ಕೃಷಿ ಭೂಮಿ ಖರೀದಿಗೆ (Agricultural Land Purchase Loan) ಕರ್ನಾಟಕ ಬ್ಯಾಂಕ್‌ನಿಂದ ₹50,000 ರಿಂದ ₹7.5 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಹೊಸ ಕೃಷಿ ಭೂಮಿಯನ್ನು ಖರೀದಿ ಮಾಡಲು ಹಣಕಾಸು ಅಡಚಣೆ ಎದುರಿಸುತ್ತಿರುವ ರೈತರು, ಕೃಷಿ ಕಂಪನಿಗಳು ಮತ್ತು ರೈತ ಕುಟುಂಬಗಳಿಗೆ ಕರ್ನಾಟಕ ಬ್ಯಾಂಕ್ ವಿಶಿಷ್ಟವಾಗಿ ರೂಪಿಸಿರುವ ‘ಕೃಷಿ ಭೂಮಿ ಖರೀದಿ ಸಾಲ ಯೋಜನೆ’ ಬಹಳಷ್ಟು ಉಪಯುಕ್ತವಾಗಿದೆ.
ಈ ಯೋಜನೆಯಡಿಯಲ್ಲಿ ಕನಿಷ್ಠ ₹50,000 ರಿಂದ ಗರಿಷ್ಠ ₹7.5 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದ್ದು, ಎಲ್ಲ ವರ್ಗದ ಅರ್ಹ ಫಲಾನುಭವಿಗಳಿಗೆ ಇದು ಮುಕ್ತವಾಗಿದೆ. ಯೋಜನೆಯ ಪ್ರಮುಖ ಲಕ್ಷಣ, ಅರ್ಹತಾ ನಿಯಮಗಳು, ದಾಖಲೆಗಳು ಮತ್ತು ಮರುಪಾವತಿ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ…
ಯಾರಿಗೆಲ್ಲ ಈ ಸಾಲ ಸಿಗಲಿದೆ?
ರಾಜ್ಯದ ಕೃಷಿಕರು ತಮ್ಮ ಕೃಷಿ ಚಟುವಟಿಕೆ ವಿಸ್ತರಣೆಗಾಗಿ ಹೆಚ್ಚಿನ ಭೂಮಿ ಖರೀದಿ ಮಾಡುವುದನ್ನು ಪ್ರೋತ್ಸಾಹಿಸಲು ಕರ್ನಾಟಕ ಬ್ಯಾಂಕ್ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಕೆಳಗಿನ ಯಾವುದೇ ವರ್ಗದವರು ಈ ಸಾಲ ಯೋಜನೆಯ ಲಾಭ ಪಡೆಯಬಹುದು.
- ಸ್ವತಂತ್ರ ರೈತರು
- ರೈತ ಕುಟುಂಬಗಳು (ಅವಿಭಕ್ತ ಕುಟುಂಬಗಳು)
- ಕೃಷಿ ಸಹಕಾರಿ ಸಂಘಗಳು
- ಕೃಷಿ ಉತ್ಪಾದನಾ ಕಂಪನಿಗಳು
- ರೈತ ಉತ್ಪಾದಕರ ಕಂಪನಿಗಳು (FPOs)
ಅರ್ಹತಾ ನಿಯಮಗಳು
- ಅರ್ಜಿದಾರನು/ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಕನಿಷ್ಠ ವಯಸ್ಸು 18 ವರ್ಷ.
- ಇತರೆ ಬ್ಯಾಂಕಿನಲ್ಲಿ ಅಥವಾ ನಾನಾ ಹಣಕಾಸು ಸಂಸ್ಥೆಗಳಲ್ಲಿ ಬಾಕಿ ಸಾಲವಿದ್ದರೆ, ಅದನ್ನು ಮುಕ್ತಾಯಗೊಳಿಸಲು ಅಥವಾ ಮರುಪಾವತಿಸಲು ಸಿದ್ಧವಾಗಿರಬೇಕು.
- ಬ್ಯಾಂಕ್‌ನ ಕ್ರೆಡಿಟ್ ಇತಿಹಾಸ ಸ್ವಚ್ಛವಾಗಿರಬೇಕು.
