
10ನೇ ತರಗತಿ ಪಾಸಾಗಿ, ಮುಂದಿನ ಹಂತದ ಶಿಕ್ಷಣ ಪಡೆಯಲು ಸಾಧ್ಯವಾಗದೇ ಇರುವವರಿಗೆ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಸಮಗ್ರ ಪಟ್ಟಿಯನ್ನು (SSLC Pass Karnataka Govt Jobs) ಇಲ್ಲಿ ನೀಡಲಾಗಿದೆ…
ರಾಜ್ಯದಲ್ಲಿ ಹಲವಾರು ವಿದ್ಯಾರ್ಥಿಗಳು 10ನೇ ತರಗತಿ ತನಕ ಏನೋ ಕಷ್ಟಪಟ್ಟು ಶಿಕ್ಷಣವನ್ನು ಮುಗಿಸುತ್ತಾರೆ. ಆದರೆ, ಬಡತನ, ಕೌಟುಂಬಿಕ ಸಮಸ್ಯೆಗಳು ಹಾಗೂ ಇತರೆ ಹಲವು ಕಾರಣಗಳಿಂದಾಗಿ ಮುಂದಿನ ವಿದ್ಯಾಭ್ಯಾಸ ಮಾಡದೆ ಹಿಂದುಳಿಯುವ ಸನ್ನಿವೇಶಗಳು ಬಹಳಷ್ಟು ಇದೆ.
ಹಲವಾರು ವಿದ್ಯಾರ್ಥಿಗಳು 10ನೇ ತರಗತಿ ಮುಗಿಸಿದ ನಂತರ ಖಾಸಗಿ ಕಂಪನಿಗಳಲ್ಲಿ, ಫ್ಯಾಕ್ಟರಿಗಳಲ್ಲಿ, ಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಥವಾ ಕೃಷಿ ಆಯ್ಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇಂಥವರಿಗೆ ಅಂದರೆ ಕೇವಲ 10ನೇ ತರಗತಿ ಪಾಸಾದವರಿಗೆ ಕೂಡ ರಾಜ್ಯ ಸರ್ಕಾರದ ಹಲವಾರು ಉದ್ಯೋಗಗಳನ್ನು ಪಡೆಯುವ ಅವಕಾಶವಿದ್ದು, ಯಾವ ಯಾವ ಇಲಾಖೆಯ ಯಾವ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ? ಅರ್ಹತೆಗಳೇನು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1. ನ್ಯಾಯಾಲಯಗಳಲ್ಲಿ ಆದೇಶ ಜಾರಿಕಾರರು ಹುದ್ದೆಗಳು
ಇತ್ತೀಚಿಗೆ ಅತಿ ಹೆಚ್ಚು ನೇಮಕ ಮಾಡಿಕೊಳ್ಳುತ್ತಿರುವಂತಹ ‘ಆದೇಶ ಜಾರಿಕಾರರು’ ಹುದ್ದೆಗಳನ್ನು ಇಂಗ್ಲಿಷಿನಲ್ಲಿ Process Server ಎಂದು ಕೂಡ ಕರೆಯಲಾಗುತ್ತದೆ. ಈ ಹುದ್ದೆಗಳ 10ನೇ ತರಗತಿ ಪಾಸಾದವರಿಗಾಗಿ ಇದ್ದು, ಆಯ್ಕೆಯಾದವರಿಗೆ ₹37,900 ರೂಪಾಯಿ ವರಿಗೆ ಮಾಸಿಕ ವೇತನ ಸಿಗಲಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷದ ವಯೋಮಿತಿಯಲ್ಲಿರುವ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಅಥವಾ ವಾಹನ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.

2. ಜವಾನ ಅಥವಾ Peon ಹುದ್ದೆಗಳು
ಜವಾನ್ / Peon – ಈ ಹುದ್ದೆಗಳನ್ನು ಬಹಳಷ್ಟು ಇಲಾಖೆಗಳಲ್ಲಿ ನೇಮಕ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ನ್ಯಾಯಾಲಯಗಳಲ್ಲಿ, ಸಹಕಾರಿ ಬ್ಯಾಂಕಿನಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಸರ್ಕಾರಿ ವಸತಿ ನಿಲಯಗಳಲ್ಲಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಾರೆ.
ಈ ಹುದ್ದೆಗಳು ಕೂಡ ಸರ್ಕಾರಿ ನೌಕರಿ ಹುದ್ದೆಗಳಾಗಿದ್ದು ಕೇವಲ 10ನೇ ತರಗತಿ ಪಾಸಾದವರು ಈ ಉದ್ಯೋಗವನ್ನು ಪಡೆಯಬಹುದು. ಈ ಹುದ್ದೆಗಳಿಗೆ ಕೂಡ ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು 18 ರಿಂದ 35 ವರ್ಷದ ವಯೋಮಿತಿಯಲ್ಲಿರಬೇಕು.
