ಘಟಕ ವೆಚ್ಚ ನಿಗದಿಯಾಗಿದೆ. ಇದರಲ್ಲಿ 50 ಸಾವಿರ ರೂ. ಸಾಲವೂ ಸೇರಿರುತ್ತದೆ.

ಇದನ್ನೂ ಓದಿ: Karnataka Rain Update: ಸೈಕ್ಲೋನ್ ಅಬ್ಬರ | ಕರ್ನಾಟಕದ 6 ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಣೆ | ಧಾರಾಕಾರ ಮಳೆ ಮುನ್ಸೂಚನೆ

ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (Entrepreneurship Development)

ಬ್ಯಾಂಕ್ ಸಹಯೋಗದೊಂದಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

  • ಸ್ವಾವಲಂಬಿ ಸಾರಥಿ: ಸರಕು ವಾಹನ ಅಥವಾ ಟ್ಯಾಕ್ಸಿ (Yellow Board Taxi) ಖರೀದಿಗೆ ಶೇ. 75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ. ಸಹಾಯಧನ ಸಿಗಲಿದೆ.

ಇದನ್ನೂ ಓದಿ: Karnataka Local Body Elections: ಫೆಬ್ರವರಿ ಒಳಗೆ ಗ್ರಾ.ಪಂ ಚುನಾವಣೆ: ಜಿ.ಪಂ, ತಾ.ಪಂ ಅಖಾಡಕ್ಕೂ ಕಹಳೆ!

  • ಫಾಸ್ಟ್ ಫುಡ್ ಟ್ರಕ್: ಮೊಬೈಲ್ ಕಿಚನ್ (Mobile Kitchen) ಉದ್ದೇಶಕ್ಕೆ ಶೇ. 75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತದೆ. (ಸಫಾಯಿ ಕರ್ಮಚಾರಿ ನಿಗಮ ಹೊರತುಪಡಿಸಿ).

  • ಹೈನುಗಾರಿಕೆ (Dairy Farming): ಎರಡು ಹಸು ಅಥವಾ ಎಮ್ಮೆ ಖರೀದಿಗೆ ಶೇ. 50ರಷ್ಟು ಅಥವಾ ಗರಿಷ್ಠ 1.25 ಲಕ್ಷ ರೂ. ಸಹಾಯಧನ ಲಭ್ಯವಿದೆ.

  • ಇತರೆ ಉದ್ದೇಶ: ಸಣ್ಣ ಕೈಗಾರಿಕೆ ಮತ್ತು ವ್ಯಾಪಾರ (Business) ಶುರು ಮಾಡಲು ಶೇ. 70ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ. ಸಹಾಯಧನ ಸಿಗಲಿದೆ.

ಇದನ್ನೂ ಓದಿ: HDFC Bank Parivartan Scholarship 2026: ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಕಾಲರ್‌ಶಿಪ್ 2026-27: ವಿದ್ಯಾರ್ಥಿಗಳಿಗೆ ₹75,000 ವರೆಗೆ ಆರ್ಥಿಕ ನೆರವು

ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳು (Self Employment Loans)

  • ನೇರಸಾಲ ಯೋಜನೆ: ಕಿರು ಆರ್ಥಿಕ ಚಟುವಟಿಕೆಗಳಿಗೆ 1 ಲಕ್ಷ ರೂ. ಘಟಕ ವೆಚ್ಚದಲ್ಲಿ 50 ಸಾವಿರ ರೂ. ಸಹಾಯಧನ ಹಾಗೂ 50 ಸಾವಿರ ರೂ. ಸಾಲ (ಶೇ. 4 ಬಡ್ಡಿ) ನೀಡಲಾಗುತ್ತದೆ.

  • ಕುರಿ ಸಾಕಾಣಿಕೆ (Sheep Rearing): ಈ ಯೋಜನೆಗೂ 1 ಲಕ್ಷ ರೂ. ಘಟಕ ವೆಚ್ಚವಿದ್ದು, 50 ಸಾವಿರ ರೂ. ಸಹಾಯಧನ ಮತ್ತು 50 ಸಾವಿರ ರೂ. ಸಾಲ ಲಭ್ಯವಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: Karnataka Zilla Panchayat Election: ಕರ್ನಾಟಕ ಜಿಲ್ಲಾ ಪಂಚಾಯಿತಿ ಚುನಾವಣೆ: 1129 ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ

ಕ್ರೆಡಿಟ್ ಮೈಕ್ರೋ ಅಥವಾ ಪ್ರೇರಣಾ ಯೋಜನೆ (Credit Micro Scheme)

ಮಹಿಳಾ ಸ್ವಸಹಾಯ ಸಂಘಗಳಿಗೆ (Women SHGs – ಕನಿಷ್ಠ 10 ಸದಸ್ಯರು) ಆರ್ಥಿಕ ಚಟುವಟಿಕೆ ನಡೆಸಲು 5 ಲಕ್ಷ ರೂ. ನೀಡಲಾಗುತ್ತದೆ. ಇದರಲ್ಲಿ 2.50 ಲಕ್ಷ ರೂ. ಸಹಾಯಧನ ಹಾಗೂ 2.50 ಲಕ್ಷ ರೂ. ಸಾಲ (ಶೇ. 4 ಬಡ್ಡಿ) ಸೇರಿರುತ್ತದೆ.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು (Application Process & Deadlines)

ಸೇವಾಸಿಂಧು ಪೋರ್ಟಲ್ (Seva Sindhu Portal) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. 2023-24, 2024-25 ಮತ್ತು 2025-26ನೇ ಸಾಲಿನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೆ ಅರ್ಜಿ ಹಾಕುವಂತಿಲ್ಲ.

ಇದನ್ನೂ ಓದಿ: Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…

ನಿಗಮದ ನಿರ್ದೇಶಕ ಮಂಡಳಿ ಹಾಗೂ ಸರ್ಕಾರದ ಸಾಂಸ್ಥಿಕ ಕೋಟಾದ ಅರ್ಜಿಗಳನ್ನೂ ಸೇವಾಸಿಂಧು ಮೂಲಕವೇ ಸಲ್ಲಿಸುವುದು ಕಡ್ಡಾಯ.

ಅರ್ಜಿ ಸಲ್ಲಿಸಲು ನವೆಂಬರ್ 30, 2026 ಕಡೆಯ ದಿನವಾಗಿದೆ (Last Date: 30-11-2026). ಹೆಚ್ಚಿನ ಮಾಹಿತಿಗೆ ಕಲ್ಯಾಣಮಿತ್ರ ಏಕೀಕೃತ ಸಹಾಯವಾಣಿ (Helpline) 9482-300-400 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಸಂಪರ್ಕಿಸಬಹುದು.

Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ


Spread the love
error: Content is protected !!