ಪಿಯುಸಿ, ಪದವಿ, ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ ಹಾಗೂ ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ₹15,000 ದಿಂದ ₹1 ಲಕ್ಷ ವರೆಗೆ ಟಾಟಾ ಸ್ಕಾಲರ್‌ಶಿಪ್ (Tata Capital Pankh Scholarship 2025-26) ನೀಡಲು ಅರ್ಜಿ ಆಹ್ವಾನಿಸಿದೆ…
ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರತಿಷ್ಠಿತ ಟಾಟಾ ಗ್ರೂಪ್ ಮತ್ತೊಮ್ಮೆ ಕೈಜೋಡಿಸಿದ್ದು, ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮ 2025-26ಕ್ಕೆ ಅರ್ಜಿ ಆಹ್ವಾನಿಸಿದೆ.
ಪಿಯುಸಿ, ಸಾಮಾನ್ಯ ಪದವಿ, ಪಾಲಿಟೆಕ್ನಿಕ್, ಡಿಪ್ಲೊಮಾ, ಐಟಿಐ ಹಾಗೂ ವೃತ್ತಿಪರ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಮೂಲಕ 15,000 ರೂ. ದಿಂದ ಗರಿಷ್ಠ 1 ಲಕ್ಷ ರೂ. ವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ.
ಏನಿದು ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ?
ದೇಶದ ಪ್ರತಿಷ್ಠಿತ ಟಾಟಾ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬಲ ತುಂಬುವುದು, ಮಧ್ಯದಲ್ಲಿ ಓದು ನಿಲ್ಲಿಸದಂತೆ ನೆರವು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ಸಿಗಲಿದೆ?
2025-26ನೇ ಸಾಲಿನಲ್ಲಿ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನವನ್ನು ಮೂರು ವಿಭಾಗಗಳಲ್ಲಿ ನೀಡಲಾಗುತ್ತಿದೆ:
- ಪಿಯುಸಿ (11 ಮತ್ತು 12ನೇ ತರಗತಿ) ವಿದ್ಯಾರ್ಥಿಗಳಿಗೆ
- ಸಾಮಾನ್ಯ ಪದವಿ / ಪಾಲಿಟೆಕ್ನಿಕ್ / ಡಿಪ್ಲೊಮಾ / ಐಟಿಐ ವಿದ್ಯಾರ್ಥಿಗಳಿಗೆ
- ವೃತ್ತಿಪರ ಪದವಿ (Professional Courses) ವಿದ್ಯಾರ್ಥಿಗಳಿಗೆ
ಪ್ರತಿ ವಿಭಾಗದ ಅರ್ಹತೆ ಮತ್ತು ವಿದ್ಯಾರ್ಥಿವೇತನ ಮೊತ್ತ ಬೇರೆಬೇರೆಯಾಗಿದ್ದು ಈ ಕೆಳಗಿನಂತಿದೆ:
1. ಪಿಯುಸಿ ವಿದ್ಯಾರ್ಥಿಗಳಿಗೆ
ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು; ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 11 ಅಥವಾ 12ನೇ ತರಗತಿಗೆ ಪ್ರವೇಶ ಪಡೆದಿರಬೇಕು.
ಅರ್ಹತೆ: ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು
ಸಿಗುವ ಆರ್ಥಿಕ ನೆರವು
- 60% – 80% ಅಂಕ ಪಡೆದವರಿಗೆ: 10,000 ರೂ.
- 81% – 90% ಅಂಕ ಪಡೆದವರಿಗೆ: 12,000 ರೂ.
- 91% ಮತ್ತು ಹೆಚ್ಚು ಅಂಕ ಪಡೆದವರಿಗೆ: 15,000 ರೂ.
2 ಸಾಮಾನ್ಯ ಪದವಿ / ಪಾಲಿಟೆಕ್ನಿಕ್ / ಡಿಪ್ಲೊಮಾ / ಐಟಿಐ ವಿದ್ಯಾರ್ಥಿಗಳಿಗೆ
ಬಿ.ಎ., ಬಿ.ಕಾಂ, ಬಿ.ಎಸ್ಸಿ, ಡಿಪ್ಲೊಮಾ, ಐಟಿಐ ಕೋರ್ಸ್ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ
ಅರ್ಹತೆ: ಮಾನ್ಯತೆ ಪಡೆದ ಕಾಲೇಜು ಅಥವಾ ಸಂಸ್ಥೆಯಲ್ಲಿ ಓದುತ್ತಿರಬೇಕು. ಹಿಂದಿನ ತರಗತಿ ಅಥವಾ ಸೆಮಿಸ್ಟರ್‌ನಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು
ಸಿಗುವ ಆರ್ಥಿಕ ನೆರವು
- 60% – 80% ಅಂಕ: 12,000 ರೂ.
- 81% – 90% ಅಂಕ: 15,000 ರೂ.
