ಬೆಂಗಳೂರು ಎಸ್‌ಬಿಐ ಬ್ಯಾಂಕ್ (SBI Recruitment 2026) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಕನ್ನಡ ಬಲ್ಲ ಪದವೀಧರರಿಗೆ ಭರ್ಜರಿ ಉದ್ಯೋಗ ಅವಕಾಶವಾಗಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…
ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ, ವಿಶೇಷವಾಗಿ ಕನ್ನಡ ಬಲ್ಲ ಯುವಜನತೆಗೆ ಇದು ದೊಡ್ಡ ಅವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ವಿವಿಧ ವಲಯಗಳಲ್ಲಿ ಸರ್ಕಲ್ ಬೇಸ್‌ಡ್ ಆಫೀಸರ್‌ಗಳ (CBO) ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟಾರೆ ದೇಶಾದ್ಯಂತ 2,273 ಹುದ್ದೆಗಳು ಲಭ್ಯವಿದ್ದು, ಬೆಂಗಳೂರು ವಲಯಕ್ಕೆ 200 ಹುದ್ದೆಗಳು ಮೀಸಲಾಗಿವೆ. ಸ್ಥಳೀಯ ಭಾಷೆಗೆ ಆದ್ಯತೆ ನೀಡಿರುವುದು ಈ ನೇಮಕಾತಿಯ ಪ್ರಮುಖ ವಿಶೇಷತೆ.
SBI CBO Recruitment ಪ್ರಮುಖ ಮಾಹಿತಿ
- ಹುದ್ದೆಯ ಹೆಸರು: Circle Based Officer (CBO)
- ಒಟ್ಟು ಹುದ್ದೆಗಳು: 2,273
- ಬೆಂಗಳೂರು ವಲಯದ ಹುದ್ದೆಗಳು: 200
- ಉದ್ಯೋಗ ಸ್ಥಳ: ಆಯ್ಕೆಯಾದ ವಲಯದಲ್ಲೇ
- ಅರ್ಜಿ ವಿಧಾನ: ಆನ್‌ಲೈನ್
Kannada Mandatory for Bengaluru Circle – ಬೆಂಗಳೂರು ವಲಯದ ಹುದ್ದೆಗಳಿಗೆ ಕನ್ನಡ ಕಡ್ಡಾಯ
ಬೆಂಗಳೂರು ವಲಯದಲ್ಲಿ ನೇಮಕವಾಗಲು ಕನ್ನಡ ಭಾಷಾ ಪ್ರಾವೀಣ್ಯತೆ ಕಡ್ಡಾಯವಾಗಿದೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅಥವಾ ವಿದ್ಯಾಭ್ಯಾಸದ ಹಂತದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿರುವವರು ಅಥವಾ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು.
ಗಮನಿಸಿ: ಅಭ್ಯರ್ಥಿಗಳು ಒಂದೇ ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಬೇರೆ ರಾಜ್ಯದ ಭಾಷೆ ತಿಳಿದಿದ್ದರೆ ಆ ರಾಜ್ಯದ ವಲಯಕ್ಕೂ ಅರ್ಜಿ ಹಾಕಬಹುದಾಗಿದೆ.
Eligibility & Age Limit – ವಿದ್ಯಾರ್ಹತೆ ಮತ್ತು ವಯೋಮಿತಿ
ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರು. ವೈದ್ಯರು, ಇಂಜಿನಿಯರ್‌ಗಳು, CA, Cost Accountantಗಳಿಗೂ ಅವಕಾಶ ಇದೆ
ಕನಿಷ್ಠ ವಯಸ್ಸು 21 ವರ್ಷವಾಗಿದ್ದು; ವಯಸ್ಸಿನ ಲೆಕ್ಕಾಚಾರ 31 ಡಿಸೆಂಬರ್ 2025ಕ್ಕೆ ಅನ್ವಯಿಸುತ್ತದೆ ಅಭ್ಯರ್ಥಿಗಳು 31-01-2004 ಮತ್ತು 01-01-1996ರ ನಡುವೆ ಜನಿಸಿರಬೇಕು. ಮೀಸಲಾತಿ ವರ್ಗಗಳಿಗೆ 3-5 ವರ್ಷಗಳ ವಯೋಮಿತಿ ವಿನಾಯ್ತಿ ಇದೆ. ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷಗಳವರೆಗೆ ವಿನಾಯ್ತಿ ಇದೆ.
