Karnataka Veerashaiva-Lingayat Schemes 2026: ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ 2026-27ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ…
ಕರ್ನಾಟಕ ಸರ್ಕಾರದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು (Karnataka Veerashaiva-Lingayat Development Corporation) 2026-27ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಿದೆ.
ಇದನ್ನೂ ಓದಿ: Karnataka Weather Forecast: ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ | ಅಕ್ಟೋಬರ್ 15ರ ವರೆಗೆ ಮುಂಗಾರು ವಿಸ್ತರಣೆ
ಈ ಮೊದಲು ಅಕ್ಟೋಬರ್ 1 ಅಂತಿಮ ದಿನವಾಗಿತ್ತು, ಆದರೆ ಸಮುದಾಯದ ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಕ್ಟೋಬರ್ 15, 2026 ರವರೆಗೆ ಕಾಲಾವಕಾಶ ನೀಡಲಾಗಿದೆ.
ಪ್ರವರ್ಗ-3ಬಿ ಅಡಿಯಲ್ಲಿ ಬರುವ ವೀರಶೈವ-ಲಿಂಗಾಯತ ಹಾಗೂ ಅದರ ಉಪಜಾತಿಗಳಿಗೆ ಸೇರಿದ ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿಗಾಗಿ ಸರ್ಕಾರ ಈ ಬಂಪರ್ ಯೋಜನೆಗಳನ್ನು (Government Schemes) ರೂಪಿಸಿದೆ. ಈ ಯೋಜನೆಗಳ ಸಂಪೂರ್ಣ ವಿವರಗಳು ಇಲ್ಲಿವೆ.
ಇದನ್ನೂ ಓದಿ: Gruha Lakshmi New Guidelines: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಹೊಸ ರೂಲ್ಸ್: ಇನ್ಮುಂದೆ ಪತಿ ಆಧಾರ್ ಲಿಂಕ್ ಕೂಡ ಕಡ್ಡಾಯ!
‘ಕಾಯಕಕಿರಣ’ ಸ್ವಯಂ ಉದ್ಯೋಗ ಯೋಜನೆ
ಸ್ವಂತ ಉದ್ಯೋಗ ಮಾಡಲು ಆಸಕ್ತಿ ಇರುವವರಿಗಾಗಿ ನಿಗಮವು ‘ಕಾಯಕಕಿರಣ’ (Self-Employment Direct Loan) ಯೋಜನೆಯನ್ನು ಜಾರಿಗೆ ತಂದಿದೆ. 18 ರಿಂದ 55 ವರ್ಷದೊಳಗಿನ ಆಸಕ್ತರು ಇದರ ಲಾಭ ಪಡೆಯಬಹುದು.
ಇದಕ್ಕೆ ಗ್ರಾಮೀಣ ಪ್ರದೇಶದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 98,000 ರೂ. ಹಾಗೂ ನಗರ ಪ್ರದೇಶದವರ ಆದಾಯ 1,20,000 ರೂ. ಮಿತಿಯೊಳಗಿರಬೇಕು.
ಇದನ್ನೂ ಓದಿ: Udyogini Scheme 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ | ₹2 ಲಕ್ಷ ಸಾಲ ಮನ್ನಾ | ಅಕ್ಟೋಬರ್ 31 ಕೊನೆಯ ದಿನ
ಈ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ 2 ಲಕ್ಷ ರೂ. ವರೆಗಿನ ಸಾಲ ಸೌಲಭ್ಯವಿದ್ದು, ಇದರಲ್ಲಿ ಶೇಕಡಾ 30ರಷ್ಟು (ಗರಿಷ್ಠ 30,000 ರೂ.) ಸಹಾಯಧನ (Subsidy) ಸಿಗಲಿದೆ.
ಉಳಿದ 1,70,000 ರೂ. ಮೊತ್ತವನ್ನು ವಾರ್ಷಿಕ ಕೇವಲ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆಯುವವರು ಭದ್ರತೆಗಾಗಿ ಆಸ್ತಿಯನ್ನು (Property Collateral) ನಿಗಮದ ಹೆಸರಿಗೆ ಆಧಾರ ಮಾಡುವುದು ಕಡ್ಡಾಯ.
