Free Sheep and Dairy Farming Training- ಉಚಿತ ಹೈನುಗಾರಿಕೆ ಮತ್ತು ಉಚಿತ ಕುರಿ ಸಾಕಣೆ ತರಬೇತಿ | ಅರ್ಜಿ ಆಹ್ವಾನ

ಹೈನುಗಾರಿಕೆ ಮತ್ತು ಉಚಿತ ಕುರಿ ಸಾಕಣೆ ತರಬೇತಿಗೆ (Free Sheep and Dairy Farming Training) ಅರ್ಜಿ ಆಹ್ವಾನಿಸಲಾಗಿದ್ದು; ಆಸಕ್ತ ಯುವಕ-ಯುವತಿಯರು ಇದು ಉತ್ತಮ ಅವಕಾಶವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ಥಿರರಾಗಬೇಕು ಎಂಬ ಉದ್ದೇಶದಿಂದ, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI) ವತಿಯಿಂದ 13 ದಿನಗಳ ಉಚಿತ ಕುರಿ ಸಾಕಣೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರವನ್ನು ಆಗಸ್ಟ್ ತಿಂಗಳಲ್ಲಿ ಆಯೋಜಿಸಲಾಗಿದೆ.
ಈ ತರಬೇತಿಯು ಕೇವಲ ಮಾಹಿತಿಗಾಗಿ ಅಲ್ಲದೇ, ಪ್ರಾಯೋಗಿಕವಾಗಿ ಕೂಡಾ ಕೈಗೊಂಡು, ತರಬೇತಿಗೆ ಆಗಮಿಸುವ ಯುವಕ-ಯುವತಿಯರಿಗೆ ಕೃಷಿ ಪಶುಸಂಗೋಪನಾ ಕ್ಷೇತ್ರದಲ್ಲಿ ವೃತ್ತಿಪರ ಜ್ಞಾನ ಹಾಗೂ ಉದ್ದಿಮೆ ಆರಂಭಿಸುವ ಪರಿಣತಿ ಒದಗಿಸಲಿದೆ.
ತರಬೇತಿಯ ಮುಖ್ಯ ಉದ್ದೇಶಗಳು
ನಿರುದ್ಯೋಗಿ ಯುವಕರು ಹಾಗೂ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವುದು. ಕುರಿ ಸಾಕಣೆ ಮತ್ತು ಹೈನುಗಾರಿಕೆಯಲ್ಲಿ ನವೀನ ತಂತ್ರಜ್ಞಾನ ಮತ್ತು ಆಧುನಿಕ ವಿಧಾನಗಳನ್ನು ಪರಿಚಯಿಸುವುದು. ಸಣ್ಣ ಮಟ್ಟದ ಕೃಷಿ ಉದ್ಯಮ ಆರಂಭಿಸಲು ಪ್ರೇರಣೆಯಾಗುವುದು ಬ್ಯಾಂಕ್‌ಗಳಿಂದ ಸಾಲ ಪಡೆಯುವಲ್ಲಿ ನೆರವು ನೀಡುವುದು ಈ ತರಬೇತಿಯ ಉದ್ದೇಶವಾಗಿದೆ.

ಯಾರೆಲ್ಲ ತರಬೇತಿಯಲ್ಲಿ ಬಾಗವಹಿಸಬಹುದು?
18 ರಿಂದ 45 ವರ್ಷಗಳೊಳಗಿನ ಯುವಕ/ಯುವತಿಯರು ಈ ತರಬೇತಿಯಲ್ಲಿ ಭಾಗಿಯಾಗಲು ಅವಕಾಶವಿದೆ. ಆಸಕ್ತಿಯುಳ್ಳವರು ಕೃಷಿ, ಪಶುಪಾಲನೆ ಅಥವಾ ಸ್ವ ಉದ್ಯಮದ ಬಗ್ಗೆ ಒಲವು ಹೊಂದಿರಬೇಕು. ಜಿಲ್ಲಾ ಮಟ್ಟದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಅಗತ್ಯ ದಾಖಲೆಗಳು
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
- ಬಿಪಿಎಲ್ (BPL) ಕಾರ್ಡ್ (ಇದ್ದರೆ)
- ಇತ್ತೀಚಿನ 2 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಜನ್ಮ ದಿನಾಂಕ ದೃಢೀಕರಣ ದಾಖಲೆ
ತರಬೇತಿಯಲ್ಲಿ ಸಿಗುವ ಉಚಿತ ಸೌಲಭ್ಯಗಳು
- ಪ್ರಾಯೋಗಿಕ ತರಬೇತಿ
- ಉಚಿತ ಊಟ ಮತ್ತು ವಸತಿ ವ್ಯವಸ್ಥೆ
- ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು
- ಬ್ಯಾಂಕ್ ಸಾಲ ಸಹಾಯ ಮತ್ತು ಮಾರ್ಗದರ್ಶನ
ಈ ತರಬೇತಿ ಶಿಬಿರವು ಸ್ವ ಉದ್ಯೋಗದತ್ತ ದಾಪುಗಾಲು ಹಾಕಲು ಉತ್ತಮ ವೇದಿಕೆಯಾಗಿದ್ದು, ರೈತ ಕುಟುಂಬಗಳಿಂದ ಬಂದ ಯುವಕ-ಯುವತಿಯರಿಗೆ ಉತ್ತಮ ಅವಕಾಶವಾಗಿದೆ. ಈ ತರಬೇತಿ ಕಾರ್ಯಕ್ರಮದಿಂದ ಕೇವಲ ಉದ್ಯೋಗವಲ್ಲದೆ, ತಮ್ಮದೇ ಉದ್ದಿಮೆಯನ್ನು ಆರಂಭಿಸುವ ಕನಸು ಸಾಕಾರಗೊಳಿಸಬಹುದು.
ಆಸಕ್ತ ಯುವಕರು, ಮಹಿಳೆಯರು ಮತ್ತು ಉತ್ಸಾಹಿಗಳೆಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಸಮಯ ಮತ್ತು ಸೀಟು ಸೀಮಿತವಾಗಿದೆ – ತಕ್ಷಣ ಸಂಪರ್ಕಿಸಿ ಹಾಗೂ ನೊಂದಣಿ ಮಾಡಲು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
ನೋಂದಣಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿ: ನಿರ್ದೇಶಕರು, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಡಿಸಿ ಆಫೀಸ್ ಹಿಂಭಾಗ, ದೇವಗಿರಿ, ಹಾವೇರಿ, ಮೊಬೈಲ್: 8660219375