ಇದೇ ಜನವರಿ ಅಂತ್ಯಕ್ಕೆ ರಾಜ್ಯದ ಅಷ್ಟೂ ಗ್ರಾಮ ಪಂಚಾಯತಿಗಳ ಅವಧಿ (Karnataka Grama Panchayat Election 2026) ಮುಗಿಯಲಿದೆ. ಆದರೆ ಸರ್ಕಾರ ಈತನಕ ಚುನಾವಣೆಗೆ ಯಾವುದೇ ತಯಾರಿ ನಡೆಸಿಲ್ಲ. ಹಾಗಾದರೆ ಚುನಾವಣೆ ಯಾವಾಗ? ಸಮಸ್ಯೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಗ್ರಾಮೀಣ ಆಡಳಿತ ವ್ಯವಸ್ಥೆಗೆ ಅತಿ ಮಹತ್ವದ ಅಡಿಪಾಯವೇ ಗ್ರಾಮ ಪಂಚಾಯತಿ ಚುನಾವಣೆ. ಆದರೆ ಇದೀಗ ಕರ್ನಾಟಕದಲ್ಲಿ ಆ ಅಡಿಪಾಯವೇ ಅಲುಗಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಇದೇ ಜನವರಿ ಅಂತ್ಯದೊಳಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅವಧಿ ಮುಕ್ತಾಯವಾಗಲಿದೆ. ಆದರೂ ಸರ್ಕಾರದಿಂದ ಚುನಾವಣೆಗೆ ಸಂಬAಧಿಸಿದ ಯಾವುದೇ ಸಿದ್ಧತೆ, ಸೂಚನೆ ಅಥವಾ ಸ್ಪಷ್ಟತೆ ಕಾಣಿಸುತ್ತಿಲ್ಲ.
ಹಾಗಾದರೆ ಗ್ರಾಮ ಪಂಚಾಯತಿ ಚುನಾವಣೆ ಯಾವಾಗ? ವಿಳಂಬಕ್ಕೆ ನಿಜವಾದ ಕಾರಣಗಳೇನು? ಇದರಿಂದ ಗ್ರಾಮೀಣ ಆಡಳಿತಕ್ಕೆ ಏನು ಪರಿಣಾಮ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೋಡೋಣ.
Threat to Panchayat Raj System- ಪಂಚಾಯತ್ ರಾಜ್ ವ್ಯವಸ್ಥೆಗೆ ಕುತ್ತು!
ಜಿಲ್ಲಾ ಪಂಚಾಯತ್ (ಜಿಪಂ) ಹಾಗೂ ತಾಲ್ಲೂಕು ಪಂಚಾಯತ್ (ತಾಪಂ) ಚುನಾವಣೆಗಳು ಈಗಾಗಲೇ ವರ್ಷಗಳಿಂದ ಬಾಕಿ ಉಳಿದಿವೆ. ಈಗ ಅದೇ ಹಾದಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಕೂಡ ನಿಗದಿತ ಅವಧಿಯಲ್ಲಿ ನಡೆಯುವ ಸಾಧ್ಯತೆ ಕ್ಷೀಣಿಸುತ್ತಿರುವುದು ಆತಂಕಕಾರಿ ಸಂಗತಿ.
ಕಳೆದ 2020ರ ಡಿಸೆಂಬರ್ 22 ಮತ್ತು 27ರಂದು ರಾಜ್ಯದ ಸುಮಾರು 5,900 ಗ್ರಾಮ ಪಂಚಾಯತಿಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ನಂತರ 2021ರ ಜನವರಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು, ಸ್ಥಳೀಯ ಆಡಳಿತ ವ್ಯವಸ್ಥೆ ಚುರುಕುಗೊಂಡಿತ್ತು.