ಇದನ್ನೂ ಓದಿ: Free Sewing Machine: ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಸೆಪ್ಟೆಂಬರ್ 30 ಕೊನೆಯ ದಿನ
‘ಜಲಸಿರಿ’ ನೀರಾವರಿ ಯೋಜನೆ
ಕೃಷಿಕರಿಗಾಗಿ ‘ಜಲಸಿರಿ’ ಅಥವಾ ಗಂಗಾ ಕಲ್ಯಾಣ ನೀರಾವರಿ ಯೋಜನೆ (Irrigation Scheme) ಇದ್ದು, ವಾರ್ಷಿಕ 98,000 ರೂ. ಒಳಗಿನ ಆದಾಯ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಇದರ ಸದುಪಯೋಗ ಪಡೆಯಬಹುದು.
ಬೆಂಗಳೂರು (ಉತ್ತರ, ದಕ್ಷಿಣ, ಗ್ರಾಮಾಂತರ), ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ 4.75 ಲಕ್ಷ ರೂ. ಘಟಕ ವೆಚ್ಚ ನಿಗದಿಪಡಿಸಿದ್ದು, ಇದರಲ್ಲಿ 4.25 ಲಕ್ಷ ರೂ. ಸಹಾಯಧನ ಹಾಗೂ 50,000 ರೂ. ಸಾಲ (Loan) ಒಳಗೊಂಡಿರುತ್ತದೆ. ಉಳಿದ ಜಿಲ್ಲೆಗಳಿಗೆ 3.75 ಲಕ್ಷ ರೂ. ಘಟಕ ವೆಚ್ಚವಿದ್ದು, ಅದರಲ್ಲಿ 3.25 ಲಕ್ಷ ರೂ. ಸಹಾಯಧನ ಸಿಗಲಿದೆ.
ಎರಡೂ ಪ್ರಕರಣಗಳಲ್ಲಿ ವಿದ್ಯುದ್ದೀಕರಣಕ್ಕಾಗಿ ಎಸ್ಕಾಂಗೆ 75,000 ರೂ. ಪಾವತಿಸಲಾಗುತ್ತದೆ ಹಾಗೂ ಸಾಲದ ಮೊತ್ತಕ್ಕೆ ಶೇ.4ರ ಬಡ್ಡಿದರ ಅನ್ವಯವಾಗುತ್ತದೆ.
ಕರಾವಳಿ ಮತ್ತು ಮಲೆನಾಡು ಭಾಗದ (ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ) ರೈತರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು ಹಾಗೂ ಇವರಿಗೆ ತೆರೆದ ಬಾವಿಗೂ ಅವಕಾಶವಿದೆ. ಇತರೆ ಜಿಲ್ಲೆಯವರು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು.

‘ಸ್ವಾವಲಂಬಿ ಸಾರಥಿ’ ಯೋಜನೆ
ಯುವಜನರು ಸ್ವಂತ ವಾಹನ ಖರೀದಿಸಿ ಬಾಡಿಗೆಗೆ ಓಡಿಸಲು ನೆರವಾಗುವ ನಿಟ್ಟಿನಲ್ಲಿ ‘ಸ್ವಾವಲಂಬಿ ಸಾರಥಿ’ (Swavalambi Sarathi) ಯೋಜನೆ ರೂಪಿಸಲಾಗಿದೆ.
