ರೈತರ ಹೊಲದ ದಾರಿ ಸಮಸ್ಯೆಗೆ ರಾಜ್ಯ ಸರ್ಕಾರ ನಮ್ಮ ಹೊಲ ನಮ್ಮ ದಾರಿ’ (Namma Hola Namma Daari Yojana) ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಪ್ರಯೋಜನ ಪಡೆಯುವ ಕುರಿತ ಮಾಹಿತಿ ಇಲ್ಲಿದೆ…
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ಸುಗಮವಾದ ದಾರಿಗಳು ಇಲ್ಲದೆ ಪರದಾಡುತ್ತಿದ್ದಾರೆ. ಮಳೆಗಾಲದಲ್ಲಿಯಂತೂ ಹೊಲ-ತೋಟಕ್ಕೆ ಹೋಗುವುದು ಒಂದು ಹರಸಹಸವಾಗಿರುತ್ತದೆ. ಇದು ದಿನನಿತ್ಯದ ತಲೆನೋವಾಗಿದೆ.
ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಸರ್ಕಾರ ‘ನಮ್ಮ ಹೊಲ ನಮ್ಮ ದಾರಿ’ ಎಂಬ ಹೊಸ ಯೋಜನೆ ತಂದಿದೆ. ರಾಜ್ಯದ ಪ್ರತಿ ರೈತನ ಹೊಲ-ತೋಟಕ್ಕೂ ಸರಿಯಾಗಿ ವಾಹನ ಓಡಬಹುದಾದ ವ್ಯವಸ್ಥಿತವಾದ ರಸ್ತೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: Karnataka Heavy Cold Wave – ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಶೀತಗಾಳಿ ಎಚ್ಚರಿಕೆ | ಹವಾಮಾನ ಇಲಾಖೆ ಮುನ್ಸೂಚನೆ
ಪ್ರತೀ ಕಿ.ಮೀಗೆ 12.50 ಲಕ್ಷ ರೂ. ಸಹಾಯಧನ
ಕೃಷಿ ಉತ್ಪಾದನೆ ರೈತರ ಹೊಲದಿಂದ ಮಾರುಕಟ್ಟೆಯ ವರೆಗಿನ ಸಂಪರ್ಕದ ಮೇಲೆ ಅವಲಂಬಿತವಾಗಿದೆ. ಅನೇಕ ಗ್ರಾಮಗಳಲ್ಲಿ ರೈತರ ಹೊಲಗಳಿಗೆ ಹೋಗಲು ಕೇವಲ ಕಾಲುದಾರಿಗಳಷ್ಟೇ ಇವೆ. ವಾಹನಗಳು ಹೊಲದವರೆಗೆ ಹೋಗಲು ಸಾಧ್ಯವಿಲ್ಲದ್ದರಿಂದ ಬೆಳೆಗಳನ್ನು ಸಾಗಿಸಲು ಹೆಚ್ಚು ವೆಚ್ಚ, ಹೆಚ್ಚು ಸಮಯ ಮತ್ತು ತುಂಬಾ ಪರಿಶ್ರಮ ಬೇಕಾಗುತ್ತಿದೆ.
‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಿಂದ ಈ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ. ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ರಸ್ತೆ ನಿರ್ಮಿಸಿ, ಒಟ್ಟಾರೆ 5,670 ಕಿ.ಮೀ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತಿ ಕಿ.ಮೀಗೆ 12.50 ಲಕ್ಷ ರೂ. ವೆಚ್ಚ ನಿಗದಿಯಾಗಿದೆ.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂ.ಜಿ.ನರೇಗಾ) ಮತ್ತು ರಾಜ್ಯ ಸರ್ಕಾರದ ಅನುದಾನಗಳ ಸಂಯೋಜನೆಯೊAದಿಗೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದೆ.