ಇದೀಗ ಐದು ವರ್ಷದ ಅವಧಿ ಮುಕ್ತಾಯ ಹಂತಕ್ಕೆ ಬಂದರೂ, ಸರ್ಕಾರದ ಮಟ್ಟದಲ್ಲಿ ಯಾವುದೇ ಚುನಾವಣಾ ಚಟುವಟಿಕೆ ಆರಂಭವಾಗಿಲ್ಲ. ಇದರಿಂದಾಗಿ ಜಿಪಂ-ತಾಪಂ ಮಾದರಿಯಲ್ಲೇ ಗ್ರಾಮ ಪಂಚಾಯತಿಗಳಲ್ಲೂ ಜನಪ್ರತಿನಿಧಿಗಳ ಬದಲು ಅಧಿಕಾರಿಗಳೇ ಆಡಳಿತ ನಡೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

Officials Rule Hurting Democracy- ಅಧಿಕಾರಿಗಳ ದರ್ಬಾರ್, ಜನತಂತ್ರಕ್ಕೆ ಧಕ್ಕೆ
ಅಸಲಿಗೆ ಗ್ರಾಮ ಪಂಚಾಯತಿಗಳು ಜನರ ನಿತ್ಯಜೀವನಕ್ಕೆ ನೇರವಾಗಿ ಸಂಬಂಧಿಸಿದ ಸಂಸ್ಥೆಗಳು. ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಮನೆ ನಿರ್ಮಾಣ, ಸಾಮಾಜಿಕ ನ್ಯಾಯ-ಎಲ್ಲವೂ ಗ್ರಾಮ ಪಂಚಾಯತಿಗಳ ಮೂಲಕವೇ ನಡೆಯುತ್ತವೆ.
ಆದರೆ, ಚುನಾವಣೆ ತಡವಾದರೆ, ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತ ಹೆಚ್ಚುತ್ತದೆ. ಸ್ಥಳೀಯ ಜನತಂತ್ರ ದುರ್ಬಲಗೊಳ್ಳುತ್ತದೆ. ಇದು ತ್ರಿ-ಟಯರ್ ಪಂಚಾಯತ್ ರಾಜ್ ವ್ಯವಸ್ಥೆಗೆ ದೊಡ್ಡ ಹೊಡೆತ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Gold Silver Price Increase- ಸಂಕ್ರಾಂತಿ ನಂತರ ಚಿನ್ನ-ಬೆಳ್ಳಿ ಬೆಲೆ ಭಾರೀ ಏರಿಕೆ | ಮುಗಿಬಿದ್ದ ಖರೀದಿದಾರರು
ZP-TP Elections as a Clear Example- ಜಿಪಂ-ತಾಪಂ ಚುನಾವಣೆಯೇ ಉದಾಹರಣೆ
ರಾಜ್ಯದ 31 ಜಿಲ್ಲಾ ಪಂಚಾಯತ್ ಹಾಗೂ 226 ತಾಲ್ಲೂಕು ಪಂಚಾಯತ್‌ಗಳಿಗೆ 2021ರ ಮೇನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಐದು ವರ್ಷಗಳ ಒಂದು ಅವಧಿಯೇ ಕಳೆದು ಹೋದರೂ ಇನ್ನೂ ಚುನಾವಣೆ ನಡೆದಿಲ್ಲ.
ಈ ಸಂಬAಧ ಹೈಕೋರ್ಟ್’ನಿಂದ ಸೂಚನೆ, ಟೀಕೆಗಳೂ ಬಂದರೂ ಸರ್ಕಾರ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ. ಇದೀಗ ಅದೇ ಕಥೆ ಸುಮಾರು 5,900 ಗ್ರಾಮ ಪಂಚಾಯತಿಗಳಿಗೂ ರಿಪಿಟ್ ಆಗುತ್ತಿದೆ.

What Should the Government Have Done?- ಸರ್ಕಾರ ಮಾಡಬೇಕಿದ್ದೇನು?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಸೆಕ್ಷನ್ 5(5) ಅನ್ವಯ, ರಾಜ್ಯ ಸರ್ಕಾರವು ಸುಮಾರು 93,000ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ವಾರ್ಡುಗಳಿಗೆ ರೋಟೇಶನ್ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಿ, ಅಂತಿಮ ಅಧಿಸೂಚನೆ ಹೊರಡಿಸಬೇಕು.
