Karnataka Heavy Rain Alert- ವಾಯುಭಾರ ಕುಸಿತ | ಕರ್ನಾಟಕದಲ್ಲಿ ಐದು ದಿನ ಸಿಕ್ಕಾಪಟ್ಟೆ ಮಳೆ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

Spread the love

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ (Air pressure drop) ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ. ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ (Meteorological department warning) ನೀಡಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಕೆಲವು ದಿನಗಳಿಂದ ಮುಂಗಾರು ಮಳೆಗೆ ಮುನ್ನವೇ ಭಾರೀ ಮಳೆ ಸುರಿಯತೊಡಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 22ರ ವರೆಗೆ ಮಳೆಯ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತು ಅಧಿಕೃತ ಎಚ್ಚರಿಕೆ ನೀಡಿದ್ದು, ಜನತೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ಅವರು ಹೇಳುವಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ವರೆಗೆ ಅತೀ ಹೆಚ್ಚು ಮಳೆಯಾಗುವ ಸಂಭವವಿದೆ. ಮಳೆಯ ಜೊತೆಗೆ ಪ್ರತಿ ಗಂಟೆಗೆ 50 ಕಿ.ಮೀ ವೇಗದ ಗಾಳಿ ಇರಲಿದೆ. ಜನಸಾಮಾನ್ಯರು ಮಳೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ.

Cyclone Alert- ಸೈಕ್ಲೋನ್ ಎಫೆಕ್ಟ್ | ಕರ್ನಾಟಕದಲ್ಲಿ ಬಿರುಸಿನ ಮಳೆ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

ಈ ಭಾರೀ ಮಳೆಗೆ ಪ್ರಮುಖ ಕಾರಣವೆಂದರೆ ಅರಬ್ಬಿ ಸಮುದ್ರದಲ್ಲಿ ಮೇ 22ರ ವೇಳೆಗೆ ಸಂಭವಿಸುವ ವಾಯುಭಾರ ಕುಸಿತ. ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಅದರ ಒಳನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಇದಲ್ಲದೆ, ತಮಿಳುನಾಡು ಕರಾವಳಿಗೆ ಸಮೀಪದ ಬಂಗಾಳ ಕೊಲ್ಲಿಯ ಮೇಲೆ 1.5 ಕಿ.ಮೀ. ಮತ್ತು 5.8 ಕಿ.ಮೀ. ಎತ್ತರದಲ್ಲಿ ವಾಯು ಚಲನೆ (cyclonic circulation) ವೀಕ್ಷಿಸಲಾಗಿದೆ. ಇದರ ಜೊತೆಗೆ, ಕರ್ನಾಟಕದ ಒಳನಾಡಿನಲ್ಲಿ ವಾಯು ರೇಖೆ (trough) ನಿರ್ಮಾಣವಾಗಿದೆ. ಈ ಎಲ ಕಾರಣದಿಂದ ಹವಾಮಾನದಲ್ಲಿ ತೀವ್ರ ಬದಲಾವಣೆಯಾಗಿದೆ.

ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಲಿದೆ. ಈ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka Heavy Rain Alert Arabian Sea Low Pressure
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮಳೆ

ರಾಜ್ಯದ ಹಲವೆಡೆ ಈಗಾಗಲೇ ಮಳೆ ಆರಂಭವಾಗಿದೆ. ಬೆಂಗಳೂರು ನಗರದಲ್ಲಿ ಮೇ 21ರ ವರೆಗೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ. ಮೇ 19 ಮತ್ತು 20ರಂದು ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಹಳದಿ ಎಚ್ಚರಿಕೆ (Yellow Alert) ಘೋಷಿಸಲಾಗಿದೆ. 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ತಾಪಮಾನ ಗರಿಷ್ಠ 30 ಡಿ.ಸೆ. ಹಾಗೂ ಕನಿಷ್ಠ 20 ಡಿ.ಸೆ. ಇರಲಿದೆ.

Village House Permit- ಹಳ್ಳಿಗಳಲ್ಲಿಯೂ ಮನೆ ಕಟ್ಟಲು ಇನ್ನು ‘ಅನುಮತಿ’ ಕಡ್ಡಾಯ | ಹೊಸ ನಿಯಮ ಜಾರಿಗೊಳಿಸಿದ ರಾಜ್ಯ ಸರ್ಕಾರ

ಯಾವೆಲ್ಲ ಜಿಲ್ಲೆಗಳಿಗೆ ಎಚ್ಚರಿಕೆ?

ಭಾರೀ ಮಳೆ ಹಾಗೂ ತೀವ್ರ ಗಾಳಿಯ ಪರಿಣಾಮವಾಗಿ ರಾಜ್ಯದ ಹಲವೆಡೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಕೆಳಗಿನ 11 ಜಿಲ್ಲೆಗೆ ಆರೆಂಜ್, 7 ಜಿಲ್ಲೆಗೆ ಯೆಲ್ಲೋ ಅಲರ್ಟ್ ಹಾಗೂ ಒಂದು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ:

  • ಆರೆಂಜ್ ಅಲರ್ಟ್ (ಮೇ 19-22): ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು
  • ಯೆಲ್ಲೋ ಅಲರ್ಟ್ (ಮೇ 19-20): ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ
  • ರೆಡ್ ಅಲರ್ಟ್ (ಮೇ 19-20): ಚಿತ್ರದುರ್ಗ

Gruhalakshmi Payment Delay- ಗೃಹಲಕ್ಷ್ಮಿ ಹಣ ಮೇ 20ರ ನಂತರವೇ ಜಮಾ? ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮಹಿಳೆಯರ ಆಕ್ರೋಶ


Spread the love
WhatsApp Group Join Now
Telegram Group Join Now
error: Content is protected !!