2026ನೇ ಸಾಲಿನ ಸಿಇಟಿ ಪರೀಕ್ಷೆ ದಿನಾಂಕ ನಿಗದಿಯಾಗಿದ್ದು ಸಂಪೂರ್ಣ ವೇಳಾಪಟ್ಟಿ (KCET 2026 Exam Timetable) ಪ್ರಕಟವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ವೃತ್ತಿಪರ ಕೋರ್ಸುಗಳಲ್ಲಿ ಪ್ರವೇಶ ಪಡೆಯುವ ಕನಸು ಕಂಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ವು (Karnataka Examinations Authority- KEA) 2026ನೇ ಸಾಲಿನ ‘ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (Karnataka Common Entrance Test –KCET)’ ದಿನಾಂಕಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.
ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು 2026ರಲ್ಲಿ ಕೆಇಎ ನಡೆಸಲಿರುವ ಎಲ್ಲ ಪ್ರವೇಶ ಪರೀಕ್ಷೆಗಳ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ಘೋಷಣೆಯೊಂದಿಗೆ ವಿದ್ಯಾರ್ಥಿಗಳಲ್ಲಿ ತಯಾರಿಯ ಒತ್ತಡವೂ ಹೆಚ್ಚಾಗಿದೆ. ಆದರೆ ಸರಿಯಾದ ಮಾಹಿತಿ ಮತ್ತು ಸಮಯಬದ್ಧ ಯೋಜನೆಯಿಂದ ಸಿಇಟಿ ಯಶಸ್ಸು ಸಾಧಿಸುವುದು ಸಾಧ್ಯ.
ಇದನ್ನೂ ಓದಿ: Aadhar Kaushal Scholarship 2025-26- ಆಧಾರ್ ಕೌಶಲ್ ವಿದ್ಯಾರ್ಥಿವೇತನ | ಈ ವಿದ್ಯಾರ್ಥಿಗಳಿಗೆ 50,000 ರೂ. ಆರ್ಥಿಕ ನೆರವು
2026 CET Exam Date – 2026ರ ಸಿಇಟಿ ಪರೀಕ್ಷೆ ಯಾವಾಗ?
2026ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಏಪ್ರಿಲ್ 23 ಮತ್ತು 24, 2026ರಂದು ನಡೆಸಲಾಗುತ್ತದೆ. ಈ ಪರೀಕ್ಷೆ ಮೂಲಕ ಎಂಜಿನಿಯರಿAಗ್, ಫಾರ್ಮಸಿ, ಕೃಷಿ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶ ನಿಗದಿಯಾಗುತ್ತದೆ.
CET Application Details – ಸಿಇಟಿ ಅರ್ಜಿ ಸಲ್ಲಿಕೆ ವಿವರ
ಜನವರಿ 17, 2026 ಆನ್‌ಲೈನ್ ನೋಂದಣಿ ಆರಂಭವಾಗುತ್ತದೆ. ಈ ಬಾರಿಯೂ OTP ಆಧಾರಿತ ಅರ್ಜಿ ಸಲ್ಲಿಕೆ ವ್ಯವಸ್ಥೆ ಮುಂದುವರಿಯಲಿದೆ. ನೋಂದಣಿ ಹಾಗೂ ಲಾಗಿನ್ ನಂತರ ಅಭ್ಯರ್ಥಿಗಳು ತಮ್ಮ ಅರ್ಜಿ ವಿವರಗಳ ಜತೆಗೆ OTP ಸಲ್ಲಿಸುವುದು ಕಡ್ಡಾಯ.
OTP ಸಲ್ಲಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಅಭ್ಯರ್ಥಿಯೇ ನೈಜ ಸಮಯದಲ್ಲಿ ತಮ್ಮ ಫೋಟೋವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ ಎಂದು ಕೆಇಎ ಮೂಲಗಳು ತಿಳಿಸಿವೆ.

CET Guide Release – ‘ಸಿಇಟಿ ದಿಕ್ಕೂಚಿ’ ಬಿಡುಗಡೆ
ಸಿಇಟಿ ಪ್ರಕ್ರಿಯೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನೂ ಸುಲಭವಾಗಲಿ ಎಂಬ ಉದ್ದೇಶದಿಂದ, ‘ಸಿಇಟಿ ದಿಕ್ಕೂಚಿ’ ಎಂಬ ಕೈಪಿಡಿಯನ್ನು ಕೆಇಎ ಬಿಡುಗಡೆ ಮಾಡಿದೆ. ಈ ಕೈಪಿಡಿಯನ್ನು ಎಲ್ಲಾ ಕಾಲೇಜುಗಳಿಗೆ ತಲುಪಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ ಎಂದು ಸಚಿವ ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಈ ದಿಕ್ಕೂಚಿಯಲ್ಲಿ ಪರೀಕ್ಷಾ ನೋಂದಣಿ ವಿಧಾನ, ಅರ್ಜಿ ಸಲ್ಲಿಕೆ ವಿಧಾನ, ಅರ್ಜಿ ತಿದ್ದುಪಡಿ ಹಾಗೂ ಪ್ರಮುಖ ಸೂಚನೆಗಳ ಸಂಪೂರ್ಣ ವಿವರಗಳನ್ನು ಸಚಿತ್ರವಾಗಿ, ಸರಳ ಭಾಷೆಯಲ್ಲಿ ವಿವರಿಸಲಾಗಿದೆ.