- 91% ಮತ್ತು ಹೆಚ್ಚು ಅಂಕ: 18,000 ರೂ.

3. ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ (Professional Degree)
ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್‌ಮೆಂಟ್ ಮುಂತಾದ ವೃತ್ತಿಪರ ಕೋರ್ಸ್’ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ದೊಡ್ಡ ಸಹಾಯವಾಗಲಿದೆ.
ಅರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು. ವಿದ್ಯಾರ್ಥಿ ಭಾರತೀಯ ಪ್ರಜೆ ಆಗಿರಬೇಕು. ಕನಿಷ್ಠ 80% ಅಂಕ ಪಡೆದಿರಬೇಕು.
ಸಿಗುವ ಆರ್ಥಿಕ ನೆರವು
ಬೋಧನಾ ಶುಲ್ಕದ 80% ವರೆಗೆ ಗರಿಷ್ಠವಾಗಿ 1 ಲಕ್ಷ ರೂಪಾಯಿ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಇದನ್ನೂ ಓದಿ: Egg Cancer Rumors Fact Check- ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? | ವಾಸ್ತವ ಏನು, ವದಂತಿ ಏನು?
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವಾಗ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು:
- ಆಧಾರ್ ಕಾರ್ಡ್
- ಶಾಲೆ/ಕಾಲೇಜಿನ ಪ್ರವೇಶ ಪತ್ರ
- ಪ್ರಸ್ತುತ ಸಾಲಿನ ಶುಲ್ಕ ರಶೀದಿ
- ಹಿಂದಿನ ತರಗತಿ ಅಂಕಪಟ್ಟಿ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್‌ಬುಕ್
- ಪಾಸ್‌ಪೋರ್ಟ್ ಸೈಜ್ ಫೋಟೋ
ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿಧಾನ
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಆಗಿದೆ. ಹಂತ ಹಂತದ ವಿವರ ಇಲ್ಲಿದೆ:
ಹಂತ 1: ಮೊದಲು ಅಧಿಕೃತ ಸ್ಕಾಲರ್‌ಶಿಪ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅದರ ಲಿಂಕ್ ಲೇಖನದ ಕೊನೆಯಲ್ಲಿ ನೀಡಿದೆ ಗಮನಿಸಿ.
ಹಂತ 2: ಮುಖಪುಟದಲ್ಲಿ ಕಾಣಿಸುವ Apply Now ಅಥವಾ Register ಬಟನ್ ಮೇಲೆ ಕ್ಲಿಕ್ ಮಾಡಿ. ಹೊಸ ಬಳಕೆದಾರರಾದ ವಿದ್ಯಾರ್ಥಿಗಳು ತಮ್ಮ User ID ಮತ್ತು Password ರಚಿಸಿಕೊಂಡು ಹೊಸ ಖಾತೆಯನ್ನು ಸೃಷ್ಟಿಸಬೇಕು. ನಂತರ Login ಮಾಡಿ ಒಳಗೆ ಪ್ರವೇಶಿಸಬೇಕು.
ಹಂತ 3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾಗಿರುವ ವೈಯಕ್ತಿಕ ಮಾಹಿತಿ, ವಿಳಾಸ, ಅಂಕಗಳು, ಬ್ಯಾಂಕ್ ವಿವರಗಳು ಮುಂತಾದ ಮಾಹಿತಿಗಳನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಕೊನೆಯಲ್ಲಿ ‘Submit’ ಬಟನ್ ಒತ್ತಬೇಕು.
ಇದನ್ನೂ ಓದಿ:
ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ದೃಢೀಕರಣ ಸಂದೇಶ ಬರುತ್ತದೆ. ನಂತರ ಸಂಸ್ಥೆ ಪರಿಶೀಲನೆ ನಡೆಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ.
ಪಿಯುಸಿ, ಪದವಿ ಅಥವಾ ವೃತ್ತಿಪರ ಶಿಕ್ಷಣ ಓದುತ್ತಿರುವ ನೀವು ಅಥವಾ ನಿಮ್ಮ ಪರಿಚಯದ ವಿದ್ಯಾರ್ಥಿಗಳು ಅರ್ಹರಾಗಿದ್ದರೆ, ಈ ಅವಕಾಶವನ್ನು ಕೈಚೆಲ್ಲದೇ ತಕ್ಷಣವೇ ಅರ್ಜಿ ಸಲ್ಲಿಸಿ. ಒಂದು ಸಣ್ಣ ಪ್ರಯತ್ನ ನಿಮ್ಮ ದೊಡ್ಡ ಕನಸಿಗೆ ದಾರಿ ಮಾಡಿಕೊಡಬಹುದು.
- ಅರ್ಜಿ ಕೊನೇ ದಿನಾಂಕ: 26 ಡಿಸೆಂಬರ್ 2025
- ಅರ್ಜಿ ಲಿಂಕ್: Apply Now
Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