E-Swathu Digital Records- ಇ-ಸ್ವತ್ತು ಯೋಜನೆ: ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ ಪಡೆಯಲು ಅರ್ಜಿ ಆಹ್ವಾನ

ಸರ್ಕಾರ ಇ-ಸ್ವತ್ತು ಯೋಜನೆಯಡಿ ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ (E-Swathu Digital Records) ಪಡೆಯಲು ಅವಕಾಶ ಕಲ್ಪಿಸಲಾಗಿದ್ದು; ಅರ್ಜಿ ಪ್ರಕ್ರಿಯೆ, ಲಾಭಗಳು ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ…
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ‘ಇ-ಸ್ವತ್ತು’ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಅಥವಾ ನಿವೇಶನ ಹೊಂದಿರುವ ನಾಗರಿಕರಿಗೆ ಡಿಜಿಟಲ್ ಮಾದರಿಯಲ್ಲಿ ಅಧಿಕೃತ ಆಸ್ತಿ ದಾಖಲೆಗಳನ್ನು ನೀಡಲು ಮುಂದಾಗಿದೆ.
ಗ್ರಾಮ ಮಟ್ಟದಲ್ಲಿ ಮನೆಯ ಮಾಲೀಕತ್ವವನ್ನು ದಾಖಲಿಸಿ, ಖಚಿತಪಡಿಸಿ ಹಾಗೂ ಆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
Karnataka Heavy Rain Alert- ಕರ್ನಾಟಕದಲ್ಲಿ ವಾರಪೂರ್ತಿ ಮಳೆ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…
ಈ ಯೋಜನೆಯ ಅಗತ್ಯತೆ ಏನು?
ಗ್ರಾಮೀಣ ಭಾಗದಲ್ಲಿ ಈಗಲೂ ಶೇ.40ಕ್ಕೂ ಹೆಚ್ಚು ಮಂದಿ ಗ್ರಾಮೀಣ ಭಾಗದ ನಿವಾಸಿಗಳು ತಮ್ಮ ಮನೆಗಳಿಗೆ ಅಥವಾ ನಿವೇಶನಗಳಿಗೆ ಸರಿಯಾದ ದಾಖಲೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಆಸ್ತಿ ಖರೀದಿ, ಮಾರಾಟ, ಬ್ಯಾಂಕ್ ಸಾಲ ಅಥವಾ ಸರಕಾರದ ಸಬ್ಸಿಡಿ ಯೋಜನೆಗಳನ್ನು ಪಡೆಯಲು ಸರಿಯಾದ ದಾಖಲೆ ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ‘ಇ-ಸ್ವತ್ತು’ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಯಾರೆಲ್ಲ ಅರ್ಹರು?
‘ಇ-ಸ್ವತ್ತು’ ಯೋಜನೆಯಡಿಯಲ್ಲಿ ಆಸ್ತಿ ದಾಖಲಾತಿ ಪಡೆಯಲು ಸರ್ಕಾರ ಕೆಲವು ಅರ್ಹತಾ ಮಾನದಂಡಗಳನ್ನು ರೂಪಿಸಿದೆ. ಪ್ರಮುಖವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮನೆ ಅಥವಾ ನಿವೇಶನದ ಮಾಲೀಕರು ಇ-ಸ್ವತ್ತು ದಾಖಲೆಗೆ ಅರ್ಹರಾಗುತ್ತಾರೆ.
ಸರ್ಕಾರದಿಂದ ಮಾನ್ಯತೆ ಪಡೆದ ಕಂದಾಯ ಭೂಮಿಯಲ್ಲಿ ಮನೆ ಹೊಂದಿರುವವರು, ಸಕ್ರಮ ಹಕ್ಕುಪತ್ರ ಹೊಂದಿರುವವರು ಹಾಗೂ ತಹಸೀಲ್ದಾರ್ ಮೂಲಕ ಅನುಮೋದನೆ ಪಡೆದ ಆಸ್ತಿಯ ಮಾಲೀಕರು ಕೂಡ ಇ-ಸ್ವತ್ತು ದಾಖಲೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ?
ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ‘ಇ-ಸ್ವತ್ತು’ ಅರ್ಜಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ನಂತರ ಪಂಚಾಯತಿಯವರು ಸ್ಥಳಕ್ಕೆ ಭೇಟಿ ನೀಡಿ ವಿಸ್ತೀರ್ಣ, ಚಕ್ಕುಬಂದಿ ಮುಂತಾದ ವಿವರಗಳನ್ನು ನೋಂದಾಯಿಸುತ್ತಾರೆ. ಈ ವಿವರಗಳು ‘ಇ-ಸ್ವತ್ತು’ ತಂತ್ರಾAಶದಲ್ಲಿ ದಾಖಲಾಗುತ್ತವೆ.
