Karnataka New BPL Ration Card : ರಾಜ್ಯದಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ನಿಯಮಗಳಲ್ಲಿ ಮಹತ್ತರ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಸರ್ಕಾರದ ಅಪ್‌ಡೇಟ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿ, ವರ್ಷಗಟ್ಟಲೆ ಕಾಯುತ್ತಿರುವ ಲಕ್ಷಾಂತರ ಜನರಿಗೆ ಕೊನೆಗೂ ಸಿಹಿ ಸುದ್ದಿಯೊಂದು (Good News) ಹೊರಬಿದ್ದಿದೆ. ಹೊಸ ಬಿಪಿಎಲ್ ಕಾರ್ಡ್ (New BPL Card) ಪಡೆಯುವ ನಿಯಮಗಳಲ್ಲಿ ಮಹತ್ತರವಾದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಲೇವಾರಿಯಾಗದ ಲಕ್ಷಾಂತರ ಅರ್ಜಿಗಳು (Pending Applications)
ರಾಜ್ಯಾದ್ಯAತ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ (Grama One) ಕೇಂದ್ರಗಳ ಮೂಲಕ ಹೊಸ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ಸುಮಾರು 3,27,309 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ.
ಅರ್ಜಿ ಸಲ್ಲಿಸಿ 4-5 ವರ್ಷಗಳೇ ಕಳೆದರೂ ಕಾರ್ಡ್ ಕೈಸೇರಿಲ್ಲ. ಶಾಸಕರು, ಸಂಸದರು ಹಾಗೂ ಸಾರ್ವಜನಿಕ ವಲಯದಿಂದ ಹೊಸ ಕಾರ್ಡ್ ವಿತರಣೆಗೆ ತೀವ್ರ ಒತ್ತಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ.
3 ಲಕ್ಷಕ್ಕೆ ಏರಿಕೆಯಾಗಲಿದೆಯೇ ಆದಾಯ ಮಿತಿ? (Income Limit Increase)
ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಮತ್ತು ಅರ್ಜಿ ಹಾಕುವವರಿಗೆ ಅತ್ಯಂತ ಖುಷಿಯ ವಿಚಾರವೆಂದರೆ, ‘ಆಡಳಿತ ಸುಧಾರಣಾ ಆಯೋಗ’ವು ಬಿಪಿಎಲ್ ಕಾರ್ಡ್ನ ಮಾನದಂಡಗಳನ್ನು (Eligibility Criteria) ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.
ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಇರುವ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು (Annual Income Limit) ಪ್ರಸ್ತುತ ಇರುವ 1.20 ಲಕ್ಷ ರೂ. ಗಳಿಂದ 3 ಲಕ್ಷ ರೂ. ಗಳಿಗೆ ಹೆಚ್ಚಿಸುವಂತೆ ಆಹಾರ ಇಲಾಖೆಗೆ (Food Department) ಆಯೋಗ ಸಲಹೆ ನೀಡಿದೆ.
ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ಏರಿಕೆಯಾಗುತ್ತಿರುವ ಜೀವನ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಈ ಸಲಹೆ ನೀಡಲಾಗಿದೆ. ಸದ್ಯ ಇಲಾಖೆ ಈ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದ್ದು, ಆದಾಯ ಮಿತಿ ಹೆಚ್ಚಳವಾದರೆ ಲಕ್ಷಾಂತರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಭಾಗ್ಯ ಸಿಗಲಿದೆ.
ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…
ರದ್ದಾದ ಕಾರ್ಡ್’ಗಳು (Cancelled BPL Cards)
ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು 2017ರಲ್ಲಿ ಕೆಲವು ಕಟ್ಟುನಿಟ್ಟಿನ ಮಾನದಂಡಗಳನ್ನು ಜಾರಿಗೆ ತಂದಿತ್ತು. ಈ ಮಾನದಂಡಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಕಾರ್ಡ್ ಪಡೆದವರ ವಿರುದ್ಧ ಈಗ ಆಹಾರ ಇಲಾಖೆ ಸಮರ ಸಾರಿದೆ. ಅದರಂತೆ, ಇದುವರೆಗೆ ಬರೋಬ್ಬರಿ 4,56,675 ಬಿಪಿಎಲ್ ಚೀಟಿಗಳನ್ನು ರದ್ದುಪಡಿಸಲಾಗಿದೆ.
ಇದನ್ನೂ ಓದಿ: Subsidy Cow Purchase Scheme: ಮಹಿಳೆಯರಿಗೆ ಹಸು ಖರೀದಿಗೆ ₹56,700 ಸಹಾಯಧನ | ಸರ್ಕಾರದಿಂದ ಅರ್ಜಿ ಆಹ್ವಾನ

ಯಾರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ? (Who are Not Eligible?)
ಹಳೆಯ ನಿಯಮದ ಪ್ರಕಾರ ಈ ಕೆಳಗಿನ ವರ್ಗದವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ:
- ಆದಾಯ ತೆರಿಗೆ ಪಾವತಿಸುವವರು (Income Tax Payers)
- ಸರ್ಕಾರಿ ನೌಕರರು, ನಿಗಮ ಮಂಡಳಿ, ಸಹಕಾರ ಸಂಘಗಳ ಕಾಯಂ ನೌಕರರು.
- ವೈದ್ಯರು, ವಕೀಲರು, ಲೆಕ್ಕ ಪರಿಶೋಧಕರು (CAs).
