PUC Pass Central Govt Job- ಪಿಯುಸಿ ಪಾಸಾದವರಿಗೆ ಕೇಂದ್ರ ಸರ್ಕಾರದಲ್ಲಿ ಖಾಯಂ ಉದ್ಯೋಗ | 3,131 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (SSC) ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ (PUC Pass Central Govt Job) ನೀಡಿದೆ. ಒಟ್ಟು 3,131 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ…

ಪಿಯುಸಿ ಅಥವಾ 12ನೇ ತರಗತಿ ಪಾಸಾಗಿ ಸರ್ಕಾರಿ ಉದ್ಯೋಗಕ್ಕೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಬಹುಮುಖ್ಯ ಅವಕಾಶ. ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು (SSC) ತನ್ನ Combied Higher Secondary Level (CHSL) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 3,131 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ಇದು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿ ಲೋಯರ್ ಡಿವಿಷನಲ್ ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶವನ್ನು ಹೊಂದಿದೆ. ಕಳೆದ ಬಾರಿ 3,700ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆದಿತ್ತು.

ಕಿರಿಯ ವಯಸ್ಸಿನ ಅಭ್ಯರ್ಥಿಗಳು ಕೇಂದ್ರ ಸರ್ಕಾರಿ ಹುದ್ದೆಯ ಖಾಯಂ ಭದ್ರತೆ, ಉತ್ತಮ ವೇತನ ಹಾಗೂ ಭವಿಷ್ಯದಲ್ಲಿ ಪ್ರಚಾರ ಅವಕಾಶಗಳಿಗಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಿಶೇಷವಾಗಿ ಸರ್ಕಾರಿ ಉದ್ಯೋಗದ ಕನಸು ಕಾಣುವ ಪಿಯುಸಿ ಪಾಸ್ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ.

KCET Seat Blocking 2025- ಕೆಸಿಇಟಿ ಸೀಟ್ ಬ್ಲಾಕ್ | ಕೆಇಎ ಮಹತ್ವದ ಮಾಹಿತಿ | ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು ಇಲ್ಲಿವೆ…

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
  • ಲೋಯರ್ ಡಿವಿಷನಲ್ ಕ್ಲರ್ಕ್ / ಜೆ.ಎಸ್.ಎ.: ₹19,900 – ₹63,200
  • ಡೇಟಾ ಎಂಟ್ರಿ ಆಪರೇಟರ್ (ಡಿಇಒ): ₹25,500 – ₹81,100 / ₹29,200 – ₹92,300
  • ಡೇಟಾ ಎಂಟ್ರಿ ಆಪರೇಟರ್ (ಗ್ರೇಡ್ ‘ಎ’): ₹25,500 – ₹81,100
ವಿದ್ಯಾರ್ಹತೆ ಎಷ್ಟಿರಬೇಕು?

ಮೊದಲೇ ಹೇಳಿದಂತೆ ಅಭ್ಯರ್ಥಿಗಳು ಕನಿಷ್ಠ 12ನೇ ತರಗತಿ ಪಾಸಾಗಿರಬೇಕು. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಕೆಲವೊಂದು ಇಲಾಖೆಗಳು ವಿಜ್ಞಾನ ವಿಭಾಗದಲ್ಲಿ ಪಾಸಾಗಿರುವವರಿಗಷ್ಟೇ ಅವಕಾಶ ನೀಡುತ್ತವೆ.

ಪ್ರಸ್ತುತ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಅವರು 2026ರ ಜನವರಿ 1ರೊಳಗೆ ವಿದ್ಯಾರ್ಹತೆಯನ್ನು ಪೂರೈಸಿರಬೇಕು.

SSC ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ನೀಡಿದೆ. ಒಟ್ಟು 3,131 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ...
PUC Pass Central Govt Job SSC CHSL Recruitment 2025
ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 2026ರ ಜನವರಿ 1ಕ್ಕೆ ಅನುಗುಣವಾಗಿ 18 ರಿಂದ 27 ವರ್ಷಗಳ ನಡುವೆ ಇರಬೇಕು. ಅಂದರೆ, 02-01-1999 ರಿಂದ 01-01-2008ರ ನಡುವೆ ಜನಿಸಿದ್ದರೆ ಅರ್ಜಿ ಸಲ್ಲಿಸಲು ಅರ್ಹ.

ನಿಯಮಗಳ ಅನುಸಾರ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

PMAY Housing Loan Subsidy- ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ₹2.67 ಲಕ್ಷ ವರೆಗೆ ಸಹಾಯಧನ | ಪಿಎಂ ಆವಾಸ್ ಯೋಜನೆಗೆ ಅರ್ಜಿ ಆಹ್ವಾನ

ಪರೀಕ್ಷಾ ಪ್ರಕ್ರಿಯೆ ಹೇಗಿರುತ್ತದೆ?

