SBI Platinum Jubilee Asha Scholarship 2026-27: ಎಸ್ಬಿಐ ವಿದ್ಯಾರ್ಥಿವೇತನ 2026-27ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 9ರಿಂದ 12ನೇ ತರಗತಿ, UG, PG, MBBS, IIT, IIM ಹಾಗೂ ವಿದೇಶಿ ವ್ಯಾಸಂಗಕ್ಕೆ ₹15,000ರಿಂದ ₹15 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡಲಾಗುತ್ತದೆ…
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳಲು ನೆರವಾಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೌಂಡೇಶನ್ ಮಹತ್ವದ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಕಟಿಸಿದೆ.
‘ಎಸ್ಬಿಐ ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್ಶಿಪ್ 2026-27’ (SBI Platinum Jubilee Asha Scholarship 2026-27) ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ₹15,000ದಿಂದ ಗರಿಷ್ಠ ₹15 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಬ್ಯಾಂಕ್ ಖಾತೆಗೆ ನೇರ ಹಣ ಜಮಾ
9ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಹಿಡಿದು ಪದವಿ, ಸ್ನಾತಕೋತ್ತರ, MBBS, IIT, IIM ಹಾಗೂ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ನಲ್ಲಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿವೇತನದ ಹಣವನ್ನು ನೇರ ಪ್ರಯೋಜನ ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗುತ್ತದೆ.
ಮುಖ್ಯವಾಗಿ, ಪ್ರತಿಯೊಂದು ಕೋರ್ಸ್ಗೆ ಪ್ರತ್ಯೇಕ ಅರ್ಹತಾ ಮಾನದಂಡ ಹಾಗೂ ಆದಾಯ ಮಿತಿಯನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸುವ ಮುನ್ನ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಕೋರ್ಸ್ಗೆ ಅನ್ವಯಿಸುವ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ.
ಇದನ್ನೂ ಓದಿ: Swavalambi Sarathi Yojana 2026: ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಗೆ 3 ಲಕ್ಷ ರೂ. ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ
ಕನಿಷ್ಠ 75% ಅಂಕ ಪಡೆದಿರಬೇಕು
ಈ ವಿದ್ಯಾರ್ಥಿವೇತನದ ಬಹುತೇಕ ವಿಭಾಗಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ.75ರಷ್ಟು ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಅರ್ಹತೆಯಲ್ಲಿ ಶೇ.10ರಷ್ಟು ಸಡಿಲಿಕೆ ನೀಡಲಾಗಿದೆ.
ಆದಾಯದ ಮಿತಿಯೂ ಕೋರ್ಸ್’ಗೆ ಅನುಗುಣವಾಗಿ ಬದಲಾಗುತ್ತದೆ. ಶಾಲಾ ವಿದ್ಯಾರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷ ಮೀರಬಾರದು. ಉಳಿದ ಬಹುತೇಕ ಉನ್ನತ ಶಿಕ್ಷಣ ವಿಭಾಗಗಳಿಗೆ ₹6 ಲಕ್ಷದವರೆಗೆ ಕುಟುಂಬದ ವಾರ್ಷಿಕ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Ration Card e-KYC: ರೇಷನ್ ಕಾರ್ಡುದಾರರಿಗೆ ಸರ್ಕಾರದ ಮಹತ್ವದ ಎಚ್ಚರಿಕೆ
ಶಾಲಾ ವಿದ್ಯಾರ್ಥಿಗಳಿಗೆ ₹15 ಸಾವಿರ
9ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ಗರಿಷ್ಠ ₹15,000 ವಿದ್ಯಾರ್ಥಿವೇತನ ದೊರೆಯಲಿದೆ. ಈ ವಿಭಾಗಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಹೆಚ್ಚಿರಬಾರದು.
ಶಿಕ್ಷಣದ ಖರ್ಚು, ಪುಸ್ತಕಗಳು ಹಾಗೂ ಇತರ ಶೈಕ್ಷಣಿಕ ಅಗತ್ಯಗಳಿಗೆ ಈ ನೆರವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: Crop Insurance: ರೈತರ ಖಾತೆಗೆ ಬಂತು 13.39 ಕೋಟಿ ರೂ. ಬೆಳೆ ವಿಮೆ ಪರಿಹಾರ
ಪದವಿ ವಿದ್ಯಾರ್ಥಿಗಳಿಗೆ ₹75 ಸಾವಿರ
ಪದವಿ (UG) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ₹75,000ದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿ ಓದುತ್ತಿರುವ ಶಿಕ್ಷಣ ಸಂಸ್ಥೆಯು NAACನಿಂದ ‘A’ ಗ್ರೇಡ್ ಪಡೆದಿರಬೇಕು ಅಥವಾ ಓIಖಈ 2025-26 ರ್ಯಾಂಕಿಂಗ್ನಲ್ಲಿ ಅಗ್ರ 300 ಸಂಸ್ಥೆಗಳ ಪಟ್ಟಿಯಲ್ಲಿರಬೇಕು.
