
ಭಾರತದ ಅತಿದೊಡ್ಡ ಗೋಲ್ಡ್ ಲೋನ್ NBFC ಆಗಿರುವ ಮುತ್ತೂಟ್ ಫೈನಾನ್ಸ್ ಲಿ. ಸಂಸ್ಥೆಯು ‘ಮುತ್ತೂಟ್ ಎಂ.ಜಾರ್ಜ್ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ 2025-26’ಗೆ (Muthoot M George Higher Education Scholarship 2025) ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ವೃತ್ತಿಪರ ಕೋರ್ಸುಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಮೆರಿಟ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಸಿಗಲಿದೆ. ಕಳೆದ 9 ಆವೃತ್ತಿಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಒಟ್ಟು 3.94 ಕೋಟಿ ರೂ. ವಿದ್ಯಾರ್ಥಿವೇತನ ಒದಗಿಸಲಾಗಿದೆ.
ಮೆರಿಟ್ ವಿದ್ಯಾರ್ಥಿಗಳಿಗೆ ಅವಕಾಶ
ಈ ಯೋಜನೆಯಡಿಯಲ್ಲಿ 2025ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಟೆಕ್, ಎಂಬಿಬಿಎಸ್ ಅಥವಾ ಬಿ.ಎಸ್ಸಿ ನರ್ಸಿಂಗ್ ಪದವಿ ತರಗತಿಗಳಿಗೆ ಪ್ರೋಗ್ರಾಂಗಳಲ್ಲಿ ಪ್ರವೇಶ ಪಡೆದ ಮೆರಿಟ್ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್’ಗಳನ್ನು ನೀಡಲಾಗುವುದು.
ಬೆಂಗಳೂರು, ಕೇರಳ, ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಅರ್ಹ ವಿದ್ಯಾರ್ಥಿಗಳು ಈಗ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಅರ್ಹತಾ ಮಾನದಂಡಗಳು
- ಅಭ್ಯರ್ಥಿ ತರಗತಿ 12 (+2) ಪರೀಕ್ಷೆಯಲ್ಲಿ ಶೇ.90 ಅಥವಾ ಸಮಾನ ಗ್ರೇಡ್ ಪಡೆದಿರಬೇಕು.
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ.ಗಿಂತ ಮೀರಬಾರದು.
- ಅಭ್ಯರ್ಥಿ ಸಂಬಂಧಿತ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು.
ವಿದ್ಯಾರ್ಥಿವೇತನ ಮೊತ್ತವೆಷ್ಟು?
ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಆಯ್ಕೆಯಾದ ಪ್ರತಿ ಎಂಬಿಬಿಎಸ್ ವಿದ್ಯಾರ್ಥಿಗೆ ನಾಲ್ಕು ವರ್ಷಗಳ ಕೋರ್ಸ್ ಅವಧಿ ಒಳಗೊಂಡAತೆ ಒಟ್ಟು 2,40,000 ಸ್ಕಾಲರ್‌ಶಿಪ್ ನೀಡಲಾಗುವುದು.
ಬಿ.ಟೆಕ್ ಮತ್ತು ಬಿಎಸ್ಸಿ ನರ್ಸಿಂಗ್ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೆ 1,20,000 ವಿದ್ಯಾರ್ಥಿ ವೇತನ ನೀಡಲಾಗುವುದು.
ಪ್ರತಿ ಸ್ಥಳದಿಂದ ಎಂಬಿಬಿಎಸ್, ಬಿ.ಟೆಕ್ ಮತ್ತು ಬಿಎಸ್ಸಿ ನರ್ಸಿಂಗ್ ಸೇರಿದಂತೆ ಪ್ರತಿ ವಿಭಾಗದಿಂದ ತಲಾ 10 ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗಳಿಗೆ ಆಯ್ಕೆಯಾಗುತ್ತಾರೆ.
ಇದನ್ನೂ ಓದಿ: Canara Bank Personal Loan- ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಕಮ್ಮಿ ಬಡ್ಡಿದರದಲ್ಲಿ 10 ಲಕ್ಷ ರೂ. ವರೆಗೂ ಸಾಲ ಸೌಲಭ್ಯ
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಾವು ಪ್ರವೇಶ ಪಡೆದಿರುವ ಕಾಲೇಜಿನ ಸ್ಥಳವನ್ನು ಪರಿಗಣಿಸಬಾರದು ಅಥವಾ ಆ ಪ್ರದೇಶದ ಆಧಾರದಲ್ಲಿ ಅರ್ಜಿ ಸಲ್ಲಿಸಬಾರದು. ಬದಲಿಗೆ ತಮ್ಮ ಶಾಶ್ವತ ನಿವಾಸದ ಪ್ರದೇಶವನ್ನು ಆಯ್ಕೆ ಮಾಡಬೇಕು.
ಅರ್ಹ ವಿದ್ಯಾರ್ಥಿಗಳು ಮುತ್ತೂಟ್ ಫೈನಾನ್ಸ್ ಲಿ. ಸಂಸ್ಥೆಯ ಅಧಿಕೃತ ವೆಬ್‌ಸೈಟ್ mgmscholarship.muthootgroup.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30, 2025