3. ಮೀಸಲು ಪೊಲೀಸ್ ಪೇದೆ ಹುದ್ದೆಗಳು KSRP Constable Jobs
ಇಂಗ್ಲಿಷ್’ನಲ್ಲಿ Karnataka state reserved Police ಎಂದು ಕರೆಯುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೇಬಲ್ ಹುದ್ದೆಗಳಿಗೂ ಕೂಡ ಎಸ್ಸೆಸ್ಸೆಎಲ್ಸಿ ವಿದ್ಯಾರ್ಹತೆ ಸಾಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳು ಗೌರವಾನ್ವಿತ ಹುದ್ದೆಗಳಾಗಿದ್ದು 10ನೇ ತರಗತಿ ಪಾಸಾದವರು ಈ ಉದ್ಯೋಗ ಪಡೆಯಲು ಈಗಿನಿಂದಲೇ ತಯಾರಿ ನಡೆಸಿ.
4. ಸಾರಿಗೆ ನಿಗಮ ಚಾಲಕ ಹುದ್ದೆಗಳು KSRTC Bus Driver Jobs
ಕರ್ನಾಟಕ ರಾಜ್ಯದ ವಿವಿಧ ಸಾರಿಗೆ ಸಂಸ್ಥೆಗಳಾದ KSRTC, KKRTC, BMTC, NWKRTC ಸಾರಿಗೆ ನಿಗಮಗಳಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ 22,000 ರೂಪಾಯಿಗಿಂತಲೂ ಹೆಚ್ಚಿನ ಸಂಬಳವಿರುತ್ತದೆ. ಆದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರಮುಖವಾಗಿ ವಾಹನ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ.
ಇದನ್ನೂ ಓದಿ: KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ
5. ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು Data entry operator Jobs
ಗ್ರಾಮ ಪಂಚಾಯಿತಿಗಳಲ್ಲಿ, ತಾಲೂಕು ಕಚೇರಿಗಳಲ್ಲಿ ಅಥವಾ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕೂಡ ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳು ಅರ್ಜಿ ಸಲ್ಲಿಸಲು ಪ್ರಮುಖವಾಗಿ ಅಭ್ಯರ್ಥಿಗಳ ಹತ್ತನೇ ತರಗತಿ ಪಾಸ್ ಆಗಿ ಕಂಪ್ಯೂಟರ್ ತರಬೇತಿಯನ್ನು ಹೊಂದಿರಬೇಕು. ಹಾಗಿದ್ದರೆ ಮಾತ್ರ ಅರ್ಜಿ ಸಲ್ಲಿಸಬಹುದು. ಆದರೆ ಈ ಹುದ್ದೆಗಳನ್ನು ಹಲವು ಬಾರಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
6. ಅರಣ್ಯ ವೀಕ್ಷಕರು ಹುದ್ದೆಗಳು Forest Watcher Jobs
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಈ ಫಾರೆಸ್ಟ್ ವಾಚರ್ ಅಥವಾ ಅರಣ್ಯ ವೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೂಡ ಅಭ್ಯರ್ಥಿಗಳು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು.
ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ ₹32,600 ರುಪಾಯಿ ಅವರಿಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ 18ರಿಂದ 30 ವರ್ಷದ ವಯೋಮಿತಿಯಲ್ಲಿರಬೇಕು.
ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಹೊರತುಪಡಿಸಿ 10ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಉದ್ಯೋಗಗಳನ್ನು ಕೂಡ ಪಡೆಯಲು ಅವಕಾಶವಿದ್ದು, 10ನೇ ತರಗತಿ ಪಾಸಾದವರಿಗೆ ಇರುವಂತಹ ಕೇಂದ್ರ ಸರ್ಕಾರ ಉದ್ಯೋಗಗಳ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ತಿಳಿಸಲಾಗುವುದು. ಈ ಉದ್ಯೋಗಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗೆ ಅಗತ್ಯವಿರುವ ಲಿಖಿತಪರೀಕ್ಷೆಗೆ ತಯಾರಿ ಹಾಗೂ ದೈಹಿಕ ಪರೀಕ್ಷೆಗೆ ತಯಾರಿಯನ್ನು ಈಗಿನಿಂದಲೇ ಆರಂಭಿಸಿ…
PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…



