SBI Personal Loan: ಕೇವಲ ಒಂದು ಮಿಸ್ ಕಾಲ್ ಮೂಲಕ State Bank of India (SBI) ಪರ್ಸನಲ್ ಲೋನ್ ಪಡೆಯುವುದು ಹೇಗೆ? ₹1 ಲಕ್ಷದಿಂದ ₹50 ಲಕ್ಷವರೆಗೆ ಸಾಲ ಪಡೆಯುವ ಸಂಪೂರ್ಣ ವಿವರ ಇಲ್ಲಿದೆ…
ಜೀವನದಲ್ಲಿ ಹಣದ ಅಗತ್ಯ ಯಾವಾಗ ಬರುತ್ತದೆ ಎಂಬುದನ್ನು ಯಾರು ಹೇಳಲು ಸಾಧ್ಯವಿಲ್ಲ. ಮದುವೆ, ಮನೆ ರಿಪೇರಿ, ಮಕ್ಕಳ ಶಿಕ್ಷಣ, ಮೆಡಿಕಲ್ ಎಮರ್ಜೆನ್ಸಿ ಅಥವಾ ಫ್ಯಾಮಿಲಿ ಟ್ರಿಪ್ – ಯಾವುದೇ ಸಂದರ್ಭದಲ್ಲೂ ತಕ್ಷಣ ಹಣ ಬೇಕಾದರೆ ಸಾಮಾನ್ಯವಾಗಿ ನಮ್ಮ ಮನಸ್ಸಿಗೆ ಬರುವ ಮೊದಲ ಆಯ್ಕೆ ಪರ್ಸನಲ್ ಲೋನ್ (Personal Loan).
ಇತ್ತೀಚೆಗೆ ಭಾರತದಲ್ಲಿನ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಸುಲಭವಾಗಿ ಲೋನ್ ಪಡೆಯಲು ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ‘ಬ್ಯಾಂಕ್‌ಗೆ ಹೋಗದೆ ಕೇವಲ ಒಂದು ಮಿಸ್ ಕಾಲ್ ಕೊಟ್ಟರೆ ಸಾಕು’ ಎಂಬ ಮಾಹಿತಿ ಜನರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.
ಈ ಲೇಖನದಲ್ಲಿ ಈ ಲೋನ್ ಸ್ಕೀಮ್ (Loan Scheme) ಬಗ್ಗೆ ಸಂಪೂರ್ಣ ಮಾಹಿತಿ, ಅರ್ಹತೆ, ಬಡ್ಡಿದರ, ದಾಖಲೆಗಳು, ಅರ್ಜಿ ವಿಧಾನ ಮತ್ತು ಪ್ರಮುಖ ಸೂಚನೆಗಳು ಸೇರಿದಂತೆ ಎಲ್ಲವನ್ನೂ ವಿವರವಾಗಿ ತಿಳಿದುಕೊಳ್ಳೋಣ.
ಯೋಜನೆಯ ಮುಖ್ಯ ವಿಶೇಷತೆಗಳು (Key Features)
ಈ ಪರ್ಸನಲ್ ಲೋನ್ ಯೋಜನೆಯ ಕೆಲವು ಪ್ರಮುಖ ಅಂಶಗಳು:
- ₹1 ಲಕ್ಷದಿಂದ ₹50 ಲಕ್ಷವರೆಗೆ ಸಾಲ ಸಿಗುವ ಅವಕಾಶ
- ವಾರ್ಷಿಕ ಬಡ್ಡಿದರ ಸುಮಾರು 10.5% ರಿಂದ ಆರಂಭ
- ಯಾವುದೇ ಜಾಮೀನು (No Collateral) ಅಗತ್ಯವಿಲ್ಲ
- ಕಡಿಮೆ ಪ್ರೊಸೆಸಿಂಗ್ ಫೀಸ್ (Processing Fee)
- 6 ತಿಂಗಳಿAದ 84 ತಿಂಗಳುಗಳವರೆಗೆ (7 ವರ್ಷ) ಮರುಪಾವತಿ ಅವಧಿ
- ಮಿಸ್ ಕಾಲ್ ಅಥವಾ SMS ಮೂಲಕ ಪ್ರಾಥಮಿಕ ಅರ್ಜಿ ಸೌಲಭ್ಯ
- ಇದನ್ನು ವಿಶೇಷವಾಗಿ ವೇತನದಾರರು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಇದನ್ನೂ ಓದಿ: March 2026 RBI Bank Holidays: ಮಾರ್ಚ್’ನಲ್ಲಿ ಸಾಲು-ಸಾಲು ಹಬ್ಬಗಳು; 18 ದಿನ ಭರ್ಜರಿ ರಜೆ | ಹಾಲಿಡೇ ಲಿಸ್ಟ್ ಇಲ್ಲಿದೆ…
ಯಾರು ಈ ಲೋನ್ ಪಡೆಯಬಹುದು? (Eligibility Criteria)
ಈ ಪರ್ಸನಲ್ ಲೋನ್ ಮುಖ್ಯವಾಗಿ ಉದ್ಯೋಗದಲ್ಲಿರುವವರಿಗೆ ಮಾತ್ರ ಲಭ್ಯ.
