ದೇಶಾದ್ಯಂತ ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಆರಂಭ ಸ್ಟಾರ್ಟ್ | ಕಮ್ಮಿ ಬೆಲೆಗೆ ಸೂಪರ್ ಸ್ಪೀಡ್ ನೆಟ್‌ವರ್ಕ್ BSNL 4G Network Start

Spread the love

BSNL 4G Network Start : ಸರ್ಕಾರಿ ಸ್ವಾಮ್ಯದ BSNL (Bharat Sanchar Nigam Limited) ಪುನರ್ ಚೇತರಿಸಿಕೊಂಡಿದ್ದು; ಖಾಸಗಿ ಟೆಲಿಕಾಂ ಕಂಪನಿಗಳಿಗೆ (private telecom company) ಭರ್ಜರಿ ಪೈಪೋಟಿ ನೀಡಲು ಸನ್ನದ್ಧವಾಗುತ್ತಿದೆ. ನೆಟ್‌ವರ್ಕ್ ಸಮಸ್ಯೆಯ ಕಾರಣಕ್ಕೆ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿರುವ ಬಿಎಸ್‌ಎನ್‌ಎಲ್ ಇದೀಗ 4ಜಿ, 5ಜಿ ನೆಟ್‌ವರ್ಕ್ ಸೇವೆ ಆರಂಭಿಸುತ್ತಿದೆ.

WhatsApp Group Join Now
Telegram Group Join Now

ಈಗಾಗಲೇ ಪಂಜಾಬಿನಲ್ಲಿ 4ಜಿ ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಅಲ್ಲಿ ಸುಮಾರು 8 ಲಕ್ಷ ಚಂದಾದಾರರನ್ನು ಹೊಂದಿದೆ. ಇದೀಗ ಭಾರತದಾದ್ಯಂತ 4ಜಿ ಮತ್ತು 5ಜಿ ಸೇವೆಗಳಿಗಾಗಿ ಒಂದು ಲಕ್ಷ ಟವರ್’ಗಳನ್ನು ನಿಯೋಜಿಸುವ ತಯಾರಿಯಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ: 30 ದಿನ ವ್ಯಾಲಿಡಿಟಿ, ಕಮ್ಮಿ ಬೆಲೆಯ ಹೊಸ ರಿಚಾರ್ಜ್ ಪ್ಲಾನ್‌ಗಳು 30 days validity Recharge Plans

ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಪಾತಾಳಕ್ಕೆ

Reliance Jio, Vodafone ಮತ್ತು Airtel ಥರದ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ 5ಜಿ ಸೇವೆಗಳನ್ನು ಆರಂಭಿಸಿವೆ. ಆದರೆ BSNL ಮಾತ್ರ ಈಗಲೂ 2ಜಿ ಮತ್ತು 3ಜಿ ನೆಟ್‌ವರ್ಕ್ ಬಿಟ್ಟು ಮೇಲೆದ್ದಿಲ್ಲ. ಇದರಿಂದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಪಾತಾಳಕ್ಕೆ ಇಳಿದಿದೆ.

ಕಳೆದ ಆರ್ಥಿಕ ವರ್ಷದಲ್ಲಿ 1.8 ಕೋಟಿ ಗ್ರಾಹಕರನ್ನು ಕಳೆದುಕೊಂಡಿರುವ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಬರೋಬ್ಬರಿ 8,80,60,000ಕ್ಕೆ ಕುಸಿದಿದೆ. ಅದರ ಮಾರುಕಟ್ಟೆ ಪಾಲು ಕೂಡ ಕಳೆದ ಏಪ್ರಿಲ್ 2024ರಲ್ಲಿ ಶೇ.7.46ಕ್ಕೆ ಇಳಿಕೆಯಾಗಿದೆ. ಇದು ಖಾಸಗಿ ಟೆಲಿಕಾಂ ಕಂಪನಿಗಳು ಪ್ರಬಲವಾಗಲು ಪ್ರೇರಣೆಯಾಗಿದೆ.