ರೈತರಿಗೆ ಈ ಯೋಜನೆಯಿಂದ ಆಗುವ ಪ್ರಯೋಜನಗಳು
ಈ ಯೋಜನೆಯಿಂದ ಎತ್ತಿನ ಗಾಡಿ, ಟ್ರ್ಯಾಕ್ಟರ್ಗಳು, ಜೀಪ್ಗಳನ್ನು ನೇರವಾಗಿ ಹೊಲ-ತೋಟದ ವರೆಗೂ ಕೊಂಡೊಯ್ಯಬಹುದು. ಸಾಗಾಣಿಕೆ ವೆಚ್ಚ ಕಡಿತ: ರಸ್ತೆಯಿಂದ ರೈತರು ಪ್ರವೇಶ ಪಡೆಯುವುದರಿಂದ ಬೆಳೆ ಸಾಗಣೆಗೆ ಬೇಕಾದ ವಾಹನ ವೆಚ್ಚ ಕಡಿಮೆಯಾಗುತ್ತದೆ.
ಮಳೆಗಾಲದಲ್ಲಿಯೂ ಕೆಸರು ಸಿಕ್ಕಿಕೊಳ್ಳದೇ ಸುಲಭವಾಗಿ ಹೊಲದೊಳಗೆ ಹೋಗಬಹುದು. ಎಂಜಿನರೇಗಾ ಯೋಜನೆಯಡಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆತು ಗ್ರಾಮೀಣ ಆರ್ಥಿಕತೆಯು ಬಲವಾಗುತ್ತದೆ. ಗ್ರಾಮಗಳು ನಗರಗಳಿಂದ ಸಂಪರ್ಕಗೊಂಡಾಗ ಗ್ರಾಮೀಣ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ.

ಹೇಗೆ ನಡೆಯಲಿದೆ ರಸ್ತೆ ಕಾಮಗಾರಿ?
ಪ್ರತಿ 1 ಕಿ.ಮೀ ರಸ್ತೆಗೆ 12.5 ಲಕ್ಷ ರೂ. ವೆಚ್ಚ ಮಾಡುವಂತೆ ಯೋಜನೆ ಇದೆ. ಇದರಲ್ಲಿ 9 ಲಕ್ಷ ರೂ. ಎಂಜಿನರೇಗಾ ಯೋಜನೆಯಡಿಯಲ್ಲಿ ಬಳಸಲಾಗುತ್ತದೆ. ಬಾಕಿ 3.5 ಲಕ್ಷ ರೂ. ಲೆಕ್ಕಶೀರ್ಷಿಕೆ 3054ರಡಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ.
ರಸ್ತೆಯ ಅಗಲ 3.75 ಮೀಟರ್, ದಪ್ಪದ ಶ್ರೇಯಾಂಕ (ಗ್ರೇಡ್) ಪ್ರಕಾರ ಕಲ್ಲು ಹಾಕಿ, ರೈತರ ವಾಹನಗಳು ಸುಗಮವಾಗಿ ಓಡಲು ಸಾಧ್ಯವಾಗುತ್ತದೆ. ಅಗತ್ಯವಿದ್ದರೆ ಸೇತುವೆ ಅಥವಾ ಮೋರಿಗಳಂತಹ ಸೌಕರ್ಯಗಳನ್ನೂ ಈ ಯೋಜನೆಯಡಿ ಮಾಡಲಾಗುತ್ತದೆ.
ಅರ್ಹತೆ ಮತ್ತು ಶರತ್ತುಗಳು
ರಸ್ತೆ ನಿರ್ಮಾಣಗೊಳ್ಳಬೇಕಾದ ದಾರಿ ಕಂದಾಯ ಇಲಾಖೆಯ ಗ್ರಾಮ ನಕ್ಷೆಯಲ್ಲಿ ಸಾರ್ವಜನಿಕ ರಸ್ತೆ ಅಥವಾ ಬಂಡಿದಾರಿ ಆಗಿ ಗುರುತಿಸಿರಬೇಕು. ಕೇವಲ ಒಬ್ಬ ರೈತನ ಪ್ರಯೋಜನಕ್ಕಾಗಿಯೇ ಅಲ್ಲದೇ, ಅನೇಕ ರೈತರಿಗೆ ಉಪಯೋಗವಾಗುವ ರಸ್ತೆಗಳಿಗೆ ಆದ್ಯತೆ ನೀಡಲಾಗುತ್ತದೆ.
