ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಈಚೆಗೆ ಹೆಚ್ಚು ಜನಪ್ರಿಯವಾಗುತಿದ್ದು; ಈ ಯೋಜನೆಯಲ್ಲಿ ಮಗಳ ಮದುವೆ, ಶಿಕ್ಷಣಕ್ಕೆ ದೊಡ್ಡ ಮೊತ್ತದ ಹಣ ಪಡೆಯುವ ಅವಕಾಶವಿದೆ. ಈ ಯೋಜನೆಯ ಪೂರ್ಣ ಮಾಹಿತಿ ಇಲ್ಲಿದೆ…
ಹೆಣ್ಣು ಮಗುವಿನ ಜನನದೊಂದಿಗೆ ಪಾಲಕರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಒಂದೇ ‘ನಮ್ಮ ಮಗಳ ಭವಿಷ್ಯ ಆರ್ಥಿಕವಾಗಿ ಸುರಕ್ಷಿತವಾಗಿರಬೇಕಲ್ಲವೇ?’ ಎಂಬುವುದು.
ಇAದಿನ ದುಬಾರಿ ಶಿಕ್ಷಣ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಭವಿಷ್ಯದ ಅನಿಶ್ಚಿತತೆಗಳ ನಡುವೆಯೇ, ಮಗಳ ಕನಸುಗಳಿಗೆ ಗಟ್ಟಿಯಾದ ಆಧಾರ ಒದಗಿಸುವುದೇ ಪ್ರತಿಯೊಬ್ಬ ಪಾಲಕರ ಕನಸು.
ಈ ಕನಸಿಗೆ ಭದ್ರತೆ ನೀಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ 2015ರಲ್ಲಿ ಸುಕನ್ಯಾ ಸಮೃದ್ಧಿ (Sukanya Samriddhi Yojana – SSY) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿದೆ.
ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ
Sukanya Samriddhi Yojana ಎಂದರೇನು?
ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವುದು ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಮಾತ್ರ ಮೀಸಲಾದ ಸಣ್ಣ ಉಳಿತಾಯ ಯೋಜನೆ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದಾಗಿದೆ.
ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣಕಾಸಿನ ಭದ್ರತೆ ಒದಗಿಸುವುದು, ವಿವಾಹದ ಸಮಯದಲ್ಲಿ ಆರ್ಥಿಕ ಹೊರೆ ಕಡಿಮೆ ಮಾಡುವುದು ಹಾಗೂ ಪಾಲಕರಲ್ಲಿ ಉಳಿತಾಯದ ಅಭ್ಯಾಸ ಬೆಳೆಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ: Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ
Who Is Eligible? – ಯಾರು ಖಾತೆ ತೆರೆಯಬಹುದು?
10 ವರ್ಷ ತುಂಬದ ಹೆಣ್ಣು ಮಗುವಿನ ಪೋಷಕರು ಅಥವಾ ಕಾನೂನು ಪಾಲಕರು ಈ ಸುಕನ್ಯಾ ಸಮೃದ್ಧಿ ಖಾತೆ ತೆರೆದು ಹಣ ಹೂಡಿಕೆ ಮಾಡಬಹುದಾಗಿದೆ.
ಒಂದು ಕುಟುಂಬಕ್ಕೆ ಗರಿಷ್ಠ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅವಕಾಶವಿದೆ. ಅವಳಿ, ತ್ರಿವಳಿ ಮಕ್ಕಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: Govt Employee Pension Withholding- ಇಂಥ ಸರ್ಕಾರಿ ನೌಕರರ ಪಿಂಚಣಿ ಮುಟ್ಟುಗೋಲು: ಹೊಸ ಕಠಿಣ ನಿಯಮ ಜಾರಿ
Investment Limits – ಹೂಡಿಕೆ ಮಿತಿಗಳು ಏನು?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಬಹಳ ಸುಲಭವಾಗಿದ್ದು, ಎಲ್ಲ ವರ್ಗದ ಜನರಿಗೆ ಹೊಂದಿಕೊಳ್ಳುತ್ತದೆ.
