ಬೆಳೆನಷ್ಟವಾದಾಗ ರೈತರಿಗೆ ಬೆಳೆ ವಿಮೆ (Bele Vime) ಯೋಜನೆ ದೊಡ್ಡ ಆಸರೆಯಾಗುತ್ತದೆ. ಆದರೆ, ಬಹಳಷ್ಟು ರೈತರಿಗೆ ಬೆಳೆನಷ್ಟವಾದರೂ ಹಣ ಜಮೆ ಆಗುತ್ತಿಲ್ಲ. ಅದಕ್ಕೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ…
ಇಂದು ಬಹುತೇಕ ರೈತರು ಬೆಳೆ ವಿಮೆ (Crop Insurance) ಮಾಡಿಸುತ್ತಿದ್ದಾರೆ. ಆದರೆ ಬೆಳೆ ಸಂಪೂರ್ಣವಾಗಿ ಹಾನಿಯಾದರೂ ಸಹ ‘ನನಗೆ ಇನ್ನೂ ಬೆಳೆ ವಿಮೆ ಹಣ ಜಮೆಯಾಗಿಲ್ಲ’ ಎಂಬ ಪ್ರಶ್ನೆ ಬಹುತೇಕ ರೈತರನ್ನು ಕಾಡುತ್ತಿದೆ. ಇದಕ್ಕೆ ಕಾರಣ ರೈತರ ತಪ್ಪು ಮಾತ್ರವಲ್ಲ, ಬೆಳೆ ವಿಮೆ ಪ್ರಕ್ರಿಯೆಯಲ್ಲಿರುವ ಹಲವು ಹಂತಗಳು ಮತ್ತು ನಿಯಮಗಳೂ ಆಗಿವೆ.
ಇದನ್ನೂ ಓದಿ: LPG Gas Cylinder ₹300 Subsidy- ನಿಮಗೆ ಗ್ಯಾಸ್ ಸಿಲಿಂಡರ್ ₹300 ಸಬ್ಸಿಡಿ ಬಂತಾ? ಮೊಬೈಲ್‌ನಲ್ಲೇ ಚೆಕ್ ಮಾಡಿ
Crop Loss Area Declaration – ಬೆಳೆ ನಷ್ಟ ಪ್ರದೇಶ ಘೋಷಣೆ
ಮೊದಲು ಒಂದು ವಿಷಯವನ್ನು ರೈತರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಬೆಳೆ ಹಾನಿಯಾದ ತಕ್ಷಣವೇ ಪ್ರತಿಯೊಬ್ಬ ರೈತರಿಗೂ ವಿಮೆ ಹಣ ಜಮೆಯಾಗುವುದಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸೇರಿದಂತೆ ಬಹುತೇಕ ಬೆಳೆ ವಿಮಾ ಯೋಜನೆಗಳಲ್ಲಿ ಪರಿಹಾರ ನಿಗದಿಯಾಗುವುದು ವೈಯಕ್ತಿಕ ರೈತರ ಬೆಳೆ ಹಾನಿಯ ಆಧಾರದ ಮೇಲೆ ಅಲ್ಲ.
ಬದಲಾಗಿ ಆ ಗ್ರಾಮ ಅಥವಾ ಹೊಬಳಿ ಮಟ್ಟದಲ್ಲಿ ನಡೆದ ಒಟ್ಟಾರೆ ಬೆಳೆ ನಷ್ಟದ ಆಧಾರದ ಮೇಲೆ. ಅಂದರೆ, ನಿಮ್ಮ ಹೊಲಕ್ಕೆ ಮಾತ್ರ ಹಾನಿಯಾಗಿದ್ದರೂ, ಆ ಪ್ರದೇಶವನ್ನು ‘ಬೆಳೆ ನಷ್ಟ ಪ್ರದೇಶ’ ಎಂದು ಘೋಷಿಸದಿದ್ದರೆ ವಿಮೆ ಹಣ ಸಿಗುವುದಿಲ್ಲ.
ಹಾಗಾದರೆ ಬೆಳೆ ವಿಮೆ ಹಣ ಯಾಕೆ ಜಮೆಯಾಗುತ್ತಿಲ್ಲ? ಯಾರಿಗೆ ಜಮೆಯಾಗುತ್ತದೆ? ಹಣ ಜಮೆಯಾಗಲು ರೈತರು ಏನು ಮಾಡಬೇಕು? ಯಾವ ವಿಮಾ ಕಂಪನಿಗೆ ಸಂಪರ್ಕಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.
