ಸಿಇಟಿ ಆಧಾರಿತ ಡಿಗ್ರಿ ಕೋರ್ಸುಗಳ ಪ್ರವೇಶಕ್ಕಾಗಿ ಜೂನ್ 25ರಿಂದ ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ (KCET Counselling 2025) ಆರಂಭವಾಗಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರು ನೀಡಿದ ಮಾಹಿತಿ ಇಲ್ಲಿದೆ…
ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ 2024-25ನೇ ಶೈಕ್ಷಣಿಕ ಸಾಲಿನ ಸಿಇಟಿ ಆಧಾರಿತ ಪದವಿಪೂರ್ವ ತಾಂತ್ರಿಕ ಶಿಕ್ಷಣ ಪ್ರವೇಶ (KCET) ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ಕಾಲಿಡುತ್ತಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಪ್ರಕಾರ, ಈ ವರ್ಷ ಜೂನ್ 25ರಿಂದ ಸಿಇಟಿ ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾಹಿತಿ ನೀಡಿದ್ದಾರೆ.
Karnataka Old Pension Scheme- ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಮರುಜಾರಿ | ರಾಜ್ಯ ಸರ್ಕಾರದ ಮಹತ್ವದ ಕ್ರಮ
ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಪ್ರಮುಖ ಹಂತ
ಸಿಇಟಿ ಆಧಾರಿತ ಇಂಜಿನಿಯರಿಂಗ್ ಕೋರ್ಸುಗಳಿಗೆ ಸೀಟು ಹಂಚಿಕೆಗೆ ಮೊದಲು ಕರಡು ಸೀಟ್ ಮ್ಯಾಟ್ರಿಕ್ಸ್ (Seat Matrix Draft) ಅನ್ನು ಪ್ರಕಟಿಸಲಾಗುತ್ತದೆ.
ಈ ವಾರದೊಳಗೆ ಇಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಕರಡು ಪ್ರಕಟಿಸಲಾಗುವುದು. ವಿದ್ಯಾರ್ಥಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ನಂತರ ಅಂತಿಮ ಮ್ಯಾಟ್ರಿಕ್ಸ್ ಪ್ರಕಟಿಸುತ್ತೇವೆ ಎಂದು ಉನ್ನತ ಶೀಕ್ಷಣ ಸಚಿವರು ತಿಳಿಸಿದ್ದಾರೆ.
ಸೀಟ್ ಮ್ಯಾಟ್ರಿಕ್ಸ್ ಅಂದರೆ ಕಾಲೇಜು, ವಿಭಾಗ ಹಾಗೂ ಕೋರ್ಸುಗಳ ಆಧಾರದಲ್ಲಿ ಲಭ್ಯವಿರುವ ಸೀಟುಗಳ ಪಟ್ಟಿ. ಇದರ ಆಧಾರದ ಮೇಲೆ ವಿದ್ಯಾರ್ಥಿಗಳು ತಮ್ಮ ಆಯ್ಕೆಗಳನ್ನು (option entry) ಸಲ್ಲಿಸುತ್ತಾರೆ.
ಎಐಸಿಟಿಇ ಸ್ಥಳ ಪರಿಶೀಲನೆ
ಇಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟವನ್ನು ಖಾತರಿಪಡಿಸಲು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (All India Council of Technical Education-AICTE) ಅಧಿಕಾರಿಗಳ ತಂಡವು ರಾಜ್ಯದ ವಿವಿಧ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಳೀಯ ಪರಿಶೀಲನೆ ನಡೆಸುತ್ತಿದೆ.
ಈ ಪರಿಶೀಲನೆಯು ಖಾಸಗಿ ಕಾಲೇಜುಗಳು ನೀಡಿರುವ ಸೀಟ್ ಮಾಹಿತಿಗೆ ಅನುಗುಣವಾಗಿ ತಾಂತ್ರಿಕ ಮೂಲಸೌಕರ್ಯ, ಪ್ರಯೋಗಾಲಯ, ಬೋಧಕ ಸಿಬ್ಬಂದಿ, ಹಾಸ್ಟೆಲ್ ಸೌಲಭ್ಯಗಳ ಸ್ಥಿತಿಗತಿಗಳನ್ನು ಪರಿಗಣಿಸುತ್ತದೆ. ಪರಿಶೀಲನೆಯ ಬಳಿಕ ಮಾತ್ರ ಅಂತಿಮ ಸೀಟ್ ಮ್ಯಾಟ್ರಿಕ್ಸ್ಗೆ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀಟ್ ಫಲಿತಾಂಶದ ನಿರೀಕ್ಷೆಯಲ್ಲಿ ವೈದ್ಯಕೀಯ ವಿಭಾಗ
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕಾಗಿ ಬೇಕಾದ ನೀಟ್ (NEET) ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಇದರ ಪರಿಣಾಮವಾಗಿ ವೈದ್ಯಕೀಯ ಕೋರ್ಸ್’ಗಳ ಸೀಟ್ ಮ್ಯಾಟ್ರಿಕ್ಸ್ ಸ್ಥಿರವಾಗಿಲ್ಲ.