- ಉದ್ಯೋಗ ಸ್ಥಿತಿ: ರಾಜ್ಯ / ಕೇಂದ್ರ ಸರ್ಕಾರದ ನೌಕರರು, ರಕ್ಷಣಾ ದಳ, ರೈಲ್ವೆ ಉದ್ಯೋಗಿಗಳು, ಖಾಸಗಿ ಕಂಪನಿಗಳ ಉದ್ಯೋಗಿಗಳು
- ವೇತನ ಖಾತೆ: ಅತ್ಯಂತ ಪ್ರಮುಖ ಅಂಶ – ನಿಮ್ಮ ಸಂಬಳ ಖಾತೆ (Salary Account) SBI ಬ್ಯಾಂಕ್‌ನಲ್ಲೇ ಇರಬೇಕು.
- ಕನಿಷ್ಠ ಸೇವಾ ಅವದಿ: ಸರ್ಕಾರಿ ನೌಕರರಿಗೆ ಕನಿಷ್ಠ 6 ತಿಂಗಳ ಸೇವೆ, ಖಾಸಗಿ ಉದ್ಯೋಗಿಗಳಿಗೆ ಕನಿಷ್ಠ 1 ವರ್ಷದ ಅನುಭವ.
- ವಯೋಮಿತಿ: 21 ರಿಂದ 60 ವರ್ಷ ವಯಸ್ಸಿನವರು ಇದರ ಪ್ರಯೋಜನ ಪಡೆಯಬಹುದಾಗಿದೆ. ಕೆಲವು ಸರ್ಕಾರಿ ನೌಕರರಿಗೆ ವಯಸ್ಸಿನಲ್ಲಿ ರಿಯಾಯಿತಿ ಇದೆ.
- ಕನಿಷ್ಠ ವೇತನ: ಸರ್ಕಾರಿ / ಡಿಫೆನ್ಸ್ ತಿಂಗಳಿಗೆ ₹20,000 ಹಾಗೂ ಖಾಸಗಿ ಉದ್ಯೋಗಿಗಳು – ಕನಿಷ್ಠ ₹25,000
- ಸಿಬಿಲ್ ಸ್ಕೋರ್ (CIBIL Score): ಉತ್ತಮ ಕ್ರೆಡಿಟ್ ಸ್ಕೋರ್ (Good Credit Score) ಅತ್ಯಂತ ಮುಖ್ಯ. 750+ ಅಥವಾ 800ಕ್ಕಿಂತ ಹೆಚ್ಚಿನ ಸ್ಕೋರ್ ಇದ್ದರೆ ಪ್ರೊಸೆಸಿಂಗ್ ಫೀಸ್ ಮೇಲೆ ಡಿಸ್ಕೌಂಟ್ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka March-April Heatwave: ಕರ್ನಾಟಕದಲ್ಲಿ ಮಾರ್ಚ್-ಏಪ್ರಿಲ್‌ನಲ್ಲಿ ಬೆಂಕಿ ಬಿಸಿಲು | ಹವಾಮಾನ ಇಲಾಖೆ ಕಟ್ಟೆಚ್ಚರ
ಬೇಕಾಗುವ ದಾಖಲೆಗಳು (Documents Required)
ಲೋನ್ ಅರ್ಜಿ ಸಲ್ಲಿಸುವ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಡಿ:
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಕಳೆದ 6 ತಿಂಗಳ ವೇತನ ಸ್ಲಿಪ್
- ಉದ್ಯೋಗ ಗುರುತಿನ ಚೀಟಿ
- 6 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್
- ಇತ್ತೀಚಿನ ITR ಅಥವಾ Form 16 (ಅನ್ವಯಿಸಿದರೆ)
ಇದನ್ನೂ ಓದಿ: PNB 444 Days FD: ಎಫ್‌ಡಿ ವಿಶೇಷ ಯೋಜನೆ : 444 ದಿನಗಳಲ್ಲಿ ಡಬಲ್ ಲಾಭ? ಪಿಎನ್‌ಬಿ ಹೊಸ ಆಫರ್ ವಿವರ
ಅರ್ಜಿ ಸಲ್ಲಿಸುವ ವಿಧಾನ (How to Apply)
ಈ ಯೋಜನೆಯ ವಿಶೇಷತೆ ಎಂದರೆ ನೀವು ಬ್ಯಾಂಕ್‌ಗೆ ಹೋಗುವ ಅವಶ್ಯಕತೆ ಇಲ್ಲ.
