KCET Result 2025- ಸಿಇಟಿ ಫಲಿತಾಂಶ ಇಂದು ಪ್ರಕಟ | ರಿಸಲ್ಟ್ ಹೀಗೆ ನೋಡಿ | ಫಲಿತಾಂಶ ನಂತರದ ಪ್ರಮುಖ ಹಂತಗಳ ಮಾಹಿತಿ ಇಲ್ಲಿದೆ…

Spread the love

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸುಕತೆಯಿಂದ ನಿರೀಕ್ಷಿಸಿದ್ದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಲಿದೆ…

WhatsApp Group Join Now
Telegram Group Join Now

ಇಂದು ಮೇ 24ರ ಬೆಳಿಗ್ಗೆ 11:30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಫಲಿತಾಂಶ ಪ್ರಕಟ ನಂತರ ವಿದ್ಯಾರ್ಥಿಗಳು ಈ ವರ್ಷದ ಸಿಇಟಿ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಯ ನಂತರ ಕೆಳಕಂಡ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದಾಗಿದೆ:

  1. https://cctonline.Karnataka.gov.in/ugcetrank2025/
  2. cheekresult.aspx
  3. https://karresults.nic.in/

ಈ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮತಾರೀಖು ಬಳಸಿ ತಮ್ಮ ವೈಯಕ್ತಿಕ ಫಲಿತಾಂಶ, ಶ್ರೇಣೀಕ್ರಮ ಹಾಗೂ ಪಿಯುಸಿ ಮತ್ತು ಸಿಇಟಿ ಅಂಕಗಳ ಸಮಗ್ರ ಮಾಹಿತಿ ಪಡೆಯಬಹುದು.

KCET Result 2025- ಕೆಸಿಇಟಿ-2025 ಫಲಿತಾಂಶ ಮೇ 24ರಂದು ಪ್ರಕಟ | ಮೊಬೈಲ್‌ನಲ್ಲೇ ರಿಸಲ್ಟ್ ನೋಡಿ…

ಫಲಿತಾಂಶವನ್ನು ಪರಿಶೀಲಿಸುವ ಸರಳ ಕ್ರಮ
  • ಮೊದಲು ಮೇಲ್ಕಾಣಿಸಿದ ಯಾವುದಾದರೂ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ.
  • “UGCET 2025 Results” ಅಥವಾ “CET Result 2025” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಅಇಖಿ ನೋಂದಣಿ ಸಂಖ್ಯೆ (Application Number) ಹಾಗೂ ಜನ್ಮತಾರೀಖನ್ನು (Date of Birth) ಸರಿಯಾಗಿ ನಮೂದಿಸಿ.
  • “Submit” ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಫಲಿತಾಂಶದ ವಿವರಗಳು ತೋರಿಸಲಾಗುತ್ತದೆ.
  • ಅದನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.
2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಲಿದೆ...
KCET Result 2025 Check Process Important Dates
ಫಲಿತಾಂಶ ಪ್ರಕಟವಾದ ನಂತರದ ಹಂತಗಳು

ಸಿಇಟಿ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣ ಪ್ರಗತಿಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ:

1. ಅಂಕಗಳ ಪರಿಶೀಲನೆ ಮತ್ತು ತಿದ್ದುಪಡಿ ಅರ್ಜಿ: ಫಲಿತಾಂಶದಲ್ಲಿ ತಪ್ಪು ಅಂಕಗಳು ಅಥವಾ ಯಾವುದೇ ಅಸಮಾಧಾನಕರ ಅಂಶಗಳು ಕಂಡುಬಂದಲ್ಲಿ, ವಿದ್ಯಾರ್ಥಿಗಳು ತಿದ್ದುಪಡಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಿಶೇಷವಾದ ಅಂತಿಮ ದಿನಾಂಕ ನಿಗದಿಪಡಿಸಲಾಗುತ್ತದೆ.

2. ಆಯ್ಕೆ ಪ್ರಕ್ರಿಯೆ (Option Entry): ಕೆಇಎ ಆಯ್ಕೆ (choice entry) ಪ್ರಕ್ರಿಯೆ ಆರಂಭಿಸಿ, ವಿದ್ಯಾರ್ಥಿಗಳಿಗೆ ಇಚ್ಛಿತ ಕೋರ್ಸ್’ಗಳು ಹಾಗೂ ಕಾಲೇಜುಗಳನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತದೆ. ಈ ಹಂತದಲ್ಲಿ ಸರಿಯಾದ ಆದ್ಯತೆಯೊಂದಿಗೆ ಆಯ್ಕೆ ಮಾಡುವುದು ಬಹುಮುಖ್ಯವಾಗಿದೆ.

