Free Sewing Machine Scheme In Karnataka : 2024-25ನೇ ಸಾಲಿನ ‘ಜಿಲ್ಲಾ ಉದ್ಯಮ ಕೇಂದ್ರ ಯೋಜನೆ’ಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ (Sewing Machine) ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ (Professional Rural Artisan) ಉಚಿತ ಸುಧಾರಿತ ಸಲಕರಣೆ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಹೊಲಿಗೆ ಯಂತ್ರಗಳು ಹಾಗೂ ವೃತ್ತಿನಿರತ ಕುಶಲಕರ್ಮಿಗಳಿಗೆ ವಿವಿಧ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಈ ಯೋಜನೆಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ವೃತ್ತಿಯಾಧಾರಿತ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಗ್ರಾಮೀಣ ಪ್ರದೇಶದ ಪ್ರತಿನಿರತ ಕಸುಬುಗಳಾದ ಮರಗೆಲಸ ಮಾಡುವ ಬಡಿಗೆಗಳು, ಬಟ್ಟೆ ತೊಳೆಯುವ ಕಸುಬು ಮಾಡುವ ದೋಬಿ/ ಮಡಿವಾಳರು, ಕಬ್ಬಿಣದ ಕೆಲಸ ಮಾಡುವ ಕಮ್ಮಾರರು, ಕಟ್ಟಡ ನಿರ್ಮಾಣ ಕೆಲಸ ಮಾಡುವ ಗೌಂಡಿ (ಗಾರೆ) ಕೆಲಸಗಾರರು, ಕ್ಷೌರಿಕ ವೃತ್ತಿ ಮಾಡುವ ಕ್ಷೌರಿಕರು (ಹಡಪದರು) ಹಾಗೂ ಬಟ್ಟೆ ಹೊಲಿಯುವ ವೃತ್ತಿ ಮಾಡುವ ದರ್ಜಿಗಳು, ಸಿಂಪಿಗರು ಅಥವಾ ವೃತ್ತಿಪರ ಹೊಲಿಗೆ ಕೆಲಸ ಮಾಡುವ ಯಾವುದೇ ಜಾತಿಯ ಮಹಿಳಾ ಟೈಲರ್‌ಗಳು ಸೇರಿದಂತೆ ಈ ಯೋಜನೆಯಡಿ ಇರುವ ಉಪಕರಣ ಆಧಾರಿತ ವೃತ್ತಿ ವರ್ಗದವರು ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಷರತ್ತುಗಳೇನು?
- ಈ ಯೋಜನೆಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಿರುತ್ತವೆ.
- ಹೊಲಿಗೆಯಂತ್ರಗಳನ್ನು ಪಡೆಯುವ ಸಾಮಾನ್ಯ ಮತ್ತು ಇತರ ಅಭ್ಯರ್ಥಿಯು ಕನಿಷ್ಟ 18 ರಿಂದ ಗರಿಷ್ಠ 38 ವರ್ಷದ ವರೆಗೆ ವಯೋಮಿತಿ ಹೊಂದಿರಬೇಕು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ಮೀರಿರಬಾರದು.
- ಈ ಹಿಂದೆ ಈ ಯೋಜನೆಯಡಿ ಹೊಲಿಗೆಯಂತ್ರ / ಸುಧಾರಿತ ಸಲಕರಣೆಗಳನ್ನು ಪಡೆದಿದ್ದರೆ ಕುಶಲಕರ್ಮಿಗಳು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ಸ್ವಯಂ ಧೃಡೀಕೃತ ಪ್ರತಿಗಳು
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಜಾತಿ ಪ್ರಮಾಣ ಪತ್ರ (ಪ.ಜಾ/ ಪ.ಪಂ /ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಮಾತ್ರ)
- ಆಯಾ ಗ್ರಾಮ ಪಂಚಾಯತಿ ಪಿಡಿಒ ಅವರಿಂದ ವೃತ್ತಿಪರ ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪತ್ರ
- ಅಭ್ಯರ್ಥಿ ವಿಕಲಚೇತನ ಆಗಿದ್ದಲ್ಲಿ UDID Card
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
ಆಯ್ಕೆ ಪ್ರಕ್ರಿಯೆ ಹೇಗೆ?
ಸದರಿ ಯೋಜನೆಯಡಿ ಪ್ರತಿ ಜಿಲ್ಲೆಗೂ ಇಂತಿಷ್ಟು ಹೊಲಿಗೆ ಯಂತ್ರ ಮತ್ತು ಸುಧಾರಿತ ಸಲಕರಣೆಗಳ ಗುರಿ ನಿಗದಿಪಡಿಸಲಾಗಿದೆ. ಹಾಗೊಂದು ವೇಳೆ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಗಳು
2024-25ನೇ ಸಾಲಿನ ‘ಜಿಲ್ಲಾ ಉದ್ಯಮ ಕೇಂದ್ರ ಯೋಜನೆ’ಯಡಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಬೇರೆ ಬೇರೆ ಕೊನೆಯ ದಿನಾಂಕಗಳು ನಿಗದಿಯಾಗಿದೆ. ಇಲ್ಲಿ ಕೆಲವು ಜಿಲ್ಲೆಗಳ ಅರ್ಜಿ ಸಲ್ಲಿಕೆ ದಿನಾಂಕ ನೀಡಲಾಗಿದೆ.
ಸೂಕ್ತ ದಾಖಲಾತಿಗಳೊಂದಿಗೆ ಈ ಕೆಳಕಂಡ ಜಿಲ್ಲೆಗಳ ಫಲಾನುಭವಿಗಳು ಕೆಳಗೆ ನೀಡಲಾದ ಕೊನೆಯ ದಿನಾಂಕದ ಒಳಗೆ ಆಯಾ ಜಿಲ್ಲಾ ಪಂಚಾಯತಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸೇವಾಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
- ಚಿಕ್ಕಮಗಳೂರು ಜಿಲ್ಲೆ 31-08-2024
- ತುಮಕೂರು ಜಿಲ್ಲೆ 05-08-202
- ಉಡುಪಿ ಜಿಲ್ಲೆ 31-08-2024
- ಚಿಕ್ಕಬಳ್ಳಾಪುರ ಜಿಲ್ಲೆ 31-07-2024
ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ 2024-25ನೇ ಸಾಲಿನ ವೃತ್ತಿನಿರತ ಕುಶಲಕರ್ಮಿಗಳಿಗೆ ಉಪಕರಣ ಸರಬರಾಜು ಯೋಜನೆಯಡಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮ್ಮ ಗ್ರಾಮ ಪಂಚಾಯ್ತಿಗಳಲ್ಲಿ ಈ ಬಗ್ಗೆ ವಿಚಾರಿಸಿ, ಯೋಜನೆಯ ಅನುದಾನ ಲಭ್ಯವಿದ್ದರೆ, ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.
ಅರ್ಜಿ ಲಿಂಕ್ : Apply Now
ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಾಗಿ ಇಲ್ಲಿ ಒತ್ತಿ…
Tailoring maction