ಈ ವಿಭಾಗಕ್ಕೆ ಡಿಪ್ಲೊಮಾ ವಿದ್ಯಾರ್ಥಿಗಳು ಅರ್ಹರಾಗುವುದಿಲ್ಲ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷ ಮೀರಬಾರದು.
ಇದನ್ನೂ ಓದಿ: Gruhalakshmi Beneficiaries Reverification: ಗೃಹಲಕ್ಷ್ಮಿ ಹಣ ಪಡೆಯುವವರಿಗೆ ಮಹತ್ವದ ಸೂಚನೆ | ಸಿಎಂ ಸ್ಪಷ್ಟನೆ
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₹1.50 ಲಕ್ಷ
ಸ್ನಾತಕೋತ್ತರ (PG) ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಉತ್ತಮ ಅವಕಾಶವಿದೆ. ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ₹1.50 ಲಕ್ಷದವರೆಗೆ ವಿದ್ಯಾರ್ಥಿವೇತನ ದೊರೆಯಲಿದೆ.
ಈ ವಿಭಾಗದಲ್ಲಿಯೂ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ಸಂಸ್ಥೆಯು NAAC ‘A’ ಗ್ರೇಡ್ ಹೊಂದಿರಬೇಕು ಅಥವಾ NIRF ರ್ಯಾಂಕಿಂಗ್ನಲ್ಲಿ ಅಗ್ರ 300ರೊಳಗೆ ಇರಬೇಕು. ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷದೊಳಗಿರಬೇಕು.
ಇದನ್ನೂ ಓದಿ: Karnataka Govt Employees: ಸರ್ಕಾರಿ ನೌಕರರಿಗೆ ಶಾಕ್: ಆಸ್ತಿ ಘೋಷಣೆ ಕಡ್ಡಾಯ, ರಾಜ್ಯ ಸರ್ಕಾರದ ಖಡಕ್ ಆದೇಶ

MBBS ವಿದ್ಯಾರ್ಥಿಗಳಿಗೆ ₹2 ಲಕ್ಷ
ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದಲ್ಲಿ ಹೆಚ್ಚಿನ ಮೊತ್ತದ ನೆರವು ನೀಡಲಾಗುತ್ತಿದೆ. AIIMS ಅಥವಾ NIRF ರ್ಯಾಂಕಿಂಗ್ನ ಅಗ್ರ 50 ವೈದ್ಯಕೀಯ ಕಾಲೇಜುಗಳಲ್ಲಿ MBBS ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದರ ಜೊತೆಗೆ ಮಾನ್ಯವಾದ NEET ಸ್ಕೋರ್ಕಾರ್ಡ್ ಹೊಂದಿರುವುದು ಕಡ್ಡಾಯ. ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹2 ಲಕ್ಷದವರೆಗೆ ವಿದ್ಯಾರ್ಥಿವೇತನ ದೊರೆಯಲಿದೆ. ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷ ಮೀರಬಾರದು.
IIT ವಿದ್ಯಾರ್ಥಿಗಳಿಗೂ ₹2 ಲಕ್ಷ
ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (IIT) ಪದವಿಪೂರ್ವ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ SBI Scholarship 2026 ಅನ್ವಯಿಸುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹2 ಲಕ್ಷದವರೆಗೆ ನೆರವು ದೊರೆಯಲಿದೆ.
ಈ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಮಾನ್ಯವಾದ JEE Advanced ಸ್ಕೋರ್ಕಾರ್ಡ್ ಹೊಂದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷದೊಳಗಿರಬೇಕು.
ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ
IIM ವಿದ್ಯಾರ್ಥಿಗಳಿಗೆ ₹5 ಲಕ್ಷ
IIMಗಳಲ್ಲಿ MBA ಅಥವಾ PGDM ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗರಿಷ್ಠ ₹5 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಈ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಮಾನ್ಯವಾದ CAT ಸ್ಕೋರ್ಕಾರ್ಡ್ ಹೊಂದಿರಬೇಕು.
ಉನ್ನತ ಶಿಕ್ಷಣದ ದುಬಾರಿ ಶುಲ್ಕವನ್ನು ನಿಭಾಯಿಸಲು ಕಷ್ಟಪಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ನೆರವು ಬಹಳಷ್ಟು ಸಹಕಾರಿಯಾಗಬಹುದು.
ವಿದೇಶದಲ್ಲಿ ಓದುವವರಿಗೆ ₹15 ಲಕ್ಷ
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಅತಿ ಹೆಚ್ಚಿನ ಮೊತ್ತದ ವಿದ್ಯಾರ್ಥಿವೇತನ ದೊರೆಯಲಿದೆ. ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ₹15 ಲಕ್ಷದವರೆಗೆ ನೆರವು ನೀಡಲಾಗುತ್ತದೆ.
