ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಹೆಚ್ಚಿನ ಆರ್ಥಿಕ ಅನುಕೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ನೌಕರರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿಯಲ್ಲಿ ಗೃಹಸಾಲ (Home Loan), ವಾಹನ ಸಾಲ (Vehicle Loan) ಮತ್ತು ಪರ್ಸನಲ್ ಲೋನ್ (Personal Loan) ಒದಗಿಸಲು ಕ್ರಮವಹಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಪೇಕ್ಷೆಯ ಮೇರೆಗೆ ರಾಜ್ಯ ಸರ್ಕಾರವು ಈ ಸಂಬ೦ಧ ಹಲವು ರಾಷ್ಟ್ರೀಕೃತ ಬ್ಯಾಂಕುಗಳೊ೦ದಿಗೆ (Nationalized Banks) ಚರ್ಚೆ ನಡೆಸಲು ನಿರ್ಧರಿಸಿದ್ದು; ಇದೇ ಏಪ್ರಿಲ್ 15ರಂದು ಸಭೆ ನಡೆಸುವುದಾಗಿ ಸೂಚನಾ ಪತ್ರ ಹೊರಡಿಸಲಾಗಿದೆ.
‘ಸಂಬಳ ಪ್ಯಾಕೇಜ್’ ಖಾತೆ (Salary Package Account) ಸೌಲಭ್ಯಗಳು
ಈಚೆಗಷ್ಟೇ ರಾಜ್ಯ ಸರ್ಕಾರದ ಎಲ್ಲ ನೌಕರರು, ಅಧಿಕಾರಿಗಳು ವಿವಿಧ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ‘ಸಂಬಳ ಪ್ಯಾಕೇಜ್’ (Salary Package) ಖಾತೆ ತೆರೆಯುವುದನ್ನು ಕಡ್ಡಾಯ ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಸಂಬಳ ಪ್ಯಾಕೇಜ್‌ನ ಅಡಿಯಲ್ಲಿ ಖಾತೆ ಹೊಂದಿದ ನೌಕರರಿಗೆ ಬ್ಯಾಂಕ್‌ಗಳು ಈ ಕೆಳಕಂಡ ವಿವಿಧ ಸೌಲಭ್ಯಗಳನ್ನು ನೀಡುತ್ತವೆ:
- ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ, ವೈಯಕ್ತಿಕ ಸಾಲ, ವಾಹನ ಸಾಲ
- ಉಚಿತ ರುಪೇ ಡೆಬಿಟ್-ಕ್ರೆಡಿಟ್ ಕಾರ್ಡ್
- ಉಚಿತ ಡಿಮ್ಯಾಂಡ್ ಡ್ರಾಫ್ಟ್
- ರಿಯಾಯತಿ ದರದಲ್ಲಿ ಲಾಕರ್ ಸೇವೆ
- ವೈಯಕ್ತಿಕ ಅಪಘಾತ ವಿಮೆ
- ಜೀವ ವಿಮೆ (ಕಂಡೀಷನ್ ಪ್ರಕಾರ)
- ಪ್ರೋಸೆಸಿಂಗ್ ಶುಲ್ಕ ಕಡಿಮೆ ಅಥವಾ ಉಚಿತ
- ಉಚಿತ ಆನ್‌ಲೈನ್ ವಹಿವಾಟು
‘ಸಂಬಳ ಪ್ಯಾಕೇಜ್’ ಖಾತೆ ತೆರೆಯುವ ಮೂಲಕ ಸರ್ಕಾರಿ ನೌಕರರು ಮೇಲ್ಕಾಣಿಸಿದ ಅನುಕೂಲಗಳನ್ನು ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದರೂ ಅನೇಕರು ಖಾತೆ ಆರಂಭಿಸಿರಲಿಲ್ಲ. ಹೀಗಾಗಿ ಎಲ್ಲ ನೌಕರರು ಮೂರು ತಿಂಗಳ ಒಳಗೆ ಸಂಬಳ ಪ್ಯಾಕೇಜ್ ಖಾತೆ ತೆರೆಯಬೇಕು ಎಂದು ಆರ್ಥಿಕ ಇಲಾಖೆ ಸೂಚಿಸಿದೆ.

Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್?
ಏಪ್ರಿಲ್ 15ರಂದು ಮಹತ್ವದ ಸಭೆ
ಆರ್ಥಿಕ ಇಲಾಖೆಯು ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯಗೊಳಿಸಿದ ನಂತರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ವಾಹನ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಿದ್ದಾರೆ.
ಈ ಬಗ್ಗೆ ಚರ್ಚಿಸಲು ಕರ್ನಾಟಕ ಸರ್ಕಾರವು ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಏಪ್ರಿಲ್ 15ರಂದು ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ.
ಈ ಮಹತ್ವದ ಸಭೆಯು ಸರ್ಕಾರದ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ಡಾ. ವಿಶಾಲ್ ಆರ್., ಅವರ ಅಧ್ಯಕ್ಷತೆಯಲ್ಲಿ ನಡೆಲಿದ್ದು; ಸಂಬ೦ಧಿತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ, ತಮ್ಮ ಸಲಹೆ ಮತ್ತು ಶಿಫಾರಸುಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.
Karnataka 2nd PUC Result 2025- ದ್ವಿತೀಯ ಪಿಯುಸಿ ಫಲಿತಾಂಶ 2025 | ಮಹತ್ವದ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರಿಗೆ ಭರ್ಜರಿ ಅವಕಾಶ
ಈ ಹೊಸ ಯೋಜನೆಯು ಜಾರಿಯಾದರೆ ಸರ್ಕಾರಿ ನೌಕರರಿಗೆ ಸುಲಭ ಬಡ್ಡಿಯಲ್ಲಿ ವಿವಿಧ ಸಾಲ ಸೌಲಭ್ಯ ಸಿಗಲಿದೆ. ಜೊತೆಗೆ ಇತರ ಅನುಕೂಲಗಳು ಕೂಡ ಲಭ್ಯವಾಗಲಿವೆ. ಇದರಿಂದ ನೌಕರರ ಜೀವನಮಟ್ಟವನ್ನು ಸುಧಾರಿಸಲು ನೆರವಾಗಲಿದೆ.
ಎಲ್ಲ ಸರ್ಕಾರಿ ನೌಕರರು ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ಆಯ್ಕೆ ಮಾಡಿಕೊಳ್ಳುವ ಮೂಲಕ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಅನುಕೂಲಗಳ ಪ್ರಯೋಜನ ಪಡೆಯಲು ತಮ್ಮ ಅನುಮೋದಿತ ಬ್ಯಾಂಕುಗಳೊ೦ದಿಗೆ ಸಂಪರ್ಕ ಸಾಧಿಸಬಹುದು.