ಇದನ್ನೂ ಓದಿ: ಇನ್ಮುಂದೆ ಬ್ಯಾಂಕ್‌ಗಳಿಗೆ ವಾರದಲ್ಲಿ ಎರಡು ದಿನ ರಜೆ? | ನೌಕರರ ಮುಷ್ಕರಕ್ಕೆ ಬಲ ಸಿಗುವುದೇ? ಸಂಪೂರ್ಣ ಮಾಹಿತಿ ಇಲ್ಲಿದೆ…
Selection Process – ನಾಲ್ಕು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ
ಎಸ್‌ಬಿಐ ಈ ನೇಮಕಾತಿಯನ್ನು ಪಾರದರ್ಶಕ ಮತ್ತು ಹಂತಹಂತದ ಪ್ರಕ್ರಿಯೆಯ ಮೂಲಕ ನಡೆಸಲಿದೆ.
- ಆನ್‌ಲೈನ್ ಪರೀಕ್ಷೆ: ಮೊದಲ ಹಂತದಲ್ಲಿ ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಜ್ಞಾನ & ಆರ್ಥಿಕ ವ್ಯವಸ್ಥೆ, ಕಂಪ್ಯೂಟರ್ ಅಪ್ಟಿಟ್ಯೂಡ್ ವಿಷಯಗಳಿಗೆ ಸಂಬಂಧಿಸಿದಂತೆ 2 ಗಂಟೆ ಅವಧಿಯ ಒಟ್ಟು 120 ಪ್ರಶ್ನೆಗಳ, 120 ಅಂಕಗಳ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್ ಮಾರ್ಕ್ಸ್ ಇಲ್ಲ.
- ವಿವರಣಾತ್ಮಕ ಪರೀಕ್ಷೆ: ಎರಡನೇ ಹಂತದಲ್ಲಿ 2 ಪ್ರಶ್ನೆಗಳು, 50 ಅಂಕಗಳ 30 ನಿಮಿಷ ಅವಧಿಯ ಪತ್ರ ಬರವಣಿಗೆ ಮತ್ತು ಪ್ರಬಂಧ ಕುರಿತ ವಿವರಣಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.
- ಸಂದರ್ಶನ: ಈ ಹಂತದಲ್ಲಿ 50 ಅಂಕಗಳ ಆನ್‌ಲೈನ್ ಮತ್ತು ವಿವರಣಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
- ಸ್ಥಳೀಯ ಭಾಷಾ ಪರೀಕ್ಷೆ: ಬೆಂಗಳೂರು ವಲಯಕ್ಕೆ ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿದ್ದು; ಇಲ್ಲಿ ಅರ್ಹತೆ ಪಡೆದವರನ್ನೇ ಅಂತಿಮ ಆಯ್ಕೆ ಪಟ್ಟಿಗೆ ಸೇರಿಸಲಾಗುತ್ತದೆ.
ಇದನ್ನೂ ಓದಿ: ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್ ನೀಡುವ ಬ್ಯಾಂಕುಗಳ ಪಟ್ಟಿ | ನಿಮ್ಮ ಮನೆ ಕನಸಿಗೆ ಸರಿಯಾದ ಆಯ್ಕೆ ಯಾವುದು?
Free Pre-Exam Training – ಪರೀಕ್ಷಾ ಪೂರ್ವ ತರಬೇತಿಗೆ ಉಚಿತ ಅವಕಾಶ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಎಸ್‌ಬಿಐ ಮೂಲಕ ಆನ್‌ಲೈನ್ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಈ ತರಬೇತಿಗೆ ಆಸಕ್ತಿ ಇದ್ದರೆ ಆನ್‌ಲೈನ್ ಅರ್ಜಿಯಲ್ಲಿಯೇ ಸೂಚಿಸಬೇಕು. ತರಬೇತಿ ದಿನಾಂಕ ಮತ್ತು ವಿವರಗಳನ್ನು ಎಸ್‌ಬಿಐ ತಿಳಿಸಲಿದೆ.
