ರಾಜ್ಯ ಸರ್ಕಾರ ಶಿಕ್ಷಕರ ಪಿಂಚಣಿ ಹೆಚ್ಚಳ (Retired Teacher Pension Hike) ಮಾಡಿದ್ದು; ಯಾರಿಗೆ ಎಷ್ಟು ಪಿಂಚಣಿ ಹೆಚ್ಚಳವಾಗಲಿದೆ? ಈ ಸೌಲಭ್ಯ ಯಾವೆಲ್ಲ ನೌಕರರಿಗೆ ಅನ್ವಯವಾಗುತ್ತದೆ? ಇತ್ಯಾದಿ ಮಾಹಿತಿ ಇಲ್ಲಿದೆ…
ರಾಜ್ಯದ ಶಿಕ್ಷಕರು ಹಾಗೂ ಸಿಬ್ಬಂದಿಗೆ ಬಹುದಿನಗಳ ನಿರೀಕ್ಷೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಈವರೆಗೆ ಕಡಿಮೆ ಮೊತ್ತದಲ್ಲಿ ಪಿಂಚಣಿ ಪಡೆದಿದ್ದ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಮಾಸಿಕ ಪಿಂಚಣಿಯಲ್ಲಿ ಬಹುದೊಡ್ಡ ಏರಿಕೆಯನ್ನು ಮಾಡಿದೆ.
ಕರ್ನಾಟಕದ ಅನುದಾನಿತ ಪೂರ್ವ ಪ್ರಾಥಮಿಕ ಶಾಲೆಗಳ ನಿವೃತ್ತ ಶಿಕ್ಷಕರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಬಹುಕಾಲದ ಕನಸು ನನಸಾಗಿದ್ದು, ರಾಜ್ಯ ಸರ್ಕಾರ ಕೊನೆಗೂ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶದ ಮೂಲಕ ಸಾವಿರಾರು ನಿವೃತ್ತ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಮಾಸಿಕ ಪಿಂಚಣಿಯಲ್ಲಿ ಗಣನೀಯವಾದ ಏರಿಕೆ ದೊರಕಲಿದೆ.
KCET Counselling Updates- ಕೆಸಿಇಟಿ ಕೌನ್ಸೆಲಿಂಗ್ ಪ್ರಾರಂಭ | ಹೊಸ ಅಪ್ಡೇಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…
ಹಳೆಯ ಮತ್ತು ಹೊಸ ಪಿಂಚಣಿ ವಿವರ
ನಿವೃತ್ತ ಶಿಕ್ಷಕರು
- ಹಿಂದಿನ ಪಿಂಚಣಿ: ₹11,500
- ನವೀಕರಿಸಿದ ಪಿಂಚಣಿ: ₹19,000
- ಒಟ್ಟು ಏರಿಕೆ: ₹7,500
ಸಹಾಯಕ ಸಿಬ್ಬಂದಿ (ಅಟೆಂಡಂಟ್/ಪೀಯೂನ್)
- ಹಿಂದಿನ ಪಿಂಚಣಿ: ₹9,000
- ನವೀಕರಿಸಿದ ಪಿಂಚಣಿ: ₹15,000
- ಒಟ್ಟು ಏರಿಕೆ: ₹6,000
ಯಾರಿಗೆ ಈ ಪಿಂಚಣಿ ಹೆಚ್ಚಳ ಲಾಭವಾಗಲಿದೆ?
ಈ ಪರಿಷ್ಕೃತ ಪಿಂಚಣಿಯು ವಿಶೇಷವಾಗಿ 1984ರ ಏಪ್ರಿಲ್ 1ರ ಮೊದಲು ಅನುದಾನಿತ ಹಾಗೂ ಅನುಮೋದಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಅನ್ವಯಿಸುತ್ತದೆ. ಈ ಪಿಂಚಣಿಯನ್ನು ರಾಜ್ಯ ಸರ್ಕಾರ ಮಾನ್ಯತೆ ಪಡೆದ ಅನುದಾನಿತ ಶಾಲೆಗಳ ನಿವೃತ್ತ ನೌಕರರಿಗೆ ಮಾತ್ರ ನೀಡಲಿದೆ.

ಎಷ್ಟು ಮಂದಿ ಲಾಭ ಪಡೆಯುತ್ತಾರೆ?
ರಾಜ್ಯ ಸರಕಾರಿ ಅನುದಾನಿತ ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘವು ಕಳೆದ ಹಲವಾರು ವರ್ಷಗಳಿಂದ ಈ ವಿಷಯಕ್ಕೆ ಸಂಬAಧಿಸಿದAತೆ ಸರ್ಕಾರದ ಗಮನ ಸೆಳೆಯಲು ನಿರಂತರ ಹೋರಾಟ ನಡೆಸುತ್ತಿತ್ತು.