ಹಂತ 1ದಲ್ಲಿ 100 ಪ್ರಶ್ನೆಗಳಿಗೆ 200 ಅಂಕಗಳಿಗೆ 60 ನಿಮಿಷ ವಧಿಗೆ ಟೈರ್-1 ಪರೀಕ್ಷೆ ನಡೆಯುತ್ತದೆ. ಸಾಮಾನ್ಯ ಬುದ್ಧಿಮತ್ತೆ, ಜನರಲ್ ಎವೆರ್‌ನೆಸ್, ಸಂಖ್ಯಾಶಾಸ್ತ್ರ ಹಾಗೂ ಆಂಗ್ಲ ಭಾಷೆ ವಿಷಯಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ಅರ್ಧ ಅಂಕ ಕಡಿತವಾಗುತ್ತದೆ.

ಇನ್ನು ಹಂತ 2ರಲ್ಲಿ ಟೈರ್-2 ಪರೀಕ್ಷೆ ನಡೆಯುತ್ತದೆ. ಇದು ಟೈಪಿಂಗ್ ಟೆಸ್ಟ್, ಕೌಶಲ ಪರೀಕ್ಷೆ (Skill Test) ಒಳಗೊಂಡಿರುತ್ತದೆ. ಈ ಹಂತವು ಅಭ್ಯರ್ಥಿಯ ಪ್ರಾಯೋಗಿಕ ನೈಪುಣ್ಯತೆ ಪರೀಕ್ಷಿಸುತ್ತದೆ.

ರಾಜ್ಯದಲ್ಲಿನ ಪರೀಕ್ಷಾ ಕೇಂದ್ರಗಳು

ಕರ್ನಾಟಕದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ, ಈ ಕೆಳಗಿನ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಿವೆ:

  • ಬೆಂಗಳೂರು
  • ಬೆಳಗಾವಿ
  • ಹುಬ್ಬಳ್ಳಿ
  • ಕಲಬುರಗಿ
  • ಮೈಸೂರು
  • ಮಂಗಳೂರು
  • ಶಿವಮೊಗ್ಗ
  • ಉಡುಪಿ
ಪ್ರಮುಖ ದಿನಾಂಕಗಳು
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 18-07-2025
  • ಆನ್‌ಲೈನ್ ಶುಲ್ಕ ಪಾವತಿಗೆ ಅಂತಿಮ: 19-07-2025
  • ಅರ್ಜಿ ತಿದ್ದುಪಡಿ ಅವಕಾಶ: ಜುಲೈ 23-24, 2025
  • ಮೊದಲ ಹಂತದ ಪರೀಕ್ಷೆ: ಸೆಪ್ಟೆಂಬರ್ 8-18, 2025
  • ಎರಡನೇ ಹಂತದ ಪರೀಕ್ಷೆ: ಫೆಬ್ರವರಿ 2026

Free Sewing Machine- ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಕೆ ಹೇಗೆ?
WhatsApp Group Join Now
Telegram Group Join Now

ಅರ್ಹ ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ssc.gov.inಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಜೊತೆಗೆ ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:

  • 12ನೇ ತರಗತಿ ಯುಜಿಸಿ/ಬೋರ್ಡ್ ಪ್ರಮಾಣಪತ್ರ
  • ಗುರುತಿನ ದಾಖಲೆ: ಆಧಾರ್/ ಪಾನ್ ಕಾರ್ಡ್
  • ಫೋಟೋ ಮತ್ತು ಸಹಿ (ಸ್ಕ್ಯಾನ್)
  • ಜಾತಿ ಪ್ರಮಾಣಪತ್ರ (ಅರ್ಹರಿಗೆ)

ಕೇಂದ್ರ ಸರ್ಕಾರಿ ಖಾಯಂ ಉದ್ಯೋಗ ಪಡೆಯುವ ಮಹತ್ತ್ವಾಕಾಂಕ್ಷೆಯಿರುವ ಅಭ್ಯರ್ಥಿಗಳಿಗೆ ಎಸ್‌ಎಸ್‌ಸಿ ಅಊSಐ ನೇಮಕಾತಿ 2025 ಅತ್ಯುತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಕೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸುವುದು ಸೂಕ್ತ.

ಅರ್ಜಿ ಸಲ್ಲಿಕೆ ಲಿಂಕ್: Apply Now
ಅಧಿಸೂಚನೆ: Download

Prize Money Scholarship 2025- SSLC, PUC, ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ₹35,000 ರೂಪಾಯಿ ಪ್ರೋತ್ಸಾಹಧನ | ಅರ್ಜಿ ಆಹ್ವಾನ


Spread the love
error: Content is protected !!