21 ರಿಂದ 45 ವರ್ಷದೊಳಗಿನ ಯುವಕರು ನಾಲ್ಕು ಚಕ್ರದ ವಾಹನ ಖರೀದಿಸಲು ಬ್ಯಾಂಕ್ ಮೂಲಕ ಸಾಲ ಪಡೆದರೆ, ನಿಗಮದಿಂದ ಶೇ.50 ರಷ್ಟು (ಗರಿಷ್ಠ 3 ಲಕ್ಷ ರೂ. ವರೆಗೆ) ಸಬ್ಸಿಡಿ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಬ್ಯಾಂಕ್ ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ
‘ಬಸವಬೆಳಕು’ ಶೈಕ್ಷಣಿಕ ಸಾಲ ಯೋಜನೆ (Education Loan)
‘ಬಸವಬೆಳಕು’ ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಿಇಟಿ (CET) ಅಥವಾ ನೀಟ್ (NEET) ಮೂಲಕ ಇಂಜಿನಿಯರಿAಗ್, ವೈದ್ಯಕೀಯ ಮುಂತಾದ 28 ವೃತ್ತಿಪರ ಕೋರ್ಸ್’ಗಳಿಗೆ ಪ್ರವೇಶ ಪಡೆದ ಹೊಸ ವಿದ್ಯಾರ್ಥಿಗಳಿಗೆ (Fresh Students) ವಾರ್ಷಿಕ 1 ಲಕ್ಷ ರೂ. ನಂತೆ ಗರಿಷ್ಠ 4 ರಿಂದ 5 ಲಕ್ಷ ರೂ. ವರೆಗೆ ಕೇವಲ ಶೇ.2ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.
ಹಳೆಯ ವಿದ್ಯಾರ್ಥಿಗಳು (Renewal Students) ತಮ್ಮ 2ನೇ, 3ನೇ, 4ನೇ ಹಾಗೂ 5ನೇ ಕಂತಿನ ನವೀಕರಣಕ್ಕಾಗಿ ಹಿಂದಿನ ವರ್ಷದ ಅಂಕಪಟ್ಟಿ ಮತ್ತು ವ್ಯಾಸಂಗ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು. ಈ ಶೈಕ್ಷಣಿಕ ಸಾಲದ ಅರ್ಜಿಗಳಿಗೆ ಯಾವುದೇ ಅಂತಿಮ ದಿನಾಂಕದ ಮಿತಿ ಇರುವುದಿಲ್ಲ.
ಇದನ್ನೂ ಓದಿ: Ration Card e-KYC: ರೇಷನ್ ಕಾರ್ಡುದಾರರಿಗೆ ಸರ್ಕಾರದ ಮಹತ್ವದ ಎಚ್ಚರಿಕೆ
ಅದೇ ರೀತಿ ವಿದೇಶದಲ್ಲಿ ಉನ್ನತ ವ್ಯಾಸಂಗ (Study Abroad) ಮಾಡಲು ಬಯಸುವವರಿಗೂ ನಿಗಮ ಆರ್ಥಿಕ ಬೆಂಬಲ ನೀಡುತ್ತಿದೆ.
ಕ್ಯೂಎಸ್ ರ್ಯಾಂಕಿಂಗ್ನಲ್ಲಿ (QS World Ranking) ಟಾಪ್ 1000 ಒಳಗೆ ಬರುವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಮಾಸ್ಟರ್ ಡಿಗ್ರಿ, ಪಿಎಚ್ಡಿ (PhD) ಅಥವಾ ಪೋಸ್ಟ್ ಡಾಕ್ಟರಲ್ ಓದಲು ವಾರ್ಷಿಕ 25 ಲಕ್ಷ ರೂ. ನಂತೆ ಕೋರ್ಸ್ ಅವಧಿಗೆ ಗರಿಷ್ಠ 50 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ (Zero Interest Loan) ಸಾಲ ಸಿಗುತ್ತದೆ. ಭದ್ರತೆಗಾಗಿ ಸ್ಥಿರಾಸ್ತಿಯನ್ನು ನಿಗಮದ ಹೆಸರಿಗೆ ಆಧಾರ ಮಾಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿವೇತನ | ಆನ್ಲೈನ್ ಅರ್ಜಿ ಆಹ್ವಾನ
ಇದರ ಜೊತೆಗೆ ಯುವಜನರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕೌಶಲ್ಯಾಭಿವೃದ್ಧಿ (Skill Development Training) ಯೋಜನೆ ಜಾರಿಯಲ್ಲಿದೆ.
