Kisan Tractor Yojana- ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್ ವಿತರಣೆ | ಈಗಲೇ ಅರ್ಜಿ ಹಾಕಿ

Spread the love

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ‘ಕಿಸಾನ್ ಟ್ರಾಕ್ಟರ್ ಯೋಜನೆ’ (Kisan Tractor Yojana) ಮೂಲಕ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್ ವಿತರಣೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ…

ಕೃಷಿ ಕಾರ್ಯಗಳಿಗೆ ಇಂದು ಸ್ವಂತ ಟ್ರಾಕ್ಟರ್ (Tractor) ಅನಿವಾರ್ಯವಾಗಿದೆ. ಆದರೆ ಆ ಕನಸನ್ನು ಸಾಕಾರಗೊಳಿಸಲು ಬೇಕಾದ ದೊಡ್ಡ ಮೊತ್ತದ ಹಣವೇ ಅನೇಕರಿಗೆ ಅಡ್ಡಿಯಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚಾಗುವ ಟ್ರಾಕ್ಟರ್ ಅನ್ನು ಖರೀದಿಸುವುದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸುಲಭದ ಕೆಲಸವಲ್ಲ.

ಈ ಸಮಸ್ಯೆಯನ್ನು ಮನಗಂಡಿರುವ ಕೇಂದ್ರ ಸರ್ಕಾರ, ರೈತರ ನೆರವಿಗೆ ಮುಂದಾಗಿ ಶೇಕಡಾ 50ರಷ್ಟು (50% Tractor Subsidy) ಸಹಾಯಧನದೊಂದಿಗೆ ಟ್ರಾಕ್ಟರ್ ಖರೀದಿಸಲು ಅವಕಾಶ ನೀಡುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮೂಲಕ ರೈತರು ₹10 ಲಕ್ಷ ಮೌಲ್ಯದ ಟ್ರಾಕ್ಟರ್ ಅನ್ನು ಕೇವಲ ₹5 ಲಕ್ಷದಷ್ಟೇ ವೆಚ್ಚದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಹೌದು, ಈ ಯೋಜನೆಯ ಹೆಸರು ‘ಕಿಸಾನ್ ಟ್ರಾಕ್ಟರ್ ಯೋಜನೆ’ (Kisan Tractor Yojana).

ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

Kisan Tractor Yojana ಎಂದರೇನು?

ಕಿಸಾನ್ ಟ್ರಾಕ್ಟರ್ ಯೋಜನೆ ಎನ್ನುವುದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರೈತಪರ ಮಹತ್ವದ ಯೋಜನೆಯಾಗಿದ್ದು, ಕೃಷಿಯಲ್ಲಿ ಯಾಂತ್ರೀಕರಣವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.

ಈ ಯೋಜನೆಯನ್ನು ಕೃಷಿ ಯಾಂತ್ರೀಕರಣದ ಉಪ-ಮಿಷನ್ (Sub-Mission on Agricultural Mechanization – SMAM) ಅಡಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.

ಇದನ್ನೂ ಓದಿ: Aether Rizta Electric Scooter- ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮುಗಿಬಿದ್ದ ಜನ | ಭರ್ಜರಿ ಸೇಲ್ಸ್ | ಏನಿದರ ವಿಶೇಷತೆ?

Objective of the Scheme – ಈ ಯೋಜನೆಯ ಮುಖ್ಯ ಗುರಿ

ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸುವುದು. ಕೃಷಿ ಕೆಲಸಗಳಲ್ಲಿ ಶ್ರಮ ಹಾಗೂ ಸಮಯವನ್ನು ಉಳಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯವನ್ನು ವೃದ್ಧಿಸುವ ಹಿನ್ನಲೆಯಲ್ಲಿ ಜಾರಿಯಾಗಿರುವ ಈ ಯೋಜನೆಯಡಿ ಅರ್ಹ ರೈತರು ಹೊಸ ಟ್ರಾಕ್ಟರ್ ಖರೀದಿಗೆ ಆನ್‌ರೋಡ್ ಬೆಲೆಯ ಮೇಲೆ ಶೇಕಡಾ 50ರಷ್ಟು ಸಬ್ಸಿಡಿ ಪಡೆಯಬಹುದು.

