Karnataka Gram Panchayat Election 2026: ಗ್ರಾಮ ಪಂಚಾಯಿತಿ ಚುನಾವಣೆಗೆ ಭರ್ಜರಿ ಸಿದ್ಧತೆ | ಎಲ್ಲ ಜಿಲ್ಲಾಧಿಕಾರಿಗಳಿಗೆ ಹೊಸ ಆದೇಶ

Spread the love

WhatsApp Group Join Now
Telegram Group Join Now

Karnataka Gram Panchayat Election 2026: ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆ ಶುರುವಾಗಿದ್ದು, ರಾಜ್ಯದ ಎಲ್ಲಾ ಡಿಸಿಗಳಿಗೆ ರಾಜ್ಯ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ಹಳ್ಳಿಗಳ ಆಡಳಿತದ ಚುಕ್ಕಾಣಿ ಯಾರ ಕೈ ಸೇರಲಿದೆ ಎಂಬ ಕುತೂಹಲಕ್ಕೆ ಮತ್ತೆ ಕಾಲ ಕೂಡಿಬರುತ್ತಿದೆ. ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಹೊಸ ನಾಯಕರನ್ನು ಆಯ್ಕೆ ಮಾಡಲು ರಾಜ್ಯ ಚುನಾವಣಾ ಆಯೋಗ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಆರಂಭಿಸಿದೆ.

ಈ ನಿಟ್ಟಿನಲ್ಲಿ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ (Deputy Commissioners) ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದು, ಹಳ್ಳಿಗಳ ಕಟ್ಟೆಗಳಲ್ಲಿ ಮತ್ತೆ ರಾಜಕೀಯದ ಲೆಕ್ಕಾಚಾರಗಳು ಗರಿಗೆದರಲು ವೇದಿಕೆ ಸಿದ್ಧವಾಗುತ್ತಿದೆ.

ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ

ಚುನಾವಣೆಯ ಮೊದಲ ಹಂತವಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯನ್ವಯ ವಾರ್ಡ್’ಗಳ ವಿಂಗಡಣೆ ಹಾಗೂ ಮೀಸಲಾತಿ (Ward Reservation) ನಿಗದಿಪಡಿಸುವ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಡಿಸಿಗಳಿಗೆ ಸೂಚಿಸಲಾಗಿದೆ.

ಈ ಬಗ್ಗೆ ಕೋಷ್ಟಕಗಳ ಮೂಲಕ ಅಧಿಕೃತ ಅಧಿಸೂಚನೆ (Official Notification) ಹೊರಡಿಸಿ, ತಕ್ಷಣವೇ ಅದರ ಪ್ರತಿಯನ್ನು ಆಯೋಗದ ಮುಂದಿಡುವAತೆ ಕಟ್ಟುನಿಟ್ಟಿನ ಗಡುವು ಕೂಡ ನೀಡಲಾಗಿದೆ.

ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

Karnataka Gram Panchayat Election 2026
Karnataka Gram Panchayat Election 2026

ಸ್ವಂತ ಊರಲ್ಲಿ ಚುನಾವಣಾ ಡ್ಯೂಟಿ ಮಾಡುವಂತಿಲ್ಲ!

ಯಾವುದೇ ಚುನಾವಣೆಯಲ್ಲಿ ಪಾರದರ್ಶಕತೆ ಎಂಬುದು ಬಹಳ ಮುಖ್ಯ. ಹೀಗಾಗಿಯೇ ಆಯೋಗವು ಅಧಿಕಾರಿಗಳ ನೇಮಕದ ಬಗ್ಗೆ ಕಟ್ಟುನಿಟ್ಟಿನ ನಿಲುವು ತಳೆದಿದೆ. ಪ್ರತಿ ಪಂಚಾಯಿತಿಗೆ ಚುನಾವಣಾಧಿಕಾರಿ (Returning Officer) ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲು ಆದೇಶಿಸಲಾಗಿದೆ. ಗ್ರೂಪ್-ಬಿ ಅಧಿಕಾರಿಗಳು ಮತ್ತು ಶಿರಸ್ತೇದಾರ್ ಮಟ್ಟದ ಅಧಿಕಾರಿಗಳಿಗೆ ಈ ಜವಾಬ್ದಾರಿ ಬೀಳಲಿದೆ.