ಈ ಪ್ರಕ್ರಿಯೆ ಪೂರ್ಣಗೊಂಡರೆ ಮಾತ್ರ ರಾಜ್ಯ ಚುನಾವಣಾ ಆಯೋಗವು ಚುನಾವಣೆ ವೇಳಾಪಟ್ಟಿ ಪ್ರಕಟಿಸಲು ಸಾಧ್ಯವಾಗುತ್ತದೆ. ಆದರೆ ಈತನಕ ಯಾವುದೇ ರೀತಿಯ ಮೀಸಲಾತಿ ಪ್ರಕಟಣೆ ಇಲ್ಲ, ಅಧಿಸೂಚನೆ ಇಲ್ಲ, ಚುನಾವಣಾ ವೇಳಾಪಟ್ಟಿಯೇ ಇಲ್ಲ.
High Court & Commission Warnings Ignored?- ಹೈಕೋರ್ಟ್, ಆಯೋಗದ ಎಚ್ಚರಿಕೆಯೂ ವ್ಯರ್ಥ?
ಸಕಾಲಕ್ಕೆ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಮೆಟ್ಟಿಲೇರಿತ್ತು. ‘ಮೀಸಲಾತಿ ಇಲ್ಲದೆ ಚುನಾವಣೆ ನಡೆಸಲು ಸಾಧ್ಯವಿಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿತ್ತು. ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿದೆ.
ಇದಾಗಿ ಎರಡು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಜಿಪಂ-ತಾಪಂ ವಿಚಾರದಲ್ಲೂ ಹೈಕೋರ್ಟ್ ತಪರಾಕಿ ನೀಡಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
Elections Essential to Save Democracy- ಜನತಂತ್ರ ಉಳಿಯಲು ಚುನಾವಣೆ ನಡೆಯಬೇಕು
ಕುರ್ಚಿ ಕಿತ್ತಾಟ, ಆಂತರಿಕ ಸಂಘರ್ಷ, ಅಧಿಕಾರ ಹಂಚಿಕೆಯ ಲೆಕ್ಕಾಚಾರಗಳು ಚುನಾವಣಾ ವಿಳಂಬಕ್ಕೆ ಕಾರಣಗಳೆಂದು ಹೇಳಲಾಗುತ್ತಿದೆ. ‘ತಾರೀಖ್ ಪೇ ತಾರೀಖ್’ ಎಂಬಂತೆ ಸರ್ಕಾರ ದಿನದೂಡುತ್ತಿರುವುದರಿಂದ ಲೋಕಲ್ ಲೀಡರ್’ಗಳು, ಗ್ರಾಮೀಣ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟಕ್ಕೂ ಗ್ರಾಮ ಪಂಚಾಯತಿಗಳು ಕೇವಲ ಆಡಳಿತ ಸಂಸ್ಥೆಗಳಲ್ಲ. ಅವು ಜನತಂತ್ರದ ಮೊದಲ ಪಾಠಶಾಲೆ. ಅವು ದುರ್ಬಲವಾದರೆ, ರಾಜ್ಯದ ಸಂಪೂರ್ಣ ಆಡಳಿತ ವ್ಯವಸ್ಥೆಯೇ ದುರ್ಬಲಗೊಳ್ಳುತ್ತದೆ. ಹೀಗಾಗಿ ಸರ್ಕಾರ ತಕ್ಷಣ ಮೀಸಲಾತಿ ಅಧಿಸೂಚನೆ ಹೊರಡಿಸುವ ಮೂಲಕ ಚುನಾವಣಾ ಆಯೋಗಕ್ಕೆ ದಾರಿ ಮಾಡಿಕೊಡಬೇಕಿದೆ.