ಇದನ್ನೂ ಓದಿ: Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

Key Benefits of Kisan Tractor Yojana – ಕಿಸಾನ್ ಟ್ರಾಕ್ಟರ್ ಯೋಜನೆಯ ಪ್ರಮುಖ ಲಾಭಗಳು

1. ಶೇಕಡಾ 50ರಷ್ಟು ಸಹಾಯಧನ: ಟ್ರಾಕ್ಟರ್‌ನ ಒಟ್ಟು ಆನ್‌ರೋಡ್ ಬೆಲೆಯ ಅರ್ಧದಷ್ಟು ಮೊತ್ತವನ್ನು ಸರ್ಕಾರವೇ ಭರಿಸುತ್ತದೆ. ಇದರಿಂದ ರೈತರಿಗೆ ಭಾರೀ ಆರ್ಥಿಕ ನೆರವು ದೊರೆಯುತ್ತದೆ.

2. ಮಧ್ಯವರ್ತಿಗಳ ಕಾಟವಿಲ್ಲ: ಬಹುತೇಕ ಸರ್ಕಾರಿ ಯೋಜನೆಗಳಲ್ಲಿ ಮಧ್ಯವರ್ತಿಗಳ ಕಾಟ ಸಾಮಾನ್ಯ. ಆದರೆ ಈ ಯೋಜನೆಯಲ್ಲಿ ಸಬ್ಸಿಡಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ DBT ಮೂಲಕ ಜಮಾ ಮಾಡಲಾಗುತ್ತದೆ. ಹೀಗಾಗಿ ವಂಚನೆಗೆ ಅವಕಾಶವೇ ಇಲ್ಲ.

3. ಪಾರದರ್ಶಕ ಮತ್ತು ವೇಗವಾದ ಪ್ರಕ್ರಿಯೆ: ಡಿಜಿಟಲ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುವುದರಿಂದ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದು.

Kisan Tractor Yojana
Kisan Tractor Yojana
WhatsApp Group Join Now
Telegram Group Join Now

ಇದನ್ನೂ ಓದಿ: Tarpaulin Subsidy Scheme 2026- ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ

4. ಬ್ಯಾಂಕ್ ಸಾಲ ಸೌಲಭ್ಯ: ಸಬ್ಸಿಡಿ ಹೊರತುಪಡಿಸಿ ಉಳಿದ ಮೊತ್ತಕ್ಕೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಹ ಈ ಯೋಜನೆ ಸಹಕಾರಿಯಾಗಿದೆ.

5. ಕೃಷಿ ಉತ್ಪಾದಕತೆ ಹೆಚ್ಚಳ: ಟ್ರಾಕ್ಟರ್‌ನಂತಹ ಯಂತ್ರೋಪಕರಣಗಳಿಂದ ಉಳುಮೆ, ಬಿತ್ತನೆ, ಕಟಾವು ಮುಂತಾದ ಕೆಲಸಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುತ್ತವೆ. ಇದರಿಂದ ಇಳುವರಿ ಹೆಚ್ಚುತ್ತದೆ.

6. ಜಾತಿ ನಿರ್ಬಂಧ ಇಲ್ಲ: ಸಾಮಾನ್ಯ, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಎಲ್ಲ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದು.

7. ಆದ್ಯತೆ ಯಾರಿಗೆ?: ಸಣ್ಣ ಮತ್ತು ಅತಿ ಸಣ್ಣ ರೈತರು, ಮಹಿಳಾ ರೈತರು ಮತ್ತು ಹೆಚ್ಚು ವೆಚ್ಚದಿಂದ ಸಂಕಷ್ಟದಲ್ಲಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್

Eligibility Criteria for Kisan Tractor Yojana – ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಹತೆಗಳು

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತೆಗಳು ಅಗತ್ಯವಿದೆ:

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
  • ರೈತರ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಈ ಹಿಂದೆ ಯಾವುದೇ ಟ್ರಾಕ್ಟರ್ ಸಬ್ಸಿಡಿ ಪಡೆದಿರಬಾರದು
  • ಒಂದು ಕುಟುಂಬಕ್ಕೆ ಒಂದೇ ಟ್ರಾಕ್ಟರ್ ಸಬ್ಸಿಡಿ
  • ಅರ್ಜಿದಾರರು ಮಾನ್ಯ ಭೂ ದಾಖಲೆಗಳನ್ನು ಹೊಂದಿರಬೇಕು

ಇದನ್ನೂ ಓದಿ: Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!