ಖಾಸಗಿ ಜಮೀನಿಗೆ ಸರ್ಕಾರ ಹಣ ಕೊಟ್ಟು ಭೂ ಸ್ವಾಧೀನ ಮಾಡೋದಿಲ್ಲ. ರೈತರು ತಮ್ಮ ಇಚ್ಛೆಯಿಂದ ಜಾಗವನ್ನು ಗ್ರಾಮ ಪಂಚಾಯತಿ ಹೆಸರಿನಲ್ಲಿ ‘ನೋಂದಾಯಿತ ದಾನ ಪತ್ರ’ ಮೂಲಕ ನೀಡಬೇಕು.
ನಿಮ್ಮ ಊರಿಗೆ ಹೊಲದ ದಾರಿ ಹೇಗೆ ಮಂಜೂರಾಗಿಸಬೇಕು?
ಹೊಲದ ದಾರಿ ಅಗತ್ಯವಿರುವ ರೈತರು ರೈತರು ಸೇರಿ, ರಸ್ತೆ ಅಗತ್ಯತೆಯನ್ನು ವಿವರಿಸುವ ಮನವಿ ಪತ್ರವನ್ನು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ನೀಡಬೇಕು.ಗ್ರಾಮ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಸಭೆಯ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.
ನಿಮ್ಮ ಕ್ಷೇತ್ರದ ಶಾಸಕರಿಗೆ ಮನವಿ ನೀಡಿ ಯೋಜನೆಯ ಆದ್ಯತೆಯಲ್ಲಿ ನಿಮ್ಮ ರಸ್ತೆಯನ್ನು ಸೇರಿಸಿಕೊಳ್ಳಲು ವಿನಂತಿಸಬೇಕು. ಕಾಮಗಾರಿ ಪ್ರಾರಂಭವಾಗುವ ಮೊದಲು, ನಡೆಯುವ ವೇಳೆ, ಪೂರ್ಣಗೊಂಡ ನಂತರ ತೆಗೆದ ಫೋಟೋಗಳು ಮತ್ತು ಜಿಯೋ-ಟ್ಯಾಗ್ ದಾಖಲೆಗಳೆಲ್ಲಾ ಅಪ್ಲೋಡ್ ಆಗಿದೆಯೇ ಎಂದು ಪರಿಶೀಲಿಸಿ.
‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಸರಿಯಾದ ರೀತಿಯಲ್ಲಿ ಜಾರಿಯಾದರೆ, ಅದು ಗ್ರಾಮೀಣ ಭಾರತದ ಅಭಿವೃದ್ಧಿಗೆ ಬುನಾದಿಯಾಗಲಿದೆ. ರೈತರು ತಮ್ಮ ಹೊಲದ ವರೆಗೆ ಸುಗಮವಾಗಿ ತಲುಪಿದರೆ, ಕೃಷಿ ಉತ್ಪನ್ನಗಳು ಬೇಗ ಮಾರುಕಟ್ಟೆ ತಲುಪುತ್ತವೆ. ಇದರಿಂದ ವಾಹನ ವೆಚ್ಚ ತಗ್ಗುತ್ತದೆ ಮತ್ತು ರೈತರ ಉಳಿತಾಯ ಹೆಚ್ಚುತ್ತದೆ.
- ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಸುತ್ತೋಲೆ ಓದಲು ಇಲ್ಲಿ Download ಮಾಡಿ…