ಸಾಲದ ಮಿತಿ ಮತ್ತು ನಿಯಮಗಳು
ಮೊದಲೇ ಹೇಳಿದಂತೆ ಕಾರ್ನಾಟಕ ಬ್ಯಾಂಕಿನ ಮೂಲಕ ಕನಿಷ್ಠ ₹50,000 ದಿಂದ ಗರಿಷ್ಠ ₹7.5 ಕೋಟಿ ವರೆಗೂ ಕೃಷಿ ಭೂಮಿ ಖರೀದಿಗೆ ಸಾಲ ಪಡೆಯಬಹುದಾಗಿದೆ. ಅರ್ಜಿ, ಜಮೀನಿನ ಮೌಲ್ಯ ಮತ್ತು ಸಾಲ ಮರುಪಾವತಿ ಸಾಮರ್ಥ್ಯದ ಮೌಲ್ಯಮಾಪನದ ನಂತರ ಬ್ಯಾಂಕ್ ಸಾಲ ಮಂಜೂರಾಗುತ್ತದೆ.
ಆದರೆ, ಖರೀದಿಸಲು ಉದ್ದೇಶಿಸಿರುವ ಕೃಷಿ ಭೂಮಿಯನ್ನು ಅಡಮಾನವಾಗಿ ಇಡಬೇಕು. ಶ್ಯೂರಿಟಿ ಅಥವಾ ಜಾಮೀನದ ವ್ಯವಸ್ಥೆ ಕಡ್ಡಾಯ. ಬ್ಯಾಂಕ್ ನೀತಿ, ಮೌಲ್ಯಮಾಪನ ಮತ್ತು ಇತರೆ ನಿಯಮಗಳು ಅನ್ವಯವಾಗುತ್ತವೆ.

ಸಾಲ ಮಂಜೂರಾತಿ ಪ್ರಕ್ರಿಯೆ ಹೇಗೆ?
ಗ್ರಾಹಕರು ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಅಧಿಕಾರಿಗಳು ಮೊದಲಿಗೆ ದಾಖಲೆ ಪರಿಶೀಲನೆ ನಡೆಸುತ್ತಾರೆ. ನಂತರ ಖರೀಸಲು ಇಚ್ಛಿಸುವ ಭೂಮಿ ಸ್ಥಳ ಪರಿಶೀಲನೆ ಮಾಡುತ್ತಾರೆ. ಸದರಿ ಭೂಮಿಯ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಬ್ಯಾಂಕ್ ತ್ವರಿತ ಸಾಲ ಮಂಜೂರಾತಿ ಮಾಡುತ್ತದೆ.
ಯೋಜನೆಯ ಪ್ರಮುಖ ವಿಶೇಷತೆಗಳು
- ವೇಗದ ಮತ್ತು ಸುಲಭ ಮಂಜೂರಾತಿ
- ಕಡಿಮೆ ದಸ್ತಾವೇಜುಗಳ ಪ್ರಕ್ರಿಯೆ
- ರೈತರ ಅಗತ್ಯವನ್ನು ಗಮನದಲ್ಲಿಟ್ಟಿ ವಿನ್ಯಾಸ
- ಅಲ್ಪಾವಧಿ (Short-term) ಮತ್ತು ದೀರ್ಘಾವಧಿ (Term-loan) ಸಾಲ ವ್ಯವಸ್ಥೆಗಳು
- ಸ್ಥಳೀಯ ಬ್ಯಾಂಕ್ ಅಧಿಕಾರಿಗಳ ಸಂಪೂರ್ಣ ಮಾರ್ಗದರ್ಶನ
ಸಾಲ ಮರುಪಾವತಿ ವಿಧಾನಗಳು
ಕರ್ನಾಟಕ ಬ್ಯಾಂಕ್, ರೈತರ ಆದಾಯದ ಸಮಯ ಮತ್ತು ನೆಲದ ವೈಶಿಷ್ಟ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಕೃಷಿ ಭೂಮಿ ಖರೀದಿ ಸಾಲಕ್ಕೆ ವೈವಿಧ್ಯಮಯ ಮರುಪಾವತಿ ಆಯ್ಕೆಗಳನ್ನು ನೀಡುತ್ತದೆ:
- ತ್ರೈಮಾಸಿಕ ಆಯ್ಕೆ: ಮೂರು ತಿಂಗಳಿಗೆ ಒಮ್ಮೆ ಕಂತು ಪಾವತಿ. ಬೆಳೆಯ ಹಂಗಾಮು/ಆದಾಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಆಯ್ಕೆ ಮಾಡಿಕೊಳ್ಳಬಹುದು.
- ಅರ್ಧವಾರ್ಷಿಕ ಆಯ್ಕೆ: ಆರು ತಿಂಗಳಿಗೆ ಒಮ್ಮೆ ಪಾವತಿ. ಬೆಳೆಯ ಅವಧಿಯ ಪ್ರಕಾರ ಅರ್ಧ ವರ್ಷಕ್ಕೊಮ್ಮೆ ಕೂಡ ಕಂತು ಪಾವತಿಗೆ ಅವಕಾಶವಿದೆ.
