BESCOM Apprenticeship Recruitment- ಬೆಸ್ಕಾಂ ನೇಮಕಾತಿ 2026: 520 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ಬೆಸ್ಕಾಂ 520 ಶಿಶಿಕ್ಷು ಹುದ್ದೆಗಳಿಗೆ (BESCOM Apprenticeship Recruitment) ಅರ್ಜಿ ಆಹ್ವಾನ. ಪದವೀಧರರು ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಗೆ ಅವಕಾಶ. ಅರ್ಹತೆ, ಸ್ಟೈಪೆಂಡ್ ಹಾಗೂ ದಿನಾಂಕಗಳ ವಿವರ ಇಲ್ಲಿದೆ…

ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM – Bangalore Electricity Supply Company Limited) 2026ನೇ ಸಾಲಿನ ಅಫ್ರೆಂಟೀಸ್‌ಶಿಪ್ ಟ್ರೇನಿಂಗ್ (Apprenticeship Training) ಕಾರ್ಯಕ್ರಮಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿಯ ಮೂಲಕ ಒಟ್ಟು 520 ಶಿಶಿಕ್ಷು ಹುದ್ದೆಗಳು (520 Apprentice Vacancies) ಭರ್ತಿಯಾಗಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಸ್ಕಾಂ ವ್ಯಾಪ್ತಿಯ ವಿವಿಧ ಕಚೇರಿಗಳಲ್ಲಿ ಒಂದು ವರ್ಷದ ಉದ್ಯೋಗ ತರಬೇತಿ (One Year On-the-Job Training) ನೀಡಲಾಗುತ್ತದೆ.

ಇದನ್ನೂ ಓದಿ: OSM Vextra Electric Scooter Launch: ಖರ್ಚಿಲ್ಲದೆ 110 ಕಿ.ಮೀ ಓಡುವ ಕಡಿಮೆ ಬೆಲೆಯ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ

ಯಾರಿಗೆ ಅವಕಾಶ? (Eligibility Criteria)

ಬೆಸ್ಕಾಂ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು:

1. ತಾಂತ್ರಿಕ ಪದವೀಧರರು (Graduate Apprentice – Technical): ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ (Electrical & Electronics Engineering – EEE) ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಪದವಿ ಪಡೆದಿರಬೇಕು.

2. ಪದವೀಧರರು (Graduate Apprentice – Non Technical): ಸಾಮಾನ್ಯ ಪದವೀಧರ ವಿಭಾಗಕ್ಕೆ ಕೆಳಗಿನ ಪದವಿಗಳನ್ನು ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ:

  • ಬಿಎ (BA)
  • ಬಿಎಸ್ಸಿ (BSc)
  • ಬಿಕಾಂ (BCom)
  • ಬಿಬಿಎ (BBA)
  • ಬಿಸಿಎ (BCA)
  • ಬಿಬಿಎಂ (BBM)
  • ಬಿಇ / ಬಿಟೆಕ್ (BE/B.Tech – ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಹೊರತುಪಡಿಸಿ)

3. ಡಿಪ್ಲೊಮಾ ಉತ್ತೀರ್ಣರು (Diploma Apprentice): ಎಲ್ಲಾ ಬ್ರಾಂಚ್‌ಗಳಲ್ಲಿಯೂ (All Diploma Branches) ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ

ಮುಖ್ಯ ಷರತ್ತುಗಳು

ಅಭ್ಯರ್ಥಿಗಳು 2021ರ ನಂತರ (Passed after 2021) ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. 2021ಕ್ಕೂ ಮುಂಚೆ ಪದವಿ ಅಥವಾ ಡಿಪ್ಲೊಮಾ ಪಡೆದವರಿಗೆ ಈ ತರಬೇತಿಗೆ ಅವಕಾಶ ಇರುವುದಿಲ್ಲ.

ವಯೋಮಿತಿ ವಿಷಯದಲ್ಲಿ ಅಫ್ರೆಂಟೀಸ್‌ಶಿಪ್ ಕಾಯ್ದೆ (Apprenticeship Act) ಅನ್ವಯ ಅಗತ್ಯ ಸಡಿಲಿಕೆ (Age Relaxation) ನೀಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ: Kisan Tractor Yojana- ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್ ವಿತರಣೆ | ಈಗಲೇ ಅರ್ಜಿ ಹಾಕಿ

BESCOM Apprenticeship Recruitment
BESCOM Apprenticeship Recruitment 2026

ವಿಭಾಗವಾರು ಹುದ್ದೆಗಳ ವಿವರ (Category-wise Vacancy Details)