ಆದರೆ ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ವಿಚಾರವೆಂದರೆ, ಯಾವೊಬ್ಬ ಅಧಿಕಾರಿಯೂ ತನ್ನ ಸ್ವಂತ ಊರಿನಲ್ಲಿ (Native Place) ಕರ್ತವ್ಯ ನಿರ್ವಹಿಸುವಂತಿಲ್ಲ. ಸ್ಥಳೀಯ ಪ್ರಭಾವ, ಸ್ವಜನಪಕ್ಷಪಾತ ಅಥವಾ ರಾಜಕೀಯ ಒತ್ತಡಗಳಿಗೆ ಕಿಂಚಿತ್ತೂ ಅವಕಾಶವಿರಬಾರದು ಎಂಬ ಕಾರಣಕ್ಕೆ ಆಯೋಗ ಈ ಬಿಗಿ ನಿಯಮ ಜಾರಿಗೊಳಿಸಿದೆ. ನೇಮಕಾತಿ ಆದೇಶ ಹೊರಬಿದ್ದ ತಕ್ಷಣವೇ ತಾಲೂಕುವಾರು ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಹಾಗಾದರೆ ವೋಟಿಂಗ್ ಯಾವಾಗ?

ಸಿದ್ಧತೆಗಳೇನೋ ಭರದಿಂದ ಸಾಗುತ್ತಿವೆ, ಹಾಗಾದರೆ ಚುನಾವಣೆ ತಕ್ಷಣವೇ ನಡೆಯುತ್ತಾ? ಖಂಡಿತ ಇಲ್ಲ. ಸದ್ಯದ ಮಾಹಿತಿ ಪ್ರಕಾರ, ಅಕ್ಟೋಬರ್‌ಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳು ತೀರಾ ಕಡಿಮೆ.

ಏಕೆಂದರೆ, ಸದ್ಯ ಆಡಳಿತ ಯಂತ್ರವು ಎಸ್‌ಐಆರ್ (Special Intensive Revision – SIR) ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಅಲ್ಲದೆ, 2025ರ ಹೊಸ ಮತದಾರರ ಪಟ್ಟಿಯನ್ನು (Voter List) ಆಧರಿಸಿ ಈ ಚುನಾವಣೆ ನಡೆಯಬೇಕಿರುವುದರಿಂದ ಅಕ್ಟೋಬರ್ ವರೆಗೂ ಕಾಯುವುದು ಅನಿವಾರ್ಯವಾಗಿದೆ. ಆದರೂ, ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸಲು ಈಗಿನಿಂದಲೇ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ: Karnataka Gram Panchayat Election 2026: ಇನ್ನೆರಡು ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ? ರಾಜ್ಯ ಸರ್ಕಾರದಿಂದ ಬಂತು ಮಹತ್ವದ ಮಾಹಿತಿ

ಈ ಬಗ್ಗೆ ಸ್ಪಷ್ಟಪಡಿಸಿರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಜಿ.ಎಸ್. ಸಂಗ್ರೇಶಿ, ‘ಅವಧಿ ಮುಗಿದಿರುವ ಗ್ರಾ.ಪಂ.ಗಳಿಗೆ ಚುನಾವಣೆ ನಡೆಸುವುದು ಆಯೋಗದ ಪ್ರಮುಖ ಹೊಣೆ. ಯಾವುದೇ ಗೊಂದಲಗಳಿಲ್ಲದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಲೇ ಮಾಡಿಕೊಳ್ಳಲಾಗುತ್ತಿದೆ’ ಎಂದು ಭರವಸೆ ನೀಡಿದ್ದಾರೆ.

WhatsApp Group Join Now
Telegram Group Join Now

ಒಟ್ಟಿನಲ್ಲಿ, ಎಲೆಕ್ಷನ್‌ಗೆ ಇನ್ನೂ ಕೆಲವು ತಿಂಗಳುಗಳ ಕಾಲಾವಕಾಶವಿದ್ದರೂ, ಗ್ರಾಮೀಣ ಭಾಗದಲ್ಲಿ ರಾಜಕೀಯದ ಕಾವು ನಿಧಾನವಾಗಿ ಏರುತ್ತಿರುವುದಂತೂ ಸುಳ್ಳಲ್ಲ!

Karnataka Farm Loan Waiver: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆ ರೈತರ ಸಾಲ ಮನ್ನಾ | ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುಳಿವು!


Spread the love
error: Content is protected !!