2026 CET Exam Schedule – 2026 ಸಿಇಟಿ ಪರೀಕ್ಷಾ ವೇಳಾಪಟ್ಟಿ
2026ನೇ ಸಾಲಿನ ಸಿಇಟಿ ವಿಷಯವಾರು ಪರೀಕ್ಷಾ ದಿನಾಂಕ ಮತ್ತು ಸಮಯದ ಸಂಪೂರ್ಣ ಪರೀಕ್ಷಾ ವೇಳಾಪಟ್ಟಿ ಹೀಗಿದೆ:
- ಭೌತವಿಜ್ಞಾನ: ಏಪ್ರಿಲ್ 23 ಬೆಳಗ್ಗೆ 10.30 ರಿಂದ 11.50
- ರಾಸಾಯನ ವಿಜ್ಞಾನ: ಏಪ್ರಿಲ್ 23 ಮಧ್ಯಾಹ್ನ 2.30 ರಿಂದ 3.50
- ಗಣಿತ: ಏಪ್ರಿಲ್ 24 ಬೆಳಗ್ಗೆ 10.30 ರಿಂದ 11.50
- ಜೀವವಿಜ್ಞಾನ: ಏಪ್ರಿಲ್ 24 ಮಧ್ಯಾಹ್ನ 2.30 ರಿಂದ 3.50
- ಹೊರನಾಡು / ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ: ಏಪ್ರಿಲ್ 22 ಬೆಳಗ್ಗೆ 10.30 ರಿಂದ 11.30

Other Major Entrance Exams in 2026 – 2026ರಲ್ಲಿ ನಡೆಯುವ ಇತರ ಪ್ರಮುಖ ಪ್ರವೇಶ ಪರೀಕ್ಷೆಗಳು
- ಕ್ರೈಸ್ ವಸತಿ ಶಾಲೆ ಪ್ರವೇಶ ಪರೀಕ್ಷೆ: ಮಾರ್ಚ್ 1
- ಪಿಜಿ-ಸಿಇಟಿ (MBA, MCA): ಮೇ 14
- ಪಿಜಿ-ಸಿಇಟಿ (M.Tech) ಮತ್ತು ಡಿಸಿಇಟಿ: ಮೇ 23
- ಎಂ.ಎಸ್‌ಸಿ ನರ್ಸಿಂಗ್, ಎಂ.ಎಸ್‌ಸಿ-ಎಎಚ್‌ಎಸ್, ಎಂಪಿಟಿ: ಜುಲೈ 18
- ಕೆಎಸ್‌ಇಟಿ: ಅಕ್ಟೋಬರ್ 11
- ಎಂ.ಫಾರ್ಮಾ, ಡಿ.ಫಾರ್ಮಾ: ನವೆಂಬರ್ 21
ಇದನ್ನೂ ಓದಿ: Gold Silver Price Increase- ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ | ಮುಗಿಬಿದ್ದ ಖರೀದಿದಾರರು
Limit on Computer Science Seats – ಕಂಪ್ಯೂಟರ್ ಸೈನ್ಸ್ ಸೀಟುಗಳಿಗೆ ಮಿತಿ
ರಾಜ್ಯದಲ್ಲಿ ಒಟ್ಟು 1.53 ಲಕ್ಷ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದ್ದು, ಈ ಪೈಕಿ 99,000ಕ್ಕೂ ಹೆಚ್ಚು ಸೀಟುಗಳು ಕಂಪ್ಯೂಟರ್ ಸೈನ್ಸ್ ಮತ್ತು ಸಂಬAಧಿತ ಕೋರ್ಸುಗಳಿಗೆ ಮೀಸಲಾಗಿವೆ.
ಇತರ ಎಂಜಿನಿಯರಿಂಗ್ ಶಾಖೆಗಳಿಗೂ ಉತ್ತೇಜನ ನೀಡುವ ಉದ್ದೇಶದಿಂದ ಕಂಪ್ಯೂಟರ್ ಸೈನ್ಸ್ ಕೋರ್ಸುಳಿಗೆ ಮಿತಿ ನಿಗದಿ ಮಾಡುವ ನಿರ್ಧಾರವನ್ನು ಈ ವರ್ಷದಿಂದಲೇ ಜಾರಿಗೆ ತರಲಾಗುತ್ತದೆ.
ಈ ಸಂಬಂಧ ಮಾರ್ಗಸೂಚಿ ರೂಪಿಸಲು ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಸಚಿವ ಎಂ.ಸಿ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
Tips for Students – ವಿದ್ಯಾರ್ಥಿಗಳಿಗೆ ಸಲಹೆ
ಸಿಇಟಿ ಆಕಾಂಕ್ಷಿತ ವಿದ್ಯಾರ್ಥಿಗಳೇ ಈಗಲೇ ಸಿಲಬಸ್ ಪೂರ್ಣಗೊಳಿಸುವತ್ತ ಗಮನಹರಿಸಿ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ. ಸಮಯ ನಿರ್ವಹಣೆಗೆ ಮಾದರಿ ಪರೀಕ್ಷೆಗಳನ್ನು ಬರೆಯಿರಿ.
2026ನೇ ಸಾಲಿನ ಸಿಇಟಿ ಪರೀಕ್ಷೆ ಕುರಿತ ಅಧಿಕೃತ ಅಪ್ಡೇಟ್‌ಗಳು ನಿಮ್ಮ mahitimane.com ನಲ್ಲಿ ನಿರಂತರ ಪ್ರಕಟವಾಗಲಿವೆ. ಗಮನಿಸಿ…
ಅಧಿಕೃತ ವೆಬ್‌ಸೈಟ್: cetonline.karnataka.gov.in