UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ

Spread the love

ಯುಪಿಐ (UPI – Unified Payments Interface) ಪಾವತಿಗಳನ್ನು ವೇಗವಾಗಿಸಲು ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮ ಜಾರಿಗೊಳಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಡಿಜಿಟಲ್ ಪಾವತಿಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮ ಜಾರಿಯಾಗುತ್ತಿದೆ. ಈ ಕ್ರಮದಿಂದಾಗಿ ಭಾರತದ ಯುಪಿಐ (UPI – Unified Payments Interface) ವ್ಯವಸ್ಥೆಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ತನ್ನ ಹೊಸ ಆದೇಶದ ಮೂಲಕ ಯುಪಿಐ ಪಾವತಿ ಅವಧಿಯನ್ನು ಕಡಿಮೆ ಮಾಡಿದ್ದು, ಜೂನ್ 16, 2025ರಿಂದಲೇ ಈ ನಿಯಮ ಜಾರಿಗೆ ಬರಲಿದೆ.

ಈ ಹೊಸ ನಿಯಮದ ಪ್ರಕಾರ, ಗ್ರಾಹಕರು ತಮ್ಮ ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm), ಆಮೆಜಾನ್ ಪೇ (Amazon Pay) ಮೊದಲಾದ ಯುಪಿಐ ಆ್ಯಪ್‌ಗಳ ಮೂಲಕ ಮಾಡುವ ಪಾವತಿಗಳು ಕೇವಲ 15 ಸೆಕೆಂಡುಗಳೊಳಗೆ ಪೂರ್ಣಗೊಳ್ಳಬೇಕು. ಇದುವರೆಗೆ ಈ ಅವಧಿ 30 ಸೆಕೆಂಡುಗಳ ವರೆಗೆ ಇರುತ್ತಿತ್ತು.

CBSE 10th & 12th Result 2025- ಸಿಬಿಎಸ್‌ಇ 10th ಮತ್ತು 12th ಫಲಿತಾಂಶ ಯಾವಾಗ ಪ್ರಕಟವಾಗುತ್ತೇ? CBSE ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಇನ್ಮುಂದೆ ಯುಪಿಐ ಪಾವತಿಗೆ ಶರವೇಗ

NPCI ಜಾರಿಗೆ ತಂದಿರುವ ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಗಳನ್ನು ನವೀಕರಿಸಿ ಯುಪಿಐ ಪಾವತಿಯು 15 ಸೆಕೆಂಡುಗಳೊಳಗೆ ಪೂರೈಕೆ ಆಗುವಂತೆ ಮಾಡಬೇಕು. ಈ ನಿಯಮ ಕೇವಲ ಪಾವತಿ ಪೂರ್ಣಗೊಳ್ಳುವ ಅವಧಿಗೆ ಮಾತ್ರ ಸೀಮಿತವಾಗಿಲ್ಲ.

ಹಿಂದಿನಂತೆ ತಾಂತ್ರಿಕ ಸಮಸ್ಯೆಗಳು ಮರುಕಳಿಸದಂತೆ ಇನ್ನುಮುಂದೆ ಯುಪಿಐ ವಹಿವಾಟಿನ ವಿಳಂಬವನ್ನು ತಡೆಯಲಾಗುವುದು. ಇತ್ತೀಚೆಗಷ್ಟೇ ಯುಪಿಐ ಸರ್ವರ್ ಮೂರು ಬಾರಿ ಡೌನ್ ಆಗಿದ್ದ ಪರಿಣಾಮ ಲಕ್ಷಾಂತರ ಗ್ರಾಹಕರಿಗೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ NPCI ನಿದರ್ಶನಾತ್ಮಕ ಕ್ರಮವಾಗಿ ಈ ಹೊಸ ನಿರ್ಧಾರ ಕೈಗೊಂಡಿದೆ.

ಯುಪಿಐ ಪಾವತಿಗಳನ್ನು ವೇಗವಾಗಿಸಲು ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮ ಜಾರಿಗೊಳಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
UPI Payment New Rule 2025

Karnataka New Ration Card- ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ರೆಡಿ | ಆಹಾರ ಸಚಿವರ ಸೂಚನೆ | ಹೊಸ ಅರ್ಜಿ ಆಹ್ವಾನಕ್ಕೆ ಸಿದ್ಧತೆ

ವಹಿವಾಟು ಸ್ಥಿತಿ, ರಿವರ್ಸ್ ಟ್ರಾನ್ಸಾಕ್ಷನ್‌ಗಳಿಗೂ ಹೊಸ ಕಾಲಮಿತಿ

ವಹಿವಾಟಿನ ಸ್ಥಿತಿ (Transaction Status Update): ಬಳಕೆದಾರರು ವಹಿವಾಟು ಮಾಡಿದ ನಂತರ ಅದರ ಸ್ಥಿತಿ ತಕ್ಷಣವೇ ಅಪ್ಡೇಟ್ ಆಗಬೇಕು. ಈ ವೇಳೆ ದೋಷವೊಂದು ಉಂಟಾದರೆ ಅಥವಾ ಪಾವತಿ ವಿಳಂಬವಾಗಿದೆಯೆAಬ ಮಾಹಿತಿ ಕೂಡ ತ್ವರಿತವಾಗಿ ದೊರಕಬೇಕಾಗಿದೆ.

