ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು; ಕೆಲವು ವಿಶೇಷ ವರ್ಗದ ಕುಟುಂಬಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಜನರು ಹೊಸ ಬಿಪಿಎಲ್ (BPL Card) ರೇಷನ್ ಕಾರ್ಡ್ಗಾಗಿ ಕಾಯುತ್ತಿದ್ದಾರೆ. ಈ ಹಿಂದೆ ಕೆಲ ದಿನಗಳ ವರೆಗೆ ಹೊಸ ಅರ್ಜಿ ಸಲ್ಲಿಕೆ ಸಕ್ರೀಯವಾಗಿದ್ದರೂ, ಇದೀಗ ಸಾಮಾನ್ಯ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಕೆಲ ಗುಂಪುಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಯಾರಿಗೆಲ್ಲ ಅರ್ಜಿ ಸಲ್ಲಿಕೆಗೆ ಅವಕಾಶವಿದೆ?
2025ರ ಮಾರ್ಚ್ 29ರಿಂದ ಜೂನ್ 30ರ ವರೆಗೆ ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸಲು ಈ ಕೆಳಕಂಡ ಕುಟುಂಬಗಳಿಗೆ ಮಾತ್ರ ವಿಶೇಷ ಅವಕಾಶ ಕಲ್ಪಿಸಲಾಗಿದೆ:
- ಇ-ಶ್ರಮ್ ಕಾರ್ಡ್ (e-Shram Card) ಹೊಂದಿರುವ ಕಾರ್ಮಿಕ ಕುಟುಂಬಗಳು
- ಎಸ್‌ಆರ್‌ಸಿ (NRC-National Register of Citizens) ರಾಷ್ಟ್ರೀಯ ನಾಗರಿಕ ನೋಂದಣಿ ಹೊಂದಿದ ಕುಟುಂಬಗಳು
- ಪಿವಿಟಿಜಿ (PVTG-Particularly Vulnerable Tribal Groups) ವಿಶೇಷ ದುರ್ಬಲ ಬುಡಕಟ್ಟು ಸಮುದಾಯದ ಕುಟುಂಬಗಳು
ಇವರಿಗೆ ತುರ್ತು ಸಿಗುತ್ತೆ ಬಿಪಿಎಲ್ ಕಾರ್ಡ್
ಮೇಲ್ಕಾಣಿಸಿದ ಮೂರು ಗುಂಪಿನ ಕುಟುಂಬಗಳ ಹೊರತಾಗಿ, ಗಂಭೀರ ಕಾಯಿಲೆಯಿಂದ ಬಳಲುವವರಿಗೂ ಕೂಡ ತಕ್ಷಣವೇ ಬಿಪಿಎಲ್ ಕಾರ್ಡ್ ನೀಡಲು ಅವಕಾಶ ನೀಡಲಾಗಿದೆ. ಅರ್ಹ ಕಾಯಿಲೆಗಳ ಪಟ್ಟಿ ಹೀಗಿದೆ:
- ಕ್ಯಾನ್ಸರ್
- ಕಿಡ್ನಿ ವೈಫಲ್ಯ / ಡಯಾಲಿಸಿಸ್
- ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ
- ಪ್ಯಾರಾಲಿಸಿಸ್ (ಅಂಗಾಂಗ ನಿಷ್ಕ್ರಿಯತೆ)
- ತೀವ್ರ ಶ್ವಾಸಕೋಶ ಕಾಯಿಲೆಗಳು
ಆದರೆ, ಸಾಮಾನ್ಯ ಜ್ವರ, ತಲೆ ನೋವು, ಹೊಟ್ಟೆ ನೋವು ಮುಂತಾದ ತಾತ್ಕಾಲಿಕ ಸಮಸ್ಯೆಗಳಿಗೆ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಮನೆ ಬಾಡಿಗೆ ದಾಖಲೆ ಅಥವಾ ಆಸ್ತಿ ದಾಖಲೆ
- ಸರ್ಕಾರಿ ವೈದ್ಯರಿಂದ ನೀಡಲಾದ ಆರೋಗ್ಯ ಪ್ರಮಾಣ ಪತ್ರ
- ಅಗತ್ಯವಿದ್ದರೆ ಆಸ್ಪತ್ರೆಯ ದಾಖಲೆಗಳು, ಚಿಕಿತ್ಸೆ ಬಿಲ್ಲು
CBSE 10th 12th Result 2025- ಸಿಬಿಎಸ್‌ಇ SSLC-PUC ಫಲಿತಾಂಶ ಈ ದಿನ ಪ್ರಕಟ | ಮಹತ್ವದ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ವೈದ್ಯರಿಂದ ಅಧಿಕೃತ ಪ್ರಮಾಣ ಪತ್ರ ಪಡೆದು ಮೇಲ್ಕಾಣಿಸಿದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಸಿದ್ಧಪಡಿಸಿಕೊಂಡು ನಿಮ್ಮ ವ್ಯಾಪ್ತಿಯ ಫುಡ್ ಇನ್ಸ್‌ಪೆಕ್ಟರ್ ಅಥವಾ ಪಡಿತರ ಅಂಗಡಿ ಡೀಲರ್‌ನಿಂದ ಸಂಪರ್ಕ ಮಾಡಿ ದಾಖಲಾತಿಗಳನ್ನು ಸಲ್ಲಿಸಬೇಕು.