ವಿಧಾನ 1: ಮಿಸ್ ಕಾಲ್ ಮೂಲಕ
- SBI ನೀಡಿರುವ ಅಧಿಕೃತ ಸಂಖ್ಯೆ 7208933142ಗೆ ಒಂದು ಮಿಸ್ ಕಾಲ್ ಕೊಡಿ
- ನಿಮಗೆ SMS ಮೂಲಕ ಪ್ರತಿಕ್ರಿಯೆ ಬರುತ್ತದೆ
- ನಂತರ SBI ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ
- ಅಗತ್ಯ ಮಾಹಿತಿ ಪಡೆದು ಲೋನ್ ಪ್ರಕ್ರಿಯೆ ಆರಂಭಿಸುತ್ತಾರೆ
- 1800 1234 ನಂಬರ್ ಕರೆ ಮಾಡಿದರೆ ಬ್ಯಾಂಕ್ ಅಧಿಕಾರಿಗಳು ನಿಮಗೆ ಮರಳಿ ಕರೆ ಮಾಡುತ್ತಾರೆ

ವಿಧಾನ 2: SMS ಮೂಲಕ
7208933145 ಸಂಖ್ಯೆಗೆ ‘PERSONAL’ ಎಂದು ಟೈಪ್ ಮಾಡಿ SಒS ಕಳುಹಿಸಿದರೂ ಪ್ರತಿಕ್ರಿಯೆ ಸಿಗುತ್ತದೆ.
ವಿಧಾನ 3: ಅಧಿಕೃತ ವೆಬ್‌ಸೈಟ್
SBI ಅಧಿಕೃತ ವೆಬ್‌ಸೈಟ್ sbi.bank.in ಭೇಟಿ ನೀಡಿ ನೇರವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಗಮನಿಸಿ: ಯಾವಾಗಲೂ ಅಧಿಕೃತ ಬ್ಯಾಂಕ್ ಮೂಲಗಳನ್ನು ಮಾತ್ರ ಬಳಸಿ. ಫೇಕ್ ಲೋನ್ ಆಪ್‌ಗಳ (Fake Loan Apps) ಮೂಲಕ ಹಣ ಪಡೆಯಲು ಪ್ರಯತ್ನಿಸಬೇಡಿ.
ಎರಡನೇ ಲೋನ್ ಸೌಲಭ್ಯ (Second Loan Facility)
ಒಂದು ವೇಳೆ ನೀವು ಈಗಾಗಲೇ ಒಂದು ಲೋನ್ ತೆಗೆದುಕೊಂಡು EMI ಕಟ್ಟುತ್ತಿದ್ದರೂ, ತುರ್ತು ಪರಿಸ್ಥಿತಿಯಲ್ಲಿ ಮತ್ತೊಂದು ಲೋನ್ ಪಡೆಯುವ ಅವಕಾಶ ಇದೆ. ಆದರೆ ಇದು ನಿಮ್ಮ ಆದಾಯ, ಸಿಬಿಲ್ ಸ್ಕೋರ್ ಮತ್ತು ಬ್ಯಾಂಕ್ ಮೌಲ್ಯಮಾಪನದ ಮೇಲೆ ಅವಲಂಬಿತವಾಗಿರುತ್ತದೆ.
ಪ್ರೊಸೆಸಿಂಗ್ ಫೀಸ್ ಮತ್ತು ವಿಶೇಷ ರಿಯಾಯಿತಿಗಳು
- ಡಿಫೆನ್ಸ್ ಸಿಬ್ಬಂದಿಗೆ ಅಥವಾ ವಿಶೇಷ ವೇತನ ಪ್ಯಾಕೇಜ್ ಗ್ರಾಹಕರಿಗೆ ಪ್ರೊಸೆಸಿಂಗ್ ಫೀಸ್ ರಿಯಾಯಿತಿ ಇದೆ.