Documents Required to Apply – ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ಭೂ ಮಾಲೀಕತ್ವದ ದಾಖಲೆ (ಪಹಣಿ / ಆರ್‌ಟಿಸಿ)
  • ಬ್ಯಾಂಕ್ ಪಾಸ್‌ಬುಕ್
  • ನಿವಾಸ ಪ್ರಮಾಣ ಪತ್ರ
  • ಖರೀದಿಸಲು ಉದ್ದೇಶಿಸಿರುವ ಟ್ರಾಕ್ಟರ್‌ನ ದರಪಟ್ಟಿ (Quotation)
  • ಪಾಸ್‌ಪೋರ್ಟ್ ಸೈಜ್ ಫೋಟೋ

ಇದನ್ನೂ ಓದಿ: Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…

How to Apply for Kisan Tractor Yojana – ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ರೈತರು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

Online Application Process – ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು

ಮೊದಲಿಗೆ ಕೃಷಿ ಯಾಂತ್ರೀಕರಣ ಪೋರ್ಟಲ್  agrimachinery.nic.in ಅಥವಾ ರಾಜ್ಯ ಕೃಷಿ ಇಲಾಖೆಯ kkisan.karnataka.gov.inಗೆ ಭೇಟಿ ನೀಡಿ.

Kisan Tractor Yojana
Kisan Tractor Yojana

ಅಲ್ಲಿ ಹೊಸ ರೈತ ನೋಂದಣಿ ಆಯ್ಕೆ ಮಾಡಿ. ಆಧಾರ್ ಮೂಲಕ e-KYC ಪೂರ್ಣಗೊಳಿಸಿ. ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆಯಿರಿ. ಅಗತ್ಯ ಮಾಹಿತಿಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಟ್ರಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಿ. ಅರ್ಜಿಯ ಸ್ಥಿತಿಯನ್ನು ಅಪ್ಲಿಕೇಶನ್ ಐಡಿ ಮೂಲಕ ಪರಿಶೀಲಿಸಬಹುದು.

ಇದನ್ನೂ ಓದಿ: Krushi Ilakhe Subsidy Yojanegalu- ಕೃಷಿ ಇಲಾಖೆಯ ಸಬ್ಸಿಡಿ ಯೋಜನೆಗಳು | ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಗಳ ಪಟ್ಟಿ ಇಲ್ಲಿದೆ…

Offline Application Process – ಆಫ್‌ಲೈನ್ ಅರ್ಜಿ ವಿಧಾನ

ಸಮೀಪದ CSC ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ. ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿ. ಪರಿಶೀಲನೆ ನಂತರ ಸಬ್ಸಿಡಿ ಅನುಮೋದನೆ ನೀಡಲಾಗುತ್ತದೆ.

ಹೆಚ್ಚಿನ ವೆಚ್ಚದ ಕಾರಣ ಟ್ರಾಕ್ಟರ್ ಖರೀದಿಸಲು ಹಿಂಜರಿಯುತ್ತಿದ್ದ ರೈತರಿಗೆ ಈ ಯೋಜನೆ ಭಾರೀ ಆಸರೆಯಾಗಿದೆ. ನೀವು ಅರ್ಹರಾಗಿದ್ದರೆ, ತಡಮಾಡದೇ ಈಗಲೇ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ಕೃಷಿಯನ್ನು ಯಾಂತ್ರೀಕರಣದತ್ತ ಕೊಂಡೊಯ್ಯಿರಿ.

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!