Karnataka Heavy Rain- ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಜೋರು ಮಳೆ | ಜಿಲ್ಲಾವಾರು ಮಳೆ ಮುನ್ಸೂಚನೆ

ಮುಂದಿನ ಐದು ದಿನ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜೋರು ಮಳೆ (Karnataka Heavy Rain) ಹಾಗೂ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ…
2025-26ನೇ ಸಾಲಿನ ಸಾಲಿನ ಮುಂಗಾರು ಮಳೆ ಹಂಗಾಮ ಕೊನೆಯ ಹಂತದಲ್ಲಿರುವ ಸಮಯದಲ್ಲೇ ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ನಿನ್ನೆ ಸೆಪ್ಟೆಂಬರ್ 18ರ ಗುರುವಾರ ಭಾರೀ ಮಳೆಯಾಗಿದೆ.
ಈ ಮಳೆ ಮತ್ತಷ್ಟು ದಿನ ಹೀಗೆಯೇ ಮುಂದುವರೆಯಲಿದ್ದು; ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: New BPL Card – ಮುಂದಿನ ತಿಂಗಳು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಆಹ್ವಾನ | ಸರ್ಕಾರದ ಮಹತ್ವದ ನಿರ್ಧಾರ

ಎಲ್ಲೆಲ್ಲಿ ಮಳೆಯಾಗಲಿದೆ?
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19ರಂದು ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅದೇ ರೀತಿ ರಾಜ್ಯದ ಈ ಕೆಳಕಂಡ ಇತರ ಜಿಲ್ಲೆಗಳಲ್ಲೂ ಮುಂದಿನ ಐದು ದಿನಗಳಕಾಲ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ:
- ಶಿವಮೊಗ್ಗ
- ದಕ್ಷಿಣ ಕನ್ನಡ
- ಉತ್ತರ ಕನ್ನಡ
- ಉಡುಪಿ
- ಚಿಕ್ಕಮಗಳೂರು
- ಹಾಸನ
- ಕೊಡಗು
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ದಕ್ಷಿಣ
- ಮಂಡ್ಯ
- ಮೈಸೂರು
- ಚಾಮರಾಜನಗರ
- ದಾವಣಗೆರೆ
- ಚಿತ್ರದುರ್ಗ
- ಬಳ್ಳಾರಿ
- ಬೀದರ್
- ಧಾರವಾಡ
- ಗದಗ
- ಹಾವೇರಿ
- ಕೊಪ್ಪಳ
- ಯಾದಗಿರಿ
- ರಾಯಚೂರು