Application Fee – ಅರ್ಜಿ ಶುಲ್ಕದ ವಿವರ
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. SC / ST / PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇದೆ. ಈ ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಬಹುದು.
Exam Cities – Bengaluru Circle – ಬೆಂಗಳೂರು ವಲಯ ಪರೀಕ್ಷಾ ನಗರಗಳು
- ಬೆಂಗಳೂರು
- ಹುಬ್ಬಳ್ಳಿ / ಧಾರವಾಡ
- ಕಲಬುರಗಿ
- ಮೈಸೂರು
- ಮಂಗಳೂರು
Salary & Benefits – ವೇತನಶ್ರೇಣಿ ಮತ್ತು ಸೌಲಭ್ಯಗಳು
ಎಸ್‌ಬಿಐ ಸರ್ಕಲ್ ಬೇಸ್‌ಡ್ ಆಫೀಸರ್ ಹುದ್ದೆಗಳು Junior Management Grade Scale–I (JMGS-I) ಹುದ್ದೆಗಳು ಆಗಿರುತ್ತದೆ.
ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ ₹48,480 ರಿಂದ ₹85,920ರ ವರೆಗೆ ಮಾಸಿಕ ವೇತನ ನೀಡಲಾಗುತ್ತದೆ. ಇದರ ಜೊತೆಗೆ ಡಿಎ, ಎಚ್‌ಆರ್‌ಎ / ಲೀಸ್ ರೆಂಟ್, ವೈದ್ಯಕೀಯ ಸೌಲಭ್ಯ, ಪಿಂಚಣಿ ಮತ್ತು ಇತರೆ ಭತ್ಯೆಗಳು ಅನ್ವಯವಾಗುತ್ತವೆ.
ಇದನ್ನೂ ಓದಿ: KKRTC Driver Recruitment 2026- SSLC ಪಾಸಾದವರಿಗೆ ಸರ್ಕಾರಿ ಉದ್ಯೋಗ | KKRTC 78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
How to Apply – ಅರ್ಜಿ ಸಲ್ಲಿಸುವ ವಿಧಾನ
SBI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿಕೊಳ್ಳಿ. ನಂತರ ಲಾಗಿನ್ ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ. ಅರ್ಜಿ ಶುಲ್ಕ ಪಾವತಿಸಿ.
ಇತ್ತೀಚಿನ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು, ಅಗತ್ಯ ಪ್ರಮಾಣಪತ್ರಗಳು ಸೇರಿದಂತೆ ಎಲ್ಲಾ ಈ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅರ್ಜಿಯನ್ನು ಸಲ್ಲಿಸಿ ಪ್ರಿಂಟ್ ತೆಗೆದುಕೊಳ್ಳಿ.

Important Dates – ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನ: ಜನವರಿ 29, 2026
- ಅರ್ಜಿ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 18, 2026
- ಪ್ರವೇಶಪತ್ರ ಬಿಡುಗಡೆ: ಮಾರ್ಚ್ 2026
- ಆನ್‌ಲೈನ್ ಪರೀಕ್ಷೆ: ಮಾರ್ಚ್ 2026
ಕನ್ನಡ ಬಲ್ಲ ಪದವೀಧರರಿಗೆ ಇದು ಅತ್ಯುತ್ತಮ ಬ್ಯಾಂಕ್ ಉದ್ಯೋಗ ಅವಕಾಶವಾಗಿದೆ. ಸ್ಥಳೀಯ ಭಾಷೆಗೆ ಆದ್ಯತೆ, ಉತ್ತಮ ವೇತನ, ಭದ್ರ ಭವಿಷ್ಯ ಈ ಎಲ್ಲ ಅಂಶಗಳು ಈ ನೇಮಕಾತಿಯನ್ನು ವಿಶೇಷವಾಗಿಸುತ್ತವೆ. ಆಸಕ್ತರು ಕೊನೆಯ ದಿನದ ನಿರೀಕ್ಷೆ ಮಾಡದೇ ಈಗಲೇ ಅರ್ಜಿ ಸಲ್ಲಿಸಿ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.