- ವರ್ಷಕ್ಕೆ ಕನಿಷ್ಠ ಹೂಡಿಕೆ: ₹250
- ವರ್ಷಕ್ಕೆ ಗರಿಷ್ಠ ಹೂಡಿಕೆ: ₹1.5 ಲಕ್ಷ
- ಹೂಡಿಕೆ ಅವಧಿ: ಮೊದಲ 15 ವರ್ಷಗಳು
- ಮೆಚೂರಿಟಿ: 21 ವರ್ಷಗಳ ನಂತರ
ಅಂದರೆ, ನೀವು 15 ವರ್ಷ ಮಾತ್ರ ಹಣ ಹೂಡಿದರೂ, ನಿಮ್ಮ ಹಣ 21 ವರ್ಷಗಳ ಕಾಲ ಚಕ್ರಬಡ್ಡಿಯೊಂದಿಗೆ ಬೆಳೆಯುತ್ತದೆ.
ಇದನ್ನೂ ಓದಿ: Gold Price Rs.1.54 Lakh- ಚಿನ್ನದ ಬೆಲೆ ಈಗ 1.54 ಲಕ್ಷ ರೂ. | ಒಂದೇ ದಿನಕ್ಕೆ 5020 ರೂ ಜಂಪ್!
2026 Interest Rate Advantage – 2026ರ ಬಡ್ಡಿದರ ದೊಡ್ಡ ಪ್ಲಸ್ ಪಾಯಿಂಟ್
2026ರ ಸಾಲಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ. 8.2% ಬಡ್ಡಿದರ ನಿಗದಿಯಾಗಿದೆ. ಈ ಬಡ್ಡಿದರವು ಬ್ಯಾಂಕ್‌ಗಳ ಸ್ಥಿರ ಠೇವಣಿ (FD) ಹಾಗೂ ಸಾರ್ವಜನಿಕ ಭವಿಷ್ಯ ನಿಧಿ (PPF) ಇವೆರಡಕ್ಕಿಂತಲೂ ಹೆಚ್ಚಾಗಿದೆ.
ಗಮನಿಸಿ: ಬಡ್ಡಿದರವನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಪರಿಷ್ಕರಿಸುತ್ತದೆ. ಮುಂದಿನ ಮೂರು ತಿಂಗಳಿಗೆ ಈ ಬಡ್ಡಿದರ ಇನ್ನೂ ಹೆಚ್ಚಾದರೂ ಆಶ್ಚರ್ಯವಿಲ್ಲ.

Major Tax Benefits – ತೆರಿಗೆ ವಿಷಯದಲ್ಲಿ ಸುಕನ್ಯಾ ಸಮೃದ್ಧಿ ಸೂಪರ್ ಹಿಟ್!
ಈ ಯೋಜನೆಯು EEE (Exempt–Exempt–Exempt) ವರ್ಗಕ್ಕೆ ಸೇರಿದೆ. ಅಂದರೆ ಹೂಡಿಕೆ ಮಾಡಿದ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ₹1.5 ಲಕ್ಷವರೆಗೆ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಬಡ್ಡಿ ಆದಾಯಕ್ಕೆ ತೆರಿಗೆ ಇಲ್ಲ. ಮೆಚೂರಿಟಿ ಮೊತ್ತಕ್ಕೂ ತೆರಿಗೆ ಇಲ್ಲ. ಇಷ್ಟು ಸಂಪೂರ್ಣ ತೆರಿಗೆ ವಿನಾಯಿತಿ ಇರುವ ಯೋಜನೆಗಳು ಬಹಳ ಕಡಿಮೆ.
ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್
Expected Maturity Amount – ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ?
ಪ್ರಸ್ತುತ 8.2% ಬಡ್ಡಿದರದ ಆಧಾರದಲ್ಲಿ ಅಂದಾಜು ಲೆಕ್ಕಾಚಾರ ಇಲ್ಲಿದೆ:
- ವಾರ್ಷಿಕ ₹1.5 ಲಕ್ಷ ಹೂಡಿಕೆಗೆ ಮೆಚೂರಿಟಿ ಮೊತ್ತ: ₹69.27 ಲಕ್ಷ
- ವಾರ್ಷಿಕ ₹1 ಲಕ್ಷ ಹೂಡಿಕೆಗೆ ಮೆಚೂರಿಟಿ ಮೊತ್ತ: ₹46.18 ಲಕ್ಷ
- ವಾರ್ಷಿಕ ₹50,000 ಹೂಡಿಕೆಗೆ ಮೆಚೂರಿಟಿ ಮೊತ್ತ: ₹23.09 ಲಕ್ಷ
(ಗಮನಿಸಿ: ಪ್ರಸ್ತುತ ಶೇ.8.2ರ ಬಡ್ಡಿದರದ ಆಧಾರದಲ್ಲಿ ಮೇಲಿನ ಲೆಕ್ಕಾಚಾರ ಮಾಡಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರಗಳನ್ನು ಸರಕಾರ ಪರಿಷ್ಕರಿಸುತ್ತದೆ.)