- 800+ CIBIL Score ಇದ್ದರೆ 50% ವರೆಗೆ ಫೀಸ್ ಕಡಿತ ಸಿಗುವ ಸಾಧ್ಯತೆ
- ಇದು ಬ್ಯಾಂಕ್ ನಿಯಮಗಳ ಮೇಲೆ ಅವಲಂಬಿತವಾಗಿರುವುದರಿAದ ಅಧಿಕೃತ ಮಾಹಿತಿ ಪಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: RTE Karnataka 2026-27: ಆರ್‌ಟಿಇ 2026-27 ಅರ್ಜಿ ಆಹ್ವಾನ | ಬಡ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಓದುವ ಅವಕಾಶ
ಸಾಲ ಪಡೆಯುವ ಮುನ್ನ ಗಮನಿಸಬೇಕಾದ ವಿಷಯಗಳು
- ಪರ್ಸನಲ್ ಲೋನ್ ತಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ತುರ್ತು ನಿರ್ಧಾರ ತೆಗೆದುಕೊಳ್ಳಬೇಡಿ.
- ಬಡ್ಡಿದರ (Interest Rate) ಸಂಪೂರ್ಣವಾಗಿ ತಿಳಿದುಕೊಳ್ಳಿ
- EMI ಎಷ್ಟು ಬರುತ್ತದೆ ಎಂದು ಲೆಕ್ಕ ಹಾಕಿ (EMI Calculator ಬಳಸಿ)
- ಮರುಪಾವತಿ ಅವಧಿ ಸೂಕ್ತವೇ ಎಂದು ಪರಿಶೀಲಿಸಿ
- ಪ್ರೊಸೆಸಿಂಗ್ ಫೀಸ್ ಮತ್ತು ಇತರ ಶುಲ್ಕಗಳು ಇದೆಯೇ ಎಂದು ಕೇಳಿ
ಅನೇಕರಿಗೆ ಇನ್ಸ್ಟಂಟ್ ಲೋನ್ ಆಪ್‌ಗಳಿಂದ ತೊಂದರೆ ಉಂಟಾದ ಉದಾಹರಣೆಗಳಿವೆ. ಆದ್ದರಿಂದ ವಿಶ್ವಾಸಾರ್ಹ ಬ್ಯಾಂಕ್‌ಗಳ ಸೇವೆ ಮಾತ್ರ ಬಳಸುವುದು ಸುರಕ್ಷಿತ.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ವೇತನದಾರರಿಗೆ ಸುಲಭ ಆಯ್ಕೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಪರ್ಸನಲ್ ಲೋನ್ ಸೌಲಭ್ಯ ವೇತನದಾರರಿಗೆ ಒಂದು ಸುಲಭ ಆಯ್ಕೆ ಆದೆ. ಕೇವಲ ಒಂದು ಮಿಸ್ ಕಾಲ್ ಮೂಲಕ ಪ್ರಕ್ರಿಯೆ ಆರಂಭವಾಗುವುದು ಜನರಿಗೆ ಅನುಕೂಲಕರವಾಗಿದೆ.
ಆದರೆ ಯಾವ ಲೋನ್ ಆಗಿದ್ದರೂ ಅದು ಒಂದು ಹಣಕಾಸಿನ ಬಾಧ್ಯತೆ. ಆದ್ದರಿಂದ ಸಾಲ ಪಡೆಯುವ ಮೊದಲು ಚೆನ್ನಾಗಿ ಯೋಚಿಸಿ, ಎಲ್ಲಾ ನಿಯಮಗಳು ತಿಳಿದುಕೊಂಡು, ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ.
ಸೂಚನೆ: ಸದಾ ಅಧಿಕೃತ SBI ಮೂಲಗಳಿಂದಲೇ ಮಾಹಿತಿ ಪರಿಶೀಲಿಸಿ ಮತ್ತು ಫೇಕ್ ಕಾಲ್ ಅಥವಾ ಅಪರಿಚಿತ ಲಿಂಕ್‌ಗಳಿಂದ ದೂರವಿರಿ.
ಅಧಿಕೃತ ವೆಬ್‌ಸೈಟ್: sbi.bank.in

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.