ದಾಖಲಾತಿ ಸಲ್ಲಿಕೆಯ ನಂತರ ಫುಡ್ ಇನ್ಸ್‌ಪೆಕ್ಟರ್ ಅರ್ಜಿದಾರರ ಮನೆಗೆ ಭೇಟಿ ನೀಡಿ, ಸ್ಥಿತಿ ಪರಿಶೀಲನೆ ನಡೆಸುತ್ತಾರೆ. ವೈದ್ಯಕೀಯ ದಾಖಲೆಗಳ ಪರಿಶೀಲನೆ ಮಾಡುತ್ತಾರೆ.
ಪರಿಶೀಲನೆಯ ಬಳಿಕ, ಫುಡ್ ಇನ್ಸ್‌ಪೆಕ್ಟರ್ ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡುತ್ತಾರೆ. ನಂತರ ಅರ್ಜಿ ಆಹಾರ ಇಲಾಖೆ ಉಪನಿರ್ದೇಶಕರು, ಆಯುಕ್ತರಿಗೆ ಕಳುಹಿಸಿ ಅಂತಿಮ ಅನುಮೋದನೆ ಪಡೆಯಲಾಗುತ್ತದೆ. ಎಲ್ಲಾ ಹಂತಗಳು ಪೂರೈಸಿದರೆ, ಕೇವಲ 1 ದಿನದಲ್ಲಿ ಅರ್ಜಿದಾರರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.
Karnataka Weather Yellow Alert- ಭರ್ಜರಿ ಮಳೆ | ರಾಜ್ಯದ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಸುಳ್ಳು ದಾಖಲೆ ನೀಡಿದವರಿಗೆ ಎಚ್ಚರಿಕೆ!
ಈ ಹಿಂದೆ ಸಾವಿರಾರು ಜನರು ಸುಳ್ಳು ವೈದ್ಯಕೀಯ ದಾಖಲೆಗಳನ್ನು ನೀಡಿ ಕಾರ್ಡ್ ಪಡೆದುಕೊಂಡಿದ್ದರು. ಈಗ ಸರ್ಕಾರ ಈ ರೀತಿಯ ಎಲ್ಲ ಕಾರ್ಡ್’ಗಳನ್ನು ಪರಿಶೀಲಿಸಿ, ಇಂತಹ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ. ಮಾತ್ರವಲ್ಲ ಸುಳ್ಳು ಮಾಹಿತಿಯುಳ್ಳ ಅರ್ಜಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ತುರ್ತು ರೇಷನ್ ಕಾರ್ಡ್ ಪಡೆಯಲು ಸ್ಥಳೀಯ ಪಡಿತರ ಅಂಗಡಿ ಹಾಗೂ ತಾಲೂಕಾ ಆಹಾರ ಇನ್‌ಸ್ಪೆಕ್ಟರ್ ಕಚೇರಿ ಭೇಟಿ ಮಾಡಿ. ಹೆಚ್ಚಿನ ಮಾಹಿತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವೆಬ್‌ಸೈಟ್ ahara.karnataka.gov.inಗೆ ಭೇಟಿ ನೀಡಿ.
ಅರ್ಜಿ ಲಿಂಕ್: Click Here
PM Surya Ghar Free Solar Power- ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.