ಹಣ ಹಿಂದಿರುಗಿಸುವ ವಹಿವಾಟು (Reversal Transactions): ಪಾವತಿ ವಿಫಲವಾದ ಸಂದರ್ಭಗಳಲ್ಲಿ ಬಾಕಿಯಿರುವ ಹಣವನ್ನು ಹಿಂದಿರುಗಿಸಲು ಈಗ 30 ಸೆಕೆಂಡು ಬದಲು 10 ಸೆಕೆಂಡುಗಳಲ್ಲೇ ಪ್ರಕ್ರಿಯೆ ಪೂರ್ತಿಯಾಗಬೇಕು.

ಗ್ರಾಹಕರಿಗೆ ಸಿಗುವ ಪ್ರಮುಖ ಲಾಭಗಳು
  • ಅತ್ಯಂತ ವೇಗದ ಸೇವೆ: ಇನ್ಮುಂದೆ ಯಾವುದೇ ತೊಂದರೆ ಇಲ್ಲದೇ ಪಾವತಿ ತಕ್ಷಣವಾಗುತ್ತದೆ. ಪ್ರಯಾಣದಲ್ಲಿರಲಿ ಅಥವಾ ವ್ಯಾಪಾರ ವಹಿವಾಟು ನಡೆಯುತ್ತಿರಲಿ, ಯಾವುದು ಕೂಡ ತಡವಾಗದು.
  • ನಿಖರ ಅನುಭವ: ಬ್ಯಾಂಕ್‌ಗಳು ಮತ್ತು ಆ್ಯಪ್‌ಗಳ ಸರ್ವರ್‌ಗಳ ಪ್ರತಿಸ್ಪಂದನವೇ ಹೆಚ್ಚು ಶ್ರೇಷ್ಟವಾಗಬೇಕಾಗಿರುವುದರಿಂದ, ಗ್ರಾಹಕರಿಗೆ ಹೆಚ್ಚು ನಿಖರವಾದ ಅನುಭವ ದೊರೆಯಲಿದೆ.
  • ಪೂರ್ಣ ಪಾರದರ್ಶಕತೆ: ಪಾವತಿ ವಿಫಲವಾದರೂ ಅಥವಾ ವಿಳಂಬವಾದರೂ ತಕ್ಷಣವೇ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಗ್ರಾಹಕರು ತೊಂದರೆಗೆ ಒಳಗಾಗುವುದಿಲ್ಲ.
  • ತಕ್ಷಣ ಹಣ: ಈ ತ್ವರಿತ ವ್ಯವಸ್ಥೆಯಿಂದ ವ್ಯವಹಾರ ಮತ್ತು ಚಿಕ್ಕ ವ್ಯಾಪಾರಿಗಳಿಗೆ ತಕ್ಷಣ ಹಣ ಸಿಗುವಂತಾಗುತ್ತದೆ. ಇದು ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯ ಬಲವರ್ಧನೆಗೆ ಸಹಕಾರಿಯಾಗಲಿದೆ.

Inactive Bank Account Close- ಅನಗತ್ಯ ಬ್ಯಾಂಕ್ ಖಾತೆ ಕ್ಲೋಸ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಬಿಸಿನೆಸ್ ವಹಿವಾಟುಗಳು ಮತ್ತಷ್ಟು ಸುಲಭ

ಎನ್‌ಪಿಸಿಐ ಈ ಬದಲಾವಣೆಯೊಂದಿಗೆ ಯುಪಿಐ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸ್ಪರ್ಧಾತ್ಮಕಗೊಳಿಸಲು ಉದ್ದೇಶಿಸಿದೆ. ವೆಚ್ಚ ಕಡಿಮೆ, ವೇಗ ಜಾಸ್ತಿ ಮತ್ತು ವಿಶ್ವಾಸಾರ್ಹತೆ ಎಂಬ ಮೂರು ಮೂಲಸಿದ್ಧಾಂತಗಳತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಜೊತೆಗೆ, 24×7 ಲಭ್ಯವಿರುವ ಪಾವತಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ಒಂದು ನಿರ್ಧಾರಾತ್ಮಕ ಕ್ರಮವಾಗಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವ ಭಾರತದಲ್ಲಿ, ಈ ಹೊಸ ಯುಪಿಐ ಶರವೇಗ ನಿಯಮಗಳು ಕ್ರಾಂತಿಕಾರಿ ಬದಲಾವಣೆ ತರಲಿವೆ. ಗ್ರಾಹಕರ ಅನುಭವ ಉತ್ತಮಗೊಳ್ಳುವುದು ಮಾತ್ರವಲ್ಲ, ಬಿಸಿನೆಸ್ ವಹಿವಾಟುಗಳು ಸಹ ಮತ್ತಷ್ಟು ಸುಲಭಗೊಳ್ಳಲಿವೆ. ಜೂನ್ 16 ರಿಂದ ಬದಲಾಗುತ್ತಿರುವ ಈ ವ್ಯವಸ್ಥೆಗಳನ್ನು ಎಲ್ಲರೂ ಗಮನಿಸಬೇಕು ಮತ್ತು ತಮ್ಮ ಆ್ಯಪ್‌ಗಳನ್ನು ಅಪ್ಡೇಟ್ ಮಾಡಿಕೊಂಡು ಉಪಯೋಗಿಸಬೇಕು.

Karnataka Govt Employees DA Hike- ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ | ಎಷ್ಟು ಹೆಚ್ಚಳವಾಗಲಿದೆ ಸಂಬಳ? ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
WhatsApp Group Join Now
Telegram Group Join Now
error: Content is protected !!