BSNL 4G Network Start

ಇದನ್ನೂ ಓದಿ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯ ಮನೆ ಬಾಡಿಗೆ ಭತ್ಯೆ ಎಷ್ಟು ಸಿಗಲಿದೆ? | ಜಿಲ್ಲಾವಾರು ಹೊಸ ಎಚ್‌ಆರ್‌ಎ ದರ ಇಲ್ಲಿದೆ… Govt Employees House Rent Allowance

ಪ್ರಾಯೋಗಿಕವಾಗಿ 4ಜಿ ನೆಟ್‌ವರ್ಕ್ ಆರಂಭ

ಸ್ಥಳೀಯ ನೆಟ್‌ವರ್ಕ್ ಅಥವಾ ಭಾರತದ ಸ್ವಂತ 4ಜಿ ತಂತ್ರಜ್ಞಾನವನ್ನು ಬಳಸಬೇಕು ಎಂಬ ಸರಕಾರದ ನಿರ್ದೇಶನವು ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ಆರಂಭಿಸಲು ವಿಳಂಬಕ್ಕೆ ಕಾರಣವಾಗಿದೆ. ಆದರೆ ಇದೀಗ ಟಾಟಾ ಗ್ರೂಪ್ ನೇತೃತ್ವದ ಒಕ್ಕೂಟವು ದೇಶಾದ್ಯಂತ 4ಜಿ ಸೈಟ್’ಗಳನ್ನು ಸ್ಥಾಪಿಸುತ್ತಿದೆ.

ಟಾಟಾ ಗ್ರೂಪ್ (Tata Group) ನೇತೃತ್ವದ ಒಕ್ಕೂಟವು 2023ರ ಮೇ ತಿಂಗಳಲ್ಲಿ ಬಿಎಸ್‌ಎನ್‌ಎಲ್’ನಿಂದ 15,000 ಕೋಟಿ ರೂ.ಗಳ ಬೇಡಿಕೆಯನ್ನು ಪಡೆದುಕೊಂಡಿದ್ದು, ಈಗಾಗಲೇ ಪಂಜಾಬಿನಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (Tata Consultancy Services –TCS) ಮತ್ತು ಸಿ-ಡಾಟ್ ನೇತೃತ್ವದ ಒಕ್ಕೂಟವು 4ಜಿ ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತಿಗಳಲ್ಲಿ 6,599 ಹೊಸ ಗ್ರಂಥಾಲಯ ಹುದ್ದೆಗಳು | ಸ್ಥಳೀಯ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ Gram Panchayat Arivu kendra Recruitment 2024

ಅಕ್ಟೋಬರ್’ಲ್ಲಿ 4ಜಿ ನೆಟ್‌ವರ್ಕ್ ಶುರು

ಬಿಎಸ್‌ಎನ್‌ಎಲ್ ಮೂಲಗಳ ಪ್ರಕಾರ ಪರೀಕ್ಷಾರ್ಥ ಪ್ರಯೋಗಗಳು ಪೂರ್ಣಗೊಂಡಿವೆ. ಹೀಗಾಗಿ ಬಿಎಸ್‌ಎನ್‌ಎಲ್ ತನ್ನ ಬಹುನಿರೀಕ್ಷಿತ 4ಜಿ ಸೇವೆಗಳನ್ನು ಈ ವರ್ಷದ ಅಕ್ಟೋಬರ್’ಲ್ಲಿ ಆರಂಭಿಸುವ ಸಾಧ್ಯತೆ ಇದೆ. ದೇಶಾದ್ಯಂತ ಈವರೆಗೆ ಸುಮಾರು 25,000 4ಜಿ ಟವರ್’ಗಳನ್ನು ಸ್ಥಾಪಿಸಿದ್ದು ತನ್ನ ಗ್ರಾಹಕರಿಗೆ 4ಜಿ ಸಿಮ್‌ಗಳ ರವಾನೆ ಆರಂಭಿಸಿದೆ.

4ಜಿ ಟವರ್ ಸ್ಥಾಪನೆಗೆ ತೇಜಸ್ ನೆಟ್‌ವರ್ಕ್ ಮತ್ತು ಸರಕಾರಿ ಬೆಂಬಲಿತ ಸಿ-ಡಾಟ್ ಅಗತ್ಯ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಒದಗಿಸುತ್ತಿವೆ. ಶೀಘ್ರದಲ್ಲಿಯೇ ದೇಶಾದ್ಯಂತ ಬಿಎಸ್‌ಎನ್‌ಎಲ್ 4ಜಿ ಸೇವೆ ಆರಂಭವಾಗಲಿದ್ದು; ಖಾಸಗಿ ಟೆಲಿಕಾಂ ಕಂಪನಿಗಳಿಗೆ ನಡುಕ ಶುರುವಾದಂತಾಗಿದೆ.

ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules


Spread the love
WhatsApp Group Join Now
Telegram Group Join Now
error: Content is protected !!