ಆದಾಗ್ಯೂ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಈಗಾಗಲೇ ತಾತ್ಕಾಲಿಕ ಸೀಟ್ ಮ್ಯಾಟ್ರಿಕ್ಸ್ ಅನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ತಾತ್ಕಾಲಿಕ ಸೀಟ್ ವಿವರಗಳು ಹೀಗಿದೆ:
- ವೈದ್ಯಕೀಯ ಸೀಟುಗಳು: 8,195
- ದಂತ ವೈದ್ಯಕೀಯ ಸೀಟುಗಳು: 2,555
- ನರ್ಸಿಂಗ್ ಸೀಟುಗಳು: 38,165
ಈ ಕೋರ್ಸುಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕೌನ್ಸಿಲಿಂಗ್ ದಿನಾಂಕ ಪ್ರಕಟವಾಗಲಿದೆ.
ಈ ಬಾರಿ ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ ಏರಿಕೆ
ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯರಿಂಗ್ ಕೋರ್ಸುಗಳಿಗೆ 79,907 ಸೀಟುಗಳು ಲಭ್ಯವಿದ್ದವು. ಆದರೆ ಈ ಬಾರಿ AICTE ಅನುಮೋದನೆ, ಹೊಸ ಕಾಲೇಜುಗಳು ಸೇರಿಕೆ, ಹಳೆಯ ಕಾಲೇಜುಗಳಲ್ಲಿ ಸೌಲಭ್ಯ ವಿಸ್ತರಣೆ ಇತ್ಯಾದಿಗಳ ಆಧಾರದಲ್ಲಿ 90,000ಕ್ಕಿಂತ ಅಧಿಕ ಸೀಟುಗಳು ಲಭ್ಯವಾಗುವ ಸಾಧ್ಯತೆ ಇದೆ.
ಇದು ಎಸ್ಸಿ/ಎಸ್ಟಿ, ಓಬಿಸಿ, ಇಬಿಸಿ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶ ಹೆಚ್ಚಿಸುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಲಿರುವ ಇಂಜನಿಯರಿಂಗ್ ಸ್ನಾತಕ ಕೋರ್ಸ್’ಗಳ ಕೌನ್ಸಿಲಿಂಗ್ ಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ:
- ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಾರಂಭ: ಜೂನ್ 25, 2025
- ಎರಡನೇ ಸುತ್ತು ಆರಂಭ: ಜುಲೈ 10, 2025
- ಮುಂದುವರಿದ ಎರಡನೇ ಸುತ್ತು: ಜುಲೈ 25, 2025
- ತರಗತಿಗಳ ಪ್ರಾರಂಭ: ಆಗಸ್ಟ್ 1, 2025
ವಿದ್ಯಾರ್ಥಿಗಳಿಗೆ ಸಲಹೆಗಳು
- ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾದ ಕೂಡಲೆ ಪರಿಶೀಲನೆ ಮಾಡಿ. ತಮ್ಮ ರ್ಯಾಂಕ್ ಹಾಗೂ ಕೋರ್ಸ್ ಆದ್ಯತೆಯ ಆಧಾರದಲ್ಲಿ option entry ಗಮನದಿಂದ ಮಾಡಬೇಕು.
- ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ, ಶಿಕ್ಷಕರ ಅನುಪಾತ, ಹಾಸ್ಟೆಲ್ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.
- ಅಂತಿಮ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾದ ನಂತರ ಆಯ್ಕೆ ಪ್ರಕ್ರಿಯೆ ಗಂಭೀರವಾಗುತ್ತದೆ. ಆದ್ದರಿಂದ ಆಕ್ಷೇಪಣೆಗಳು ಇದ್ದರೆ ಮೊದಲನೇ ಹಂತದಲ್ಲೇ ಸಲ್ಲಿಸುವುದು ಸೂಕ್ತ.
ಈ ವರ್ಷದ ಸಿಇಟಿ ಆಧಾರಿತ ಪ್ರವೇಶ ಪ್ರಕ್ರಿಯೆ ಇನ್ನಷ್ಟು ಸುಸೂತ್ರ, ತಾಂತ್ರಿಕ ಹಾಗೂ ಗುಣಾತ್ಮಕವಾಗಿ ನಡೆಯಲಿದೆ. ವಿದ್ಯಾರ್ಥಿಗಳು ಜೂನ್ 25ರಿಂದ ಆರಂಭವಾಗುವ ಕೌನ್ಸಿಲಿಂಗ್ ಪ್ರಕ್ರಿಯೆಗೆ ತಯಾರಿ ನಡೆಸಿಕೊಳ್ಳಬೇಕು. ಸರ್ಕಾರ ಮತ್ತು ಕೆಇಎ ಅಧಿಕಾರಿಗಳು ಆನ್ಲೈನ್ ವೇದಿಕೆಯ ಮೂಲಕ ಎಲ್ಲ ಮಾಹಿತಿಯನ್ನು ಪೂರೈಸುತ್ತಿದ್ದಾರೆ.