Anganwadi Nemakati Karnataka 2024 : ರಾಜ್ಯದ ವಿವಿಧ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವಂತಹ ಅಂಗನವಾಡಿ ಕೇಂದ್ರಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಪಾಸಾದವರಿಗೆ ಅಂಗನವಾಡಿ ಕಾರ್ಯಕರ್ತೆ (Anganawadi workers) ಹಾಗೂ ಅಂಗನವಾಡಿ ಸಹಾಯಕಿ (Anganwadi assistants) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವ ಅಭ್ಯರ್ಥಿಗಳು ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ಲಿಂಕ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ…
ಈಗಾಗಲೇ ಉತ್ತರ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹಾವೇರಿ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶಿವಮೊಗ್ಗ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಎಲ್ಲಾ ತಾಲೂಕುಗಳ ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಜೂನ್-ಜುಲೈ ಎರಡು ಕಂತಿನ ಹಣ ಒಟ್ಟಿಗೆ ಜಮಾ | ಈ ದಿನ ಸಿಗುತ್ತೆ ₹4000 Gruha Lakshmi Scheme Money Deposit
ಅಂಗನವಾಡಿ ನೇಮಕಾತಿ ಸಂಕ್ಷಿಪ್ತ ವಿವರ
- ನೇಮಕಾತಿ ಇಲಾಖೆ : ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
- ಹುದ್ದೆಗಳ ಸಂಖ್ಯೆ : 575 ಹುದ್ದೆಗಳು
- ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
- ಉದ್ಯೋಗ ಸ್ಥಳ : ಶಿವಮೊಗ್ಗ ಜಿಲ್ಲೆ
ಖಾಲಿ ಇರುವ ಹುದ್ದೆಗಳ ವಿವರ :
ಶಿವಮೊಗ್ಗ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 575 ಹುದ್ದೆಗಳು ಖಾಲಿ ಇದ್ದು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ.
- ಅಂಗನವಾಡಿ ಸಹಾಯಕಿ : 448 ಹುದ್ದೆಗಳು
- ಅಂಗನವಾಡಿ ಕಾರ್ಯಕರ್ತೆ : 127 ಹುದ್ದೆಗಳು
ಇದನ್ನೂ ಓದಿ: ಹೋಮ್‌ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 10ನೇ ತರಗತಿ ಪಾಸಾದ್ರೆ ಅರ್ಜಿ ಹಾಕಿ Home Guard Recruitment Shivamogga
ಎಲ್ಲೆಲ್ಲಿ ಖಾಲಿ ಇದೆ ಹುದ್ದೆಗಳು?
- ಶಿವಮೊಗ್ಗ: ಕಾರ್ಯಕರ್ತೆಯರು 34, ಸಹಾಯಕಿಯರು 118
- ಭದ್ರಾವತಿ: ಕಾರ್ಯಕರ್ತೆಯರು 10, ಸಹಾಯಕಿಯರು 72
- ಹೊಸನಗರ: ಕಾರ್ಯಕರ್ತೆಯರು 07, ಸಹಾಯಕಿಯರು 35
- ಸಾಗರ: ಕಾರ್ಯಕರ್ತೆಯರು 21, ಸಹಾಯಕಿಯರು 62
- ಶಿಕಾರಿಪುರ: ಕಾರ್ಯಕರ್ತೆಯರು 08, ಸಹಾಯಕಿಯರು 55
- ಸೊರಬ: ಕಾರ್ಯಕರ್ತೆಯರು 38, ಸಹಾಯಕಿಯರು 65
- ತೀರ್ಥಹಳ್ಳಿ: ಕಾರ್ಯಕರ್ತೆಯರು 09, ಸಹಾಯಕಿಯರು 41

ಯಾರೆಲ್ಲ ಅರ್ಜಿ ಸಲ್ಲಿಸಬಹುದು?
19 ರಿಂದ 35 ವರ್ಷ ವಯೋಮಿತಿ ಒಳಗಿರುವ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ದೈಹಿಕ ಅಂಗವಿಕಲತೆ ಪ್ರಮಾಣ ಶೇ.40ಕ್ಕಿಂತ ಕಡಿಮೆ ಇರುವ ಅಂಗವಿಕಲ ಅಭ್ಯರ್ಥಿಗಳು ಕೂಡ ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು; ಇವರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿದ ಅರ್ಹ ಮಹಿಳೆಯರು ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಎರಡೂ ಹುದ್ದೆಗಳ ವಿದ್ಯಾರ್ಹತೆ ಈ ಕೆಳಗಿನಂತಿದೆ:
- ಅಂಗನವಾಡಿ ಕಾರ್ಯಕರ್ತೆ : 12ನೇ ತರಗತಿ ಪಾಸ್
- ಅಂಗನವಾಡಿ ಸಹಾಯಕಿ : 10ನೇ ತರಗತಿ ಪಾಸ್
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 29 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ ಹಾಗೂ ಸಂಬ೦ಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು
- ವಿದ್ಯಾರ್ಹತೆ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಜನನ ಪ್ರಮಾಣ ಪತ್ರ ಅಥವಾ ವಯಸ್ಸಿನ ದೃಢೀಕರಣಕ್ಕಾಗಿ ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ
- ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರ
- ಆತ್ಮಹತ್ಯೆ ಮಾಡಿಕೊಂಡ ರೈತರ ಹೆಂಡತಿ ಆಗಿದ್ದಲ್ಲಿ ಸ್ಥಳೀಯ ಎಸಿ ಅವರಿಂದ ಪಡೆದ ಪ್ರಮಾಣ ಪತ್ರ
- ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ
ಈ ಎಲ್ಲ ಅಗತ್ಯ ದಾಖಲೆ ಪತ್ರಗಳನ್ನು ಹೊಂದಿರುವ ಅಭ್ಯರ್ಥಿಗಳು ಅವುಗಳನ್ನು ಸ್ಕ್ಯಾನ್ ಮಾಡಿದ ಸಾಫ್ಟ್ ಕಾಫಿ ರೆಡಿ ಮಾಡಿಟ್ಟುಕೊಂಡರೆ ಆಗ ಆರ್ಜಿ ಸಲ್ಲಿಕೆ ಸುಲಭವಾಗುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ :
29-08-2024
ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್ : Apply Now
ರಾಜ್ಯದ ಇನ್ನುಳಿದ ಜಿಲ್ಲೆಗಳ ನೇಮಕಾತಿ ಕುರಿತ ನಿರಂತರ ಅಪ್ಡೇಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.