ಐಟಿಐ, ಜಿಟಿಟಿಸಿ, ಕಿಯೋನಿಕ್ಸ್, ವಿಟಿಯು (VTU) ಕೇಂದ್ರಗಳು ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಲ್ಪಾವಧಿ ಮತ್ತು ಉನ್ನತ ಮಟ್ಟದ ಉಚಿತ ಕೌಶಲ್ಯ ತರಬೇತಿಗಳನ್ನು ಆಯೋಜಿಸಿ, ಯುವಜನರಿಗೆ ಉದ್ಯೋಗಾವಕಾಶ (Job Opportunities) ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ನಿಯಮಗಳು
ಯೋಜನೆಗಳ ಸದುಪಯೋಗ ಪಡೆಯಲು ಕೆಲವು ನಿರ್ದಿಷ್ಟ ನಿಯಮಗಳಿವೆ. ಒಂದು ಕುಟುಂಬದಲ್ಲಿ ಕೇವಲ ಒಬ್ಬ ಸದಸ್ಯರಿಗೆ ಮಾತ್ರ ಮೇಲಿನ ಯಾವುದಾದರೂ ಒಂದು ಯೋಜನೆಯಡಿ ಸೌಲಭ್ಯ ಸಿಗುತ್ತದೆ.
ಇದನ್ನೂ ಓದಿ: Podi Process Land Subdivision: ಜಮೀನು ಪೋಡಿ ಮಾಡಿಸಿಕೊಳ್ಳುವುದು ಹೇಗೆ? ರೈತರಿಗೆ ಹಂತ-ಹಂತದ ಮಾಹಿತಿ
ಮಾನ್ಯ ಶಾಸಕರು ಅಥವಾ ಜಿಲ್ಲಾ ಪಂಚಾಯತ್ ಸಿಇಒ ಅಧ್ಯಕ್ಷತೆಯ ಆಯ್ಕೆ ಸಮಿತಿಯು (Selection Committee) ಅರ್ಹ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡುತ್ತದೆ. ಸರ್ಕಾರದ ಅಥವಾ ನಿಗಮದ ಅಧ್ಯಕ್ಷರ ವಿವೇಚನಾ ಕೋಟಾದಡಿ (Discretionary Quota) ನೆರವು ಬಯಸುವವರು ಕೂಡ ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಒಂದು ವೇಳೆ ನೀವು 2023-24, 2024-25 ಅಥವಾ 2025-26ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದು, ಸಮಿತಿಯಿಂದ ಆಯ್ಕೆಯಾಗದೇ ಇದ್ದರೆ, ಈ ವರ್ಷ ಮತ್ತೆ ಹೊಸದಾಗಿ ಅರ್ಜಿ ಹಾಕುವ ಅಗತ್ಯವಿಲ್ಲ. ನಿಮ್ಮ ಹಳೆಯ ಅರ್ಜಿಯನ್ನೇ ಈ ಬಾರಿಯ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸುವ ವಿಧಾನ ಅತ್ಯಂತ ಸರಳವಾಗಿದೆ. ಆಸಕ್ತರು ತಮ್ಮ ಸಮೀಪದ ಗ್ರಾಮ ಒನ್ (Grama One), ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸೇವಾಸಿಂಧು ಪೋರ್ಟಲ್ (Seva Sindhu Portal) ಮೂಲಕ ಅಕ್ಟೋಬರ್ 15, 2026 ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು. ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಸ್ಕಿಲ್ ಕರ್ನಾಟಕ ವೆಬ್ಸೈಟ್ (skillmission.com) ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ
ಯೋಜನೆಗಳ ನಿಖರ ಅರ್ಹತೆ, ಬೇಕಾಗುವ ಅಗತ್ಯ ದಾಖಲೆಗಳು (Required Documents) ಮತ್ತು ಇತರ ಸಂಪೂರ್ಣ ಮಾಹಿತಿಗಾಗಿ ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣ kvldcl.karnataka.gov.in ಗೆ ಭೇಟಿ ನೀಡಿ.
ಯಾವುದೇ ಗೊಂದಲ ಅಥವಾ ಪ್ರಶ್ನೆಗಳಿದ್ದರೆ ನಿಗಮದ ಸಹಾಯವಾಣಿ ಸಂಖ್ಯೆಗಳಾದ 080-22865522, 9900012351 ಅಥವಾ 9900012352 ಗೆ ಕರೆ ಮಾಡಿ ವಿಚಾರಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.