Withdrawal Rules – ಹಣ ಹಿಂಪಡೆಯುವ ನಿಯಮಗಳು
ಉನ್ನತ ಶಿಕ್ಷಣಕ್ಕಾಗಿ: ಮಗಳಿಗೆ 18 ವರ್ಷ ತುಂಬಿದ ನಂತರ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ನಂತರ ಖಾತೆಯಲ್ಲಿರುವ ಮೊತ್ತದ ಗರಿಷ್ಠ 50% ವರೆಗೆ ಹಣ ಹಿಂಪಡೆಯಬಹುದು
ವಿವಾಹ ಅಥವಾ ಪೂರ್ಣ ವಾಪಸಾತಿ: ಖಾತೆ ತೆರೆದು 21 ವರ್ಷ ಪೂರೈಸಿದ ಬಳಿಕ ಸಂಪೂರ್ಣ ಮೊತ್ತ ಪಡೆಯಬಹುದು. ಮಗಳಿಗೆ 18 ವರ್ಷಗಳ ನಂತರ ವಿವಾಹ ನಿಶ್ಚಯವಾದರೆ, ಖಾತೆಯನ್ನು ಅವಧಿಗೂ ಮುನ್ನ ಮುಕ್ತಾಯಗೊಳಿಸಬಹುದು.
How to Open the Account – ಖಾತೆ ತೆರೆಯುವುದು ಹೇಗೆ?
ನೀವು ಸುಲಭವಾಗಿ ಕೆಳಗಿನ ಸ್ಥಳಗಳಲ್ಲಿ ಖಾತೆ ತೆರೆಯಬಹುದು: ಹತ್ತಿರದ ಯಾವುದೇ ಅಂಚೆ ಕಚೇರಿ ಅಥವಾ ಆಯ್ದ ರಾಷ್ಟ್ರೀಕೃತ ಬ್ಯಾಂಕ್‌ಗಳ (SBI, PNB, Bank of Baroda, Canara Bank ಇತ್ಯಾದಿ) ಮೂಲಕ ಸುಲಭವಾಗಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದಾಗಿದೆ.
ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್
Required Documents – ಅಗತ್ಯವಿರುವ ದಾಖಲೆಗಳು
- ಹೆಣ್ಣು ಮಗುವಿನ ಜನ್ಮ ಪ್ರಮಾಣ ಪತ್ರ
- ಪೋಷಕರ ಆಧಾರ್ ಕಾರ್ಡ್
- ಪೋಷಕರ ಪ್ಯಾನ್ ಕಾರ್ಡ್
- ಪೋಷಕರ ಭಾವಚಿತ್ರಗಳು
- ನಿವಾಸದ ದೃಢೀಕರಣ ಪತ್ರ
Start Investing Today – ಇಂದೇ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ
ಸುಕನ್ಯಾ ಸಮೃದ್ಧಿ ಯೋಜನೆ ಕೇವಲ ಒಂದು ಉಳಿತಾಯ ಯೋಜನೆಯಲ್ಲ. ಇದು ನಿಮ್ಮ ಮಗಳ ಶಿಕ್ಷಣ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಗೆ ನೀಡುವ ಜೀವಮಾನ ಉಡುಗೊರೆಯಾಗಿದೆ.
ಇಂದಿನ ಸಣ್ಣ ಹೂಡಿಕೆ, ನಾಳೆ ನಿಮ್ಮ ಮಗಳ ಜೀವನದಲ್ಲಿ ದೊಡ್ಡ ಬೆಂಬಲವಾಗುತ್ತದೆ. ನಿಮ್ಮ ಮಗಳು ಇನ್ನೂ 10 ವರ್ಷದೊಳಗಿನವಳಾಗಿದ್ದರೆ, ಇಂದೇ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ ಅವಳ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಿ.
LIC Smart Pension Plan 2026- ಪತಿ-ಪತ್ನಿಗೆ ಜೀವನಪೂರ್ತಿ ಪಿಂಚಣಿ | ಎಲ್‌ಐಸಿ ಹೊಸ ಯೋಜನೆ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.