KHB Site Allotment- ಸರ್ಕಾರದಿಂದ ಅರ್ಧ ಬೆಲೆಗೆ ಕೆಎಚ್‌ಬಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ಸರ್ಕಾರವು ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಅರ್ಧ ಬೆಲೆಗೆ ಹಂಚಿಕೆ (KHB Site Allotment) ಮಾಡುತ್ತಿದ್ದು; ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ಸ್ವಂತ ಮನೆ ಅಥವಾ ನಿವೇಶನ ಹೊಂದುವುದು ಬಹುತೇಕರ ಜೀವನದ ಬಹುದೊಡ್ಡ ಕನಸಾಗಿರುತ್ತದೆ. ಆದರೆ ಇಂದಿನ ದಿನಗಳಲ್ಲಿ ಭೂಮಿ ಮತ್ತು ಮನೆಗಳ ಬೆಲೆ ಆಕಾಶಕ್ಕೇರಿರುವುದರಿಂದ ಈ ಕನಸು ಸಾಕಾರಗೊಳಿಸಿಕೊಳ್ಳುವುದು ಅನೇಕರಿಗೆ ಅಸಾಧ್ಯವಾಗಿದೆ.

ಇದೀಗ ಕರ್ನಾಟಕ ಸರ್ಕಾರವು ಮನೆ ಕನಸು ಕಾಣುವವರಿಗೆ ಭಾರೀ ಸಿಹಿ ಸುದ್ದಿ ನೀಡಿದ್ದು; ಕರ್ನಾಟಕ ಗೃಹ ಮಂಡಳಿ (Karnataka Housing Board – KHB) ನಿವೇಶನ ಹಂಚಿಕೆಗೆ ಮುಂದಾಗಿದೆ.

ಬೆAಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರ 2ನೇ ಹಂತದಲ್ಲಿ (ಮುಂದುವರೆದ ರಾಜಾಪುರ ಬಡಾವಣೆ) ಅಭಿವೃದ್ಧಿಪಡಿಸಿರುವ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡುವುದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿರುವುದು ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿದೆ.

ಇದನ್ನೂ ಓದಿ: Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ

Easy Site Ownership in Bengaluru – ಬೆಂಗಳೂರಿನಲ್ಲಿ ಸ್ವಂತ ಸೈಟ್ ಈಗ ಸುಲಭ

ಬೆಂಗಳೂರು ನಗರದಲ್ಲಿ ಸ್ವಂತ ನಿವೇಶನ ಹೊಂದಬೇಕು ಎಂಬುದು ಅನೇಕ ಕುಟುಂಬಗಳ ಕನಸು. ಆದರೆ ಖಾಸಗಿ ಲೇಔಟ್‌ಗಳಲ್ಲಿ ನಿವೇಶನಗಳ ಬೆಲೆ ಕೈಗೆಟುಕದ ಮಟ್ಟಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಕೆಎಚ್‌ಬಿ ಅಭಿವೃದ್ಧಿಪಡಿಸಿರುವ ಸರ್ಕಾರಿ ನಿವೇಶನಗಳು ಜನಸಾಮಾನ್ಯರಿಗೆ ದೊಡ್ಡ ಆಶಾಕಿರಣವಾಗಿವೆ.

ಸೂರ್ಯನಗರ 2ನೇ ಹಂತದ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು ಪಾರದರ್ಶಕ ಇ-ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಹೊಸ ವರ್ಷಕ್ಕೂ ಮುನ್ನವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇದು ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: Ashraya Vasathi Yojana- ಆಶ್ರಯ ಮನೆ ಯೋಜನೆಯಡಿ ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು

Available Sites Details – ಲಭ್ಯವಿರುವ ನಿವೇಶನಗಳ ಸಂಖ್ಯೆ ಮತ್ತು ವರ್ಗವಾರು ವಿವರ

ಈ ಯೋಜನೆಯಡಿ ಒಟ್ಟು 332 ನಿವೇಶನಗಳು ವಿವಿಧ ಆದಾಯ ವರ್ಗಗಳಿಗೆ ಮೀಸಲಿಡಲಾಗಿದೆ. ವರ್ಗವಾರು ವಿವರ ಹೀಗಿದೆ:

1. EWS (ಆರ್ಥಿಕ ದುರ್ಬಲ ವರ್ಗ)

  • ನಿವೇಶನಗಳು: 21
  • ನೋಂದಣಿ ಶುಲ್ಕ: 300 ರೂ.
  • ಆರಂಭಿಕ ಠೇವಣಿ: 50,000 ರೂ.

2. LIG (ಅಲ್ಪ ಆದಾಯ ವರ್ಗ)

  • ನಿವೇಶನಗಳು: 127
  • ನೋಂದಣಿ ಶುಲ್ಕ: 500 ರೂ.
  • ಆರಂಭಿಕ ಠೇವಣಿ: 1,00,000 ರೂ.

3. MIG (ಮಧ್ಯಮ ಆದಾಯ ವರ್ಗ)

  • ನಿವೇಶನಗಳು: 98
  • ನೋಂದಣಿ ಶುಲ್ಕ: 1,000 ರೂ.
  • ಆರಂಭಿಕ ಠೇವಣಿ: 2,00,000 ರೂ.
KHB Site Allotment
KHB Site Allotment

4. HIG–I (ಉನ್ನತ ಆದಾಯ ವರ್ಗ-1)

  • ನಿವೇಶನಗಳು: 79
  • ನೋಂದಣಿ ಶುಲ್ಕ: 1,500 ರೂ.
  • ಆರಂಭಿಕ ಠೇವಣಿ: 2,50,000 ರೂ.
WhatsApp Group Join Now
Telegram Group Join Now

5. HIG–II (ಉನ್ನತ ಆದಾಯ ವರ್ಗ-2)

  • ನಿವೇಶನಗಳು: 07
  • ನೋಂದಣಿ ಶುಲ್ಕ: 1,500 ರೂ.
  • ಆರಂಭಿಕ ಠೇವಣಿ: 3,00,000 ರೂ.

