Crop Insurance Compensation: ರೈತರಿಗೆ ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು | ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

Spread the love

WhatsApp Group Join Now
Telegram Group Join Now

Crop Insurance Compensation: 2025-26ರ ಮುಂಗಾರು ಹಂಗಾಮಿನಲ್ಲಿ ರೈತರಿಗೆ 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರು. ಮೊದಲ ಕಂತಿನ ಹಣ ಜಮೆಯಾಗಿದ್ದು, 2ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ಜಮೆಯಾಗಲಿದೆ…

ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ನೆರವು ದೊರೆತಿದೆ. 2025-26ನೇ ಸಾಲಿನ ಮುಂಗಾರು (Kharif Season) ಹಂಗಾಮಿನಲ್ಲಿ ಬೆಳೆ ವಿಮೆ (Crop Insurance) ಮಾಡಿಕೊಂಡಿರುವ ರೈತರಿಗೆ ಒಟ್ಟು 585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿ ಜಿಲ್ಲೆಯ ರೈತರ ಖಾತೆಗೆ ಹಂತ ಹಂತವಾಗಿ ಪರಿಹಾರ ಮೊತ್ತವನ್ನು ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Gruha Jyothi Free Electricity: ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್: 82,220+ ಕುಟುಂಬಗಳಿಗೆ ಉಚಿತ ವಿದ್ಯುತ್ ಬಂದ್ | ನಿಮ್ಮ ಹೆಸರೂ ಇದೆಯೇ?

3 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,00,952 ರೈತರು ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಿಗಾಗಿ ಸರ್ಕಾರ 585.72 ಕೋಟಿ ರೂ. ಪರಿಹಾರವನ್ನು ಮಂಜೂರು ಮಾಡಿದೆ.

ಇದನ್ನೂ ಓದಿ: Two Month Ration Distribution: ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ಒಂದೇ ತಿಂಗಳಲ್ಲಿ ಎರಡು ಬಾರಿ ಪಡಿತರ ವಿತರಣೆ | ಯಾರಿಗೆ ಎಷ್ಟು ಧಾನ್ಯ ಸಿಗಲಿದೆ?

ಮೊದಲ ಕಂತಿನಲ್ಲಿ 243.52 ಕೋಟಿ ರೂ. ಜಮೆ

ಈಗಾಗಲೇ ಮೊದಲ ಕಂತಿನ (On-Season Adversity) ಪರಿಹಾರವಾಗಿ 2,87,696 ರೈತರಿಗೆ ಒಟ್ಟು 243.52 ಕೋಟಿ ರೂ. ರೈತರ ಬ್ಯಾಂಕ್ ಖಾತೆಗೆ (DBT – Direct Benefit Transfer) ಮೂಲಕ ಜಮೆ ಮಾಡಲಾಗಿದೆ.

ಇದರಲ್ಲಿ, 2,67,133 ರೈತರಿಗೆ 234.73 ಕೋಟಿ ರೂ. ಹಾಗೂ 20,563 ರೈತರಿಗೆ ಸ್ಥಳೀಯ ವಿಕೋಪ (Localized Calamity) ಅಡಿಯಲ್ಲಿ 8.79 ಕೋಟಿ ರೂ. ಪಾವತಿಸಲಾಗಿದೆ.

ಇದನ್ನೂ ಓದಿ: LPG Cylinder Price: ಎಲ್‌ಪಿಜಿ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆ

Crop Insurance Compensation
Crop Insurance Compensation

ಎರಡನೇ ಕಂತಿನ ಹಣವೂ ಶೀಘ್ರ ಬಿಡುಗಡೆ

ಬೆಳೆ ವಿಮೆಯ ಎರಡನೇ ಕಂತಿನಡಿ 221 ಕೋಟಿ ರೂ. ಪರಿಹಾರ ಬಿಡುಗಡೆಗೆ ಅನುಮೋದನೆ ದೊರೆತಿದೆ. ಇದರಲ್ಲಿ ಈಗಾಗಲೇ 54 ಕೋಟಿ ರೂ. ಬಿಡುಗಡೆ ಆಗಿದ್ದು, ಕೆಲವೇ ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದರ ಜೊತೆಗೆ, ಉಳಿದ 67 ಕೋಟಿ ರೂ. ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡಿ ರೈತರಿಗೆ ಪಾವತಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Karnataka One Week Heavy Rain: ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಅತಿವೃಷ್ಟಿಯಿಂದ ಭಾರಿ ಬೆಳೆ ಹಾನಿ

2025-26ನೇ ಸಾಲಿನ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ (Heavy Rain) ಕಲಬುರಗಿ ಜಿಲ್ಲೆಯಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿತ್ತು.