Daughter Property Rights- ತಂದೆಯ ಈ ಆಸ್ತಿಗಳ ಮೇಲೆ ಮಗಳಿಗೆ ಹಕ್ಕಿಲ್ಲ | ಎಲ್ಲ ಮಹಿಳೆಯರೂ ತಿಳಿದಿರಲೇಬೇಕಾದ ಕಾನೂನು ಮಾಹಿತಿ

3. ಡಾಕ್ಯುಮೆಂಟ್ ವೇರಿಫಿಕೇಶನ್ (Document Verification): ವೈಯಕ್ತಿಕವಾಗಿ ಅಥವಾ ಕೆಲವೊಮ್ಮೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಲು ಹಾಜರಾಗಬೇಕಾಗುತ್ತದೆ. ಈ ಹಂತದಲ್ಲಿ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ:

  • ಪಿಯುಸಿ ಅಂಕಪಟ್ಟಿ (2ನೇ ಪಿಯುಸಿ)
  • ಸಿಇಟಿ ಹಾಲ್ ಟಿಕೆಟ್
  • ಆದಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಅರ್ಹತೆಯಿದ್ದಲ್ಲಿ)
  • ರೇಶನ್ ಕಾರ್ಡ್ ಅಥವಾ ವಿಳಾಸ ದೃಢೀಕರಣ ಪತ್ರ

4. ಕೌನ್ಸೆಲಿಂಗ್ ಮತ್ತು ಸೀಟ್ ಹಂಚಿಕೆ: ವಿದ್ಯಾರ್ಥಿಗಳ ಆಯ್ಕೆ ಮಾಡಿದ ಆಯ್ಕೆಗಳ ಆಧಾರದ ಮೇಲೆ, ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆ ಹಲವು ಹಂತಗಳಲ್ಲಿ ನಡೆಯುತ್ತಿದ್ದು, ಪ್ರತಿ ಹಂತದ ನಂತರ ನಿಗದಿತ ಸಮಯಕ್ಕೆ ಹೊಸ ಆಯ್ಕೆಗಳು ಮತ್ತು ಸೀಟ್ ಸ್ವೀಕೃತಿ ಅಥವಾ ನಿರಾಕರಣೆ ಆಯ್ಕೆಗಳು ಲಭ್ಯವಿರುತ್ತವೆ.

Home Loan Low Interest Banks- ಕಡಿಮೆ ಬಡ್ಡಿಗೆ ಸಾಲ | ಯಾವ ಬ್ಯಾಂಕ್ ಉತ್ತಮ? | ಟಾಪ್ 10 ಬ್ಯಾಂಕುಗಳ ಪಟ್ಟಿ ಇಲ್ಲಿದೆ…

ಕೌನ್ಸೆಲಿಂಗ್ ಸಂಬಂಧಿತ ಪ್ರಮುಖ ಅಂಶಗಳು
  • ಸೀಟ್ ಅನ್ನು ಒಪ್ಪಿಕೊಂಡ ನಂತರ ಟುಷನ್ ಫೀ ಪಾವತಿಸಿ, ತಾತ್ಕಾಲಿಕ ಪ್ರವೇಶ ಪತ್ರ (Provisional Allotment Letter) ಪಡೆಯಬೇಕು.
  • ಪ್ರತಿ ಹಂತದ ನಂತರ ಸೀಟ್‌ಗಳನ್ನು ಸ್ಟೇಟಸ್ ಅಪ್‌ಡೇಟ್ ಮಾಡಲಾಗುತ್ತದೆ. ಆದ್ದರಿಂದ ನಿಯಮಿತವಾಗಿ ವೆಬ್‌ಸೈಟ್ ಪರಿಶೀಲನೆ ಅಗತ್ಯ.
  • ಸರ್ಕಾರದ ನಿಯಮಾನುಸಾರ ಮೀಸಲಾತಿ (Reservation) ನಿಯಮಗಳು ಅನ್ವಯಿಸಲಾಗುತ್ತವೆ.
ಮಹತ್ವದ ದಿನಾಂಕಗಳು
  • ಫಲಿತಾಂಶ ಪ್ರಕಟ: ಮೇ 24, 2025
  • ಆಯ್ಕೆ ಪ್ರಕ್ರಿಯೆ ಪ್ರಾರಂಭ: ಮೇ 27, 2025
  • ಡಾಕ್ಯುಮೆಂಟ್ ಪರಿಶೀಲನೆ: ಜೂನ್ 1 ರಿಂದ
  • ಮೊದಲ ಹಂತದ ಸೀಟ್ ಹಂಚಿಕೆ: ಜೂನ್ 15, 2025
  • ಕೊನೆ ಹಂತದ ಪ್ರವೇಶ ದಿನಾಂಕ: ಜುಲೈ ಅಂತ್ಯದ ಒಳಗಾಗಿ

ವಿದ್ಯಾರ್ಥಿಗಳು ಮತ್ತು ಪೋಷಕರು, ಫಲಿತಾಂಶ ಪ್ರಕಟವಾದ ತಕ್ಷಣವೇ ಯಾವುದೇ ಆತುರ ಅಥವಾ ಭಯವಿಲ್ಲದೆ ಪ್ರಕ್ರಿಯೆ ಮುಂದುವರೆಸುವುದು ಅತ್ಯಗತ್ಯ. ಎಲ್ಲಾ ಹಂತಗಳನ್ನು ನಿಯಮಿತವಾಗಿ ಗಮನಿಸಿ ಮತ್ತು ಯಾವುದೇ ಸಂದೇಹಗಳಿದ್ದರೆ KEA ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ…

HDFC Bank Loan- ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಮೇ 07ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ಹೊಸ ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!