ಇದನ್ನೂ ಓದಿ: 8th Pay Commission- 8ನೇ ವೇತನ ಆಯೋಗ ವರದಿ | ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ

50% Special Discount – ಈ ವರ್ಗಕ್ಕೆ ಶೇ.50 ರಷ್ಟು ವಿಶೇಷ ರಿಯಾಯಿತಿ

ಈ ಯೋಜನೆಯ ಪ್ರಮುಖ ವಿಶೇಷತೆ ಎಂದರೆ EWS ವರ್ಗದ ಅರ್ಜಿದಾರರಿಗೆ ನಿವೇಶನದ ಬೆಲೆಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದು ನಿಜಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ದೊಡ್ಡ ನೆರವಾಗಿದೆ.

ಈ ರಿಯಾಯಿತಿ ಪಡೆಯಲು ನಗರ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ 72,000 ರೂ. ಮೀರಬಾರದು. ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಬಾರದು. ಈ ರಿಯಾಯಿತಿ ಪಡೆಯಲು ತಹಶೀಲ್ದಾರ್ ದೃಢೀಕರಿಸಿದ ಆದಾಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: TaTa Capital Pankh Scholarship 2025- ಪಿಯುಸಿ ವಿದ್ಯಾರ್ಥಿಗಳಿಗೆ ₹15,000 ಆರ್ಥಿಕ ನೆರವು | ಟಾಟಾ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ

Eligibility Criteria – ಯಾರು ಅರ್ಜಿ ಸಲ್ಲಿಸಬಹುದು?

ನಿವೇಶನ ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು. ಪ್ರಮುಖವಾಗಿ ಅರ್ಜಿದಾರರು ಕನಿಷ್ಠ 10 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು

ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಈಗಾಗಲೇ ಕರ್ನಾಟಕ ಗೃಹ ಮಂಡಳಿ (KHB) ಅಥವಾ ಯಾವುದೇ ಸ್ಥಳೀಯ ಸಂಸ್ಥೆಯಿAದ ಮನೆ ಅಥವಾ ನಿವೇಶನ ಪಡೆದಿರಬಾರದು.

Application Process – ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು; ಆಸಕ್ತರು ಕರ್ನಾಟಕ ಗೃಹ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಲಿಂಕ್ ಲೇಖನದ ಕೊನೆಯಲ್ಲಿ ನೀಡಲಾಗಿದೆ ಗಮನಿಸಿ.

ಮೊದಲಿಗೆ ಆನ್‌ಲೈನ್ ನೋಂದಣಿ ಮಾಡಿ. e-Payment ಮೂಲಕ ನೋಂದಣಿ ಶುಲ್ಕ ಮತ್ತು ಆರಂಭಿಕ ಠೇವಣಿ ಪಾವತಿಸಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ನಿವೇಶನಗಳ ಹಂಚಿಕೆ e-Lottery ವ್ಯವಸ್ಥೆಯ ಮೂಲಕ ಪಾರದರ್ಶಕವಾಗಿ ನಡೆಯಲಿದೆ.

ಇದನ್ನೂ ಓದಿ: Karnataka Govt SSP Scholarship 2025-26- ಕರ್ನಾಟಕ ಸರ್ಕಾರದಿಂದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು

Last Date to Apply – ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ

ಸ್ವAತ ನಿವೇಶನ ಹೊಂದುವ ಕನಸು ನಿಮ್ಮದಲ್ಲೂ ಇದ್ದರೆ, ಈ ಕೆಎಚ್‌ಬಿ ನಿವೇಶನ ಹಂಚಿಕೆ ಯೋಜನೆ ಒಂದು ಅಪರೂಪದ ಅವಕಾಶವಾಗಿದೆ. ವಿಶೇಷವಾಗಿ ಆರ್ಥಿಕ ದುರ್ಬಲ ವರ್ಗದವರಿಗೆ ಅರ್ಧ ಬೆಲೆಯಲ್ಲಿ ನಿವೇಶನ ಸಿಗುತ್ತಿರುವುದು ದೊಡ್ಡ ವರದಾನವೇ ಸರಿ.

ಈ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನಾಂಕವಾಗಿದೆ. ನೀವು ಅರ್ಹತೆ ಹೊಂದಿದ್ದರೆ ಈ ಅವಕಾಶ ಕೈ ತಪ್ಪಿಸಿಕೊಳ್ಳದೇ ನಿದಿತ ಅವಧಿಯೊಳಗೇ ಅರ್ಜಿ ಸಲ್ಲಿಸಿ. ನಿಮ್ಮ ಸ್ವಂತ ಮನೆ ಕನಸಿನ ಮೊದಲ ಹೆಜ್ಜೆ ಇಲ್ಲಿಂದಲೇ ಆರಂಭವಾಗಲಿ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

For More Information – ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಯಾವುದೇ ಗೊಂದಲ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು:

  1. 8722925429
  2. 9480182950
  3. 9448431867
  4. 080-22273511 (Ext. 307)

ಅಧಿಸೂಚನೆ: Download
ಅರ್ಜಿ ಲಿಂಕ್: khbepay.com


Spread the love
error: Content is protected !!