- ವಾರ್ಷಿಕ ಆಯ್ಕೆ: ಇನ್ನು 12 ತಿಂಗಳಿಗೆ ಒಮ್ಮೆ ಪಾವತಿ ಕೂಡ ಸಾಧ್ಯ. ವರ್ಷಕ್ಕೊಮ್ಮೆ ಕೃಷಿ ಉತ್ಪನ್ನದ ಆದಾಯವನ್ನು ಸದರಿ ಸಾಲ ಮರುಪಾವತಿ ಕಂತಿಗೆ ಬಳಸಿಕೊಳ್ಳಬಹುದು.
ಲೋನ್ ಪಡೆಯಲು ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ (KYC ದೃಢೀಕರಣ)
- ಬ್ಯಾಂಕ್ ಪಾಸ್‌ಬುಕ್ / ಖಾತೆ ವಿವರಗಳು
- ಪಾನ್ ಕಾರ್ಡ್
- ಪೋಟೊ (Passport size)
- ಆದಾಯ ತೆರಿಗೆ ಪಾವತಿ ರಸೀದಿ (ಲಭ್ಯವಿದ್ದರೆ)
- ಖರೀದಿಸಲು ಉದ್ದೇಶಿಸಿರುವ ಭೂಮಿಯ ದಾಖಲೆಗಳು
- ಇತರೆ ಕಾನೂನುಬದ್ಧ ದಾಖಲೆಗಳು (ಬ್ಯಾಂಕ್ ಕೇಳುವಂತೆ)
ಅರ್ಜಿ ಸಲ್ಲಿಸುವ ವಿಧಾನ
ನೇರ ಅರ್ಜಿ: ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಶಾಖಾಧಿಕಾರಿಗಳ ಸಹಾಯದಿಂದ ಸಾ ಮಂಜೂರಾತಿ ಪ್ರಕ್ರಿಯೆ ನಡೆಯುತ್ತದೆ.
ಆನ್‌ಲೈನ್ ಅರ್ಜಿ: ನಾವು ಈ ಲೇಖನದ ಕೊನೆಯಲ್ಲಿ ನೀಡಿರುವ ಕರ್ನಾಟಕ ಬ್ಯಾಂಕ್ ಅಧಿಕೃತ ಜಾಲತಾಣ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಬ್ಯಾಂಕ್ ವೆಬ್‌ಸೈಟ್ ಮೂಲಕ ಅರ್ಜಿ ವಿವರಗಳನ್ನು ಭರ್ತಿ ಮಾಡಿ, ದಾಖಲೆ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
ಕೃಷಿ ಭೂಮಿ ಖರೀದಿಸಲು ಹೆಚ್ಚು ಹಣಕಾಸಿನ ಅಗತ್ಯವಿರುವ ರೈತರು, ಸಂಸ್ಥೆಗಳು ಈ ಯೋಜನೆಯ ಸದುಪಯೋಗ ಪಡೆದು ತಮ್ಮ ಕೃಷಿ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳಬಹುದು. ಸರಳ ನಿಯಮಗಳು, ಸ್ಪಷ್ಟ ದಾಖಲೆ ಪ್ರಕ್ರಿಯೆ ಮತ್ತು ವ್ಯಾಪಕ ಮರುಪಾವತಿ ಆಯ್ಕೆಗಳೊಂದಿಗೆ ಕರ್ನಾಟಕ ಬ್ಯಾಂಕ್ ಕೃಷಿಕರಿಗೆ ನಂಬಿಕೆಯ ಸೇವೆ ಒದಗಿಸಲು ಬದ್ಧವಾಗಿದೆ.
ಟಿಪ್ಪಣಿ: ಈ ಲೇಖನದಲ್ಲಿ ಮಾರ್ಗದರ್ಶಕ ಸ್ವರೂಪದ ಮಾಹಿತಿ ನೀಡಲಾಗಿದೆ. ನಿಖರ ಮಾಹಿತಿಗೆ ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಶಾಖೆ ಅಥವಾ ಅಧಿಕೃತ ವೆಬ್‌ಸೈಟ್ ನೋಡಿ ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ…
ಹೆಚ್ಚಿನ ಮಾಹಿತಿಗೆ ಉಚಿತ ಸಹಾಯವಾಣಿ
- 1800 425 1444
- 1800 572 8031
ಅರ್ಜಿ ಸಲ್ಲಿಕೆ ಲಿಂಕ್: Apply Now

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.