ಇದನ್ನೂ ಓದಿ: Tarpaulin Subsidy Scheme 2026- ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ
Eligible Farmers for Insurance Payout – ಬೆಳೆ ವಿಮೆ ಹಣ ಯಾವ ರೈತರಿಗೆ ಜಮೆಯಾಗುತ್ತದೆ?
ಬೆಳೆ ವಿಮೆ ಎಲ್ಲರಿಗೂ ಒಂದೇ ರೀತಿ ಸಿಗುವುದಿಲ್ಲ. ಸರ್ಕಾರ ಮತ್ತು ವಿಮಾ ಕಂಪನಿಗಳು ಕೆಲ ನಿರ್ದಿಷ್ಟ ನಿಯಮಗಳ ಆಧಾರದ ಮೇಲೆ ಪರಿಹಾರ ನೀಡುತ್ತವೆ.
1. ಮೊಳಕೆಯೊಡೆಯುವ ಹಂತದಲ್ಲಿ ನಾಶವಾದರೆ: ಮಳೆ ಕೊರತೆ, ಅತಿಯಾದ ಮಳೆ, ಪ್ರವಾಹ, ಇತರೆ ಪ್ರಕೃತಿ ವಿಕೋಪಗಳಿಂದ ಶೇ.75 ಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಬೀಜ ಮೊಳಕೆಯೊಡೆಯದೇ ವಿಫಲವಾದರೆ ರೈತರಿಗೆ ವಿಮಾ ಮೊತ್ತದ ಗರಿಷ್ಠ ಶೇ.25 ರಷ್ಟು ಪರಿಹಾರ ಹಣ ನೀಡಲಾಗುತ್ತದೆ.
2. ಬೆಳೆ ಬೆಳೆಯುವ ಹಂತದಲ್ಲಿ ನಷ್ಟವಾದರೆ: ಬಿತ್ತನೆಯಾದ ನಂತರದಿಂದ ಕಟಾವು ಮಾಡುವ ವರೆಗೆ ಅತಿಯಾದ ಮಳೆ, ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲಗಳಿಂದ ನಿರೀಕ್ಷಿತ ಇಳುವರಿ ಶೇ.50 ಕ್ಕಿಂತ ಕಡಿಮೆಯಾದರೆ, ವಿಮೆ ಮಾಡಿಸಿದ ರೈತರಿಗೆ ವಿಮಾ ನಷ್ಟ ಪರಿಹಾರದ ಶೇ.25 ರಷ್ಟು ಹಣ ದೊರೆಯುತ್ತದೆ.
ಇದನ್ನೂ ಓದಿ: Sukanya Samriddhi Yojana- ಹೆಣ್ಣುಮಕ್ಕಳ ಭವಿಷ್ಯ ಭದ್ರವಾಗಿಸುವ ಸುಕನ್ಯಾ ಸಮೃದ್ಧಿ ಯೋಜನೆ | ಮಗಳ ಮದುವೆಗೆ 69 ಲಕ್ಷ ಹಣ
How to Get Crop Insurance Money – ಬೆಳೆ ವಿಮೆ ಹಣ ಜಮೆಯಾಗಲು ರೈತರು ಏನು ಮಾಡಬೇಕು?
ಬೆಳೆ ವಿಮೆ ಹಣ ಜಮೆ ಆಗದೇ ಇರಲು ಬಹುತೇಕ ರೈತರು ಮಾಡುವ ದೊಡ್ಡ ತಪ್ಪೇ ಕಾರಣವಾಗಿರುತ್ತದೆ. ಪ್ರಕೃತಿ ವಿಕೋಪದಿಂದ ನಿಮ್ಮ ಬೆಳೆ ಹಾನಿಯಾದ ತಕ್ಷಣ, 72 ಗಂಟೆಗಳ ಒಳಗೆ ವಿಮಾ ಕಂಪನಿಗೆ ದೂರು ನೀಡಲೇಬೇಕು.
ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡುತ್ತಾರೆ. ಬೆಳೆ ಹಾನಿ ಪರಿಶೀಲನೆ ಮಾಡುತ್ತಾರೆ. ಹಾನಿಯ ಪ್ರಮಾಣವನ್ನು ದಾಖಲಿಸುತ್ತಾರೆ.
ಪರಿಶೀಲನೆ ಸಾಮಾನ್ಯವಾಗಿ 48 ಗಂಟೆಯೊಳಗೆ ನಡೆಯಬೇಕು. ಗಮನಾರ್ಹವೆಂದರೆ 72 ಗಂಟೆ ಮೀರಿದರೆ ಹೆಚ್ಚಿನ ಸಂದರ್ಭಗಳಲ್ಲಿ ವಿಮಾ ಹಣ ನಿರಾಕರಿಸಲಾಗುತ್ತದೆ.
ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ
Know Your Insurance Company – ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ?
ಬಹುತೇಕ ರೈತರಿಗೆ ‘ನಾನು ಯಾವ ಕಂಪನಿಗೆ ವಿಮೆ ಮಾಡಿಸಿದ್ದೇನೆ?’ ಅನ್ನೋದೇ ಗೊತ್ತಿರುವುದಿಲ್ಲ. ಆದರೆ ಈಗ ಇದನ್ನು ಮೊಬೈಲ್‌ನಲ್ಲೇ ಸುಲಭವಾಗಿ ತಿಳಿದುಕೊಳ್ಳಬಹುದು.
ಹಂತ-1: ಸರ್ಕಾರದ ಈ ಅಧಿಕೃತ ವೆಬ್‌ಸೈಟ್ samrakshane.karnataka.gov.inಗೆ ಭೇಟಿ ನೀಡಿ.
ಹಂತ-2: ಓಪನ್ ಆಗುವ ಪೇಜ್‌ನಲ್ಲಿ Home ಮೇಲೆ ಕ್ಲಿಕ್ ಮಾಡಿ. ಕೆಳಗಡೆ ‘Know Your Insurance Company’ ಎಂಬ ಆಯ್ಕೆ ಕಾಣಿಸುತ್ತದೆ; ಅದನ್ನು ಕ್ಲಿಕ್ ಮಾಡಿ.
ಹಂತ-3: ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿ. ಆ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ಆ ಕಂಪನಿಯ ಹೆಸರನ್ನು ಗಮನಿಸಿ. ಅದಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆ ಈ ಕೆಳಗಿದೆ.
ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್
Insurance Helpline Numbers – ವಿಮಾ ಕಂಪನಿಗಳ ಸಹಾಯವಾಣಿ ಸಂಖ್ಯೆಗಳು
ಬೆಳೆ ವಿಮೆಗೆ ಸಂಬಂಧಿಸಿದಂತೆ ನಿಮ್ಮ ಜಿಲ್ಲೆಗೆ ನಿಯೋಜಿತ ವಿಮಾ ಕಂಪನಿಗೆ ನೇರವಾಗಿ ಕರೆ ಮಾಡಿ ದೂರು ನೀಡಬಹುದು. ವಿವಿಧ ವಿಮಾ ಕಂಪನಿಗಳ ಸಹಾಯವಾಣಿ ಸಂಖ್ಯೆಗಳು ಹೀಗಿವೆ:
- Agriculture Insurance Company – 1800 425 0505
- Universal Sompo – 1800 200 5142
- SBI General Insurance – 1800 180 1551
- HDFC ERGO – 1800 266 0700
- Future Generali – 1800 266 4141
- ICICI Lombard – 1800 103 7712
- Bajaj Allianz – 1800 209 5959
- Reliance General Insurance – 1800 102 4088
- Oriental Insurance – 1800 425 6678
- IFFCO Tokio General Insurance – 1800 103 5940
ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುವಾಗ ನಿಮ್ಮ ಆಧಾರ್ ಸಂಖ್ಯೆ, ಬೆಳೆ ವಿವರ, ಗ್ರಾಮ ಹೆಸರು ಇತ್ಯಾದಿ ಮಾಹಿತಿಯನ್ನು ಕೈಯಲ್ಲಿ ಇಟ್ಟುಕೊಳ್ಳಿ.
ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…
Report Crop Damage Immediately – ಬೆಳೆ ಹಾನಿಯಾದ ಕೂಡಲೇ ದೂರು ನೀಡಿ
ರೈತ ಮಿತ್ರರೇ, ಬೆಳೆ ವಿಮೆ ಹಣ ಜಮೆಯಾಗದೇ ಇರುವುದಕ್ಕೆ ಸರ್ಕಾರ ಮಾತ್ರ ಕಾರಣವಲ್ಲ. ಸಮಯಕ್ಕೆ ದೂರು ನೀಡದೇ ಇರುವುದು, ಸರಿಯಾದ ಮಾಹಿತಿ ಇಲ್ಲದಿರುವುದೇ ದೊಡ್ಡ ಅಡ್ಡಿ.
ಹೀಗಾಗಿ ಬೆಳೆ ಹಾನಿಯಾದ ಕೂಡಲೇ ದೂರು ನೀಡಿ. ನಿಮ್ಮ ವಿಮಾ ಕಂಪನಿಯನ್ನು ಖಚಿತಪಡಿಸಿಕೊಳ್ಳಿ. ಪರಿಶೀಲನೆ ಆಗುವವರೆಗೂ ದಾಖಲಾತಿ ಉಳಿಸಿಕೊಳ್ಳಿ.
Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.