ಆದರೆ ಈ ಅವಕಾಶವು SC ಅಥವಾ ST ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ವಿದೇಶಿ ಶಿಕ್ಷಣ ಸಂಸ್ಥೆಯು QS ಅಥವಾ Times 2025-26 ರ್ಯಾಂಕಿಂಗ್ನಲ್ಲಿ ಅಗ್ರ 200 ಸಂಸ್ಥೆಗಳಲ್ಲಿರಬೇಕು.
ಇದಲ್ಲದೆ, ಕೋರ್ಸ್’ಗೆ ಅನುಗುಣವಾಗಿ GRE, GMAT, IELTS ಅಥವಾ TOEFLನಂತಹ ಅಗತ್ಯ ಪರೀಕ್ಷೆಗಳ ಸ್ಕೋರ್ಕಾರ್ಡ್ ಹೊಂದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷ ಮೀರಬಾರದು.
ಇದನ್ನೂ ಓದಿ: SBI Personal Loan: ಕೇವಲ ಒಂದು ಮಿಸ್ ಕಾಲ್ ಕೊಡಿ | ₹50 ಲಕ್ಷವರೆಗೆ SBI ಲೋನ್ ಸಿಗುತ್ತೆ
ಅರ್ಜಿ ಸಲ್ಲಿಸುವಾಗ ಯಾವ ದಾಖಲೆ ಬೇಕು?
ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳುವುದು ಉತ್ತಮ. ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ, ಆಧಾರ್ ಅಥವಾ ಇತರ ಮಾನ್ಯ ಗುರುತಿನ ದಾಖಲೆ, ಶೈಕ್ಷಣಿಕ ಅಂಕಪಟ್ಟಿಗಳು, ಪ್ರಸ್ತುತ ಪ್ರವೇಶದ ದಾಖಲೆ, ಬೋನಾಫೈಡ್ ಪ್ರಮಾಣಪತ್ರ ಅಥವಾ ವಿದ್ಯಾರ್ಥಿ ಗುರುತಿನ ಚೀಟಿ ಅಗತ್ಯವಾಗಬಹುದು.
ಇದರ ಜೊತೆಗೆ ಇತ್ತೀಚಿನ ಶುಲ್ಕ ಪಾವತಿ ರಶೀದಿ, ಸಂಸ್ಥೆಯ ಶುಲ್ಕ ರಚನೆ, ಕುಟುಂಬದ ಆದಾಯ ಪ್ರಮಾಣಪತ್ರ ಮತ್ತು ವಿದ್ಯಾರ್ಥಿಯ ಬ್ಯಾಂಕ್ ಪಾಸ್ಬುಕ್ನ್ನೂ ಸಲ್ಲಿಸಬೇಕಾಗುತ್ತದೆ.
SC/ST ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರವನ್ನು ಹಾಗೂ ಅನ್ವಯಿಸುವ ಸಂದರ್ಭಗಳಲ್ಲಿ ಅಂಗವೈಕಲ್ಯ ಪ್ರಮಾಣಪತ್ರ ಅಥವಾ ಶಿಕ್ಷಣ ಸಾಲದ ದಾಖಲೆಗಳನ್ನು ಒದಗಿಸಬೇಕು. MBBS, IIT, IIM ಅಥವಾ ವಿದೇಶಿ ವ್ಯಾಸಂಗಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಅಗತ್ಯ ಪ್ರವೇಶ ಪರೀಕ್ಷೆಯ ಸ್ಕೋರ್ಕಾರ್ಡ್’ಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಆನ್ಲೈನ್ನಲ್ಲಿದೆ. ವಿದ್ಯಾರ್ಥಿಗಳು ಅಧಿಕೃತ ವಿದ್ಯಾರ್ಥಿವೇತನ ಪೋರ್ಟಲ್ buddy4study.comಗೆ ತೆರಳಿ SBI Platinum Jubilee Asha Scholarship 2026 ವಿಭಾಗವನ್ನು ಆಯ್ಕೆ ಮಾಡಬೇಕು.
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ನಂತರ ಇಮೇಲ್, ಮೊಬೈಲ್ ಸಂಖ್ಯೆ ಅಥವಾ Google ಖಾತೆಯ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ನಮೂನೆಯನ್ನು ತೆರೆಯಬೇಕು. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು, ಕುಟುಂಬದ ಆದಾಯ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಅರ್ಜಿಯಲ್ಲಿರುವ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿದ ನಂತರ Submit ಮಾಡಬೇಕು. ಅರ್ಜಿ ಸಲ್ಲಿಸಿದ ಬಳಿಕ ದೊರೆಯುವ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ವಿವರವನ್ನು ಮುಂದಿನ ಹಂತದವರೆಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಒಳಿತು.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ 4, 2026
- ಅರ್ಜಿ ಲಿಂಕ್: Apply ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.