ಈ ಹಿನ್ನೆಲೆಯಲ್ಲಿ ಬೆಳೆ ಹಾನಿಗೊಳಗಾದ 3,26,183 ರೈತರಿಗೆ ಒಟ್ಟು 498.73 ಕೋಟಿ ರೂ. ಬೆಳೆ ಹಾನಿ ಪರಿಹಾರವನ್ನು ಈಗಾಗಲೇ ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: LPG Gas Cylinder New Rules: ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ರೂಲ್ಸ್ | ಬುಕ್ಕಿಂಗ್‌ನಿಂದ ಹೊಸ ಸಂಪರ್ಕದವರೆಗೆ ಏನೆಲ್ಲ ಬದಲಾಗಲಿದೆ?

ಎನ್‌ಡಿಆರ್‌ಎಫ್ ಮತ್ತು ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್

ಬೆಳೆ ಹಾನಿ ಪರಿಹಾರದಲ್ಲಿ, ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ (SDRF) ಮಾರ್ಗಸೂಚಿಯಂತೆ 250 ಕೋಟಿ ರೂ. ವಿತರಣೆ ಮಾಡಲಾಗಿದೆ.

ಅದೇ ರೀತಿ ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ (Special Package) ಅಡಿಯಲ್ಲಿ 248.73 ಕೋಟಿ ರೂ. ರೈತರಿಗೆ ವಿತರಿಸಲಾಗಿದೆ.

ಇದನ್ನೂ ಓದಿ: Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿವೇತನ | ಆನ್‌ಲೈನ್ ಅರ್ಜಿ ಆಹ್ವಾನ

ಒಟ್ಟು 1,084.45 ಕೋಟಿ ರೂ. ನೆರವು

2025-26ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ದೊಡ್ಡ ಪ್ರಮಾಣದ ಆರ್ಥಿಕ ನೆರವು ದೊರೆತಿದೆ.ಅದರಂತೆ:

  • ಬೆಳೆ ವಿಮೆ ಪರಿಹಾರ – 585.72 ಕೋಟಿ ರೂ.
  • NDRF ಹಾಗೂ SDRF ಪರಿಹಾರ – 250 ಕೋಟಿ ರೂ.
  • ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ – 248.73 ಕೋಟಿ ರೂ.

ಹೀಗೆ ಒಟ್ಟು 1,084.45 ಕೋಟಿ ರೂ. ಪರಿಹಾರ ಮತ್ತು ನೆರವು ಬಿಡುಗಡೆ ಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: 221 Crore Crop Insurance: 221 ಕೋಟಿ ರೂ. ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ | ರೈತರ ಖಾತೆಗೆ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

ರೈತರಿಗೆ ಸರ್ಕಾರದ ಭರವಸೆ

ಬೆಳೆ ವಿಮೆಯ ಉಳಿದ ಕಂತಿನ ಹಣವನ್ನು ಕೂಡ ಶೀಘ್ರದಲ್ಲೇ ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರಿಂದ ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿದ ಸಾವಿರಾರು ರೈತರಿಗೆ ಆರ್ಥಿಕ ನೆರವು ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.

PM Kisan Scheme Extended: ರೈತರಿಗೆ ಭರ್ಜರಿ ಗುಡ್‌ನ್ಯೂಸ್: ಪಿಎಂ-ಕಿಸಾನ್ ಹಣ ಹೆಚ್ಚಳ | ಕೇಂದ್ರದಿಂದ ₹3.15 ಲಕ್ಷ ಕೋಟಿ ಅನುದಾನ


Spread the love
error: Content is protected !!