  • ತಾಂತ್ರಿಕ ಪದವೀಧರರು: 130 ಹುದ್ದೆಗಳು
  • ಪದವೀಧರರು: 315 ಹುದ್ದೆಗಳು
  • ಡಿಪ್ಲೊಮಾ ಉತ್ತೀರ್ಣರುs: 75 ಹುದ್ದೆಗಳು
  • ಒಟ್ಟು ಹುದ್ದೆಗಳು: 520

ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

ಆಯ್ಕೆ ಪ್ರಕ್ರಿಯೆ (Selection Process)

ಬೆಸ್ಕಾಂ ಶಿಶಿಕ್ಷು ನೇಮಕಾತಿಯ ಆಯ್ಕೆ ಪ್ರಕ್ರಿಯೆಯನ್ನು ದಕ್ಷಿಣ ವಿಭಾಗದ ಅಫ್ರೆಂಟೀಸ್‌ಶಿಪ್ ಮಂಡಳಿ (Board of Apprenticeship Training – Southern Region) ನಿರ್ವಹಿಸಲಿದೆ.

WhatsApp Group Join Now
Telegram Group Join Now

ಆನ್‌ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಗಳು ಪಡೆದಿರುವ ವಿದ್ಯಾರ್ಹತಾ ಅಂಕಗಳ ಆಧಾರದ ಮೇಲೆ (Merit Based Selection) ಪಟ್ಟಿಯನ್ನು ತಯಾರಿಸಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ಬೆಸ್ಕಾಂ ಪ್ರಧಾನ ಕಚೇರಿಗೆ (BESCOM Head Office, Bengaluru) ಹಾಜರಾಗಿ ತಮ್ಮ ಮೂಲ ದಾಖಲಾತಿಗಳ ಪರಿಶೀಲನೆ (Document Verification) ಮಾಡಿಸಿಕೊಳ್ಳಬೇಕು. ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇಲ್ಲ.

ಇದನ್ನೂ ಓದಿ: Aether Rizta Electric Scooter- ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಮುಗಿಬಿದ್ದ ಜನ | ಭರ್ಜರಿ ಸೇಲ್ಸ್ | ಏನಿದರ ವಿಶೇಷತೆ?

ಅರ್ಜಿ ಸಲ್ಲಿಕೆ ಹೇಗೆ? (How to Apply Online)

ಬೆಸ್ಕಾಂ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬೇಕು:

ಮೊದಲಿಗೆ ನ್ಯಾಷನಲ್ ಅಫ್ರೆಂಟೀಸ್‌ಶಿಪ್ ಸ್ಕೀಮ್ – ನ್ಯಾಟ್ಸ್ (NATS – National Apprenticeship Training Scheme) ಪೋರ್ಟಲ್‌ಗೆ ಭೇಟಿ ನೀಡಿ, Student Registration ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ಪೂರ್ಣಗೊಂಡ ಬಳಿಕ ಲಾಗಿನ್ ಆಗಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು. ನಂತರ BESCOM Apprenticeship Notification ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು.

ಈಗಾಗಲೇ ನ್ಯಾಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ನೇರವಾಗಿ ಬೆಸ್ಕಾಂ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

ಸ್ಟೈಪೆಂಡ್ ವಿವರ (Monthly Stipend)

ಶಿಶಿಕ್ಷು ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ (ಒoಟಿಣhಟಥಿ Sಣiಠಿeಟಿಜ) ನೀಡಲಾಗುತ್ತದೆ:

  • ತಾಂತ್ರಿಕ ಪದವೀಧರರು: ₹9,008
  • ಸಾಮಾನ್ಯ ಪದವೀಧರರು: ₹9,008
  • ಡಿಪ್ಲೊಮಾ ಉತ್ತೀರ್ಣರು: ₹8,000

ಇದನ್ನೂ ಓದಿ: KKRTC Driver Recruitment 2026- SSLC ಪಾಸಾದವರಿಗೆ ಸರ್ಕಾರಿ ಉದ್ಯೋಗ | KKRTC 78 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-02-2026
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-03-2026

ಬೆಸ್ಕಾಂ ನೀಡುತ್ತಿರುವ ಈ ಅಫ್ರೆಂಟೀಸ್‌ಶಿಪ್ ತರಬೇತಿ (BESCOM Apprenticeship Training 2026) ಕಾರ್ಯಕ್ರಮವು ನಿರುದ್ಯೋಗ ಯುವಕರಿಗೆ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯಾನುಭವ ಪಡೆಯಲು ಹಾಗೂ ಮುಂದಿನ ಉದ್ಯೋಗಕ್ಕೆ ತಯಾರಾಗಲು ಅತ್ಯುತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗೆ: bescom.karnataka.gov.in

Karnataka Post Office GDS Recruitment 2026 – ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1023 ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ವಿವರ


Spread the love
error: Content is protected !!