- ಏಳೂವರೆ (7.5) ಎಕರೆಗಿಂತ ಹೆಚ್ಚು ಒಣ ಭೂಮಿ ಹೊಂದಿರುವವರು.
- ಬಹುರಾಷ್ಟ್ರೀಯ ಕಂಪನಿಗಳ (MNC) ನೌಕರರು.
- ವಾರ್ಷಿಕವಾಗಿ 1.20 ಲಕ್ಷ ರೂ.ಗಿಂತ ಅಧಿಕ ಆದಾಯ ಹೊಂದಿರುವವರು.
- ಆಟೋ, ಕ್ಯಾಬ್ ಮತ್ತು ಮತ್ತು ಟ್ರಾಕ್ಟರ್ ಹೊರತುಪಡಿಸಿ, ಸ್ವಂತ ನಾಲ್ಕು ಚಕ್ರದ ವಾಹನ (Four Wheeler) ಹೊಂದಿರುವವರು.
- ಶಾಲಾ-ಕಾಲೇಜು ನೌಕರರು, ಗುತ್ತಿಗೆದಾರರು, APMC ಟ್ರೇಡರ್ಸ್, ಕಮಿಷನ್ ಏಜೆಂಟ್ಸ್ ಹಾಗೂ ಬೀಜ/ಗೊಬ್ಬರ ಡೀಲರ್ಸ್.
ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?
ನೀತಿ ಆಯೋಗ ಮತ್ತು ರಾಜ್ಯದ ನಿಯಮಗಳ ನಡುವೆ ಗೊಂದಲ (NITI Aayog Guidelines)
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳಿಗೂ, ಕೇಂದ್ರದ ನೀತಿ ಆಯೋಗ ರೂಪಿಸಿರುವ ಮಾನದಂಡಗಳಿಗೂ ವ್ಯತ್ಯಾಸಗಳಿವೆ. ಇದರಿಂದಾಗಿ ನೀತಿ ಆಯೋಗದ ಅಂಕಿ-ಅಂಶಗಳು ರಾಜ್ಯದ ನೈಜ ಜನಸಂಖ್ಯೆಗೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಹಳೆಯ ಮಾನದಂಡಗಳನ್ನು ಪರಿಷ್ಕರಣೆ ಮಾಡಲೇಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಬಲವಾಗಿತ್ತು.
ಇದನ್ನೂ ಓದಿ: PM Surya Ghar Yojana: ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು 78,000 ವರೆಗೆ ಸಹಾಯಧನ | ಅರ್ಜಿ ಆಹ್ವಾನ
ಯಾರಿಗೆ ಯಾವ ವಿಧದ ಕಾರ್ಡ್ ಸಿಗುತ್ತೆ?
ಆಹಾರ ಇಲಾಖೆಯು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಮೂರು ರೀತಿಯ ಕಾರ್ಡ್ಗಳನ್ನು ವಿತರಿಸುತ್ತದೆ:
- ಅಂತ್ಯೋದಯ ಕಾರ್ಡ್ (Antyodaya Card): ನಿರ್ಗತಿಕರಿಗೆ.
- ಬಿಪಿಎಲ್ ಕಾರ್ಡ್ (BPL Card): ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ.
- ಎಪಿಎಲ್ ಕಾರ್ಡ್ (APL Card): ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ.
ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ (Free Rice Scheme) ವಿತರಿಸಲಾಗುತ್ತಿದೆ. ಆದರೆ, ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಈ ಹಿಂದೆ ಕೆಜಿಗೆ 15 ರೂ. ದರದಲ್ಲಿ ಅಕ್ಕಿ ನೀಡಲಾಗುತ್ತಿತ್ತು.
ಹೆಚ್ಚಿನ ಎಪಿಎಲ್ ಕಾರ್ಡುದಾರರು ಈ ಅಕ್ಕಿಯನ್ನು ಪಡೆಯಲು ನಿರಾಸಕ್ತಿ ತೋರಿದ್ದರಿಂದ, ಸದ್ಯಕ್ಕೆ ಎಪಿಎಲ್ ಫಲಾನುಭವಿಗಳಿಗೆ ಅಕ್ಕಿ ನೀಡುವುದನ್ನು ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದೆ.
ಒಟ್ಟಾರೆಯಾಗಿ ಆದಾಯ ಮಿತಿಯನ್ನು 3 ಲಕ್ಷಕ್ಕೆ ಏರಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಮುದ್ರೆ ಒತ್ತಿದರೆ, ಕಳೆದ ಹಲವು ವರ್ಷಗಳಿಂದ ಹೊಸ ರೇಷನ್ ಕಾರ್ಡ್’ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ.
(ಸೂಚನೆ: ಈ ಮೇಲಿನ ಮಾಹಿತಿಯು ಪ್ರಸ್ತುತ ಪ್ರಸ್ತಾವನೆಯ ಹಂತದಲ್ಲಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದ ಬಳಿಕವಷ್ಟೇ ಹೊಸ ನಿಯಮಗಳು ಜಾರಿಗೆ ಬರಲಿವೆ.)
ಹೊಸ ಪಡಿತರ ಚೀಟಿಯ ಅರ್ಜಿ ಸ್ಥಿತಿ ಮತ್ತು ಹಾಲಿ ಪಡಿತರ ಚೀಟಿ ಸ್ಥಿತಿಯ ವಿವರಣೆ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.