- ಅನೇಕ ಬಾರಿ ಧರಣಿ, ಮನವಿ ಪತ್ರ, ಪತ್ರಿಕಾ ಹೇಳಿಕೆಗಳ ಮೂಲಕ ಪಿಂಚಣಿ ಹೆಚ್ಚಳದ ಅಗತ್ಯವನ್ನು ಮುಂದಿಟ್ಟಿದ್ದರು.
- 2024ರ ಕೊನೆಗೆ ಹಾಗೂ 2025ರ ಆರಂಭದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಈ ಬಗ್ಗೆ ವಿವರವಾದ ಮನವಿಯು ಸಲ್ಲಿಸಲಾಗಿತ್ತು.
ಈ ಸುದೀರ್ಘ ಹೋರಾಟಕ್ಕೆ ಇದೀಗ ಫಲ ಸಿಕ್ಕಿದ್ದು, ನಿವೃತ್ತ ನೌಕರರ ಜೀವನಶೈಲಿ ಸುಧಾರಣೆಗೆ ಅನುಕೂಲವಾಗುವಂತೆ ಪಿಂಚಣಿ ಹೆಚ್ಚಳದ ನೆರವು ಸಿಕ್ಕಿದೆ.
ರಾಜ್ಯದಾದ್ಯಂತ ಅನೇಕ ನಿವೃತ್ತ ಶಿಕ್ಷಕರು ಹಾಗೂ ಪೂರಕ ಸಿಬ್ಬಂದಿ ಈ ಪರಿಷ್ಕೃತ ಪಿಂಚಣಿಯಿAದ ಲಾಭ ಪಡೆಯಲಿದ್ದಾರೆ. ಸಾವಿರಾರು ಮಂದಿ ನಿವೃತ್ತ ಶಿಕ್ಷಕರಿಗೆ ತಕ್ಷಣ ಲಾಭವಾಗಲಿದೆ ಎಂದು ಪೂರ್ವ ಪ್ರಾಥಮಿಕ ಶಾಲಾ ಸಿಬ್ಬಂದಿ ಸಂಘ ತಿಳಿಸಿದೆ.
DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?
ನಿವೃತ್ತ ಶಿಕ್ಷಕರಿಗೆ ಇದರ ಪರಿಣಾಮ
- ದಿನನಿತ್ಯದ ಅಗತ್ಯ ಖರ್ಚುಗಳನ್ನು ಪೂರೈಸಲು ಹೆಚ್ಚಿನ ನೆರವು ಲಭ್ಯ.
- ವಯೋಸಹಜವಾಗಿ ಹೆಚ್ಚುವ ವೈದ್ಯಕೀಯ ವೆಚ್ಚಗಳಿಗೆ ಪಿಂಚಣಿಯು ನೆರವಾಗಲಿದೆ.
- ರಾಜ್ಯ ಸರ್ಕಾರದಿಂದ ತಮ್ಮ ಸೇವೆಗೆ ಗೌರವ ದೊರೆತ ನೆಮ್ಮದಿ ಸಿಗಲಿದೆ.
- ನಿವೃತ್ತರು ತಮ್ಮ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಸ್ಥಿತಿಗೆ ಬರುವ ಸಾಧ್ಯತೆ.
ಸರಕಾರದಿಂದ ಇನ್ನಷ್ಟು ನಿರೀಕ್ಷೆಗಳು
ಇದೇ ರೀತಿಯಲ್ಲಿ ಇತರ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು ಕೂಡ ತಮ್ಮ ಪಿಂಚಣಿಯ ಪುನರ್ ಪರಿಶೀಲನೆಗಾಗಿ ಮನವಿ ಸಲ್ಲಿಸುತ್ತಿದ್ದಾರೆ. ಈ ನಿರ್ಧಾರವು ಇತರ ಇಲಾಖೆಗಳಿಗೂ ಮಾದರಿಯಾಗಬಹುದೆಂಬ ನಿರೀಕ್ಷೆಯಿದೆ.
ರಾಜ್ಯ ಸರಕಾರದಿಂದ ಹೊರಡಿಸಲಾದ ಈ ಹೊಸ ಪಿಂಚಣಿ ಪರಿಷ್ಕರಣೆ ಆದೇಶವು ಸಾವಿರಾರು ನಿವೃತ್ತ ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಗೆ ನಿತ್ಯಜೀವನದ ಭದ್ರತೆಯನ್ನು ನೀಡಲಿದ್ದು, ಅವರ ಸೇವೆಗಳಿಗೆ ಸರಕಾರ ನೀಡಿದ ಗೌರವದ ಪ್ರತೀಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ನೌಕರರಿಗೆ ಇದು ಪ್ರೇರಣೆಯಾಗಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.