ಏನಾದರೂ ತಕರಾರುಗಳಿದ್ದರೆ ಅರ್ಜಿ ಸಲ್ಲಿಸಿದ ಒಂದು ತಿಂಗಳ ಕಾಲ ಸಾರ್ವಜನಿಕ ನೋಟಿಸ್ ಹೊರಡಿಸಲಾಗುತ್ತದೆ. ತದನಂತರ ಯಾವುದೇ ತಕರಾರುಗಳಿಲ್ಲದಿದ್ದಲ್ಲಿ, ಮ್ಯುಟೇಶನ್ ಪೂರ್ಣಗೊಂಡು ‘ಇ-ಸ್ವತ್ತು ದಾಖಲೆ’ ಮುದ್ರಿಸಲಾಗುತ್ತದೆ.
ಅರ್ಜಿಗೆ ಬೇಕಾದ ದಾಖಲೆಗಳ ಪಟ್ಟಿ
- ಅರ್ಜಿದಾರನ ಆಧಾರ್ ಕಾರ್ಡ್ ಪ್ರತಿ
- ಸ್ಥಳದ ಪೋಟೋ (ಮಾಲೀಕರೊಂದಿಗೆ)
- ಕೈಬರಹದ ಅರ್ಜಿ ಪತ್ರ
- ವಂಶವೃಕ್ಷ ನಕಲು
- ವಿದ್ಯುತ್ ಬಿಲ್ (ನಿಜವಾದ ಬಳಕೆದಾರನೆಂದು ಸಾಬೀತು ಮಾಡಲು)
- ತೆರಿಗೆ ಪಾವತಿ ರಶೀದಿ (ಹಳೆ ವರ್ಷಗಳೂ ಸೇರಿಸಿ)
- ವಂಶವೃಕ್ಷದ ಎಲ್ಲಾ ಸದಸ್ಯರ ಆಧಾರ್ ಮತ್ತು ಪೋಟೋ
ಇ-ಸ್ವತ್ತು ಯೋಜನೆಯ ಪ್ರಮುಖ ಲಾಭಗಳು
ಇ-ಸ್ವತ್ತು ಡಿಜಿಟಲ್ ದಾಖಲೆಗಳು ನಕಲಿ ಮಾಡಲಾಗದಂತೆ ಸುರಕ್ಷಿತವಾಗಿರುತ್ತವೆ. ಬ್ಯಾಂಕ್‌ಗಳಲ್ಲಿ ನಿವೇಶನ ಅಥವಾ ಮನೆ ಮೇಲಿನ ಸಾಲ ಪಡೆಯಲು ಇ-ಸ್ವತ್ತು ಕಡ್ಡಾಯವಾಗಿರುತ್ತದೆ. ಮನೆ/ಆಸ್ತಿಯ ಖರೀದಿ ಅಥವಾ ಮಾರಾಟದ ಸಂದರ್ಭದಲ್ಲಿ ದಾಖಲೆ ಇಲ್ಲದಿರುವ ಸಮಸ್ಯೆ ತಪ್ಪುತ್ತದೆ.
ಇ-ಸ್ವತ್ತು ದಾಖಲೆ ಇದ್ದರೆ ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ಇತರ ಮನೆ ನಿರ್ಮಾಣ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಲು ಸಾಧ್ಯ. ವಂಶವೃಕ್ಷದ ದಾಖಲೆಯಿಂದ ಪರಿವಾರ ಸದಸ್ಯರಿಗೆ ಹಕ್ಕುಗಳ ವಿವರ ಸ್ಪಷ್ಟವಾಗುತ್ತದೆ. ನಿಮ್ಮ ಆಸ್ತಿ ಕುರಿತು ವಿವಾದಗಳು ಕಡಿಮೆಯಾಗುತ್ತವೆ.
ಇ-ಸ್ವತ್ತು ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಲಕ್ಷಾಂತರ ಕುಟುಂಬಗಳು ಮೊದಲ ಬಾರಿಗೆ ತಮ್ಮ ಮನೆಯ ಕುರಿತು ಸರಿಯಾದ ದಾಖಲೆಗಳನ್ನು ಪಡೆಯುವ ಅವಕಾಶವನ್ನು ಪಡೆಯುತ್ತಿದ್ದಾರೆ. ಇದು ಭದ್ರತೆಯೊಂದಿಗೆ ಮನೆ ಬಾಳಿಕೆ ನಡೆಸಲು ಮತ್ತು ಆರ್ಥಿಕ ಪ್ರಗತಿಗೆ ದಾರಿ ಹಾಕಲು ಬಹುಮುಖ್ಯ ಹೆಜ್ಜೆಯಾಗಲಿದೆ.
ನಿಮ್ಮ ಇ-ಸ್ವತ್ತು ದಾಖಲೆ ಪರಿಶೀಲಿಸಲು ‘ಇ-ಸ್ವತ್ತು’ ತಂತ್ರಾಂಶದ ಲಿಂಕ್: Click Here
New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…



